ಸರಕಾರಿ ಕಚೇರಿ: ಪಾಲನೆಯಾಗುತ್ತಿಲ್ಲ ಮಾರ್ಗಸೂಚಿ

ಕೆಲವೆಡೆ ಸ್ಯಾನಿಟೈಸರ್‌ ಇಲ್ಲ, ಬೋರ್ಡ್‌ನಲ್ಲಷ್ಟೇ ಕೋವಿಡ್‌ ತಡೆ ನಿಯಮ

Team Udayavani, Feb 5, 2022, 4:31 PM IST

ಸರಕಾರಿ ಕಚೇರಿ: ಪಾಲನೆಯಾಗುತ್ತಿಲ್ಲ ಮಾರ್ಗಸೂಚಿ

ಮಹಾನಗರ: “ಸಾರ್ವಜನಿಕರು ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡು ವುದು ಕಡ್ಡಾಯ’ ಎಂದು ರಾಜ್ಯ ಸರಕಾರ ನಿಯಮ ಹೊರಡಿಸಿದ್ದು, ಇದು ಸರಕಾರಿ ಕಚೇರಿಗೆ ಅನ್ವಯವಾಗುತ್ತದೋ ಇಲ್ಲವೋ ಎಂಬ ಸಂಶಯ ಮೂಡಿದೆ. ನಗರದ ಕೆಲವೊಂದು ಸರಕಾರಿ ಕಚೇರಿಗಳಲ್ಲಿಯೇ ಕೋವಿಡ್‌ ನಿಯಮ ಸಮರ್ಪಕವಾಗಿ ಪಾಲ ನೆಯಾಗುತ್ತಿಲ್ಲ ಎಂಬ ಅಂಶ “ಉದಯವಾಣಿ ಸುದಿನ’ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಗಮನಕ್ಕೆ ಬಂದಿದೆ.

ಕೋವಿಡ್‌ ಮೂರನೇ ಅಲೆಯ ತೀವ್ರತೆ ಇನ್ನೂ ಕಡಿಮೆಯಾಗಿಲ್ಲ. ದಿನಂಪ್ರತಿ ಮುನ್ನೂ ರಕ್ಕೂ ಅಧಿಕ ಕೋವಿಡ್‌ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸಾವಿನ ಸಂಖ್ಯೆಯೂ ದಿನವಹಿ ಏರಿಕೆಯಾಗುತ್ತಿದೆ. ಕೋವಿಡ್‌ ನಿಯಮ ಪಾಲನೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಗರ ಮಿನಿ ವಿಧಾನಸೌಧ, ಜಿಲ್ಲಾಧಿಕಾರಿ ಕಚೇರಿ, ವೆನಾÉಕ್‌ ಆಸ್ಪತ್ರೆ, ಮಂಗಳೂರು ಮಹಾನಗರ ಪಾಲಿಕೆ, ಬ್ಯಾಂಕ್‌ಗಳ ಎಟಿಎಂ, ಬಸ್‌ ನಿಲ್ದಾಣ, ಮಾಲ್‌ಗ‌ಳು ಸಹಿತ ವಿವಿಧ ಕಡೆಗಳಲ್ಲಿ “ಸುದಿನ’ ತಂಡ ರಿಯಾಲಿಟಿ ಚೆಕ್‌ ನಡೆಸಿದೆ.

