ಅವ್ಯವಸ್ಥೆ ತಾಣವಾದ ಕೆಪಿಎಸ್‌ ಶಾಲೆ


Team Udayavani, Feb 7, 2022, 12:35 PM IST

ಅವ್ಯವಸ್ಥೆ ತಾಣವಾದ ಕೆಪಿಎಸ್‌ ಶಾಲೆ

ದೇವನಹಳ್ಳಿ: ಸರ್ಕಾರ ಶಾಲೆಗಳ ತಡೆಗೋಡೆ ನಿರ್ಮಾಣ ಸೇರಿದಂತೆ ಇತರೆ ಕಾರ್ಯಗಳಿಗೆ ಲಕ್ಷ ಲಕ್ಷ ಖರ್ಚು ಮಾಡುತ್ತಿದ್ದರೂ ಸಹ ತಾಲೂಕಿನ ವಿಶ್ವನಾಥಪುರಕರ್ನಾಟಕ ಪಬ್ಲಿಕ್‌ ಶಾಲೆಯ ಆವರಣಕ್ಕೆ ಸೂಕ್ತ ರಕ್ಷಣೆಯಿಲ್ಲದೆ, ಪುಂಡರ ಆವಾಸಸ್ಥಾನವಾಗಿದೆ. ಜ್ಞಾನದೇಗುಲದ ಆವರಣದಲ್ಲಿ ರಾತ್ರಿ ವೇಳೆ ಗುಂಡುಪಾರ್ಟಿ, ಅನೈತಿಕ ಚಟುವಟಿಕೆ ನಡೆಯುತ್ತಿದೆ. ಪುಂಡರ ಆವಾಸ ತಾಣವಾಗಿ ಮಾರ್ಪಟ್ಟಿದೆ.

ಈ ಹಿಂದೆ ಪ್ರೌಢಶಾಲೆ ಮತ್ತು ಕಾಲೇಜು ಮಾತ್ರಕಾರ್ಯನಿರ್ವಹಿಸುತ್ತಿದ್ದವು. ಮೈತ್ರಿ ಸರ್ಕಾರದಲ್ಲಿಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆ ಮಂಜೂರಾತಿಮಾಡಿದ್ದರು. ಅದರಂತೆ ತಾಲೂಕಿಗೆ ವಿಶ್ವನಾಥಪುರಶಾಲೆಯನ್ನು ಕರ್ನಾಟಕ ಪಬ್ಲಿಕ್‌ ಶಾಲೆಯನ್ನಾಗಿ ಮಂಜೂರಾತಿ ನೀಡಿತ್ತು.

ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ದಿನನಿತ್ಯ 638 ವಿದ್ಯಾರ್ಥಿನಿಯರು ಬರುತ್ತಿದ್ದು, 20 ಶಿಕ್ಷಕರು ಇದ್ದು,ಕಾಲೇಜಿಗೆ ಸೂಕ್ತ ರಕ್ಷಣೆ ಒದಗಿಸಿಕೊಡುವಂತೆ ಸ್ಥಳೀಯ ಗ್ರಾಪಂ, ಶಾಸಕರು, ಜನಪ್ರತಿನಿಧಿಗಳು ಮತ್ತುಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಸಹಯಾವುದೇ ಕ್ರಮ ಕೈಗೊಳ್ಳದಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.

