ರೈತರ ಗದ್ದೆಗೆ ನುಗ್ಗಿದ ಅಪಾರ ನೀರು-ಆತಂಕ
Team Udayavani, Feb 5, 2022, 1:20 PM IST
ಗಂಗಾವತಿ: ಕೇಸಕ್ಕಿ ಹಂಚಿನಾಳ ಸಮೀಪ ತುಂಗಭದ್ರಾ ಎಡದಂಡೆ ಕಾಲುವೆಯ 22ನೇ ವಿತರಣಾ ಕಾಲುವೆ ಹತ್ತಿರ ಶುಕ್ರವಾರ ಸಂಜೆ ಬೃಹತ್ ಗಾತ್ರದ ಎರಡು ಬೋಂಗಾ ಬಿದ್ದಿದ್ದು ಅಪಾರ ಪ್ರಮಾಣದ ನೀರು ಕಾಲುವೆ ಮೂಲಕ ರೈತರ ಗದ್ದೆಗೆ ನುಗ್ಗಿದೆ.
ಇದರಿಂದ ಎಡದಂಡೆ ಕಾಲುವೆ ವ್ಯಾಪ್ತಿಯ ರೈತರು ಆತಂಕಕ್ಕೊಳಗಾಗಿದ್ದಾರೆ. ಗಂಗಾವತಿ, ಕಾರಟಗಿ ಸಿಂಧನೂರು ಭಾಗದಲ್ಲಿ ಭತ್ತದ ಸಸಿ ನಾಟಿ ಮಾಡಿದ್ದು ಮಾನ್ವಿ, ಮಸ್ಕಿ, ರಾಯಚೂರು ಕೊನೆ ಭಾಗದ ರೈತರು ಇದೀಗ ಭತ್ತದ ಸಸಿ ನಾಟಿ ಮಾಡುತ್ತಿದ್ದಾರೆ. ಈ ಮಧ್ಯೆ ಕೇಸಕ್ಕಿ ಹಂಚಿನಾಳ ಸಮೀಪ ತುಂಗಭದ್ರಾ ಎಡದಂಡೆ ಕಾಲುವೆಯಿಂದ 22ನೇ ವಿತರಣಾ ಕಾಲುವೆಗೆ ನೀರು ಹರಿಯುವ ಸ್ಥಳದಲ್ಲಿ ಎಡ-ಬಲ ಭಾಗದಲ್ಲಿ ಬೃಹತ್ ಗಾತ್ರದ ಬೋಂಗಾ ಬಿದ್ದಿದ್ದು, ದೊಡ್ಡದಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ವಿತರಣಾ ಕಾಲುವೆ ಮೂಲಕ ರೈತರ ನಾಟಿ ಮಾಡಿದ ಭತ್ತದ ಗದ್ದೆಗೆ ನುಗ್ಗುತ್ತಿದ್ದು, ಅಪಾರ ಹಾನಿಯಾಗುವ ಸಂಭವವಿದೆ.
ಎಸ್ಕೇಪ್ ಮೂಲಕ ನೀರು
ಬೋಂಗಾದಲ್ಲಿ ನೀರು ಹರಿಯುವುದನ್ನು ತಡೆಯಲು ಸಿದ್ದಿಕೇರಿ ಹತ್ತಿರ ಇರುವ ಎಸ್ಕೇಪ್ ತೆರೆದು ದುರುಗಮ್ಮನಹಳ್ಳಕ್ಕೆ ಬಿಡಲು ನಿರ್ಧರಿಸಿದ್ದು, ಸ್ಥಳಕ್ಕೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಆಗಮಿಸಿದ್ದಾರೆ.
ಶಾಸಕರ ಭೇಟಿ
ಬೋಂಗಾ ಬಿದ್ದಿರುವ ಸ್ಥಳಕ್ಕೆ ಶಾಸಕ ಪರಣ್ಣ ಮುನವಳ್ಳಿ ಹಾಗೂ ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿದ ಶಾಸಕ ಪರಣ್ಣ, ಈಗಾಗಲೇ ಮೇಲ್ಭಾಗದ ರೈತರು ಭತ್ತ ನಾಟಿ ಮಾಡಿದ್ದಾರೆ. ಕೆಳಮಟ್ಟದ ರೈತರು ಇನ್ನೂ ನಾಟಿ ಕಾರ್ಯ ಮಾಡುತ್ತಿದ್ದು, ಬೇಗ ದುರಸ್ತಿ ಮಾಡುವಂತೆ ಸ್ಥಳದಲ್ಲಿದ್ದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ರೈತರು ಆತಂಕಕ್ಕೊಳಗಾಗಬಾರದು. ಬೇಗ ದುರಸ್ತಿ ಕಾರ್ಯ ಮಾಡಿ ಪುನಃ ಕಾಲುವೆಗೆ ನೀರು ಹರಿಸಲಾಗುತ್ತದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.