ಸಿಂಧನೂರಿನಿಂದ ರೈಲ್ವೆ ಸ್ಟೇಷನ್‌ಗೆ ಸಿಟಿ ಬಸ್
Team Udayavani, Feb 7, 2022, 5:20 PM IST
ಸಿಂಧನೂರು: ಈವರೆಗೂ ನಗರಕ್ಕೆ ರೈಲ್ವೆ ಮಾರ್ಗದ ಹಳಿಗಳು ಬಂದಿಲ್ಲ. ಆದರೆ, 25 ಕಿ.ಮೀ. ದೂರದಲ್ಲಿರುವ ಕಾರಟಗಿ ತಾಲೂಕಿನ ಮೂಲಕ ಪ್ರಯಾಣಿಕರನ್ನು ಕಳುಹಿಸುವ ನಿಟ್ಟಿನಲ್ಲಿ ಸಿಂಧನೂರಿನಿಂದ ರೈಲ್ವೆ ಪ್ರಯಾಣಿಕರಿಗಾಗಿ ಬಸ್ ಓಡಾಟ ಆರಂಭವಾಗಿದೆ.
ಆಂಧ್ರ ಪ್ರದೇಶದ ಮಹೆಬೂಬನಗರ- ಗಿಣಿಗೇರಾ ಮಾರ್ಗದ 165 ಕಿ.ಮೀ. ಮಾರ್ಗದ ರೈಲ್ವೆ ಯೋಜನೆ ಪ್ರಯೋಜನ ಕೊನೆಗೂ ತಾಲೂಕಿಗೆ ತಲುಪಲಾರಂಭಿಸಿದೆ. ಕೊಪ್ಪಳದ ಆರಂಭಿಕ ಪಾಯಿಂಟ್ ನಿಂದ ಗಂಗಾವತಿ ದಾಟಿ ಪಕ್ಕದ ಕಾರಟಗಿ ಪಟ್ಟಣಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ರೈಲ್ವೆ ಸೌಲಭ್ಯ ಪಡೆಯಲು ಸಿಂಧನೂರು ಪ್ರಯಾಣಿಕರು ಮುಂದಾಗಿದ್ದಾರೆ. ಇದಕ್ಕೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಸಾಥ್ ನೀಡಿದ್ದರಿಂದ ಜನರಲ್ಲಿ ಉತ್ಸಾಹ ಮೂಡಿದೆ.
ಏನಿದು ಪ್ರಯೋಗ?
ಮೆಹಬೂಬನಗರ – ಗಿಣಿಗೇರಾ ರೈಲ್ವೆ ಮಾರ್ಗದ ಹಳಿ ಸಿಂಧನೂರು ನಗರಕ್ಕೆ ಬರಲು ಮುಂದಿನ ವರ್ಷದ ತನಕ ಕಾಯಬೇಕಿದೆ. ಸದ್ಯಕ್ಕೆ ಪಕ್ಕದ ತಾಲೂಕಿನವರೆಗೂ ರೈಲ್ವೆ ಹಳಿ ಬಂದಿದ್ದು, ರೈಲು ಓಡಾಟವೂ ಆರಂಭವಾಗಿದೆ. ಕಡಿಮೆ ವೆಚ್ಚದ ರೈಲ್ವೆ ಮಾರ್ಗ ಬಳಸಲು ಈಗಿನಿಂದಲೇ ಸಾರಿಗೆ ಸಂಸ್ಥೆ ಸಹಕಾರ ನೀಡಲಾರಂಭಿಸಿದೆ. ಮಾವಿನಮಡ್ಗು ಗ್ರಾಮದ ತನಕವೂ ಓಡುವ ಸಾರಿಗೆ ಬಸ್‌ನ್ನು ರೈಲ್ವೆ ಸ್ಟೇಷನ್ ತನಕ ವಿಸ್ತರಿಸಲಾಗಿದೆ. ಗಂಗಾವತಿ ಮಾರ್ಗದಲ್ಲಿ ಸಂಚರಿಸುವ ಸಿಟಿ ಬಸ್ ಕೂಡ ಕಾರಟಗಿಯ ರೈಲ್ವೆ ನಿಲ್ದಾಣಕ್ಕೆ ಕಳುಹಿಸಲು ಆದೇಶ ಮಾಡಲಾಗಿದೆ.