ಜಾಗ ಒತ್ತುವರಿ: ಕಾಲೇಜು ಜಾಗವು ಸರ್ವೆ ನಂ.184/ಪಿ6ರಲ್ಲಿ ಇದ್ದು, ಪೋಡಿಯಾಗದೆ ಸರ್ಕಾರಿ ಶಾಲೆಗೆ ಸೇರಿದ 10 ಎಕರೆ ಜಾಗವೆಂದು ನಮೂದಾಗಿರುತ್ತದೆ. ಸರ್ವೆ ನಂ.185ರಲ್ಲಿ 6 ಎಕರೆ 38 ಗುಂಟೆ ಜಾಗವೆಂದು ನಮೂದಾಗಿದೆ. ಶಾಲಾ ಜಾಗವನ್ನುಸರಿಯಾಗಿ ಗುರ್ತಿಸದಿರುವುದರಿಂದ ಹಂತ ಹಂತವಾಗಿ ಕೆಲ ಪ್ರಭಾವಿಗಳಿಂದ ಒತ್ತುವರಿಯಾಗುತ್ತಿದೆ. ಸರ್ವೆ ಕಾರ್ಯ ಮಾಡದೆ ಇಲಾಖಾಕಾಧಿಕಾರಿಗಳ ಇಚ್ಛಾಶಕ್ತಿಕೊರತೆ ಎದ್ದುಕಾಣುತ್ತಿದೆ. ಈ ಹಿಂದೆ ಗ್ರಾಪಂನಿಂದಸ್ಥಳೀಯ ಪೊಲೀಸ್‌ ಇಲಾಖೆಯ ಸಹಕಾರ ಪಡೆದು ಗಸ್ತು ನಡೆಸುವಂತೆ ಸೂಚಿಸಲಾಗಿತ್ತು. ಆದರೆ, ಯಾವ ಸಮಯದಲ್ಲಿ ಪುಂಡಪೋಕರಿಗಳು ಹೋಗುತ್ತಾರೋ ತಿಳಿಯದಾಗಿದೆ. ಮದ್ಯದ ಬಾಟೆಲ್‌ಗ‌ಳು, ತಂಬಾಕು ಪದಾರ್ಥಗಳನ್ನು ಕಾಲೇಜು ಆವರಣದಲ್ಲಿಯೇ ಬಿಸಾಡಿರುವುದು ಕಂಡುಬಂದಿದೆ.

ವಿದ್ಯಾರ್ಥಿಗಳ ಮೇಲೆ ಪರಿಣಾಮ: ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ಬರುವ ಗ್ರಾಮೀಣ ಭಾಗದ ಮಕ್ಕಳಿಗೆ ಅಲ್ಲಿನ ವಾತಾವರಣ ಕೆಟ್ಟ ಪರಿಣಾಮ ಬೀರುತ್ತಿದ್ದು,ಅದರಲ್ಲೂ ವಿದ್ಯಾರ್ಥಿನಿಯರು ಶಾಲೆ, ಕಾಲೇಜುಅಂಗಳಕ್ಕೆ ಬರಬೇಕಾದರೆ ಮುಜುಗರವಾಗುತ್ತಿದೆ.ತಾತ್ಕಾಲಿಕವಾಗಿ ಶಿಕ್ಷಣ ಇಲಾಖೆಯಿಂದ ಭದ್ರತಾ ಸಿಬ್ಬಂದಿ ನಿಯೋಜಿಸಿದರೆ ಸಾಕಷ್ಟು ಅನುಕೂಲವಾಗುತ್ತದೆ ಎಂಬುದು ಗ್ರಾಮಸ್ಥರ ಆಶಯ.

ಕಾಲೇಜು ಸುತ್ತಮುತ್ತಲೂ ಗಿಡಗಂಟೆ: ಪದವಿ ಪೂರ್ವ ಕಾಲೇಜು ಆವರಣ ಒಳಗೊಂಡಿರುವ ಕರ್ನಾಟಕ ಪಬ್ಲಿಕ್‌ಶಾಲೆ ಸುತ್ತಮುತ್ತಲು ಮರ, ಗಿಡ, ಹಾಳುದ್ದ ಹುತ್ತ, ಕಸದರಾಶಿ, ಗಿಡಗಂಟಿಗಳು ಬೆಳೆದಿದ್ದು, ರಾತ್ರಿ ವೇಳೆ ಮದ್ಯವನ್ನು ಸೇವಿಸಿ ಅಲ್ಲಿಯೇ ಬಿಟ್ಟಿ ನಮಗೂ ಅದಕ್ಕೂಸಂಬಂಧವಿಲ್ಲದಂತೆ ಕೆಲವು ಕಿಡಿಗೇಡಿಗಳು ಕೃತ್ಯ ಎಸಗುತ್ತಿದ್ದಾರೆ. ಕಾಲೇಜಿಗೆ ಕಾಂಪೌಂಡ್‌ ನಿರ್ಮಾಣಮಾಡಿಕೊಟ್ಟರೆ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತಾಗುತ್ತದೆ.

