ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ ಹಾಗೂ ತುಕ್ಡೆ ಗ್ಯಾಂಗ್ ನ ಕೈವಾಡ : ಸಿ.ಟಿ.ರವಿ
Team Udayavani, Feb 6, 2022, 5:27 PM IST
ಕಾರವಾರ: ಹಿಜಾಬ್ ವಿವಾದದಿಂದ ಸಮಾಜಕ್ಕೆ ಒಳ್ಳೆಯದು ಆಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಕಾರವಾರ ತಾಲ್ಲೂಕಿನ ನಿವಳಿಯಲ್ಲಿ ಶಾಸಕಿ ರೂಪಾಲಿ ನಾಯ್ಕ ಪುತ್ರನ ಮದುವೆ ಸಮಾರಂಭದಲ್ಲಿ ಅವರು ಭಾಗವಹಿಸಲು ಬಂದಿದ್ದಾಗ ಮಾಧ್ಯಮಗಳ ಜೊತೆ ಮಾತನಾಡಿದರು. ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ ತುಕ್ಡೆ ಗ್ಯಾಂಗ್ ನ ಕೈವಾಡ ಇದೆ. ಕಾಂಗ್ರೆಸ್ ಅಲ್ಪ ಸಂಖ್ಯಾತರನ್ನು ಓಲೈಸುತ್ತಿದೆ ಎಂದು ಆರೋಪಿಸಿದರು .
ಹಿಜಾಬ್ ಮೊದಲು ಇರಲಿಲ್ಲ. ಈಗ ಅದು ಹುಟ್ಟಿಕೊಂಡಿದೆ. ಇದರ ಹಿಂದೆ ತುಕ್ಡೆ ಗ್ಯಾಂಗ್ ಕೈವಾಡ ಇದೆ ಎಂದು ಆರೋಪಿಸಿದರು .
ಹಿಜಾಬ್ ವಿವಾದದಿಂದ ಸಮಾಜ,ದೇಶಕ್ಕೆ ಒಳ್ಳೆಯದಾಗಲ್ಲ. 1983 ಕಾಯ್ದೆ ಪ್ರಕಾರ ಕಾಲೇಜುಗಳಲ್ಲಿ ಯುನಿಫಾರ್ಮ ಕಡ್ಡಾಯ ಎಂದಿದೆ .ಭಾರತ ಎಜುಕೇಶನ್ ಟ್ರಸ್ಟ್ ವರ್ಸಸ್ ಫರಿಯಾದ್ ಖಾನ್ ಪ್ರಕರಣದಲ್ಲಿ 2001 ರಲ್ಲಿ ಬಾಂಬೇ ಹೈಕೋರ್ಟ್ ಯುನಿಫಾರಂ ಅಂತಿಮ ಎಂದು ತೀರ್ಪು ನೀಡಿದೆ ಎಂದರು.
ದೇಶ ವಿಭಜನೆಯನ್ನು ಗಾಂಧೀಜಿ ಒಪ್ಪಿರಲಿಲ್ಲ . ದೇಶ ತುಂಡರಿಸುವುದು ಹಾಸ್ಯಾಸ್ಪದ ಎಂದಿದ್ದ ನೆಹರು ತುಂಡಾದ ದೇಶಕ್ಕೆ ಪ್ರಧಾನಿಯಾದರು. ದೇಶ ತುಂಡು ಮಾಡಬೇಕು ಎಂಬುವವರನ್ನು ತುಂಡರಿಸಬೇಕು ಎಂದಿದ್ದ ಸರದಾರ್ ವಲ್ಲಭಾಯಿ ಪಟೇಲ್ , ತಮ್ಮ ಶಕ್ತಿಯನ್ನು ದೇಶ ತುಂಡಾದ ನಂತರವೂ ತೋರಿಸಲೇ ಇಲ್ಲ ಎಂದರು.
ದೇಶ ವಿಭಜನೆ ಬೀಜ ಅಲಿಗಢ ವಿಶ್ವವಿದ್ಯಾಲಯದಲ್ಲಿ ರೂಪಗೊಂಡಿತು. ನಂತರ ಆಲಿಗಢ ನಮ್ಮಲ್ಲಿ ಉಳಿದಿದೆ . ದೇಶ ತುಂಡಾಗಿದೆ ಎಂದರು .ತಾಲಿಬಾನಿ ಹಿಡನ್ ಅಜೆಂಡಾ ಕಾಂಗ್ರೆಸ್ ನಲ್ಲಿದೆ . ಅದಕ್ಕೆ ಹಿಜಾಬ್, ಬುರ್ಕಾ ವಿವಾದವನ್ನು ಕಾಂಗ್ರೆಸ್ ಮುಂದೆ ಮಾಡಿದೆ ಎಂದು ಸಿ.ಟಿ.ರವಿ ಆರೋಪಿಸಿದರು.
ಇದನ್ನೂ ಓದಿ : ರಾಹುಲ್ ಪ್ರಮಾಣ ಮಾಡಿಸಿಕೊಂಡಷ್ಟು ದುರದೃಷ್ಟಕರ ಸಂಗತಿ ಬೇರೊಂದಿಲ್ಲ: ಸ್ಮೃತಿ ಇರಾನಿ
ಇದು ಸಮಾಜ ಮತ್ತು ದೇಶದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದ ಅವರು ಶಾಲಾ ಕಾಲೇಜಿನಲ್ಲಿ ಯುನಿಫಾರಂ ಒಪ್ಪಬೇಕು .ಸೈನ್ಯ ಮತ್ತು ಪೊಲೀಸ್ ಸಿಬ್ಬಂದಿಗೆ ಯುನಿಫಾರಂ ಇದ್ದಂತೆ, ವಿದ್ಯಾರ್ಥಿಗಳಿಗೆ ಯುನಿಫಾರಂ ಇರಬೇಕು. ಹಿಜಾಬ್ ವಿವಾದ ಇಷ್ಟು ದಿನ ಇರಲಿಲ್ಲ . ಈಗ ಅದು ಹುಟ್ಟಿದೆ. ಇದರ ಹಿಂದೆ ಯಾರ ಕೈವಾಡ ಇದೆ ಎಂದು ಜನ ಯೋಚಿಸುತ್ತಾರೆ ಎಂದು ಅವರು ಹೇಳಿದರು .ಕಾಲೇಜಿನಲ್ಲಿ ಶಾರದಾ ಪೂಜೆ ಮಾಡುವುದು ಒಂದು ಧರ್ಮದ ಓಲೈಕೆಯಲ್ಲವೇ ಎಂಬ ಪ್ರಶ್ನೆಗೆ ಅದು ನಮ್ಮ ಸಂಸ್ಕೃತಿ. ನಾವು ಭೂಮಿ ಪೂಜೆ ಮಾಡ್ತೆವೆ ಎಂದ ರವಿ, ಇತರ ಧರ್ಮದ ಪೂಜೆ ಬೇಕು ಎನ್ನುವವರು ಸಂಸದ ಪ್ರತಾಪ್ ಸಿಂಹ ಹೇಳಿದ ದೇಶಕ್ಕೆ ಹೋಗಲಿ ಎಂದರು.
ಗೋವಾದಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. ಗೋವಾ ಅಭಿವೃದ್ಧಿಗೆ ಅಲ್ಲಿನ ಸರ್ಕಾರ ಸವಿರಾರು ಕೋಟಿ ಖರ್ಚು ಮಾಡಿದೆ.ಹಾಗಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ರವಿ ನುಡಿದರು .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.