ರಸ್ತೆಯಲ್ಲೇ ಇಂಡಕ್ಟಿವ್ ಚಾರ್ಜಿಂಗ್ ಮೂಲಕ ಇಲೆಕ್ಟ್ರಿಕ್ ಕಾರುಗಳು ಚಾರ್ಜ್!
Team Udayavani, Feb 6, 2022, 7:38 PM IST
ಆಟೋಮೊಬೈಲ್ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲಿರುವ ವಿಷಯ ಎಂದರೆ ಇಲೆಕ್ಟ್ರಿಕ್ ಕಾರುಗಳು. ಆದರೂ ಸಹ, ಮಾರಾಟದ ಅಂಕಿಅಂಶಗಳನ್ನು ನೋಡಿದರೆ, ಪ್ರಸಕ್ತ ವರ್ಷದಲ್ಲಿ ಇಲೆಕ್ಟ್ರಿಕ್ ವಾಹನಗಳ ಮಾರಾಟವು ಕಾರುಗಳ ಒಟ್ಟು ಮಾರಾಟದ ಶೇ.4 ಕ್ಕಿಂತ ಕಡಿಮೆಯಿರುವ ನಿರೀಕ್ಷೆಯಿದೆ. ದೀರ್ಘ ಪ್ರಯಾಣದ ಸಮಯದಲ್ಲಿ ಸುಲಭವಾದ ರೀಚಾರ್ಜ್ ಸೌಲಭ್ಯಗಳು ಲಭ್ಯವಿಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಎನ್ನಲಾಗಿದೆ. ಪ್ರಯಾಣ ಮಿತಿ ಹೆಚ್ಚಳ, ಚಾರ್ಜಿಂಗ್ ಸಮಯ ಮತ್ತು ಚಾರ್ಜಿಂಗ್ ಸ್ಟೇಷನ್ ಲಭ್ಯತೆ ಎಲ್ಲವೂ ಸದ್ಯಕ್ಕೆ ದೂರದ ಕನಸಾಗಿದೆ.
ವಿಶ್ವದ ಮೊದಲ ವೈರ್‌ಲೆಸ್ ಚಾರ್ಜಿಂಗ್ ಅನ್ನು ಪ್ರಾರಂಭಿಸಲು ಪರ್ಡ್ಯೂ ವಿವಿ ಚಿಂತನೆ
ಪ್ರಮುಖವಾಗಿ ಚಾರ್ಜಿಂಗ್ ಸಮಸ್ಯೆಯನ್ನು ಪರಿಹರಿಸಲು ಸಾಗುವ ರಸ್ತೆಯನ್ನೇ ಚಾರ್ಜರ್ ಆಗಿ ಪರಿವರ್ತಿಸಲು ಪರ್ಡ್ಯು ವಿವಿ ಯೋಜನೆ ರೂಪಿಸಿ ಪ್ರಯೋಗ ನಡೆಸುತ್ತಿದೆ. ಅಂತಹ ರಸ್ತೆಗಳನ್ನು ನಿರ್ಮಿಸುವ ಕೆಲಸ ಈಗಾಗಲೇ ನಡೆಯುತ್ತಿದ್ದು, ಕಾರುಗಳು ಚಲಿಸುವಾಗಲೇ ಚಾರ್ಜ್ ಆಗಲಿದೆ. ಇದಕ್ಕಾಗಿ ಇಂಡಕ್ಟಿವ್ ಚಾರ್ಜಿಂಗ್ ಎಂಬ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ ಜುಲೈ ತಿಂಗಳಿನಲ್ಲಿ, ಇಂಡಿಯಾನಾದ ಸಾರಿಗೆ ಇಲಾಖೆ ಮತ್ತು ಪರ್ಡ್ಯೂ ವಿಶ್ವವಿದ್ಯಾಲಯವು ವಿಶ್ವದ ಮೊದಲ ವೈರ್‌ಲೆಸ್ ಚಾರ್ಜಿಂಗ್ ಕಾಂಕ್ರೀಟ್ ಹೆದ್ದಾರಿಯನ್ನು ಪ್ರಾರಂಭಿಸಲು ಯೋಜಿಸಿದೆ.
