ಉಪ್ಪಿನಂಗಡಿ-ಮಂಗಳೂರು ಮಧ್ಯೆ ನೇತ್ರಾವತಿಗೆ 6 ಅಣೆಕಟ್ಟು ನಿರ್ಮಾಣ

ನದಿಗೆ ಕಿಂಡಿ ಅಣೆಕಟ್ಟು ನಿರ್ಮಾಣದಿಂದ ನೀರಿನ ಕೊರತೆ ದೂರ

Team Udayavani, Feb 6, 2022, 7:00 AM IST

ಉಪ್ಪಿನಂಗಡಿ-ಮಂಗಳೂರು ಮಧ್ಯೆ ನೇತ್ರಾವತಿಗೆ 6 ಅಣೆಕಟ್ಟು ನಿರ್ಮಾಣ

ಬಂಟ್ವಾಳ: ನೇತ್ರಾವತಿಯಲ್ಲಿ ಬೇಸಗೆಯಲ್ಲಿ ನೀರಿನ ಕೊರತೆ ಉಂಟಾಗಬಾರದು ಎಂಬ ಉದ್ದೇಶದಿಂದ ಸರಕಾರವು ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದೆ. ಈಗ ಇರುವ ವಿವಿಧ ಉದ್ದೇಶಗಳ ಅಣೆಕಟ್ಟುಗಳ ಜತೆಗೆ ಹೊಸ ಅಣೆಕಟ್ಟುಗಳು ಸೇರಿ ಉಪ್ಪಿನಂಗಡಿ- ಮಂಗಳೂರು ಮಧ್ಯೆ ಒಟ್ಟು ಅಣೆಕಟ್ಟುಗಳ ಸಂಖ್ಯೆ 6ಕ್ಕೇರಲಿದೆ.

ಮಂಗಳೂರು ಸಹಿತ ಜಿಲ್ಲೆಯ ಬಹುತೇಕ ಪ್ರದೇಶಗಳು ಕುಡಿಯುವ ನೀರಿಗಾಗಿ ನದಿಯನ್ನೇ ಆಶ್ರಯಿಸಿವೆ. ಹೀಗಾಗಿ ಸರಕಾರವು ಹೆಚ್ಚು ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುತ್ತಿದೆ. ಪ್ರಸ್ತುತ ಸಣ್ಣ ನೀರಾವರಿ ಇಲಾಖೆಯ ಮೂಲಕ ಬಿಳಿಯೂರು ಮತ್ತು ಹರೇಕಳದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಜಕ್ರಿ ಬೆಟ್ಟಿನಲ್ಲಿ ಹೊಸ ಕಿಂಡಿ ಅಣೆಕಟ್ಟಿಗೆ ಪ್ರಸ್ತಾವನೆ ಸಲ್ಲಿಕೆಯಾಗಿ ಅಂತಿಮ ಹಂತದಲ್ಲಿದೆ.

ನಗರ ಪ್ರದೇಶಗಳ ಜತೆಗೆ ಪ್ರಸ್ತುತ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಮೂಲಕ ಗ್ರಾಮೀಣ ಪ್ರದೇಶಗಳು ಕೂಡ ನದಿಯನ್ನೇ ಆಶ್ರಯಿಸುತ್ತಿವೆ. ನದಿಯಲ್ಲಿ ನೀರಿನ ಕೊರತೆಯಾದರೆ ಇಡೀ ಜಿಲ್ಲೆಗೆ ಬರ ಎದುರಾಗುವ ಅಪಾಯವಿದೆ.

