ಅಮೆರಿಕ-ಭಾರತ ಸಂಬಂಧಕ್ಕೆ ಧಕ್ಕೆಯಾಗದು: ಅಮೆರಿಕ ಸ್ಪಷ್ಟನೆ
ಉಕ್ರೇನ್ ಬಿಕ್ಕಟ್ಟು ಸಂಬಂಧ
Team Udayavani, Feb 5, 2022, 6:45 AM IST
ವಾಷಿಂಗ್ಟನ್: ಅಮೆರಿಕ ಮತ್ತು ಭಾರತದ ಸಂಬಂಧಕ್ಕೆ ತನ್ನದೇ ಆದ ಪ್ರಾಶಸ್ತ್ಯವಿದೆ. ರಷ್ಯಾದೊಂದಿಗಿನ ಬಿಕ್ಕಟ್ಟು ನಮ್ಮ ದ್ವಿಪಕ್ಷೀಯ ಸಂಬಂಧದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ.
ಹೀಗೆಂದು ಹೇಳಿರುವುದು ಅಮೆರಿಕದ ಜೋ ಬೈಡೆನ್ ಸರ್ಕಾರ. ಉಕ್ರೇನ್ ವಿಚಾರದಲ್ಲಿ ಭಾರತದ ನಿಲುವಿನಿಂದಾಗಿ ಭಾರತ-ಅಮೆರಿಕ ಸಂಬಂಧ ಹದೆಗೆಡಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್ ಈ ಹೇಳಿಕೆ ನೀಡಿದ್ದಾರೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಉಕ್ರೇನ್ ಪರಿಸ್ಥಿತಿ ಕುರಿತು ಚರ್ಚೆ ನಡೆಸಬೇಕೇ, ಬೇಡವೇ ಎಂಬ ಬಗ್ಗೆ ನಿರ್ಧರಿಸಲು ನಡೆದ ಮತದಾನದ ಪ್ರಕ್ರಿಯೆಯಿಂದ ಭಾರತವು ಇತ್ತೀಚೆಗೆ ದೂರ ಉಳಿದಿತ್ತು. ಅಲ್ಲದೇ, ಪ್ರಸ್ತುತ ಸಂದರ್ಭದಲ್ಲಿ ಮೌನವಾದ ಮತ್ತು ರಚನಾತ್ಮಕ ರಾಜತಾಂತ್ರಿಕತೆಯ ಪಾಲನೆ ಅತ್ಯಗತ್ಯ. ಉದ್ವಿಗ್ನತೆಯನ್ನು ಹೆಚ್ಚಿಸುವ ಯಾವುದೇ ನಿರ್ಧಾರದಿಂದ ದೂರವಿರುವುದೇ ಒಳಿತು ಎಂದು ಭಾರತ ಹೇಳಿತ್ತು.
ಇದನ್ನೂ ಓದಿ:ಉತ್ತರ ಕನ್ನಡದ ಭಾಸ್ಕರ ಪಟಗಾರ ಕಾಂಗ್ರೆಸ್ ಸೇರ್ಪಡೆ: ಇನ್ನೂ ಹಲವರು ಬರಲಿದ್ದಾರೆ; ಡಿಕೆಶಿ
ಅಮೆರಿಕ ಆರೋಪ:
ಇದೇ ವೇಳೆ, ಅಮೆರಿಕವು ರಷ್ಯಾ ವಿರುದ್ಧದ ವಾಗ್ಧಾಳಿ ಮುಂದುವರಿಸಿದೆ. ತನ್ನ ಅತಿಕ್ರಮಣವನ್ನು ಸಮರ್ಥಿಸಿಕೊಳ್ಳಲು ರಷ್ಯಾವು “ಉಕ್ರೇನ್ ತನ್ನ ಮೇಲೆ ದಾಳಿ ನಡೆಸಿದೆ’ ಎಂದು ಸುಳ್ಳು ಆರೋಪವನ್ನು ಹೊರಿಸಲಿದೆ ಎಂದು ಅಮೆರಿಕ ಹೇಳಿದೆ.
ಪೂರ್ವ ಉಕ್ರೇನ್‌ನಲ್ಲಿ ರಷ್ಯಾ ನಾಗರಿಕರ ಮೇಲೆ ಅಥವಾ ರಷ್ಯಾ ಭೂಪ್ರದೇಶದ ಮೇಲೆ ದಾಳಿ ನಡೆದಿದೆ ಎಂದು ತೋರಿಸಲು ಗ್ರಾಫಿಕ್ ವಿಡಿಯೋವೊಂದನ್ನು ಬಿಡುಗಡೆ ಮಾಡಲು ರಷ್ಯಾ ತಂತ್ರ ಹೂಡಿದೆ ಎಂದೂ ಆರೋಪಿಸಿದೆ. ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ರಷ್ಯಾ, “ಅಮೆರಿಕವು ಯಾವುದೇ ಆಧಾರವಿಲ್ಲದೇ ಈ ಆರೋಪ ಮಾಡುತ್ತಿದೆ’ ಎಂದು ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.