ಜರ್ಮನ್ ಕಂಪನಿಯಿಂದ ಕಾಂಕ್ರಿಟ್ ಅಭಿವೃದ್ಧಿ
ಆಸ್ಪೈರ್ ಹೆಸರಿನ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರವು ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದಿಂದ ಕೇಂದ್ರವು ಹಣವನ್ನು ಪಡೆಯುತ್ತಿದೆ. ರಸ್ತೆಯಲ್ಲಿರುವಾಗಲೇ ಎಲೆಕ್ಟಿçಕ್ ವಾಹನಗಳನ್ನು ಚಾರ್ಜ್ ಮಾಡುವುದು ನಮ್ಮ ಗುರಿ ಎಂದು ಆಸ್ಪೈರ್‌ನ ಕ್ಯಾಂಪಸ್ ನಿರ್ದೇಶಕರಾದ ನಾಡಿಯಾ ಹೇಳುತ್ತಾರೆ. ಇದಕ್ಕಾಗಿ, ಮ್ಯಾಗ್ನೆಟಿಕ್ ಕಾಂಕ್ರೀಟ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದರಲ್ಲಿ ಕಬ್ಬಿಣದ ಆಕ್ಸೈಡ್, ನಿಕಲ್ ಮತ್ತು ಝಿಂಕ್‌ಗಳಂತಹ ಲೋಹದ ಅಂಶಗಳನ್ನು ಮಿಶ್ರಣ ಮಾಡಲಾಗುತ್ತದೆ. ಈ ಕಾಂಕ್ರೀಟ್ ಅನ್ನು ಜರ್ಮನ್ ಕಂಪನಿ ಮ್ಯಾಗ್ಮೆಂಟ್ ಅಭಿವೃದ್ಧಿಪಡಿಸಿದೆ. ಪ್ರಸ್ತುತ, ಈ ತಂತ್ರಜ್ಞಾನವನ್ನು ಹಲವಾರು ಹಂತಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಒಂದು ರೀತಿಯಲ್ಲಿ ಇದು ಮೊಬೈಲ್ ಅನ್ನು ವೈರ್‌ಲೆಸ್ ಆಗಿ ಚಾರ್ಜ್ ಮಾಡುವಂತಿದೆ.
ಕಾಂಕ್ರೀಟ್ ಮಿಶ್ರಣದ ಮೂಲಕ ವಿದ್ಯುತ್ ಪ್ರವಾಹವನ್ನು ಸೃಷ್ಟಿಸಿ ಇದನ್ನು ಕಾಂತೀಯಗೊಳಿಸಲಾಗುತ್ತದೆ. ಇದು ನಿಸ್ತಂತುವಾಗಿ ಪವರ್ ಮಾಡಿ ವಾಹನವನ್ನು ಚಾರ್ಜ್ ಮಾಡುವ ಕಾಂತೀಯ ಕ್ಷೇತ್ರವನ್ನು ಸೃಷ್ಟಿಸುತ್ತದೆ. ಪೇಟೆಂಟ್ ಪಡೆದ ವಸ್ತುವಿನಿಂದ ಮಾಡಿದ 12 ಅಡಿ ಉದ್ದ ಮತ್ತು 4 ಅಡಿ ಅಗಲದ ಪ್ಲೇಟ್ ಅಥವಾ ಪೆಟ್ಟಿಗೆಯನ್ನು ರಸ್ತೆಯ ಕೆಳಗೆ ಕೆಲವು ಇಂಚುಗಳಷ್ಟು ಅಡಿಯಲ್ಲಿ ಹೂಳಲಾಗುತ್ತದೆ. ಈ ಪೆಟ್ಟಿಗೆಯನ್ನು ಪವರ್ ಗ್ರಿಡ್‌ಗೆ ಸಂಪರ್ಕಿಸುತ್ತದೆ. ಈ ಮೂಲಕ ವಿದ್ಯುತ್ ರವಾನೆಯಾಗಿ, ರಸ್ತೆಯಲ್ಲಿ ಚಲಿಸುವ ಇಲೆಕ್ಟ್ರಿಕ್ ವಾಹನಗಳಿಗೆ ಶಕ್ತಿ ನೀಡುತ್ತದೆ. ಕಾರಿನೊಳಗೂ ಒಂದು ಪೆಟ್ಟಿಗೆಯನ್ನು ಸ್ಥಾಪಿಸಬೇಕಾಗಿದ್ದು, ಅದು ಈ ಶಕ್ತಿಯನ್ನು ಪಡೆಯುತ್ತದೆ.
ಇದು ಯಶಸ್ವಿಯಾದರೆ ವಿದ್ಯುತ್ ಚಾಲಿತ ಕಾರುಗಳ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ. ಆದರೆ ಅದಕ್ಕಾಗಿಯೇ ಪ್ರತ್ಯೇಕ ರಸ್ತೆ ನಿರ್ಮಾಣ ಮಾಡುವ ಅವಶ್ಯಕತೆಯೂ ಬೀಳಲಿದ್ದು, ಯಾವ ರೀತಿಯಲ್ಲಿ ಕಾರ್ಯಯೋಜನೆ ಸಿದ್ಧವಾಗಲಿದೆ ಎಂಬುವುದನ್ನು ಕಾದು ನೋಡಬೇಕಿದೆ.
– ಇಂದುಧರ ಹಳೆಯಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.