ನೂರರ ನಿರೀಕ್ಷೆಯಲ್ಲಿ ಚಿತ್ರರಂಗ: ತೆರೆಮರೆಯಲ್ಲಿ ಬಿಡುಗಡೆ ತಯಾರಿ ಜೋರು


Team Udayavani, Feb 4, 2022, 10:03 AM IST

ek love ya

ಹೌಸ್‌ಫ‌ುಲ್‌ ಪ್ರದರ್ಶನಕ್ಕೆ ಅನುಮತಿ ಸಿಗುವ ನಿರೀಕ್ಷೆಯಲ್ಲಿದ್ದ ಚಿತ್ರರಂಗಕ್ಕೆ ನಿರಾಸೆಯಾಗಿದೆ. ಬಾರ್‌, ಪಬ್‌, ರೆಸ್ಟೋರೆಂಟ್‌, ಸಾರಿಗೆ… ಎಲ್ಲಾ ಪೂರ್ಣ ಪ್ರವೇಶಾತಿಗೆ ಅನುಮತಿ ಕೊಟ್ಟ ಸರ್ಕಾರ, ಚಿತ್ರಮಂದಿರಳಿಗೆ ಮಾತ್ರ ಕೊಟ್ಟಿಲ್ಲ ಎಂಬ ಬೇಸರ ಸಿನಿಮಾ ಮಂದಿಯದ್ದು. ಇತ್ತ ಕಡೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡಾ ಚಿತ್ರಮಂದಿರಗಳಿಗೆ ಪೂರ್ಣ ಪ್ರವೇಶಾತಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದೆ.

ಹೀಗಾಗಿ, ಶೀಘ್ರದಲ್ಲಿ ಸರ್ಕಾರ ಚಿತ್ರಮಂದಿರಗಳಿಗೆ ಹೌಸ್‌ಫ‌ುಲ್‌ ಪ್ರದರ್ಶನಕ್ಕೆ ಅವಕಾಶ ಕೊಡುವ ನಿರೀಕ್ಷೆ ಇದೆ. ಇದೇ ಕಾರಣದಿಂದ ಸಿನಿಮಾಗಳು ತೆರೆಮರೆಯಲ್ಲಿ ಬಿಡುಗಡೆಯ ತಯಾರಿ ನಡೆಸುತ್ತಿವೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜನವರಿಯಿಂದಲೇ ಕನ್ನಡ ಚಿತ್ರರಂಗ ದೊಡ್ಡ ಮಟ್ಟದಲ್ಲಿ ತೆರೆದುಕೊಳ್ಳಬೇಕಿತ್ತು. ಅಷ್ಟೊಂದು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿದ್ದವು. ಆದರೆ, ಮೂರನೇ ಅಲೆಯ ಭೀತಿ ಹಾಗೂ ಚಿತ್ರಮಂದಿರಗಳಲ್ಲಿ ಶೇ 50 ಸೀಟು ಭರ್ತಿ ಇದ್ದ ಕಾರಣ ಸಿನಿಮಾಗಳೆಲ್ಲವೂ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದವು. ಈಗ ಆ ಸಿನಿಮಾಗಳು ಫೆಬ್ರವರಿಯಲ್ಲಿ ಬಿಡುಗಡೆಗೆ ತಯಾರಿ ನಡೆಸುತ್ತಿವೆ. “ಏಕ್‌ ಲವ್‌ ಯಾ’, “ಬೈ ಟು ಲವ್‌’, “ತೋತಾಪುರಿ’, “ಲವ್‌ ಮಾಕ್ಟೇಲ್‌-2′, “ಫೋರ್‌ ವಾಲ್ಸ್‌’, “ಗಜಾನನ ಅಂಡ್‌ ಗ್ಯಾಂಗ್‌’, “ಓಲ್ಡ್‌ ಮಾಂಕ್‌’, “ಮನಸಾಗಿದೆ’.. ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಚಿತ್ರಮಂದಿರಗಳಲ್ಲಿ ಪೂರ್ಣ ಪ್ರವೇಶಾತಿ ಇದ್ದಾಗ ಬಿಡುಗಡೆ ಮಾಡಿದರೇನೇ ಅದಕ್ಕೊಂದು ಅರ್ಥ ಹಾಗೂ ಸಾರ್ಥಕತೆ ಎಂದು ಚಿತ್ರರಂಗದ ಬಹುತೇಕರು ನಂಬಿದ್ದಾರೆ. ಜೊತೆಗೆ ನೈಟ್‌ ಕರ್ಫ್ಯೂ ಇದ್ದ ಕಾರಣ, ಮಲ್ಟಿಪ್ಲೆಕ್ಸ್‌ಗಳಲ್ಲಿ ಹೆಚ್ಚಿನ ಶೋ ಸಿಗುವುದಿಲ್ಲ ಎಂಬ ಕಾರಣಕ್ಕೆ ಅನೇಕರು ತಮ್ಮ ಸಿನಿಮಾ ಬಿಡುಗಡೆಗೆ ಆಸಕ್ತಿ ತೋರಿಸಿರಲಿಲ್ಲ. ಈಗ ಚಿತ್ರಮಂದಿರಗಳಲ್ಲಿ ಹೌಸ್‌ಫ‌ುಲ್‌ ಪ್ರದರ್ಶನಕ್ಕೆ ಅನುಮತಿ ಸಿಗುವ ನಿರೀಕ್ಷೆ ಹೆಚ್ಚಾಗಿರುವುದರಿಂದ ಸಿನಿಮಾಗಳ ಬಿಡುಗಡೆಯ ತಯಾರಿ ಕೂಡಾ ಜೋರಾಗಿದೆ.

