ಇಂದು ಸುರಕ್ಷಿತ ಇಂಟರ್ನೆಟ್‌ ದಿನ: ನಿಮ್ಮ ಸುರಕ್ಷೆಯ ಕೀಲಿ ಸೈಬರ್‌ ಕಳ್ಳರ ಪಾಲಾಗದಿರಲಿ

ಫೆಬ್ರವರಿ ಎರಡನೇ ವಾರದ ಎರಡನೇ ದಿನದಂದು ಅಂದರೆ ಈ ಬಾರಿ ಫೆ.8ರಂದು ಆಚರಿಸಲಾಗುತ್ತಿದೆ.

Team Udayavani, Feb 8, 2022, 7:20 AM IST

ಇಂದು ಸುರಕ್ಷಿತ ಇಂಟರ್ನೆಟ್‌ ದಿನ: ನಿಮ್ಮ ಸುರಕ್ಷೆಯ ಕೀಲಿ ಸೈಬರ್‌ ಕಳ್ಳರ ಪಾಲಾಗದಿರಲಿ

ಅಂಗೈಯಲ್ಲೇ ಜಗತ್ತು ತೋರಿಸುವ ಅಂತರ್ಜಾಲ ನಮ್ಮ ಬದುಕನ್ನೇ ಆವರಿಸಿಕೊಂಡಿದೆ. ಈ ಪ್ರಭಾವಿ “ಅಂತರ್ಜಾಲ ಪ್ರಪಂಚ’ ಮಕ್ಕಳಿಂದ ಹಿಡಿದು ಹಿರಿಯರವರೆಗೂ, ಜನಸಾಮಾನ್ಯನಿಂದ ಹಿಡಿದು ತಜ್ಞರವರೆಗೂ ವ್ಯಾಪಿಸಿದೆ.

ಯುವಜನತೆಯಂತೂ ಪ್ರತೀಕ್ಷಣವೆಂಬಂತೆ ಅಂತರ್ಜಾಲದಲ್ಲಿ ಜಾಲಾಡುವುದನ್ನು ಕಾಣಬಹುದು. ಇದೊಂದು ರೀತಿಯ ಮಾಯಾಜಾಲ. ಒಳಿತು-ಕೆಡುಕುಗಳನ್ನು ತನ್ನೊಳಗೆ ಇರಿಸಿಕೊಂಡಿರುವ ಅಂತರ್ಜಾಲದ ಸುರಕ್ಷಿತ ಬಳಕೆ ಇಂದಿನ ಬಹುದೊಡ್ಡ ಸವಾಲು. ಈ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ “ಸುರಕ್ಷಿತ ಅಂತರ್ಜಾಲ ದಿನ’ವನ್ನು (safer internet day) ಪ್ರತೀ ವರ್ಷದ ಫೆಬ್ರವರಿ ಎರಡನೇ ವಾರದ ಎರಡನೇ ದಿನದಂದು ಅಂದರೆ ಈ ಬಾರಿ ಫೆ.8ರಂದು ಆಚರಿಸಲಾಗುತ್ತಿದೆ. ಈ ಸಂಬಂಧ ಲೇಖನ.

ಶಿಕ್ಷಣ, ವ್ಯವಹಾರ, ಮನೋರಂಜನೆ ಸಹಿತ ಪ್ರತಿಯೊಂದನ್ನೂ ತನ್ನೊಳಗೆ ಇರಿಸಿಕೊಂಡಿರುವ ಅಂತರ್ಜಾಲ ಅಪರಾಧಗಳಿಗೂ ವೇದಿಕೆಯಾಗಿದೆ. ಅಂತರ್ಜಾಲ ಬಳಕೆದಾರರನ್ನು ವಂಚಿಸುವುದ ಕ್ಕಾಗಿಯೇ ಸೈಬರ್‌ ಖದೀಮರು ಹೊಂಚು ಹಾಕಿ ಕೊಂಡಿರುತ್ತಾರೆ. ವಿದ್ಯಾವಂತರನ್ನು ಕೂಡ ಈ ವಂಚನೆಯ ಬಲೆಯೊಳಗೆ ಬೀಳಿಸುವ ಚಾಕಚಕ್ಯತೆ ಈ ಕಳ್ಳರಿಗಿದೆ. ಇದನ್ನು “ಸೈಬರ್‌ ಕ್ರೈಂ’ ಎಂದೂ ಕರೆಯ ಲಾಗುತ್ತದೆ. ಅನೇಕ ಬಾರಿ ಸರಿಯಾದ ಜ್ಞಾನ-ತಿಳಿವಳಿಕೆ ಇಲ್ಲದೆ ನಾವಾಗಿಯೇ ಅಂತರ್ಜಾಲ ಬಳಕೆ ವೇಳೆ ತಪ್ಪುಗಳನ್ನು ಮಾಡಿ ತೊಂದರೆಗೀಡಾಗು ತ್ತೇವೆ. ಇನ್ನು ಕೆಲವೊಮ್ಮೆ ಸೈಬರ್‌ ವಂಚಕರ ಕಪಟಕ್ಕೆ ಬಲಿಯಾಗುತ್ತೇವೆ. ಅಂತರ್ಜಾಲದ ಮೂಲಕ ನಡೆಯುವ ವಂಚನೆ, ಅಪರಾಧ ಗಳು ಹಾಗೂ ಬಳಕೆದಾರರು ವಹಿಸಬೇಕಾದ ಎಚ್ಚರಿಕೆಯ ಕುರಿತ ಮಾಹಿತಿಗಳು ಇಲ್ಲಿವೆ.

