ವಾಹನ ದಟ್ಟಣೆ ನಿಯಂತ್ರಿಸಲು ಮೇಲ್ಸೇತುವೆ ನಿರ್ಮಾಣಕ್ಕೆ ಚಿಂತನೆ
ಧಾರಣ ಸಾಮರ್ಥ್ಯದ ಪರೀಕ್ಷೆಗೆ ಸಿದ್ಧತೆ
Team Udayavani, Feb 6, 2022, 1:30 PM IST
ಪಣಂಬೂರು : ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಸಲು ವಾಗಿ ಬೈಕಂಪಾಡಿ, ಪಣಂಬೂರು, ಕೂಳೂರು ಪ್ರದೇಶದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದ್ದು, ಧಾರಣ ಸಾಮರ್ಥ್ಯದ ಪರೀಕ್ಷೆಯನ್ನು ನಡೆಸಲು ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲಾಗಿದೆ.
ಬೈಕಂಪಾಡಿ – ಕೂಳೂರು ನಡುವಿನ 3 ಕಿ.ಮೀ. ಉದ್ದದ ಸೇತುವೆ ಇದಾಗಲಿದ್ದು, 400 ಕೋಟಿ ರೂ. ವೆಚ್ಚವಾಗುವ ಅಂದಾ ಜಿದೆ. ಕೇಂದ್ರದ ಸಾಗರಮಾಲ, ರಾಜ್ಯ ಸರಕಾರ ಹಾಗೂ ಎನ್‌ಎಂಪಿಟಿ ಸಂಯುಕ್ತ ವಾಗಿ ಇದನ್ನು ನಿರ್ಮಾಣ ಮಾಡುವ ಬಗ್ಗೆ ಪ್ರಾಥಮಿಕ ಹಂತದ ಮಾತುಕತೆ ನಡೆದಿದೆ.
ನವ ಮಂಗಳೂರು ಬಂದರು, ಕೆಐಒಸಿಎಲ್, ಎಂಸಿಎಫ್, ಕೈಗಾರಿಕೆ ಪ್ರದೇಶಕ್ಕೆ ಬರುವ ಬರುವ ಸಾವಿರಾರು ಲಾರಿಗಳು ಓಡಾಟ ನಡೆಸುತ್ತಿರುವುದ ರಿಂದ ಉಡುಪಿಯಿಂದ ಮಂಗಳೂರಿಗೆ ನೇರವಾಗಿ ಪ್ರಯಾಣಿಸುವ ಜನರಿಗೆ ನಿರಾತಂಕವಾಗಿ ಸಂಚರಿಸಬಹುದಾಗಿದೆ. ಎಂಸಿಎಫ್ ಬಳಿ ಕೆಲವು ಬಾರಿ ರೈಲು ಓಡಾಟಕ್ಕೆ ಗೇಟ್ ಮುಚ್ಚಲಾಗುವುದರಿಂದ ಆ್ಯಂಬುಲೆನ್ಸ್ ಸಹಿತ ತುರ್ತು ವಾಹನಗಳು ಅಡಚಣೆಯಿಲ್ಲದೆ ಗಮ್ಯ ವನ್ನು ತಲುಪಬಹುದಾಗಿದೆ.
ಪ್ರಾಥಮಿಕ ಹಂತದ ಕೆಲಸಗಳಿಗೆ ಚಾಲನೆ
ಕೇಂದ್ರದ ಸಾಗರಮಾಲಾ ಯೋಜನೆಯಡಿಯಲ್ಲಿ ಎಲಿವೇಟೆಡ್ ರಸ್ತೆ ನಿರ್ಮಾಣ ವಾಗಲಿದೆ. ಸುರತ್ಕಲ್ – ಮಂಗಳೂರು ನಡುವೆ ನಿರಾ ತಂಕವಾಗಿ ವಾಹನಗಳು ಸಂಚರಿಸಲು ಅನುಕೂಲವಾಗಲಿದೆ. ನವಮಂಗಳೂರು ಬಂದರು ಈ ನಿಟ್ಟಿನಲ್ಲಿ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಬಳಿಕ ಪ್ರಾಥಮಿಕ ಹಂತದ ಕೆಲಸಗಳಿಗೆ ಚಾಲನೆ ನೀಡಲಾಗಿದೆ.
ರಾ.ಹೆ. 66ರಲ್ಲಿ ಸಂಚರಿಸುವ ವಾಹನ, ಘನ ವಾಹನಗಳ ನಿತ್ಯ ಸಂಚಾರಕ್ಕೆ ಸಂಬಂಧಿ ಸಿದಂತೆ ಅಂಕಿ-ಅಂಶಗಳನ್ನು ಲೆಕ್ಕ ಹಾಕಿ, ಭೂ ಧಾರಣ ಸಾಮರ್ಥ್ಯದ ಬಗ್ಗೆ ವರದಿ ಪಡೆ ಯಲು ಕ್ರಮ ಕೈಗೊಂಡಿದ್ದೇವೆ. ಸ್ಮಾರ್ಟ್ ಸಿಟಿಯ ನಡುವೆ ಸ್ಮಾರ್ಟ್ ಓಡಾಟಕ್ಕೂ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಕ್ರಮಕೈಗೊಳ್ಳಲಾಗಿದೆ. ಈಗ ಪ್ರಥಮ ಹೆಜ್ಜೆಯನ್ನು ಇಡಲಾಗಿದ್ದು, ಸರಕಾರದ ಅನುಮತಿ ಬಳಿಕ ಅಂತಿಮ ನಿರ್ಧಾರವಾಗಲಿದೆ ಎನ್ನುತ್ತಾರೆ ಎನ್‌ಎಂಪಿ ಟಿಯ ಮುಖ್ಯ ಎಂಜಿನಿಯರ್ ಹರಿನಾಥ್.
ನೇರ ಸಂಚಾರಕ್ಕೆ ಅನುಕೂಲ
ಬೈಕಂಪಾಡಿ – ಕೂಳೂರು ವರೆಗೆ ಮೇಲ್ಸೇತುವೆ ನಿರ್ಮಾಣದಿಂದ ಉಡುಪಿ – ಮಂಗಳೂರು ನಡುವೆ ನೇರ ಸಂಚಾರ ಮಾಡುವವರಿಗೆ ಅನುಕೂಲವಾಗಲಿದೆ. ಸಾಗರಮಾಲ ಯೋಜನೆಯಡಿ ಇದನ್ನು ನಿರ್ಮಿಸುವ ಚಿಂತನೆ ನಡೆದಿದೆ.
– ಡಾ| ವೆಂಕಟರಮಣ ಅಕ್ಕರಾಜು, ಚೇರ್ಮನ್, ಎನ್‌ಎಂಪಿಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.