ಇದನ್ನೂ ಓದಿ:‘ಜಾಡಘಟ್ಟ’ ಇಂದು ರಿಲೀಸ್‌

ಸ್ಟಾರ್‌ ಸಿನಿಮಾಗಳ ಕ್ಲಾರಿಟಿ ಮುಖ್ಯ: ಸದ್ಯ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯ ಸ್ಟಾರ್‌ ಸಿನಿಮಾಗಳು ರಿಲàಸ್‌ಗೆ ರೆಡಿ ಇವೆ. “ವಿಕ್ರಾಂತ್‌ ರೋಣ’, “ಆರ್‌ಆರ್‌ ಆರ್‌’, “ರಾಧೆ ಶ್ಯಾಮ್‌’, “ಕೆಜಿಎಫ್-2′, “ಆಚಾರ್ಯ’ ಸೇರಿದಂತೆ ಅನೇಕ ಸ್ಟಾರ್‌ ಸಿನಿಮಾಗಳು ಬಿಡುಗಡೆಗೆ ರೆಡಿ ಇವೆ. ಇದರಲ್ಲಿ ಒಂದಷ್ಟು ಸಿನಿಮಾಗಳು ಬಿಡುಗಡೆಯ ದಿನಾಂಕವನ್ನು ಮುಂದಕ್ಕೆ ಹಾಕಿವೆ. ಇದು ಹೊಸಬರಿಗೆ ತೊಡಕಾದಂತಿದೆ. ಅದು ಹೇಗೆ ಎಂದು ನೀವು ಕೇಳಬಹುದು. ಸಿನಿಮಾದ ಬಿಡುಗಡೆಯನ್ನು ಮುಂದಕ್ಕೆ ಹಾಕಿದ ಸ್ಟಾರ್‌ ಸಿನಿಮಾಗಳು ಮತ್ತೆ ಯಾವಾಗ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡುತ್ತವೆ ಎಂಬ ಭಯ ಹೊಸಬರದ್ದಾಗಿರುತ್ತದೆ. ಸ್ಟಾರ್‌ ಸಿನಿಮಾಗಳ ಬಿಡುಗಡೆ ಕ್ಲಾರಿಟಿ ಸಿಗದೇ, ಹೊಸಬರು ಕೂಡಾ ಡೇಟ್‌ ಅನೌನ್ಸ್‌ ಮಾಡುವಂತಿಲ್ಲ. ಹೀಗಾಗಿ, ಸ್ಟಾರ್‌ ಸಿನಿಮಾಗಳು ತಮ್ಮ ಬಿಡುಗಡೆ ಕುರಿತು ಕ್ಲಾéರಿಟಿ ಕೊಡಬೇಕಿದೆ