ಮಿನಿ ವಿಧಾನಸೌಧ ಮುಂಭಾಗದ ಯಾವುದೇ ಕೋವಿಡ್‌ ಮುನ್ನೆಚ್ಚರಿಕೆ ವಹಿಸಲಾ ಗುತ್ತಿಲ್ಲ. ಪ್ರವೇಶದ್ವಾರದಲ್ಲಿ ದೇಹದ ಉಷ್ಣತೆ ಗಮನಿಸಲು ಸಿಬಂದಿ ನಿಯೋಜಿಸಲಾಗಿಲ್ಲ. ಮಾಸ್ಕ್ ಧರಿಸದೆ ಪ್ರವೇಶಿಸಿದರೂ ಕೇಳು ವವರಿಲ್ಲ. ಅಧಿಕಾರಿಗಳು ಕೂಡ ಮೂಗು ಮುಚ್ಚುವಂತೆ ಮಾಸ್ಕ್ ಹಾಕುತ್ತಿಲ್ಲ. ಮಿನಿ ವಿಧಾನಸೌಧ ಒಳಗಡೆ ಸ್ಯಾನಿಟೈಸರ್‌ ಬಾಟಲಿ ಇಡಲಾಗಿದ್ದು, ಅದರಲ್ಲಿ ಸ್ಯಾನಿಟೈಸರ್‌ ಖಾಲಿಯಾಗಿ ದಿನಗಳೇ ಕಳೆದಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ತಕ್ಕ ಮಟ್ಟಿಗೆ ಕೋವಿಡ್‌ ನಿಯಮ ಪಾಲನೆ ಯಾಗುತ್ತಿದೆ. ಪ್ರವೇಶದ್ವಾರದಲ್ಲಿ ಸಿಬಂದಿ ನಿಯೋಜಿಸಲಾಗಿದ್ದು, ಮಾಸ್ಕ್ ಧರಿಸ ದವರಲ್ಲಿ “ಮಾಸ್ಕ್ ಕಡ್ಡಾಯ’ ಎಂದು ಹೇಳಲಾಗುತ್ತಿದೆ. ಇನ್ನು, ಸ್ಯಾನಿಟೈಸರ್‌ ಇಡಲಾಗಿದೆ. ನಗರದೆಲ್ಲೆಡೆ ಕೋವಿಡ್‌ ಬಗ್ಗೆ ಅರಿವು ಮೂಡಿಸುತ್ತಿರುವ ಪಾಲಿಕೆಯ ಪ್ರವೇಶದ್ವಾರದಲ್ಲಿ ಸ್ಯಾನಿಟೈಸರ್‌ ಇಡಲಾಗಿದೆ. ಆದರೆ ಕೆಲವು ಸಿಬಂದಿ ಮಾಸ್ಕ್ ಅನ್ನು ಸರಿಯಾಗಿ ಧರಿಸುತ್ತಿಲ್ಲ. ಬಾಡಿ ಟೆಂಪರೇಚರ್‌ ಪರೀಕ್ಷೆ ಮಾಡಲಾಗುತ್ತಿಲ್ಲ. ಕೋವಿಡ್‌ ಮೊದಲನೇ ಅಲೆಯ ವೇಳೆ ಎಟಿಎಂಗಳಲ್ಲಿ ಸ್ಯಾನಿಟೈಸರ್‌ ಇಡಲಾಗುತ್ತಿತ್ತು. ಆದರೆ ಸದ್ಯ ಬಹುತೇಕ ಎಟಿಎಂ ಒಳಗೆ ಖಾಲಿಯಾದ ಸ್ಯಾನಿಟೈಸರ್‌ ಬಾಟಲ್‌ಗ‌ಳಿವೆ. ಕೆಲವೆಡೆ ಸ್ಯಾನಿಟೈಸರ್‌ ಕಾಣುವುದಿಲ್ಲ.

