ಗಂಗಾವತಿ: ಅಪ್ಪು ಫೋಟೋ ಎದುರು ದಂಪತಿಗಳಾದ ಅಭಿಮಾನಿಗಳು
Team Udayavani, Feb 7, 2022, 6:37 PM IST
ಗಂಗಾವತಿ: ತಾಲ್ಲೂಕಿನ ಕಡೆಬಾಗಿಲು ಗ್ರಾಮದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿ ಯುವಕ ಯುವತಿ ಅಪ್ಪು ಫೋಟೊ ಎದುರಿಗೆ ಸತಿಪತಿಗಳಾಗಿ ಇಂದು ವಿವಾಹವಾಗಿ ಅಭಿಮಾನ ಮೆರೆದಿದ್ದಾರೆ.
ಸೋಮವಾರ ಕಡೆಬಾಗಿಲು ಗ್ರಾಮದ ವಾಲ್ಮೀಕಿ ಬಂಧುಗಳ ಮದುವೆ ಸಮಾರಂಭದಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಾಗಿರುವ ನಿಂಗರಾಜ್ ಮತ್ತು ಲಕ್ಷ್ಮಿ ಇವರು ಪುನೀತ್ ರಾಜ್ ಕುಮಾರ್ ರವರ ಭಾವಚಿತ್ರವನ್ನ ವೇದಿಕೆ ಮೇಲಿರಿಸಿ ಸತಿಪತಿಗಳಾದರು.
ಮದುವೆ ಮಂಟಪಕ್ಕೆ ಆಗಮಿಸುವ ಮುಖ್ಯ ದ್ವಾರದ ಬಳಿ ಆಳೆತ್ತರದ ಪುನೀತ್ ರಾಜ್ ಕುಮಾರ್ ಅವರ ಬ್ಯಾನರ್ ಹಾಕಿಸಿ ಶುಭ ಕೋರಿದ್ದು ವಿಶೇಷವಾಗಿತ್ತು.
ಪುನೀತ್ ರಾಜ್ ಕುಮಾರ್ ಗೆ ಆನೆಗೊಂದಿ ಕಿಷ್ಕಿಂದಾ ಪ್ರದೇಶ ಅತ್ಯಂತ ಪ್ರೀತಿಯ ತಾಣವಾಗಿತ್ತು .ಉತ್ತರ ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ಚಿತ್ರೀಕರಣ ಇದ್ದರೆ ಖಚಿತವಾಗಿ ಕಿಷ್ಕಿಂದಾ ಅಂಜನಾದ್ರಿ ಗೆ ಭೇಟಿ ನೀಡಿ ಶ್ರೀ ಆಂಜನೇಯನ ದರ್ಶನ ಪಡೆಯುತ್ತಿದ್ದರು .ಈ ಭಾಗದಲ್ಲಿ ಅನೇಕ ಚಾರಿಟಿಯ ಮೂಲಕ ನಿರಾಶ್ರಿತರಿಗೆ ಅಸಹಾಯಕರಿಗೆ ಪುನೀತ್ ನೆರವಾಗಿದ್ದರು.
ಸೇವಾಕಾರ್ಯದ ಮೂಲಕ ಅಪ್ಪು ಜನಮನದಲ್ಲಿದ್ದಾರೆ :
ನಿಸ್ಸಹಾಯಕರಿಗೆ ನೆರವು ನೀಡುವ ಮೂಲಕ ಚಿತ್ರನಟ ಚಿಕ್ಕವಯಸ್ಸಿನ ಅಪ್ಪು ಪುನೀತ್ ರಾಜ್ ಕುಮಾರ್ ಜನಮಾನಸದಲ್ಲಿ ಉಳಿದಿದ್ದಾರೆ ವೈಯಕ್ತಿಕ ಕಾರ್ಯಕ್ರಮಗಳು ಸೇರಿದಂತೆ ಸಾಮೂಹಿಕ ಕಾರ್ಯಕ್ರಮಗಳು ಧಾರ್ಮಿಕ ಕಾರ್ಯಕ್ರಮಗಳು ಕೂಡ ಪುನೀತ್ ಅವರ ಭಾವಚಿತ್ರವನ್ನು ಹಿಡಿದುಕೊಂಡು ಅವರ ಅಭಿಮಾನಿಗಳು ಅವರನ್ನು ಸ್ಮರಿಸುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಚ್ ಎಂ ಸಿದ್ದರಾಮಸ್ವಾಮಿ ಉದಯವಾಣಿ ಜತೆ ಮಾತನಾಡಿ ಅಭಿಪ್ರಾಯ ಹಂಚಿಕೊಂಡರು .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.