ಕೋವಿಡ್ ಬಳಿಕ ಹಲವರ ಪದವಿ ಶಿಕ್ಷಣ ಮೊಟಕು : ಕಾಲೇಜುಗಳಲ್ಲೂ ಡ್ರಾಪ್‌ಔಟ್!
Team Udayavani, Feb 4, 2022, 7:30 AM IST
ಸಾಂದರ್ಭಿಕ ಚಿತ್ರ
ಉಡುಪಿ: ಕೋವಿಡ್ ಲಾಕ್‌ಡೌನ್, ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದ ಕಾಲೇಜು ಬಿಟ್ಟ ವಿದ್ಯಾರ್ಥಿಗಳಲ್ಲಿ ಹಲವರು ಮತ್ತೆ ಕಾಲೇಜಿಗೆ ದಾಖಲಾಗಿದ್ದರೆ, ಕೆಲವರು ಪದವಿ ಶಿಕ್ಷಣವನ್ನೇ ಅರ್ಧಕ್ಕೆ ಮೊಟಕು ಗೊಳಿಸಿಕೊಂಡಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ 70 ಸರಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಕಾಲೇಜುಗಳಿವೆ. 3,80,061 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮೂರು ಜಿಲ್ಲೆಗಳಲ್ಲಿ ಶೇ. 5ರಿಂದ ಶೇ. 6ರಷ್ಟು ವಿದ್ಯಾರ್ಥಿಗಳು ಇನ್ನೂ ಆನ್‌ಲೈನ್ ತರಗತಿ ಮತ್ತಿತರ ನೆಪವೊಡ್ಡಿ ಕಾಲೇಜು ಶಿಕ್ಷಣದಿಂದ ದೂರವಿದ್ದಾರೆ.
ಆನ್‌ಲೈನ್ ಅಥವಾ ಭೌತಿಕ ತರಗತಿಯಲ್ಲಿ ಹಾಜರಾತಿ ಕಡ್ಡಾಯ ಮಾಡಿದ್ದರೂ ಕೆಲವು ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಲಾಗಿನ್ ಆಗುತ್ತಾರೆ. ಆದರೆ ತರಗತಿಯಲ್ಲಿ ಸಕ್ರಿಯ ವಾಗಿರದೆ ತಮ್ಮದೇ ಆದ ಬೇರೆ ಕಾರ್ಯದಲ್ಲಿ ತಲ್ಲೀನರಾಗಿರುತ್ತಾರೆ. ಅಂತಹ ವಿದ್ಯಾರ್ಥ ಗಳ ಮೇಲೆ ಹೆಚ್ಚು ನಿಗಾ ಇರಿ ಸಲು ಸಾಧ್ಯವಾಗುವುದಿಲ್ಲ. ಆನ್‌ಲೈನ್ ತರಗತಿಯನ್ನು ನಿತ್ಯವೂ ಪೂರ್ಣ ಪ್ರಮಾಣದಲ್ಲಿ ಮಾಡಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಲಭ್ಯತೆ ಆಧಾರದಲ್ಲಿ ಪಾಠ ಮಾಡು ತ್ತೇವೆ. ಅದಕ್ಕೂ ಆಸಕ್ತಿ ವಹಿಸಿ ಬರುವ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆಯಿದೆ ಎಂದು ಹಿರಿಯ ಪ್ರಾಧ್ಯಾಪಕ ರೊಬ್ಬರು ಮಾಹಿತಿ ನೀಡಿ ದ್ದಾರೆ.
ಸರಕಾರಿ ಸೌಲಭ್ಯ ವಿದ್ಯಾರ್ಥಿಗಳ ಬಳಿ:
ಸರಕಾರಿ ಪದವಿ ಕಾಲೇಜುಗಳ ಅರ್ಹ ವಿದ್ಯಾರ್ಥಿ ಗಳಿಗೆ ಕಾಲೇಜು ಶಿಕ್ಷಣ ಇಲಾಖೆ ಯಿಂದ ಲ್ಯಾಪ್‌ಟಾಪ್-ಪಿಸಿ ಮತ್ತು ಟ್ಯಾಬ್ ವಿತರಿಸ ಲಾಗಿತ್ತು. ಅರ್ಧಕ್ಕೆ ಪದವಿ ಶಿಕ್ಷಣ ಮೊಟಕುಗೊಳಿಸಿದ ಹೆಚ್ಚಿನ ವಿದ್ಯಾರ್ಥಿಗಳು ಸರಕಾರ ದಿಂದ ಸಿಕ್ಕಿರುವ ಸೌಲಭ್ಯವನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಆಯಾ ಕಾಲೇಜು ವ್ಯಾಪ್ತಿಯಲ್ಲಿ ಡ್ರಾಪ್‌ಔಟ್ ಆಗಿರುವ ವಿದ್ಯಾರ್ಥಿಗಳ ಪತ್ತೆ ಕಾರ್ಯ ನಡೆದಿದೆ. ಆದರೆ ಪೂರ್ಣ ಮಾಹಿತಿ ಸಿಕ್ಕಿಲ್ಲ.