ವೆನ್ಲಾಕ್‌ ನಲ್ಲಿ ಅವ್ಯವಸ್ಥೆ
ಚಿಕಿತ್ಸೆ ಸಹಿತ ವಿವಿಧ ಕಾರಣಕ್ಕೆ ವೆನ್ಲಾಕ್‌ ಆಸ್ಪತ್ರೆಗೆ ಪ್ರತೀ ದಿನ ನೂರಾರು ಮಂದಿ ಆಗಮಿಸುತ್ತಾರೆ. ವಿಪರ್ಯಾಸ ಅಂದರೆ ವೆನ್ಲಾಕ್‌ ಆಸ್ಪತ್ರೆಯಲ್ಲೇ ಕೋವಿಡ್‌ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ. ಆಸ್ಪತ್ರೆಯ ಮುಖ್ಯದ್ವಾರದಲ್ಲಿ ಸ್ಯಾನಿಟೈಸರ್‌ ಇಲ್ಲ. ಸಾಮಾಜಿಕ ಅಂತರ, ಮಾಸ್ಕ್ ಕುರಿತು ಜಾಗೃತಿ ಮೂಡಿಸಲು ಯಾವುದೇ ಸಿಬಂದಿ ಇಲ್ಲ.

“ಮಾಸ್ಕ್ ಕಡ್ಡಾಯ’ ಬೋರ್ಡ್‌ನಲ್ಲಿ ಮಾತ್ರ
ಜಿಲ್ಲೆಯಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್‌ ತೆರವು ಬಳಿಕ ಬಹುತೇಕ ವಾಣಿಜ್ಯ ಚಟುವಟಿಕೆಗಳು ಆರಂಭಗೊಂಡಿವೆ. ನಗರದ ಹಲವು ಅಂಗಡಿಗಳಲ್ಲಿ “ಮಾಸ್ಕ್ ಕಡ್ಡಾಯ’ ಎಂಬ ಬೋರ್ಡ್‌ ಇದೆ. ಆದರೆ ಬಹುತೇಕರು ಮಾಸ್ಕ್ ಅಳವಡಿಸದೇ ಅಂಗಡಿಗಳಿಗೆ ಬರುತ್ತಿದ್ದಾರೆ. ಮಾಲ್‌ಗ‌ಳಿಗೆ ಬರಲು ಲಸಿಕೆ ಪ್ರಮಾಣಪತ್ರ ಕಡ್ಡಾಯ ಎಂದು ಜಿಲ್ಲಾಡಳಿತ ಹೇಳಿದ್ದು, ಈ ನಿಯಮ ಪಾಲನೆಯಾಗುತ್ತಿದೆ. ಕೆಲವು ಮಂದಿ ಮಾಲ್‌ಗ‌ಳಿಗೆ ತೆರಳಿದ ಬಳಿಕ ಮಾಸ್ಕ್ ತೆಗೆಯುತ್ತಿದ್ದಾರೆ.

ಒಂದೇ ದಿನಕ್ಕೆ ಸೀಮಿತಗೊಂಡ
“ದಿಢೀರ್‌ ಮಾಸ್ಕ್ ಡ್ರೈವ್‌’
ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ದ.ಕ. ಜಿಲ್ಲಾಡಳಿತ ಜನರಿಗೆ ಪದೇ ಪದೇ ಮನವಿ ಮಾಡುತ್ತಿದೆ. ಆದರೂ ಕೆಲವರು ಮಾತ್ರ ಇದನ್ನು ಪಾಲಿಸುತ್ತಲೇ ಇಲ್ಲ. ಅಂತಹ ಜನರಿಗೆ ಜಿಲ್ಲಾಡಳಿತ ಕೆಲವು ತಿಂಗಳ ಹಿಂದೆ ಬಿಸಿ ಮುಟ್ಟಿಸಿತ್ತು. ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರೇ ಖುದ್ದಾಗಿ ಪೊಲೀಸ್‌, ಪಾಲಿಕೆ ಅಧಿಕಾರಿಗಳೊಂದಿಗೆ ನಗರದ ವಿವಿಧ ಭಾಗಗಳಿಗೆ ದಿಢೀರ್‌ ದಾಳಿ ನಡೆಸಿ ನಗರದಲ್ಲಿ ಮಾಸ್ಕ್ ಧರಿಸದೆ ಓಡಾಡುವವರನ್ನು ತರಾಟೆಗೆ ತೆಗೆದು ಕೊಂಡಿದ್ದರು. ಅಲ್ಲದೇ ಸಾರ್ವಜನಿಕವಾಗಿ ಸಂಚರಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಇದೇ ವೇಳೆ ಜಾಗೃತಿ ಮೂಡಿಸುವ ಪ್ರಯತ್ನವನ್ನೂ ಅವರು ಮಾಡಿದ್ದರು. ಬಳಿಕ ಆ ಮಟ್ಟದಲ್ಲಿ ದಿಢೀರ್‌ ಮಾಸ್ಕ್ ಡ್ರೈವ್‌ ನಗರದಲ್ಲಿ ನಡೆಯಲಿಲ್ಲ.

