ಕ್ಯಾನ್ಸರ್‌ಗೆ ಆರಂಭದಲ್ಲೇ ಚಿಕಿತ್ಸೆ ಪಡೆಯಿರಿ
Team Udayavani, Feb 5, 2022, 1:36 PM IST
ದೇವನಹಳ್ಳಿ: ಕ್ಯಾನ್ಸರ್ ಕಾಣಿಸಿಕೊಂಡಾಗ ಪ್ರಾರಂಭದಲ್ಲಿಯೇ ಸಕಾಲದಲ್ಲಿ ಸಮರ್ಪಕ ಚಿಕಿತ್ಸೆ ಪಡೆಯಬೇಕು. ಯಾರೂ ಸಹ ನಿರ್ಲಕ್ಷ್ಯ ಮಾಡಬಾರದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜಯ್ ಸಲಹೆ ನೀಡಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಆಡಳಿತ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಕ್ಯಾನ್ಸರ್ ಜಾಗೃತಿ ದಿನ ಹಾಗೂ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅರಿವು: ಯಾವುದೇ ಕಾಯಿಲೆಗಳು ಬಂದಕೂಡಲೇ ಚಿಕಿತ್ಸೆ ಪಡೆಯಬೇಕು. ಉಲ್ಬಣಗೊಂಡ ಮೇಲೆ ಆಸ್ಪತ್ರೆಗೆ ಹೋದರೆ ಕೈಮೀರಿ ಹೋಗಿರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಕ್ಯಾನ್ಸರ್ ಮತ್ತು ಇತರೆಕಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಆಗಬೇಕು. ಆರೋಗ್ಯ ಇದ್ದರೆ ಮಾತ್ರ ಜೀವನ.ಕ್ಯಾನ್ಸರ್ ರೋಗದ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ದೈಹಿಕ ಚಟುವಟಿಕೆಯ ಕೊರತೆ, ತಂಬಾಕು ಬಳಕೆ ಹಾಗೂ ಮದ್ಯಸೇವನೆಯಿಂದ ಅಧಿಕದ್ರವ್ಯರಾಶಿಸೂಚಿ (ಬಾಡಿ ಮಾಸ್ ಇಂಡೆಕ್ಸ್) ಹಣ್ಣು ಮತ್ತು ತರಕಾರಿ ಕಡಿಮೆ ಸೇವನೆ ಇತರೆ ಅಂಶಗಳು,ಅಲ್ಟ್ರಾವಯಲೆಟ್ ರೇಡಿಯೇಷನ್ ,ನಗರ ವಾಯುಮಾಲಿನ್ಯ ಮತ್ತು ಅಡುಗೆ ಹೊಗೆಇತರೆಗಳಿಂದ ಕ್ಯಾನ್ಸರ್ ಬರುವ ಸಾಧ್ಯತೆಯಿರುತ್ತದೆ. ಪ್ರಾರಂಭದಲ್ಲಿಯೇ ರೋಗದ ಪತ್ತೆ, ರೋಗದಹೊರೆಯನ್ನು ನಿವಾರಿಸುತ್ತದೆ. ಶೇ.70ರಷ್ಟು ಕ್ಯಾನ್ಸರ್ ಸಾವುಗಳು ಮತ್ತು ಮಧ್ಯಮ ಆದಾಯವಿರುವದೇಶಗಳಲ್ಲಿ ಸಂಭವವಿರುತ್ತದೆ. ಕ್ಯಾನ್ಸರ್ ಗೀಡಾಗುವ ಪ್ರಮುಖ ಅಂಶಗಳು- ಪುರಷರಲ್ಲಿ ಶ್ವಾಸಕೋಶ,ಜಠರ, ಅನ್ನನಾಳ, ಜನನಗ್ರಂಥಿ, ಮಹಿಳೆಯರಲ್ಲಿ ಸ್ತನ, ಗರ್ಭಕಂಠ ಮತ್ತು ಅಂಡಾಶಯಗಳಿಂದ ಬರುತ್ತದೆ ಎಂದು ಹೇಳಿದರು.
ಜಾಗತಿಕ ಮಟ್ಟದಲ್ಲಿ 10ಮಿಲಿಯನ್ ಜನರು ಕ್ಯಾನ್ಸರ್ ರೋಗದಿಂದ ಸಾವನ್ನಪ್ಪುತ್ತಿದ್ದು ಈಪ್ರಮಾಣವನ್ನು ಹೆಚ್‌ಐವಿ, ಏಡ್ಸ್ ಮತ್ತುಮಲೇರಿಯಾದಿಂದ ಸಂಭವಿಸಬಹುದಾದ ಸಾವುಗಳಿಗಿಂತ ಹೆಚ್ಚಾಗಿದೆ. ಕರ್ನಾಟಕದಲ್ಲಿ ಪ್ರತಿವರ್ಷ78.381 ಹೊಸ ಕ್ಯಾನ್ಸರ್ ಪ್ರಕರಣಗಳು ಎಲ್ಲಾರೀತಿಯ ಕ್ಯಾನ್ಸರ್‌ಗಳು ರೋಗ ನಿರ್ಣಯಮಾಡಲಾಗುತ್ತಿದ್ದು, ಜನಸಂಖ್ಯೆ ಆಧಾರಿತ ದಾಖಲಾತಿಪ್ರಕಾರ 34.742 ಪುರುಷರಲ್ಲಿ, 43.639ಮಹಿಳೆಯರಲ್ಲಿ ಕ್ಯಾನ್ಸರ್ ಕಂಡುಬಂದಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶ್ರೀನಿವಾಸ್, ಸಾರ್ವಜನಿಕಆಸ್ಪತ್ರೆ ವೈದ್ಯ ಡಾ.ಗ್ಯಾನ್ ಕುಮಾರ್, ಸಹಾಯಕಆರೋಗ್ಯ ನಿರೀಕ್ಷಕ ವೆಂಕಟೇಶ್ ಹಾಗೂ ಆಸ್ಪತ್ರೆಯಸಿಬ್ಬಂದಿವರ್ಗ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್ ಫಿಕ್ಸ್
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Puttur: ಕಲ್ಪವೃಕ್ಷಕ್ಕೆ ಮರುಜೀವವಿತ್ತ ಎಂಜಿನಿಯರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.