2018-19: ನದಿ ಖಾಲಿ
ಜಿಲ್ಲೆಯಲ್ಲಿ 2018-19ರಲ್ಲಿ ಮಳೆ ವಿಳಂಬವಾಗಿ ನದಿಯಲ್ಲಿ ನೀರಿನ ಮಟ್ಟ ಕುಸಿದು ತೊಂದರೆ ಆಗಿತ್ತು. ಆಗ ಮಂಗಳೂರಿನಲ್ಲಿ ರೇಷನಿಂಗ್‌ ಮಾದರಿಯಲ್ಲಿ ನೀರು ಕೊಡಬೇಕಾದ ಸ್ಥಿತಿ ಉಂಟಾಗಿತ್ತು. 2019ರಲ್ಲಿ ಜೂನ್‌ನಲ್ಲಿಯೂ ಬಂಟ್ವಾಳದಲ್ಲಿ ಓಡಸಾಲಿನ ಮೂಲಕ ಹೂಳು ತೆಗೆದು ಜಾಕ್‌ವೆಲ್‌ಗೆ ನೀರು ಹರಿಸಬೇಕಾದ ಸ್ಥಿತಿ ಉಂಟಾಗಿತ್ತು. ಅಲ್ಲಲ್ಲಿ ಅಣೆಕಟ್ಟು ನಿರ್ಮಾಣ ಮಾಡಿದರೆ ನೀರು ಸಂಗ್ರಹವಾಗಿ ಬೇಸಗೆಯಲ್ಲೂ ಯಥೇತ್ಛ ನೀರು ಸಿಗಲಿದೆ ಎಂಬುದು ಸರಕಾರದ ಚಿಂತನೆ.

ಸಣ್ಣ ನೀರಾವರಿ ಇಲಾಖೆಯ ಮೂಲಕ ಬಿಳಿಯೂರಿನಲ್ಲಿ ಕಿಂಡಿ ಅಣೆಕಟ್ಟು ಪೂರ್ಣಗೊಂಡಾಗ ಅದರ ಹಿನ್ನೀರು ಉಪ್ಪಿನಂಗಡಿಯಿಂದ ಒಂದು ಕಿ.ಮೀ. ಹಿಂದೆ ವರೆಗೆ ನಿಲ್ಲಲಿದೆ. ಮುಂದೆ ಉಪ್ಪಿನಂಗಡಿಯಲ್ಲೂ ಕಿಂಡಿ ಅಣೆಕಟ್ಟು ನಿರ್ಮಾಣದ ಯೋಜನೆ ಇಲಾಖೆಯ ಮುಂದಿದೆ. ಬೆಳ್ತಂಗಡಿಯಲ್ಲೂ ಸಾಕಷ್ಟು ಕಿಂಡಿ ಅಣೆಕಟ್ಟುಗಳಿದ್ದು, ಅದು ನದಿಯ ಪ್ರಾರಂಭದ ಹಂತವಾಗಿರುವುದರಿಂದ ಸಣ್ಣ ಪ್ರಮಾಣದ್ದಾಗಿವೆ.

ಇವುಗಳನ್ನು “ಬ್ರಿಜ್‌ ಕಂ ಬ್ಯಾರೇಜ್‌’ ಗಳಾಗಿ ನಿರ್ಮಿಸಲಾಗುತ್ತಿದ್ದು, ಸೇತುವೆ ಯೂ ಲಭ್ಯವಾಗಲಿದೆ. ಪ್ರಸ್ತುತ ಸಣ್ಣ ನೀರಾವರಿ ಇಲಾಖೆಯ ಮೂರು ಅಣೆಕಟ್ಟುಗಳಲ್ಲೂ ಸೇತುವೆಯ ಯೋಜನೆ ಸೇರಿದೆ.

ಇದನ್ನೂ ಓದಿ:ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 731.03 ಕೋಟಿ ರೂ. ಅನುದಾನ ಬಿಡುಗಡೆ