ಸ್ವತ್ತಿನ ರಕ್ಷಣೆ ಸರ್ಕಾರದ ಜವಬ್ದಾರಿ: ಹೊಸದಾಗಿ ಬಂದಿರುವ ತಹಶೀಲ್ದಾರ್‌ ಅವರು ಕಾಲೇಜಿನ ಜಮೀನಿಗೆಪೋಡಿ, ಹದ್ದುಬಸ್ತು ಮಾಡಿ ಸರ್ಕಾರಿ ಜಾಗವನ್ನುಉಳಿಸಬೇಕು. ಈ ಹಿಂದೆ ಇದ್ದ ಅಧಿಕಾರಿಗಳು ಸ್ಪಂದಿಸಿಲ್ಲ.ಎರಡು ಮೂರು ಬಾರಿ ಅರ್ಜಿ ಸಲ್ಲಿಸಿದರೂ ಸಹಯಾವುದೇ ಪ್ರಯೋಜನವಾಗಲಿಲ್ಲ. ಸರ್ಕಾರದ ಸ್ವತ್ತನ್ನುಉಳಿಸಿಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯ.ಕೋಟ್ಯಾಂತರ ಅನುದಾನದಲ್ಲಿ ನಿರ್ಮಿಸಿರುವ ಕಟ್ಟಡಗಳಲ್ಲಿ ನೂರಾರು ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಸುಧಾರಣೆಗಾಗಿ ಕಾಲೇಜು ಆವರಣಕ್ಕೆಸರಿಯಾದ ಕಾಂಪೌಂಡ್‌ ವ್ಯವಸ್ಥೆ ಕಲ್ಪಿಸಿಕೊಡಬೇಕಿದೆ. ಈನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮಕೈಗೊಳ್ಳಬೇಕೆಂದು ವಿಶ್ವನಾಥಪುರ ಎಸ್‌ಡಿಎಂಸಿ ಉಪಾಧ್ಯಕ್ಷ ಮನಗೊಂಡನಹಳ್ಳಿ ಜಗದೀಶ್‌ ಒತ್ತಾಯಿಸಿದ್ದಾರೆ.

ವಿಶ್ವನಾಥಪುರ ಕರ್ನಾಟಕ ಪಬ್ಲಿಕ್‌ ಶಾಲೆಯ ಅಭಿವೃದ್ದಿಗೆ 2 ಕೋಟಿ ರೂ.ಅನುದಾನ ಮಂಜೂರಾಗಿ ಟೆಂಡರ್‌ಪ್ರಕ್ರಿಯೆಗೆ ಹೋಗಿದೆ. ಶೀಘ್ರದಲ್ಲಿಯೇತಡೆಗೋಡೆ ನಿರ್ಮಾಣವಾಗಲಿದೆ. ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆಪೋಲೀಸ್‌ ಠಾಣೆಯ ವ್ಯಾಪ್ತಿಯಪೊಲೀಸರು ಗಮನಹರಿಸಿ ಅಂತಹವರಿಗೆ ಕಠಿಣ ಶಿಕ್ಷೆ ನೀಡಬೇಕು. -ಎಲ್‌.ಎನ್‌.ನಾರಾಯಣಸ್ವಾಮಿ, ಶಾಸಕ.

ಈ ವರ್ಷ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬರಲಿದೆ.ಅನುದಾನ ಬಂದಕೂಡಲೇ ತಡೆಗೋಡನಿರ್ಮಾಣವಾಗುತ್ತದೆ. ಪ್ರಾಂಶುಪಾಲರುಸರ್ವೆ ಮಾಡಿಸಬೇಕು ಎಂದು ಸೂಚಿಸಿದ್ದೇನೆ. ಸರ್ವೆ ಕಾರ್ಯದ ನಂತರಜಾಗವನ್ನು ಗುರ್ತಿಸಿ ತಡಗೋಡೆ ನಿರ್ಮಿಸಲಾಗುತ್ತದೆ. -ಅಶ್ವತ್ಥನಾರಾಯಣ್‌, ಕ್ಷೇತ್ರ ಶಿಕ್ಷಣಾಧಿಕಾರಿ.

ಕಾಲೇಜಿನ ಆವರಣಕ್ಕೆ ತಡೆಗೋಡೆಯೇ ಇಲ್ಲದಿರುವುದು ಅನೈತಿಕ ತಾಣವಾಗಿ ಮಾರ್ಪಡಲು ಕಾರಣವಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆತರಲಾಗಿದೆ. ಜತೆಗೆ ಸ್ಥಳೀಯ ಗ್ರಾಪಂಗೂ ಮನವಿ ಸಲ್ಲಿಸಲಾಗಿದೆ. ಕಾಲೇಜು ತೆರೆದಮೈದಾನವಾಗಿದ್ದು, ಯಾವ ಸಮಯದಲ್ಲಿ ಪುಂಡರು ಬಂದು  ಹೋಗುತ್ತಿದ್ದಾರೆಎಂಬುದು ತಿಳಿಯುತ್ತಿಲ್ಲ. ಇದೇ ರೀತಿ ಮುಂದುವರೆದರೆ ಕಾಲೇಜಿಗೆ ಬರುವವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲಿದೆ. ಸೂಕ್ತ ರಕ್ಷಣೆ ಜರೂರಾಗಿ ಆಗಬೇಕಿದೆ. -ರಂಗಪ್ಪ , ಪ್ರಾಂಶುಪಾಲರು, ಕೆಪಿಎಸ್‌ ಶಾಲೆ

