ಪ್ರೇಯಸಿಯ ದುಬಾರಿ ಉಡುಗೊರೆ ಬೇಡಿಕೆಗೆ ಬೇಸತ್ತು ಪ್ರೇಯಸಿಯನ್ನೇ ಹತ್ಯೆಗೈದ ಪ್ರಿಯಕರ
Team Udayavani, Feb 6, 2022, 11:23 AM IST
ಮುಂಬಯಿ: ಒಂದು ತಿಂಗಳ ಹಿಂದೆ ಮುಂಬಯಿ ಸಾಂತಾಕ್ರೂಜ್‌ನಿಂದ ನಾಪತ್ತೆಯಾಗಿದ್ದ 29 ವರ್ಷದ ಯುವತಿಯ ಹತ್ಯೆ ಮಾಡಿರುವ ಪ್ರಕರಣದ ರಹಸ್ಯವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಆಕೆಯ ಪ್ರಿಯಕರ ಮತ್ತು ಸಹಚರನನ್ನು ವಿಲೇಪಾರ್ಲೆಯಿಂದ ಪೊಲೀಸರು ಬಂಧಿಸಿದ್ದಾರೆ. ಮೃತ ಯುವತಿ ಪಿಂಕಿ ಕ್ಲಿಫರ್ಡ್ ಮಿಸ್ಕ್ವಿತ್ತಾ ಎಂದು ಗುರುತಿಸಲಾಗಿದ್ದು, ಆರೋಪಿ ಜಿಕೋ ಅನ್ಸಲಿಮ್ ಮಿಸ್ಕಿತ್ (27) ಮತ್ತು ಆತನ ಸ್ನೇಹಿತ ಕುಮಾರ್ ಎಂದು ಗುರುತಿಸಲಾಗಿದೆ.
ಆರೋಪಿ ಪ್ರಿಯಕರ ತಪ್ಪೊಪ್ಪಿಕೊಂಡಿದ್ದು, ದುಬಾರಿ ಉಡುಗೊರೆಗಳನ್ನು ತೆಗೆದುಕೊಳ್ಳುವಂತೆ ಗೆಳತಿ ನಿರಂತರವಾಗಿ ಒತ್ತಾಯಿಸುತ್ತಿದ್ದಳು. ಇದರಿಂದ ಆಕೆಯನ್ನು ಹತ್ಯೆಗೈದಿರುವುದಾಗಿ ಹೇಳಿದ್ದಾನೆ. ಆರೋಪಿಗಳನ್ನು ಪಾಲ್ಘರ್ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಡಿ. 24ರಂದು ಪಿಂಕಿ ಸಾಂತಾಕ್ರೂಜ್‌ನಿಂದ ನಾಪತ್ತೆಯಾಗಿದ್ದರು. ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕ್ರೈಂ ಬ್ರಾಂಚ್‌ನ ಅಧಿಕಾರಿಗಳು ಸಾಂತಾಕ್ರೂಜ್ ಪೊಲೀಸರೊಂದಿಗೆ ತನಿಖೆ ಮುಂದುವರಿಸಿದಾಗ ಮೃತ ಪಿಂಕಿಗೆ ಬಾಯ್ ಫ್ರೆಂಡ್ ಇದ್ದಾನೆ ಎಂಬುದು ತಿಳಿಯಿತು.
ಪೊಲೀಸರು ಆರೋಪಿ ಜಿಕೋನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮೊದಲಿಗೆ ಆತ ಅಸ್ಪಷ್ಟ ಉತ್ತರ ನೀಡಿದ್ದ. ಅನುಮಾನಗೊಂಡ ಪೊಲೀಸರು ಆತನಿಗೆ ರೇಖಾಚಿತ್ರಗಳನ್ನು ತೋರಿಸಿದಾಗ ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿ ಜಿಕೋ ಮತ್ತೂಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದ. ಮತ್ತೂಂದೆಡೆ ಪಿಂಕಿ ದುಬಾರಿ ಉಡುಗೊರೆಗಳಿಗೆ ನಿರಂತರ ಬೇಡಿಕೆಯಿಡುತ್ತಿದ್ದಳು. ಹಾಗಾಗಿ ಪಿಂಕಿಯನ್ನು ಶಾಶ್ವತವಾಗಿ ಮುಗಿಸಲು ಜಿಕೊ ನಿರ್ಧರಿಸಿದ್ದ.
ಆರೋಪಿಗಳು ಪಿಂಕಿಯನ್ನು ಪಾಲ್ಘರ್‌ಗೆ ದ್ವಿಚಕ್ರ ವಾಹನದಲ್ಲಿ ಕರೆದೊಯ್ದಿದ್ದಾರೆ. ಬಳಿಕ ಡಿ. 24ರಂದು ಜೆಟ್ಟಿ ಬಳಿಯ ಗುಡ್ಡಗಾಡು ಪ್ರದೇಶಕ್ಕೆ ಪಿಂಕಿಯನ್ನು ಕರೆದೊಯ್ದರು. ಈ ಸಂದರ್ಭ ಆರೋಪಿಗಳು ರಾತ್ರಿ ವೇಳೆ ಆಕೆಯನ್ನು ಗುಡ್ಡದಿಂದ ಕೆಳಗೆ ತಳ್ಳಿದರು. ಕಮರಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಆಕೆ ಸಾವನ್ನಪ್ಪಿದ್ದಾಳೆ. ಬಳಿಕ ಆರೋಪಿಯು ತನ್ನ ಸ್ನೇಹಿತ ಕುಮಾರ್‌ಗೆ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗುವಂತೆ ಕೇಳಿದ್ದ. ಆತ ತನ್ನ ಇತರ ಸ್ನೇಹಿತರೊಂದಿಗೆ ಹಿಂದಿರುಗಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.