1.14 ಕೋಟಿ ರೂ. ದಂಡ ವಸೂಲಿ
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಪಾಲನೆ ಸಹಿತ ಕೋವಿಡ್‌ ಮಾರ್ಗಸೂಚಿ ಕಡ್ಡಾಯ ಘೋಷಿಸಿದೆ. ಆದರೂ ದ.ಕ. ಜಿಲ್ಲೆಯಲ್ಲಿ ಮುಖಗವಸು ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ವ್ಯವಹರಿಸಿದವರಿಗೆ ಸ್ಥಳೀಯ ಸಂಸ್ಥೆಗಳು, ಪೊಲೀಸ್‌ ಇಲಾಖೆ, ಗ್ರಾ.ಪಂ. ತಂಡವು ದಂಡ ವಿಧಿಸುತ್ತಿದೆ. ಜಿಲ್ಲೆಯಲ್ಲಿ ಕೋವಿಡ್‌ ಮೊದಲನೇ ಅಲೆಯಿಂದ ಈವರೆಗೆ ಒಟ್ಟು 94,914 ಮಂದಿ ವಿರುದ್ಧ ಪ್ರಕರಣ ದಾಖಲಿಸಿ, 1,14,75,280 ರೂ. ದಂಡ ಸಂಗ್ರಹಿಸಲಾಗಿದೆ.

ಸಾರ್ವಜನಿಕರಲ್ಲಿ
ಅರಿವು ಮೂಡಬೇಕು
ದ.ಕ. ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಕೊರೊನಾ ದೈನಂದಿನ ಪ್ರಕರಣ ಕೆಲವು ದಿನಗಳಿಂದ ಮತ್ತೆ ಇಳಿಮುಖಗೊಳ್ಳುತ್ತಿದೆ. ಸಾರ್ವಜನಿಕರು ಕೊರೊನಾ ಮಾರ್ಗಸೂಚಿ ಪಾಲನೆ ಮಾಡಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಫಲಾನುಭವಿಗಳು ಕೊರೊನಾ ರೋಗ ನಿರೋಧಕ ಲಸಿಕೆ ಪಡೆದಿಲ್ಲವೂ ಅವರು ಪಡೆದುಕೊಳ್ಳಿ. ಸಾರ್ವಜನಿಕರೇ ಸ್ವಯಂ ಆಗಿ ಕಾರ್ಯಪ್ರವೃತ್ತರಾಗಿ ಕೋವಿಡ್‌ ನಿಯಮ ಪಾಲನೆ ಮಾಡಬೇಕಿದೆ..
-ಡಾ| ಕಿಶೋರ್‌ ಕುಮಾರ್‌,
ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

-ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

Snuff: ನಶ್ಯ ತಂದಿಟ್ಟ ಸಮಸ್ಯೆ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!

2(1

Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್‌

1(1

Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!

1-moidin

ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್‌ ಬಾವ

train-track

ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್‌ ಬಂದ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

Snuff: ನಶ್ಯ ತಂದಿಟ್ಟ ಸಮಸ್ಯೆ

Nagavalli Bangale Movie

Nagavalli Bangale Movie: ಸೆನ್ಸಾರ್‌ ಪಾಸಾದ ನಾಗವಲ್ಲಿ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

13-ghati-1

Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.