ಉ.ಪ್ರದಲ್ಲಿ ಕೋಮು ಗಲಭೆ ನಡೆದೇ ಇಲ್ಲ

Team Udayavani, Feb 4, 2022, 6:40 AM IST

ಉ.ಪ್ರದಲ್ಲಿ ಕೋಮು ಗಲಭೆ ನಡೆದೇ ಇಲ್ಲ

ಲಕ್ನೋ: ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರ ಬಂದ ಬಳಿಕ 2017ರಿಂದ ಈಚೆಗೆ ಕೋಮುಗಲಭೆ ನಡೆದೇ ಇಲ್ಲ. ಸಮಾಜವಾದಿ ಪಕ್ಷದ ಸರಕಾರ ಅಧಿಕಾರದಲ್ಲಿ ಇದ್ದ ವೇಳೆ ಇಂಥ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ಲಕ್ನೋದಲ್ಲಿ ಗುರುವಾರ ಮಾತನಾಡಿದ ಅವರು, ಅಭಿವೃದ್ಧಿಯ ಹೆಸರಿನಲ್ಲಿ ಪಕ್ಷಪಾತ ಧೋರಣೆ ಅನುಸರಿಸಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ. 2007ರಿಂದ 2012ರ ಅವಧಿಯಲ್ಲಿ 364 ಗಲಭೆಗಳು ಉಂಟಾಗಿತ್ತು. ಎಸ್‌ಪಿ ಅವಧಿಯಲ್ಲಿ 2012- 2017ರ ಅವಧಿಯಲ್ಲಿ 700 ದೊಡ್ಡ ಪ್ರಮಾ ಣದ ಗಲಭೆಗಳು ನಡೆದಿವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

2017ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕೋಮು ಗಲಭೆಗೆ ಸಂಬಂಧಿಸಿದ ಒಂದೇ ಒಂದು ಘಟನೆ ನಡೆದೇ ಇಲ್ಲ ಎಂದು ಮುಖ್ಯ ಮಂತ್ರಿ ಪ್ರತಿಪಾದಿಸಿದ್ದಾರೆ. ಇದರ ಜತೆಗೆ ಭಯೋತ್ಪಾದಕ ಚಟುವಟಿಕೆಗಳಿಗೂ ಕೂಡ ನಿಯಂತ್ರಣ ಹೇರಲಾ ಗಿದೆ. ರಾಷ್ಟ್ರೀಯ ಭದ್ರತೆಯನ್ನು ಕೇಂದ್ರೀಕರಿಸಿ ರಾಜ್ಯದಲ್ಲಿ ಉಗ್ರ ನಿಗ್ರಹ ದಳವನ್ನು ಬಲಪಡಿಸ ಲಾಯಿತು ಎಂದು ಹೇಳಿದ್ದಾರೆ.  ರಾಜ್ಯದಲ್ಲಿ 155 ಘೋರ ಅಪರಾಧಿಗಳನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲ ಲಾಗಿದೆ. 3,638 ಮಂದಿ ಪೊಲೀಸರ ಜತೆಗಿನ ಘರ್ಷಣೆಯಲ್ಲಿ ಗಾಯ  ಗೊಂಡಿ  ದ್ದಾರೆ. ಸಮಾಜ ವಿರೋಧಿ ಕೃತ್ಯಗಳನ್ನು ನಡೆಸುತ್ತಿದ್ದ 48,038 ಮಂದಿ ಯನ್ನು ವಿವಿಧ ಕಾಯ್ದೆಗಳ ಅಡಿ ಬಂಧಿಸಲಾಗಿದೆ ಎಂದರು.  ಅಭಿ ವೃದ್ಧಿ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾವಿಸಿದ ಅವರು, ಸರಿ ಸುಮಾರು 3 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.

ಕೇಸು ವಾಪಸ್‌: ಕೌಶಾಂಬಿಯಲ್ಲಿ ಪ್ರಚಾರ ನಡೆಸಿದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸಮಾಜವಾದಿ ಪಕ್ಷದ ಸರಕಾರದ ಅವಧಿಯಲ್ಲಿ ಭಯೋತ್ಪಾದಕರ ವಿರುದ್ಧ ದಾಖಲಾಗಿದ್ದ ಕೇಸುಗಳನ್ನು ವಾಪಸ್‌ ಪಡೆಯಲಾಗಿತ್ತು ಎಂದು ದೂರಿದ್ದಾರೆ.