ಅವಕಾಶ ನೀಡಿತ್ತು:
ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಹಲವು ಬಾರಿ ದಾಖಲಾತಿ ಪ್ರಕ್ರಿಯೆಯ ದಿನಾಂಕವನ್ನು ವಿಸ್ತರಿಸ ಲಾಗಿತ್ತು. ಅರ್ಧಕ್ಕೆ ಕಾಲೇಜು ಬಿಟ್ಟ ವಿದ್ಯಾರ್ಥಿಗಳ ಮಾಹಿತಿಯನ್ನು ಆಯಾ ಕಾಲೇಜುಗಳ ಮೂಲಕ ಸಂಗ್ರಹಿಸಿ, ಅವರನ್ನು ಸಂಪರ್ಕಿಸುವ ಕಾರ್ಯ ಮಾಡಿದ್ದೇವೆ. ವಿದ್ಯಾರ್ಥಿ ಗಳು ಪುನಃ ಕಾಲೇಜಿಗೆ ಬರಲು ಒಪ್ಪುತ್ತಿಲ್ಲ. ಕುಟುಂಬದ ಸದಸ್ಯರ ಮೂಲಕ ಮನವೊಲಿಸುವ ಕಾರ್ಯ ಮಾಡಿದ್ದೇವೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಡ್ರಾಪ್‌ಔಟ್ ಕಾರಣ :
ಕೊರೊನಾ ಸಂದರ್ಭದ ಆರ್ಥಿಕ ಸಂಕಷ್ಟದಿಂದ ಸ್ಥಳೀಯವಾಗಿ ಲಭ್ಯವಾದ ಉದ್ಯೋಗಕ್ಕೆ ಸೇರಿಕೊಂಡಿ ರುವುದು, ಹೊರ ಜಿಲ್ಲೆಗಳಿಗೆ ಉದ್ಯೋಗಕ್ಕೆ ಹೋಗಿರುವುದು, ಆನ್‌ಲೈನ್ ತರಗತಿ ಪರಿಣಾಮಕಾರಿಯಾಗಿ ನಡೆಯದೆ ಇರುವುದು, ಆನ್‌ಲೈನ್ ಅಥವಾ ಆಫ್ಲೈನ್ ತರಗತಿ ಆಯ್ಕೆ ಅವಕಾಶ ನೀಡಿರುವುದು, ಆನ್‌ಲೈನ್ ತರಗತಿಗೆ ಇಲಾಖೆಯಿಂದ ಸಿದ್ಧಪಡಿಸಿದ ತಂತ್ರಾಂಶ ಗ್ರಾಮೀಣ ಭಾಗದಲ್ಲಿ ಪೂರ್ಣಪ್ರಮಾಣದಲ್ಲಿ ಬಳಕೆಗೆ ಲಭ್ಯವಾಗದೆ ಇರುವುದು, ಕುಟುಂಬದ ಆರ್ಥಿಕ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಪದವಿ ಶಿಕ್ಷಣ ಮೊಟಕುಗೊಳಿಸಿದ್ದಾರೆ.
ಎಲ್ಲಿ, ಎಷ್ಟು ಕಾಲೇಜು? :
ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ಪ್ರಾದೇಶಿಕ ಕೇಂದ್ರ ವ್ಯಾಪ್ತಿಯಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಿವೆ. ಒಟ್ಟು 70 ಕಾಲೇಜು ಗಳಿದ್ದು, ಇದ ರಲ್ಲಿ 37 ಸರಕಾರಿ, 33 ಖಾಸಗಿ ಅನು ದಾನಿತ ಕಾಲೇಜುಗಳು. 3,80,061 ವಿದ್ಯಾರ್ಥಿ ಗಳಿದ್ದಾರೆ. ದಕ್ಷಿಣ ಕನ್ನಡದಲ್ಲಿ ತಲಾ 19 ಸರಕಾರಿ, ಖಾಸಗಿ ಅನುದಾನಿತ ಕಾಲೇಜುಗಳು; ಉಡುಪಿಯಲ್ಲಿ 12 ಸರಕಾರಿ, 13 ಖಾಸಗಿ ಅನುದಾನಿತ ಕಾಲೇಜು, ಕೊಡಗಿನಲ್ಲಿ 6 ಸರಕಾರಿ ಹಾಗೂ 1 ಖಾಸಗಿ ಅನುದಾನಿತ ಕಾಲೇಜಿದೆ.
ಇಲಾಖೆಯ ನಿರ್ದೇ ಶನದಂತೆ ವಿದ್ಯಾ ಭ್ಯಾಸ ವನ್ನು ಅರ್ಧಕ್ಕೆ ಮೊಟಕುಗೊಳಿಸಿರುವ ವಿದ್ಯಾರ್ಥಿಗಳು ಪುನಃ ದಾಖ ಲಾಗಲು ಅವಕಾಶ ನೀಡಲಾಗಿತ್ತು. ಆಯಾ ಕಾಲೇಜುಗಳ ಮೂಲಕ ಅಂತಹ ವಿದ್ಯಾರ್ಥಿ ಗಳನ್ನು ಪತ್ತೆ ಹಚ್ಚುವ ಕಾರ್ಯವೂ ನಡೆದಿದೆ.– ಶ್ರೀಧರಬಾಬು,ಜಂಟಿ ನಿರ್ದೇಶಕ, ಮಂಗಳೂರು ಪ್ರಾದೇಶಿಕ ಕೇಂದ್ರ
–ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.