ಸಿನಿಮಾ ಮಂದಿಗೆ ಸಂತಸ ನೀಡಿದ ಸರ್ಕಾರ: ಚಲನಚಿತ್ರ ಮಂದಿರಗಳಲ್ಲಿ ಶೇ.100 ಪ್ರೇಕ್ಷರಿಗೆ ಅವಕಾಶ
Team Udayavani, Feb 4, 2022, 3:12 PM IST
ಬೆಂಗಳೂರು: ಚಲನಚಿತ್ರ ಮಂದಿರಗಳಲ್ಲಿ ನಾಳೆಯಿಂದ (ಶನಿವಾರ) ಶೇ.100ರಷ್ಟು ಅವಕಾಶ ನೀಡಲು ಸರಕಾರ ನಿರ್ಧರಿಸಿದೆ.
ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಿತ್ರೋದ್ಯಮದ ಗಣ್ಯರ ಜತೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಆರೋಗ್ಯ ಸಚಿವ ಕೆ.ಸುಧಾಕರ್ ಅವರು ಈ ವಿಷಯ ತಿಳಿಸಿದ್ದಾರೆ.
ಅನೇಕ ಕ್ರಮಗಳನ್ನು ಪರಿಶೀಲನೆ ಮಾಡಿ, ಆಸ್ಪತ್ರೆ ದಾಖಲಾತಿಯನ್ನು ಅವಲೋಕಿಸಿ ರಿಯಾಯಿತಿ ನೀಡಲು ಪ್ರಾರಂಭ ಮಾಡಿದ್ದೇವೆ. ಚನಲಚಿತ್ರ ಮಂದಿರ, ಯೋಗ ಸೆಂಟರ್, ಸಿಮ್ಮಿಂಗ್ ಫುಲ್ ಗೆ 50 ರಷ್ಟು ಅವಕಾಶ ಕೊಟ್ಟಿದ್ದೆವು.ಇದಕ್ಕೆ ಸಂಬಂಧಿಸಿದಂತೆ ಸಿಎಂ ನೇತೃತ್ವದಲ್ಲಿ ಇವತ್ತು ಸಭೆ ನಡೆಸಿದ್ದೇವೆ ಎಂದರು.
ಜನವರಿ ತಿಂಗಳಲ್ಲಿ ಶೇ. 5-6 ರಷ್ಟು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಫೆಬ್ರವರಿ ಯಲ್ಲಿ 5-2 ಕ್ಕೆ ಇಳಿಕೆಯಾಗಿದೆ. ಹೀಗಾಗಿ ಚಲನಚಿತ್ರ ಅಭಿಮಾನಿಗಳಿಗೆ ಸರ್ಕಾರದ ವತಿಯಿಂದ 100% ಅವಕಾಶ ಕಲ್ಪಿಸಲಾಗಿದೆ. ನಾಳೆಯಿಂದ 100% ಅವಕಾಶ ಕಲ್ಪಿಸಲಾಗಿದೆ ಎಂದರು.
ಇದನ್ನೂ ಓದಿ:ಹಿಜಾಬ್ ವಿವಾದ: ತಾಲಿಬಾನ್ ಮಾಡುವುದಕ್ಕೆ ಬಿಡುವುದಿಲ್ಲ; ಸಚಿವ ಸುನೀಲ್ ಕಿಡಿ
ಯಾವುದೇ ಉದ್ಯಮ ಹಾಗೂ ವ್ಯಕ್ತಿಗೆ ನಷ್ಟವಾಗಬಾರದೆಂಬ ಉದ್ದೇಶದಿಂದ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಂಡಿದ್ದೇವೆ. ನಾವು ಎಲ್ಲಾ ಕ್ರಮ ತೆಗೆದುಕೊಳ್ಳುತ್ತೇವೆಂದು ವಾಣಿಜ್ಯ ಇಲಾಖೆಯವರು ಹೇಳಿದ್ದಾರೆ. ಸಿನಿಮಾ ಮಂದಿರಗಳಿಗೆ ಹೋಗುವ ಜನರು ಮಾಸ್ಕ್ ಹಾಕಬೇಕು ಎಂದರು.
ಸಿನಿಮಾ ಮಂದಿರದ ಒಳಗೆ ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಹೋಗವುದು ನಿಷಿದ್ದ. ಇದಕ್ಕೆ ಸಂಬಂಧಿಸಪಟ್ಟ ಅಧಿಕಾರಿಗಳು ಯಾವಾಗ ಬೇಕಾದರೂ ಹೋಗಿ ತಪಾಸಣೆ ಮಾಡಬಹುದು ಎಂದು ಹೇಳಿದರು.
ಇದನ್ನೂ ಓದಿ:ನೂರರ ನಿರೀಕ್ಷೆಯಲ್ಲಿ ಚಿತ್ರರಂಗ: ತೆರೆಮರೆಯಲ್ಲಿ ಬಿಡುಗಡೆ ತಯಾರಿ ಜೋರು
ಸಭೆ ಸಮಾರಂಭಗಳಲ್ಲಿ ಯಾವುದೇ ರೀತಿಯಲ್ಲೂ ಬದಲಾವಣೆ ಇಲ್ಲ. ಇರುವಂತಹ ನಿಯಮಗಳು ಯಥಾವತ್ತಾಗಿ ಮುಂದುವರಿಕೆಯಾಗುತ್ತದೆ. ಸಿನಿಮಾ ಮಂದಿರ, ಯೋಗ ಸೆಂಟರ್, ಸಿಮ್ಮಿಂಗ್ , ಜಿಮ್ ಸೆಂಟರ್ ಗಳಲ್ಲಿ ಯಾವುದೇ ಒಬ್ಬ ವ್ಯಕ್ತಿ ಪ್ರವೇಶ ಮಾಡಲು ಎರಡು ಡೋಸ್ ಲಸಿಕೆ ಕಡ್ಡಾಯ. ಇಲ್ಲವಾದರೆ ಪ್ರವೇಶ ಇಲ್ಲ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?
Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್ ಭೇಟಿ ಸಾಧ್ಯತೆ
DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ
DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.