ಒವೈಸಿ ಕಾರ್‌ನತ್ತ ಗುಂಡು ಸಂಸದ ಮತ್ತು ಎಂಐಎಂ ನಾಯಕ ಅಸಾದುದ್ದೀನ್‌ ಒವೈಸಿ ಅವರ ಕಾರ್‌ನತ್ತ ಅಪರಿಚಿತರು ಗುಂಡು ಹಾರಿಸಿದ್ದಾರೆ. ಉತ್ತರ ಪ್ರದೇಶದ ಹಾಪುರ್‌ನಲ್ಲಿ ಪ್ರಚಾರ ಮುಗಿಸಿ ಹೊಸದಿಲ್ಲಿಯತ್ತ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಇದೊಂದು ಗಂಭೀರ ವಿಚಾರ. ಹೀಗಾಗಿ ಕೇಂದ್ರ ಚುನಾವಣ ಆಯೋಗ ಈ ಬಗ್ಗೆ ಗಮನ ಹರಿಸಬೇಕು ಎಂದು ಒವೈಸಿ ಒತ್ತಾಯಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿಗಳಿಂದ ಇಂದು ಪ್ರಮಾಣ :

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಯವರು ಶುಕ್ರವಾರ ಗೋವಾಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಬೀಚ್‌ ರಾಜ್ಯದಲ್ಲಿ ಕಾಂಗ್ರೆಸ್‌ ಪರವಾಗಿ ಸ್ಪರ್ಧಿಸಲಿರುವ ಎಲ್ಲ ಅಭ್ಯರ್ಥಿಗಳು “ಕಾಂಗ್ರೆಸ್‌ಗೆà ನಿಷ್ಠೆ ಹೊಂದಿರುತ್ತೇವೆ’ ಎಂದು ಪ್ರಮಾಣ ಸ್ವೀಕರಿಸಲಿದ್ದಾರೆ. ಅವರು ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಸ್ಪರ್ಧಿಸಲಿರುವ ಸಂಖಲಿಮ್‌ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಫೆ. 14ರಂದು ಗೋವಾದಲ್ಲಿ ಒಂದೇ ಹಂತದ ಮತದಾನ ನಡೆಯಲಿದೆ.

ನಾಡಿದ್ದು  ಸಿಎಂ ಅಭ್ಯರ್ಥಿ ಘೋಷಣೆ :

ಪಂಜಾಬ್‌ನಲ್ಲಿ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವುದು ರವಿವಾರ ಹೊರಬೀಳಲಿದೆ. ಪಕ್ಷದ ನಾಯಕ ರಾಹುಲ್‌ ಗಾಂಧಿಯೇ ಸಿಎಂ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಿದ್ದಾರೆ. ಅದಕ್ಕೂ ಮೊದಲು ರಾಜ್ಯದಲ್ಲಿ ಜನಾಭಿಪ್ರಾಯ ಸಮೀಕ್ಷೆಯನ್ನು ನಡೆಸಲಾಗಿದೆ. ಜನರಿಗೆ ಕಾಂಗ್ರೆಸ್‌ ಅಭ್ಯರ್ಥಿ ಯಾರಾಗಬೇಕು ಎನ್ನುವುದು ಫೋನ್‌, ಎಸ್‌ಎಂಎಸ್‌ ಮೂಲಕ ತಿಳಿಸಿ ಎಂದು ಕೋರಲಾಗಿದೆ. ಅದರಲ್ಲಿ ಚರಣ್‌ಜಿತ್‌ ಚನ್ನಿ, ನವಜೋತ್‌ ಸಿಧು ಆಯ್ಕೆಯಿದ್ದು, ಹೆಚ್ಚು ಪಾಲು ಜನರು ಚನ್ನಿಯನ್ನೇ ಆಯ್ಕೆ ಮಾಡಿದ್ದಾರೆ.

ಮಹಿಳೆಯರಿಗಿಲ್ಲ ಸಮಾನತೆ: ಪಂಜಾಬ್‌ನ 2.77 ಕೋಟಿ ಮತದಾರರಲ್ಲಿ 1.46 ಕೋಟಿ ಪುರುಷರಿದ್ದರೆ, 1.31 ಕೋಟಿ ಮಹಿಳೆಯರಿದ್ದಾರೆ. ಜನಸಂಖ್ಯೆಯಲ್ಲಿ ಮಹಿಳೆಯರು ಬಹುತೇಕ ಸಮಾನರಾಗಿದ್ದಾರಾದರೂ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾತ್ರ ಸಮಾನತೆಯಿಲ್ಲ. 117 ಸ್ಥಾನವಿರುವ ರಾಜ್ಯದಲ್ಲಿ ಎಎಪಿ 12 ಸ್ಥಾನಕ್ಕೆ ಮಹಿಳಾ ಅಭ್ಯರ್ಥಿ ಘೋಷಿಸಿದ್ದರೆ, ಕಾಂಗ್ರೆಸ್‌ 11, ಬಿಜೆಪಿ ಮೈತ್ರಿ 8 ಮತ್ತು ಶಿರೋಮಣಿ ಅಕಾಲಿದಳ ಮೈತ್ರಿ 5 ಸ್ಥಾನಕ್ಕೆ ಮಹಿಳಾ ಅಭ್ಯರ್ಥಿಗಳನ್ನು ಘೋಷಿಸಿದೆ. ಎಎಪಿ ಶೇ. 10.25, ಕಾಂಗ್ರೆಸ್‌ ಶೇ. 9.40, ಬಿಜೆಪಿ ಮೈತ್ರಿ ಶೇ.6.83 ಮತ್ತು ಎಸ್‌ಎಡಿ ಮೈತ್ರಿ ಶೇ.4.27 ಸ್ಥಾನದಲ್ಲಿ ಮಹಿಳೆಯರಿಗೆ ಸ್ಥಾನ ಕೊಟ್ಟಿದೆ.

