ಅವಸಾನದತ್ತ ಹೊಯ್ಸಳರ ಕಾಲದ ಈಶ್ವರ ದೇವಾಲಯ
Team Udayavani, Feb 6, 2022, 12:45 PM IST
ಕಿಕ್ಕೇರಿ: ಘಟ್ಟ ಶ್ರೇಣಿಯಂತಹ ಪ್ರದೇಶದ ನಡುವೆ ಎತ್ತ ನೋಡಿದರೂ ತೆಂಗು ಇರುವುದರಿಂದ ಕಿಕ್ಕೇರಿ ಹೋಬಳಿಯಲ್ಲಿರುವ ಗ್ರಾಮಕ್ಕೆ ತೆಂಗಿನಘಟ್ಟ ಎಂಬ ಹೆಸರು ಬಂದಿದೆ. ಇಲ್ಲಿ 12ನೇ ಶತಮಾನದಲ್ಲಿ ಹೊಯ್ಸಳರ ದೊರೆಗಳ ಸಾಮಂತರು ನಿರ್ಮಿಸಿರುವಹಲವು ದೇಗುಲಗಳು ಅವಸಾನದತ್ತ ತಲುಪಿವೆ.
ಸ್ಥಳನಾಮ: ಕ್ರಿ.ಶ.1236ರಲ್ಲಿ ಹೊಯ್ಸಳರ ವೀರ ಸೋಮೇಶ್ವರ ಕಾಲದಲ್ಲಿ ಮಂಡಲಿಕ ದಳಪತಿ ಭೋಗಯ್ಯ ದಂಡನಾಯಕ, ಮುರಾರಿ ಮಲ್ಲಯ್ಯ ಗ್ರಾಮಕ್ಕೆ ಸುತ್ತಮುತ್ತಲ 12ಗ್ರಾಮ ಒಗ್ಗೂಡಿಸಿ ಗ್ರಾಮವನ್ನು ಅಗ್ರಹಾರ ಮಾಡಿಕೊಂಡಿದ್ದನು. ಈ ಗ್ರಾಮಕ್ಕೆ “ಸೋಮನಾಥಪುರ’, “ಪ್ರಸನ್ನ ಸೋಮನಾಥಪುರ’, “ಐದೂರಿನ ಕೊಪ್ಪಲು’ ಎಂದು ಕರೆಯುವುದುಂಟು.
ಚಿತ್ತಾರ: ಈಶ್ವರ ದೇವಾಲಯ ದೇಗುಲ ನಾಗರಶೈಲಿಯ ಶಿಖರ, ಗರ್ಭಗೃಹ, ಆಕರ್ಷಕ ಜಾಲಂಧ್ರದ ನವರಂಗ, ಸುಖನಾಸಿ, ನವರಂಗದಲ್ಲಿರುವ ಶಿವನ ಪರಿವಾರ ಹಾಗೂ ಭುವನೇಶ್ವರಿಯ ಮೇಲಿರುವಮುಂಗಾಲು ಚಾಚಿರುವ ಸಿಂಹವಿರುವ ಚಿತ್ತಾರದ ಆಕರ್ಷಕವಾಗಿದೆ.
ನಿರ್ಲಕ್ಷ್ಯ: ಮಳೆ, ಬಿಸಿಲು, ಶೀತಗಾಳಿ, ನಿರ್ವಹಣೆ ಕಾಣದೆ ನಂದಿಮಂಟಪ ಕುಸಿದು ಜೀರ್ಣಾವಸ್ಥೆ ಯಲ್ಲಿದೆ. ಅಲ್ಲಲ್ಲಿ ಕಲ್ಲು ಹೂವು, ಗೆದ್ದಲು, ದೇಗುಲದಕಟ್ಟಡಕ್ಕೆ ಬೇರು ಬಿಟ್ಟಿರುವ ಗಿಡಗಂಟಿಗಳು, ದೇಗುಲದ ಮುಂದೆ ಅನಾಥವಾಗಿ ಬಿದ್ದಿರುವ ಮೋಹಕವಾಗಿರುವಕ್ಷೇತ್ರಪಾಲಕ ಕಾಲಭೈರವ ಮೂರ್ತಿ, ಗಾಣದ ಕಲ್ಲು ಪುರಾತತ್ವ ಇಲಾಖೆಯ ನಿರ್ಲಕ್ಷ್ಯಕ್ಕೆ ಕನ್ನಡಿಯಾಗಿದೆ.
