ದಶಕಾಂತ್ಯಕ್ಕೆ ಬಾಹ್ಯಾಕಾಶ ನಿಲ್ದಾಣ ಧ್ವಂಸ
Team Udayavani, Feb 5, 2022, 7:50 AM IST
ಈ ದಶಕಾಂತ್ಯದ ವೇಳೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತನ್ನ ಕೆಲಸ ಸ್ಥಗಿತಗೊಳಿಸಲಿದೆ. ಈ ಬಗ್ಗೆ ಸ್ವತಃ ಅಮೆರಿಕದ ನಾಸಾ ಸಂಸ್ಥೆಯೇ ಘೋಷಣೆ ಮಾಡಿದೆ. 2031ರಲ್ಲಿ ಬಾಹ್ಯಾಕಾಶ ನಿಲ್ದಾಣವನ್ನು ಭೂಮಿಗೆ ಇಳಿಸಲಾಗುತ್ತದೆ ಎಂದು ನಾಸಾ ಹೇಳಿದೆ. ಹಾಗಾದರೆ ಇದನ್ನು ಇಳಿಸುವುದು ಹೇಗೆ? ಮುಂದಿನ ಬಾಹ್ಯಾಕಾಶ ನಿಲ್ದಾಣ ಹೇಗಿರುತ್ತದೆ ಎಂಬ ಕುರಿತ ನೋಟ ಇಲ್ಲಿದೆ.
ಎರಡು ದಶಕಗಳಾಯಿತು..
ಬಾಹ್ಯಾಕಾಶಕ್ಕೆ ಐಎಸ್‌ಎಸ್ ಅನ್ನು ಕಳುಹಿಸಿ ಆಗಲೇ ಎರಡು ದಶಕಗಳಾಗಿವೆ. ಇದು 1984ರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷರಾಗಿದ್ದ ರೋನಾಲ್ಡ್ ರೇಗನ್ ಅವರ ಕನಸಿನ ಯೋಜನೆಯಾಗಿದ್ದು, 1998ರಿಂದ ಕಾರ್ಯಾರಂಭ ಮಾಡಿತು. ರಷ್ಯಾದ ರಾಕೆಟ್‌ವೊಂದರ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ವಸ್ತುವೊಂದನ್ನು ಕಳುಹಿಸಲಾಯಿತು. ಇದಾದ ಎರಡು ವಾರಗಳ ಬಳಿಕ ಅಮೆರಿಕದ ಎಂಡೋವರ್ ಸ್ಪೇಸ್ ಷಟಲ್ ಅನ್ನು ಐಎಸ್‌ಎಸ್‌ಗೆ ಜೋಡಣೆ ಮಾಡಲಾಯಿತು. ಎರಡು ವರ್ಷಗಳ ತರುವಾಯ ಬಾಹ್ಯಾಕಾಶ ನಿಲ್ದಾಣ ಸಂಪೂರ್ಣವಾಗಿ ತಯಾರಾಯಿತು.
ಇದನ್ನೂ ಓದಿ:ಪರಿಸರ ರಕ್ಷಣೆ ತುರ್ತು ಆದ್ಯತೆಯಾಗಲಿ: ಸಿಎಂ ಬಸವರಾಜ ಬೊಮ್ಮಾಯಿ
ನಿವೃತ್ತಿ ಹೇಗೆ?
2031ರ ಜನವರಿಗೆ ಬಾಹ್ಯಾಕಾಶ ನಿಲ್ದಾಣ ಭೂಮಿಗೆ ಬರಲಿದೆ. ಮೊದಲಿಗೆ ಮಿಷನ್ ಕಂಟ್ರೋಲ್ ಅನ್ನು ಕೆಳಗಿನ ಹಂತಕ್ಕೆ ತರಲಾಗುತ್ತದೆ. ದಕ್ಷಿಣ ಪೆಸಿಫಿಕ್‌ನ ಜನವಸತಿ ಇಲ್ಲದ ಪ್ರದೇಶದಲ್ಲಿ ಇಳಿಸಲಾಗುತ್ತದೆ. ಭೂಮಿಯ ವಾತಾವರಣದಲ್ಲಿ ಸುಡದಿರುವಂತೆಯೂ ನೋಡಿಕೊಳ್ಳಲಾಗುತ್ತದೆ.
ಮುಂದೇನು?
ಹಾಲಿ ಇರುವ ಐಎಸ್‌ಎಸ್ ಅನ್ನು ವಾಪಸ್ ಕರೆಸಿಕೊಂಡ ಮೇಲೆ ಅದೇ ರೀತಿಯ ವಾಣಿಜ್ಯಾತ್ಮಕವಾಗಿ ಮಾಲಕತ್ವ ಹೊಂದಿದ ಮತ್ತು ನಿರ್ವಹಣೆ ಮಾಡುವ ಬಾಹ್ಯಾಕಾಶ ನಿಲ್ದಾಣವನ್ನು ಮಾಡಲಾಗುತ್ತದೆ. ಇದನ್ನು ಗಗನಯಾತ್ರೆ ಮಾಡುವ ದೇಶಗಳಿಗೆ ಬಾಡಿಗೆ ರೀತಿಯಲ್ಲೂ ನೀಡಲಾಗುತ್ತದೆ. ಇದರಿಂದಾಗಿ ನಾಸಾಗೆ 2031ರಲ್ಲೇ 1.3 ಬಿಲಿಯನ್ ಅಮೆರಿಕನ್ ಡಾಲರ್ ಉಳಿತಾಯವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.