ಜನವರಿಯಲ್ಲಿ 3 ಸಿನಿಮಾ ರಿಲೀಸ್‌: ಹೊಸ ವರ್ಷದಲ್ಲಿ ಕನ್ನಡ ಚಿತ್ರರಂಗ ರಂಗೇರುವ ನಿರೀಕ್ಷೆ ಇತ್ತು. ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಿ, ಚಿತ್ರರಂಗ ಮತ್ತೆ ತನ್ನ ಹಳೆಯ ವೈಭವಕ್ಕೆ ಮರಳಬಹುದು ಎಂಬ ನಂಬಿಕೆಯಲ್ಲಿ ಸಿನಿಮಂದಿ ಇದ್ದರು. ಆದರೆ, 2022ರ ಮೊದಲ ತಿಂಗಳಾದ ಜನವರಿ ಮಾತ್ರ ಮಂಕಾಗಿದ್ದು ಸುಳ್ಳಲ್ಲ. ಜನವರಿಯಲ್ಲಿ ಬಿಡುಗಡೆಯಾಗಿದ್ದು, ಕೇವಲ ಮೂರೇ ಮೂರು ಸಿನಿಮಾಗಳು. “ನಮ್ಮ ಭಾರತ’, “ಡಿಎನ್‌ಎ’ ಹಾಗೂ “ಒಂಬತ್ತನೇ ದಿಕ್ಕು’ ಚಿತ್ರಗಳು ಜನವರಿಯಲ್ಲಿ ಬಿಡುಗಡೆಯಾದವು. ಒಂದು ವೇಳೆ ಹೌಸ್‌ಫ‌ುಲ್‌ ಪ್ರದರ್ಶನಕ್ಕೆ ಅವಕಾಶವಿದ್ದಿದ್ದರೆ ಕಡಿಮೆ ಎಂದರೂ 10ಕ್ಕೂ ಹೆಚ್ಚು ಚಿತ್ರಗಳು ಜನವರಿಯಲ್ಲಿ ಬಿಡುಗಡೆಯಾಗಬೇಕಿತ್ತು. ಈಗ ಆ ಎಲ್ಲಾ ಚಿತ್ರಗಳು ಮುಂದೆ ಹೋಗಿದ್ದು, ಫೆಬ್ರವರಿಯಿಂದ ಬಿಡುಗಡೆಯಾಗಲಿವೆ.

ಫೆಬ್ರವರಿ ಫ‌ುಲ್‌ ರಶ್: ಈ ವಾರ “ಜಾಡಘಟ್ಟ’ ಹಾಗೂ “ಆಪರೇಶನ್‌ 72′ ಚಿತ್ರಗಳು ಬಿಡುಗಡೆಯಾದರೆ, ಫೆಬ್ರವರಿ 11ರಿಂದ ಸಿನಿ ಟ್ರಾಫಿಕ್‌ ಜೋರಾಗಲಿದೆ. ಕನ್ನಡದ ಅನೇಕ ಸಿನಿಮಾಗಳು ಅಂದಿನಿಂದ ಬಿಡುಗಡೆಯಾಗಲಿದೆ ಈಗಾಗಲೇ “ಲವ್‌ ಮಾಕ್ಟೇಲ್‌-2′, “ಫೋರ್‌ವಾಲ್ಸ್‌’, “ರೌಡಿ ಬೇಬಿ’, “ರೌದ್ರ’, “ಪ್ರೀತಿಗಿಬ್ಬರು’, “ಒಪ್ಪಂದ’ ಚಿತ್ರಗಳು ಫೆ.11ರಂದು ತಮ್ಮ ಬಿಡುಗಡೆ ಯನ್ನು ಘೋಷಿಸಿಕೊಂಡಿವೆ. ಫೆ.18ಕ್ಕೆ “ವರದ’, “ಬಹುಕೃತ ವೇಷಂ’, “ಗಿಲ್ಕಿ’ ಸಿನಿಮಾಗಳು ಘೋಷಿಸಿಕೊಂಡರೆ, ಫೆ.24ಕ್ಕೆ “ಏಕ್‌ ಲವ್‌ ಯಾ’ ಹಾಗೂ “ಓಲ್ಡ್‌ ಮಾಂಕ್‌’, “ಮನಸಾಗಿದೆ’ ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಇದಕ್ಕೆ ಇನ್ನೊಂದಿಷ್ಟು ಸಿನಿಮಾಗಳು ಸೇರಿಕೊಳ್ಳುವ ನಿರೀಕ್ಷೆ ಇದೆ.

ರವಿಪ್ರಕಾಶ್ ರೈ

ಟಾಪ್ ನ್ಯೂಸ್

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

Forest: ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.