ಕಾಲೇಜಿನ ರಸ್ತೆಗೆ ಸರಿಯಾದ ಡಾಂಬರೀಕರಣ ಇಲ್ಲ. ಸುತ್ತಿಬಳಸಿಕಾಲೇಜಿಗೆ ಮಕ್ಕಳು ಹೋಗಬೇಕಾಗುತ್ತದೆ. ಜತೆಗೆ ಕಾಲೇಜಿಗೆ ಸರಿಯಾದ ಕಾಂಪೌಂಡ್‌ ವ್ಯವಸ್ಥೆ ಇಲ್ಲ, ಹಾಗಾಗಿಯಾರು ಬೇಕಾದರೂ ಆವರಣದಲ್ಲಿಸುತ್ತಾಡಬಹುದು. ಇದಕ್ಕೆ ಕಡಿವಾಣಹಾಕಿದರೆ ಕೆಪಿಎಸ್‌ ಶಾಲೆಗೆ ಮರುಜೀವನೀಡಿದಂತಾಗುತ್ತದೆ. ಈ ಬಗ್ಗೆಅಧಿಕಾರಿಗಳು ಮುಂದಾಗಿಕ್ರಮಕೈಗೊಳ್ಳಬೇಕಷ್ಟೇ. -ನಾರಾಯಣಸ್ವಾಮಿ, ಗ್ರಾಮಸ್ಥ, ವಿಶ್ವನಾಥಪುರ

ಕರ್ನಾಟಕ ಪಬ್ಲಿಕ್‌ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಗ್ರಾಪಂನಿಂದಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ.ಶಿಕ್ಷಣ ಇಲಾಖೆಯಿಂದ ಪೋಡಿಕಾರ್ಯವಾಗಬೇಕಿದೆ. ಈಗಾಗಲೇ ಕಾಲೇಜಿಗೆ ಖಾತೆ ಮಾಡಿಕೊಡಲಾಗುತ್ತಿದೆ. ತಡೆಗೋಡೆ ನಿರ್ಮಾಣಕ್ಕೆ ನೆರೇಗಾದಲ್ಲಿ ಅವಕಾಶ ಇದೆ. ಕನ್ವರ್‌ಜನ್ಸ್‌ ಅಡಿಯಲ್ಲಿಮುಂದಿನ ದಿನಗಳಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ. ಸರ್ವೆ ಕಾರ್ಯಕ್ಕೆ ಪತ್ರ ವ್ಯವಹಾರ ನಡೆಸಲಾಗುವುದು. -ಗಂಗರಾಜು , ಪಿಡಿಒ, ವಿಶ್ವನಾಥಪುರ ಗ್ರಾಪಂ

 

-ಎಸ್‌.ಮಹೇಶ್‌

ಟಾಪ್ ನ್ಯೂಸ್

Explained: ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

Belagavi: ವರ್ಷದ ಹಿಂದೆ ಪಕ್ಷಕ್ಕೆ ಬರುವಂತೆ ಬಿಜೆಪಿ ಆಹ್ವಾನಿಸಿತ್ತು: ಬಾಬಾಸಾಹೇಬ ಪಾಟೀಲ್

Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

9-bng

Channapatna: ಸಾಲಕ್ಕೆ ಹೆದರಿ ದಂಪತಿ ನೇಣಿಗೆ ಶರಣು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Putturu-Police

Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿ

Explained: ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

8

Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್

Belagavi: ವರ್ಷದ ಹಿಂದೆ ಪಕ್ಷಕ್ಕೆ ಬರುವಂತೆ ಬಿಜೆಪಿ ಆಹ್ವಾನಿಸಿತ್ತು: ಬಾಬಾಸಾಹೇಬ ಪಾಟೀಲ್

Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.