ಹುಬ್ಬಳ್ಳಿ, ಬೆಂಗಳೂರಿಗೆ ಪ್ರಯಾಣ
ಸಿಂಧನೂರಿನಿಂದ ರೈಲ್ವೆ ಸ್ಟೇಷನ್‌ಗೆ ಎರಡು ಸಿಟಿ ಬಸ್ ಬಿಡಲಾಗಿದೆ. ಬೆಳಗ್ಗೆ 5:30ಕ್ಕೆ ಕಾರಟಗಿಯಿಂದ ಹುಬ್ಬಳ್ಳಿಗೆ ರೈಲು ಹೊರಡುತ್ತದೆ. ಅದೇ ವೇಳೆ ಬೆಳಗ್ಗೆ 6:30ಕ್ಕೆ ಬೆಂಗಳೂರಿನಿಂದ ರೈಲು ಬರುತ್ತದೆ. ಮಧ್ಯಾಹ್ನ ಕೂಡ ಹುಬ್ಬಳ್ಳಿಗೆ ರೈಲು ಹೊರಡುತ್ತದೆ. ಕಾರಟಗಿ ಟು ಬೆಂಗಳೂರಿನ ಯಶವಂತಪುರಕ್ಕೂ ರೈಲು ಬಿಡಲಾಗಿದೆ. ಈ ಎಲ್ಲ ರೈಲು ಮೂಲಕ ದೂರ ಊರಿಗೆ ತೆರಳಲು ಸಿಂಧನೂರಿನ ಪ್ರಯಾಣಿಕರನ್ನು ರೈಲ್ವೆ ಸ್ಟೇಷನ್‌ಗೆ ಕಳುಹಿಸಲು ಅವಕಾಶ ಒದಗಿಸಲಾಗುತ್ತಿದೆ. ಬಹುತೇಕರು ಖಾಸಗಿ ವಾಹನ ಬಳಸುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ಪ್ರಯತ್ನಕ್ಕೆ ಆರಂಭದಲ್ಲಿ ಯಶಸ್ಸು ಸಿಗುತ್ತಿಲ್ಲವೆಂಬ ಮಾತು ಕೇಳಿಬಂದಿವೆ. ನಾಲ್ಕೈದು ದಿನದಿಂದ ಆರಂಭವಾಗಿರುವ ಈ ಸಾರಿಗೆ ಸೌಲಭ್ಯ ಖಚಿತವಾದರೆ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲ ಒದಗಲಿದೆ.
ಒತ್ತಾಯಕ್ಕೆ ಸ್ಪಂದಿಸಿದ ಸಾರಿಗೆ ಸಂಸ್ಥೆ
ಪ್ರತಿದಿನ ಬೆಳಗ್ಗೆ ಮತ್ತು ಮಧ್ಯಾಹ್ನ, ರಾತ್ರಿ ವೇಳೆ ಕಾರಟಗಿ ರೈಲ್ವೆ ಸ್ಟೇಷನ್‌ಗೆ ಸಿಟಿ ಬಸ್‌ಗಳನ್ನು ಓಡಿಸಬೇಕು ಎಂಬ ಬೇಡಿಕೆಗೆ ಆರಂಭಿಕವಾಗಿ ಕಲ್ಯಾಣ ಕರ್ನಾಟಕ ಸಂಸ್ಥೆ ಸ್ಪಂದಿಸಿದೆ. ಹುಬ್ಬಳ್ಳಿ, ಬೆಂಗಳೂರು ರೈಲು ಏರುವ ಪ್ರಯಾಣಿಕರನ್ನು ಸಿಂಧನೂರಿನಿಂದ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ. ಸಿಂಧನೂರಿನಲ್ಲಿ ರೈಲ್ವೆ ನಿಲ್ದಾಣ ಆರಂಭವಾಗುವ ಮುನ್ನವೇ ಅದರ ಪ್ರಯೋಜನ ತಾಲೂಕಿನ ಜನರಿಗೆ ದೊರೆಯಲಾರಂಭಿಸಿದೆ.
ಬೇಡಿಕೆ ಕೇಳಿಬಂದ ಹಿನ್ನೆಲೆಯಲ್ಲಿ ಬಸ್ ಓಡಿಸಲಾಗುತ್ತಿದೆ. ಸ್ವಂತ ವಾಹನ ಬಳಕೆ ಮಾಡುವವರ ಸಂಖ್ಯೆ ಕಡಿಮೆಯಾಗಬೇಕು. ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಕರು ಬಂದರೆ, ಮುಂದಿನ ದಿನಗಳಲ್ಲಿ ರೈಲ್ವೆ ಸ್ಟೇಷನ್‌ಗೆ ನಿರಂತರವಾಗಿ ಬಸ್ ಓಡಿಸಲಾಗುವುದು. -ಶ್ರೀಕಂಠ ಕುದುರೆ, ಸಂಚಾರ ನಿರೀಕ್ಷಕರು, ಸಾರಿಗೆ ಘಟಕ ಸಿಂಧನೂರು
-ಯಮನಪ್ಪ ಪವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.