ಇಂದು ಪ್ರಧಾನಿ ಪ್ರಚಾರ :

ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದಲ್ಲಿ ಪ್ರಚಾರ ನಡೆಸಲಿದ್ದಾರೆ. ವರ್ಚುವಲ್‌ ಮೂಲಕ ಅವರು ಅಲ್ಮೋರಾ ಪ್ರದೇಶದ 14 ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಪ್ರಧಾನಿಯವರ ಪ್ರಚಾರ ಭಾಷಣವನ್ನು ನಾಲ್ಕು ಸ್ಥಳಗಳಲ್ಲಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಸ್ಥಳದಲ್ಲಿ ಕೂಡ 1 ಸಾವಿರ ಮಂದಿಗೆ ವೀಕ್ಷಿಸಲು ಅವಕಾಶ ನೀಡಲಾಗಿದೆ ಎಂದು ಬಿಜೆಪಿ ಮುಖಂಡ ದೇವೇಂದ್ರ ಭಾಸಿನ್‌ ಹೇಳಿದ್ದಾರೆ. ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಮತ್ತು ಇತರ ಮುಖಂಡರು ಭಾಗವಹಿಸಲಿದ್ದಾರೆ.

ಟಾಪ್ ನ್ಯೂಸ್

Manipur: 2 ಗುಂಪುಗಳ ನಡುವೆ ಗುಂಡಿನ ಚಕಮಕಿ

Manipur: 2 ಗುಂಪುಗಳ ನಡುವೆ ಗುಂಡಿನ ಚಕಮಕಿ

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ

Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

ಬಾಹ್ಯಾಕಾಶದಲ್ಲಿ ಕ್ರಿಸ್ಮಸ್‌ ಆಚರಿಸಿದ ಸುನೀತಾ ವಿಲಿಯಮ್ಸ್‌

ಬಾಹ್ಯಾಕಾಶದಲ್ಲಿ ಕ್ರಿಸ್ಮಸ್‌ ಆಚರಿಸಿದ ಸುನೀತಾ ವಿಲಿಯಮ್ಸ್‌

Ken-Betwa River linking project: ಅಂಬೇಡ್ಕರ್‌ ಜಲಸಂರಕ್ಷಕ: ಪ್ರಧಾನಿ ಮೋದಿ ಶ್ಲಾಘನೆ

Ken-Betwa River linking project: ಅಂಬೇಡ್ಕರ್‌ ಜಲಸಂರಕ್ಷಕ: ಪ್ರಧಾನಿ ಮೋದಿ ಶ್ಲಾಘನೆ

ಮಾಜಿ ಪ್ರಧಾನಿ ವಾಜಪೇಯಿ ಜನ್ಮ ಶತಮಾನೋತ್ಸವ: ಗಣ್ಯರಿಂದ ನಮನ

ಮಾಜಿ ಪ್ರಧಾನಿ ವಾಜಪೇಯಿ ಜನ್ಮ ಶತಮಾನೋತ್ಸವ: ಗಣ್ಯರಿಂದ ನಮನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipur: 2 ಗುಂಪುಗಳ ನಡುವೆ ಗುಂಡಿನ ಚಕಮಕಿ

Manipur: 2 ಗುಂಪುಗಳ ನಡುವೆ ಗುಂಡಿನ ಚಕಮಕಿ

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ

Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

Ken-Betwa River linking project: ಅಂಬೇಡ್ಕರ್‌ ಜಲಸಂರಕ್ಷಕ: ಪ್ರಧಾನಿ ಮೋದಿ ಶ್ಲಾಘನೆ

Ken-Betwa River linking project: ಅಂಬೇಡ್ಕರ್‌ ಜಲಸಂರಕ್ಷಕ: ಪ್ರಧಾನಿ ಮೋದಿ ಶ್ಲಾಘನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Manipur: 2 ಗುಂಪುಗಳ ನಡುವೆ ಗುಂಡಿನ ಚಕಮಕಿ

Manipur: 2 ಗುಂಪುಗಳ ನಡುವೆ ಗುಂಡಿನ ಚಕಮಕಿ

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

Fake News: ಕೇಂದ್ರ ಸಚಿವ ಅಮಿತ್‌ ಶಾ ನಿಧನ ಎಂದು ಸುಳ್ಳು ಸುದ್ದಿ: ವ್ಯಕ್ತಿ ಸೆರೆ

ABV-Modi

A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್‌ ಬಿಹಾರಿ ವಾಜಪೇಯಿ ಭದ್ರ ಬುನಾದಿ

Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ

Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

ISRO: ಡಿ.30ಕ್ಕೆ ಇಸ್ರೋದ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.