ಬೆಂಗಳೂರು ಓಪನ್ ಟೆನಿಸ್: ಸಾಕೇತ್ ಮೈನೇನಿಗೆ ಸೋಲು
Team Udayavani, Feb 7, 2022, 11:00 PM IST
ಬೆಂಗಳೂರು: ಬೆಂಗಳೂರು ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಭಾರತಕ್ಕೆ ಮಿಶ್ರ ಫಲಿತಾಂಶ ಸಿಕ್ಕಿದೆ. ಮೊದಲ ಸುತ್ತಿನ ಪಂದ್ಯದಲ್ಲೇ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದ ಸಾಕೇತ್ ಮೈನೇನಿ ಇಟಲಿಯ ಗೈನ್ ಮಾರ್ಕೋ ಮೋರೋನಿ ವಿರುದ್ಧ ಸೋತಿದ್ದಾರೆ. ಪ್ರವೇಶ ಸುತ್ತಿನ ಪಂದ್ಯದಲ್ಲಿ ಭಾರತದ ಮತ್ತೂಬ್ಬ ಆಟಗಾರ ಅರ್ಜುನ್ ಖಾಡೆ ಗೆದ್ದು ಪ್ರಧಾನ ಸುತ್ತು ಪ್ರವೇಶಿಸಿದ್ದಾರೆ.
ಮೈನೇನಿ ಅವರು ಮೋರೋನಿ ವಿರುದ್ಧ 1-6, 1-6 ಅಂತರದಲ್ಲಿ ಸೋತರು. ಖಾಡೆ ಆಸ್ಟ್ರಿಯಾದ ಅಲೆಕ್ಸಾಂಡರ್ ಎರ್ಲರ್ ವಿರುದ್ಧ 6-3, 6-4 ಅಂತರದ ಗೆಲುವು ಸಾಧಿಸಿದರು. ಸಾಕೇತ್ ಸೋಲಿನಿಂದಾಗಿ ಪಂದ್ಯಾವಳಿಯಲ್ಲಿ ಭಾರತದ ಆರು ಮಂದಿ ಮಾತ್ರ ಉಳಿದಂತಾಗಿದೆ.
ಅರ್ಜುನ್ ಅವರು ಮುಂದಿನ ಸುತ್ತಿನಲ್ಲಿ ಐದನೇ ಶ್ರೇಯಾಂಕಿತ ಟರ್ಕಿಯ ಅಲ್ತಗ್ ಸೆಲಿಕ್ ಬ್ಲೇಕ್ ಅವರನ್ನು ಎದುರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.