ಶಾಸಕ ಹೂಲಗೇರಿಯಿಂದ ಪಟ್ಟಣ ಪ್ರದಕ್ಷಿಣೆ
Team Udayavani, Feb 7, 2022, 5:16 PM IST
ಮುದಗಲ್ಲ: ಸ್ಥಳೀಯ ಪುರಸಭೆಗೆ 4ನೇ ಹಂತದ ನಗರೋತ್ಥಾನ ಯೋಜನೆಯಡಿ ಬಿಡುಗಡೆಯಾದ 10 ಕೋಟಿ ರೂ. ಅನುದಾನದಲ್ಲಿ ಪಟ್ಟಣದ ವಾರ್ಡ್‍ಗಳಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳನ್ನು ಶಾಸಕ ಡಿ.ಎಸ್. ಹೂಲಗೇರಿ ರವಿವಾರ ಪರಿಶೀಲನೆ ನಡೆಸಿದರು.
ಪಟ್ಟಣದ ಪುರಸಭೆಯಲ್ಲಿ ಮುಖ್ಯಾಧಿಕಾರಿ ಮತ್ತು ಕಿರಿಯ ಅಭಿಯಂತರರೊಂದಿಗೆ ಕೈಗೆತ್ತಿಕೊಳ್ಳಬೇಕಾದ ಕಾಮಗಾರಿಗಳ ಕುರಿತು ಚರ್ಚಿಸಿದರು. ನಂತರ ಪಟ್ಟಣದ ಮೇಗಳಪೇಟೆ, ಕಿಲ್ಲಾ, ಕಂದಕವನ್ನು ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ಮುದಗಲ್ಲ, ಲಿಂಗಸುಗೂರು ಪುರಸಭೆಗೆ 10 ಕೋಟಿ ರೂ. ಮತ್ತು ಹಟ್ಟಿ ಪಟ್ಟಣ ಪಂಚಾಯತಿಗೆ 5 ಕೋಟಿ ರೂ. ಅನುದಾನ ನಗರೋತ್ಥಾನದಡಿ ಮಂಜೂರಾಗಿದೆ. ಮೂರು ಪಟ್ಟಣಗಳಲ್ಲಿ ಉತ್ತಮ ರೀತಿಯ ಕಾಮಗಾರಿ ಕೈಗೆತ್ತಿಕೊಳ್ಳುವ ಮೂಲಕ ಪಟ್ಟಣಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಉತ್ತಮ ಕಾಮಗಾರಿಗಾಗಿ ಮೂರು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರೊಂದಿಗೆ ಚರ್ಚಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಕಾಮಗಾರಿ ನಿರ್ವಹಣೆಯ ಜವಾಬ್ದಾರಿ ಪುರಸಭೆ ಮತ್ತು ಪಟ್ಟಣ ಪಂಚಾಯತಿ ನಿರ್ವಹಣೆ ಮಾಡುತ್ತಿದ್ದರೂ ಉತ್ತಮ ಕಾಮಗಾರಿ ನಿರ್ವಹಣೆ ದೃಷ್ಟಿಯಿಂದ ಲೋಕೋಪಯೋಗಿ ಹಾಗೂ ಬಂದರು ಇಲಾಖೆ ಇಂಜಿನಿಯರ್‌ಗಳಿಗೆ ಮೇಲುಸ್ತುವಾರಿ ನೀಡಲಾಗುವುದು. ಪಟ್ಟಣದ ಕೋಟೆ ಮುಂಭಾಗದಲ್ಲಿ ಕೋಟೆ ಪ್ರವಾಸಿಗರಿಗೆ ಕಾಣುವ ದೃಷ್ಟಿಯನ್ನಿಟ್ಟುಕೊಂಡು ಲೈಟ್ ಮತ್ತು ಜಾಲರಿ ಅಳವಡಿಸುವ ಜೊತೆಗೆ ಕಂದಕದಲ್ಲಿಯ ನೀರನ್ನು ಬೇರೆಡೆ ಸಾಗಿಸುವ ಕಾಮಗಾರಿ ಅಳವಡಿಸಲು ಆಲೋಚಿಸಲಾಗುತ್ತಿದೆ ಎಂದು ಹೇಳಿದರು.
ಕಿಲ್ಲಾದಲ್ಲಿರುವ ಹೊಕ್ರಾಣಿ ರಸ್ತೆ ಸ್ವತ್ಛತೆಗೊಳಿಸುವುದು, ಹೊಕ್ರಾಣಿ ಸುತ್ತಮುತ್ತ ಬೆಳೆದಿರುವ ಜಾಲಿ ಗಿಡಗಳನ್ನು ತೆರವುಗೊಳಿಸಲು ಸ್ಥಳದಲ್ಲಿದ್ದ ಪುರಸಭೆ ಮುಖ್ಯಾಧಿಕಾರಿ ಮರಿಲಿಂಗಪ್ಪ, ಕಿರಿಯ ಅಭಿಯಂತರ ಮಹೇಂದ್ರ ಬಡಿಗೇರ ಅವರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಪಾಟೀಲ, ಪುರಸಭೆ ಉಪಾಧ್ಯಕ್ಷ ಶಿವಗ್ಯಾನಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾವೂದ್ ಸಾಬ, ಕಾರ್ಯಾಧ್ಯಕ್ಷ ಶಿವಶಂಕರಗೌಡ ಗೌಡರ, ಪುರಸಭೆ ಸದಸ್ಯರಾದ ಅಜಮೀರ ಬೆಳ್ಳಿಕಟ್, ತಸ್ಲಿಂ ಮುಲ್ಲಾ, ಮುಖಂಡರಾದ ನ್ಯಾಮತ್ ಖಾದ್ರು, ತಮ್ಮಣ್ಣ ಗುತ್ತೇದಾರ, ರಘುವೀರ, ಕೃಷ್ಣಾ ಛಲವಾದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.