ರಣಪಡೆಯ ಭೂಮಿ: ರಣವೀರರನ್ನು ಸೃಷ್ಟಿಸಿದ ಗ್ರಾಮ ಇದಾಗಿದೆ. ಶಸ್ತ್ರಾಸ್ತ್ರ ಪಡೆಗಳ ಸಮರಕಲೆಗೆ ತಾಲೀಮು ನೀಡುವ ಭೂಮಿಯಾಗಿತ್ತು. ಚೆಂಗಾಳ್ವರು, ಕೊಂಗಾಳ್ವರ ವಿರುದ್ಧ ಹೊಯ್ಸಳರ ಸಾಮಂತ ಸೇನಾಧಿಪತಿಗಳ ಪಡವಳ ಪಡೆ ಹೋರಾಡಿ ವಿಜಯಗಳಾಗಿ ವೀರಮರಣಗೈದ ವೀರರ ಐತಿಹ್ಯದ ಕುರುಹಾಗಿರುವ ವೀರಗಲ್ಲುಗಳು ದೇಗುಲದ ಬಯಲಿನಲ್ಲಿ ಅನಾಥವಾಗಿದೆ.
ಇತಿಹಾಸ ತಿಳಿಸಿ: ಗ್ರಾಮ ಹಲವು ಐತಿಹ್ಯಗಳ ಬೇರಾಗಿದೆ. ಸುಲಭವಾಗಿ ನವೀಕರಣ ಮಾಡುವದೇಗುಲ ಇದಾಗಿದೆ. ಇಲ್ಲಿನ ನವರಂಗದಲ್ಲಿನಭುವನೇಶ್ವರಿಯ ಶಿಲ್ಪಾಕೃತಿ ರಾಜ್ಯದ ಬೇರೆ ಎಲ್ಲೂ ಸಿಗಲಾರದಷ್ಟು ಮೋಹಕವಾಗಿದೆ. ಗ್ರಾಮ ರಕ್ಕಸತಂಗಡಿಯಂತೆ ರಣಭೂಮಿಯಾಗಿತ್ತು. ವೀರರನ್ನು ಸೃಷ್ಟಿಸಿದ ಗ್ರಾಮದಲ್ಲಿನ ಶಿಲಾಶಾಸನ, ದೇಗುಲ ಜೀರ್ಣೋದ್ಧಾರವಾದಲ್ಲಿ ಮಾತ್ರ ಇತಿಹಾಸ ಮುಂದಿನ ಪೀಳಿಗೆಗೆ ಉಳಿಯಲಿದೆ. ಅತ್ಯಂತ ಮೋಹಕವಾದ ದೇಗುಲ, ದೇಗುಲಕ್ಕೆ ಹೊಂದಿಕೊಂಡಂತಿರುವ ಸುಂದರ ಕೆರೆಯ ನೋಟ ಮನಸೂರೆಗೊಳ್ಳುವಂತಿದ್ದು ಪುರಾತತ್ವ ಇಲಾಖೆ ಅಳಿದಿರುವ ದೇಗುಲದ ಅವಶೇಷಗಳನು ಜಥನ ಮಾಡಿ ಮರು ನಿರ್ಮಾಣ ಮಾಡಿದ್ದಲ್ಲಿ ಇತಿಹಾಸದ ಪರಂಪರೆ ಉಳಿಯಲಿದೆ.
ಕ್ರಿ.ಶ.1133ರಲ್ಲಿ ಈಶ್ವರ ದೇಗುಲ ನಿರ್ಮಾಣ :
ಹೊಯ್ಸಳರ ಕಾಲದಲ್ಲಿ ಗ್ರಾಮ ಅಗ್ರಹಾರವಾಗಿತ್ತು. ಹೊಯ್ಸಳರ ದೊರೆ ಒಂದನೇ ನರಸಿಂಹನ ಕಾಲದಲ್ಲಿ ಕ್ರಿ.ಶ.1133ರಲ್ಲಿ ಸುಂದರ ಈಶ್ವರ(ಹೊಯ್ಸಳೇಶ್ವರ) ದೇವಾಲಯ ನಿರ್ಮಾಣವಾಗಿದೆ. ಚೆಂಗಾಳ್ವರು, ಕೊಂಗಾಳ್ವರ ವಿರುದ್ಧ ಹೊಯ್ಸಳರು ವಿಜಯಶಾಲಿಯಾದ ಪ್ರತೀಕವಾಗಿ ಈ ದೇಗುಲ ನಿರ್ಮಾಣವಾಗಿದೆ. ಕಿಕ್ಕೇರಿಯ ಹಾಲೋಜನ ಮಗ ಬೊಮ್ಮೋಜ ದೇಗುಲದ ನಿರ್ಮಾತೃ ಶಿಲ್ಪಿ ಆಗಿರುವ ಉಲ್ಲೇಖವಿದೆ.
– ತ್ರಿವೇಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.