ಯಾವ್ಯಾವ ಅಣೆಕಟ್ಟು ಎಲ್ಲೆಲ್ಲಿ ?
ಬಿಳಿಯೂರಿನಲ್ಲಿ ಪ್ರಸ್ತುತ ಒಂದು ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿದ್ದು, ಅದರ ಕೆಳಭಾಗದ ಶಂಭೂರಿನಲ್ಲಿ ವಿದ್ಯುತ್‌ ಉತ್ಪಾದನೆಯ ಎಎಂಆರ್‌ ಅಣೆಕಟ್ಟು ಇದೆ. ಇದರ ನಡುವೆ ಸರಪಾಡಿಯಲ್ಲಿ ಎಂಆರ್‌ಪಿಎಲ್‌ಗೆ ನೀರು ಪೂರೈಸುವ ಸಣ್ಣ ಅಣೆಕಟ್ಟು ಇದ್ದು, ಪ್ರಸ್ತುತ ಅದು ಶಂಭೂರು ಅಣೆಕಟ್ಟಿ ನಿಂದಾಗಿ ಮುಳುಗಡೆಯಾಗಿದೆ.
ಶಂಭೂರಿನ ಕೆಳಭಾಗ, ಜಕ್ರಿಬೆಟ್ಟಿನಲ್ಲಿ ಕಿಂಡಿ ಅಣೆಕಟ್ಟಿನ ಪ್ರಸ್ತಾವನೆ ಸರಕಾರದ ಮುಂದಿದ್ದು, ಅದರ ಕೆಳಭಾಗದಲ್ಲಿ ಮಂಗಳೂರಿಗೆ ನೀರು ಪೂರೈಸುವ ತುಂಬೆ ಅಣೆಕಟ್ಟು ಇದೆ. ಮತ್ತೂ ಕೆಳಗೆ ಅಡ್ಯಾರ್‌-ಹರೇಕಳ ಮಧ್ಯೆ ಇನ್ನೊಂದು ಕಿಂಡಿ ಅಣೆಕಟ್ಟು ನಿರ್ಮಾಣಗೊಳ್ಳುತ್ತಿದೆ. ತುಂಬೆಯಲ್ಲಿ ಮತ್ತೂಂದು ಹಳೆಯ ಅಣೆಕಟ್ಟು ಇದ್ದು, ಹೊಸ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ.

ಉಪ್ಪಿನಂಗಡಿ ಬಳಿಕ ಇಲಾಖೆ ಯಿಂದ 2 ವೆಂಟೆಡ್‌ ಡ್ಯಾಮ್‌ಗಳು ನಿರ್ಮಾಣ ಗೊಳ್ಳುತ್ತಿದ್ದು, ಜಕ್ರಿಬೆಟ್ಟು ಡ್ಯಾಮ್‌ನ ಪ್ರಸ್ತಾವನೆ ಸರಕಾರದ ಹಂತದಲ್ಲಿದೆ. ನಾವು ಮುಖ್ಯ ವಾಗಿ ಕೃಷಿ ಗಾಗಿಯೇ ಇವುಗಳನ್ನು ನಿರ್ಮಿಸು ತ್ತಿದ್ದು, ಕುಡಿಯುವ ನೀರಿಗೂ ಬಳಸಬಹುದಾಗಿದೆ. ಇದರಿಂದ ಎಪ್ರಿಲ್‌-ಮೇಯಲ್ಲೂ ನೀರಿಗೆ ತೊಂದರೆ ಎದುರಾಗದು.
-ಗೋಕುಲ್‌ದಾಸ್‌,
ಕಾರ್ಯಪಾಲಕ ಎಂಜಿನಿಯರ್‌
ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ಧಿ ವಿಭಾಗ, ಮಂಗಳೂರು

– ಕಿರಣ್‌ ಸರಪಾಡಿ

ಟಾಪ್ ನ್ಯೂಸ್

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Kumara-Parvatha

New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ

Malpe-See-Ambulance

Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್‌

Bus-Travel-1

Mangaluru: ಖಾಸಗಿ ಬಸ್ಸಿಗೆ “ಇಸ್ರೇಲ್‌’ ಹೆಸರು; ಆಕ್ಷೇಪದ ಬಳಿಕ “ಜೆರುಸಲೇಂ”!

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kumara-Parvatha

New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ

Cap-Brijesh-Chowta

Putturu: ವಿದೇಶಗಳಿಂದ ಅಡಿಕೆ ಆಮದು ಪರಿಣಾಮ ಅಧ್ಯಯನ: ಸಂಸದ ಕ್ಯಾ.ಬ್ರಿಜೇಶ್‌ ಚೌಟ

Bela1

Wild Elephant: ಧರ್ಮಸ್ಥಳ, ಚಾರ್ಮಾಡಿಯಲ್ಲಿ ಕಾಡಾನೆಗಳ ಹಾವಳಿ

Crime

Sulya: ವಾರಂಟ್‌ ಆರೋಪಿ ಪರಾರಿ

police

Uppinangady: ವರದಕ್ಷಿಣೆಗಾಗಿ ನಿತ್ಯ ಮಾನಸಿಕ, ದೈಹಿಕ ಹಿಂಸೆ: ದೂರು ದಾಖಲು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Kumara-Parvatha

New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ

Malpe-See-Ambulance

Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.