ಸೈಬರ್‌ ಅಪರಾಧಗಳು
ಇಂಟರ್‌ನೆಟ್‌ ಮೂಲಕ ನಡೆಯುವ ಅಪರಾಧಗಳನ್ನು ಸೈಬರ್‌ ತಜ್ಞರು ಪಿಶಿಂಗ್‌(phishing) ಸ್ಮಿಶಿಂಗ್‌(smishing) ಮತ್ತು ವಿಶಿಂಗ್‌ (vishing) ಎಂದು ವಿಂಗಡಿಸಿದ್ದಾರೆ. ಪಿಶಿಂಗ್‌ ಎಂದರೆ ಇಮೇಲ್‌ನಲ್ಲಿ ವಂಚನೆ, ಸ್ಮಿಶಿಂಗ್‌ ಅಂದರೆ ಎಸ್‌ಎಂಎಸ್‌ ಹಾಗೂ ವಿಶಿಂಗ್‌ ಎಂದರೆ ಕರೆ ಮೂಲಕ ವಂಚಿಸುವುದು ಎಂದರ್ಥ. “ಸೋಶಿ ಯಲ್‌ ಎಂಜಿನಿಯರಿಂಗ್‌’ ಮೂಲಕ ಅಥವಾ ಹ್ಯಾಕಿಂಗ್‌ ಮೂಲಕ ವಂಚಿಸಲಾಗುತ್ತದೆ. ಇಂಟರ್‌ನೆಟ್‌ ಬಳಕೆದಾರರಿಂದಲೇ ಮಾಹಿತಿ ಪಡೆದು ಅದನ್ನು ಬಳಸಿ ವಂಚಿಸುವುದನ್ನು “ಸೋಶಿಯಲ್‌ ಎಂಜಿನಿ ಯರಿಂಗ್‌’ ಎಂದು ಕರೆಯಲಾಗುತ್ತದೆ. ಬೇರೆ ಬೇರೆ ತಂತ್ರಜ್ಞಾನ ಗಳನ್ನು ಬಳಸಿ ವಂಚಿಸುವುದನ್ನು ಹ್ಯಾಕಿಂಗ್‌ ಎನ್ನಲಾಗುತ್ತದೆ. ಇಂಟರ್‌ನೆಟ್‌ನಲ್ಲಿ ಸದ್ಯ 40 ವಿಧದ ಅಪರಾಧಗಳನ್ನು ಸೈಬರ್‌ ತಜ್ಞರು ಪತ್ತೆ ಹಚ್ಚಿದ್ದಾರೆ. ಕೊರೊನಾ ಅನಂತರದಲ್ಲಿ ಸೈಬರ್‌ ಅಪರಾಧ ಶೇ.30 ರಷ್ಟು ಹೆಚ್ಚಾಗಿದೆ ಎನ್ನುತ್ತಾರೆ ಸೈಬರ್‌ ಭದ್ರತಾ ತಜ್ಞರು.

ಸುರಕ್ಷೆಗಾಗಿ ಹೀಗೆ ಮಾಡಿ
ಉಚಿತವಾಗಿ ಸಿಗುವ ಆ್ಯಂಟಿ ವೈರಸ್‌ಗಳಿಗಿಂತ ಪಾವತಿ ಮಾಡಿ ಪಡೆಯುವ ಆ್ಯಂಟಿ ವೈರಸ್‌ಗಳನ್ನೇ ಅಳವಡಿಸಿಕೊಳ್ಳಬೇಕು. ರೆಗ್ಯುಲರ್‌ ಆಗಿ ಅಪ್‌ಡೇಟ್‌ ಮಾಡುತ್ತಿರಬೇಕು.ಅಧಿಕೃತವಾದ ಸಾಫ್ಟ್ವೇರ್‌/ಆ್ಯಪ್‌ಗಳ ಮಾತ್ರ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು.ಆಪರೇಟಿಂಗ್‌ ಸಿಸ್ಟಮ್‌ ಮತ್ತು ಆ್ಯಪ್‌ ಅನ್ನು ನಿಯಮಿತವಾಗಿ ಅಪ್‌ಡೇಟ್‌ ಮಾಡಬೇಕು.ಅಂತರ್ಜಾಲದ ಸುರಕ್ಷಿತ ಬಳಕೆಗೆ ಸರಕಾರದ ಅಧಿಕೃತ ವೆಬ್‌ಸೈಟ್‌ಗಳಾದ infosecawareness.in ಅಥವಾ cybersafegirl.comನ್ನು ಆಗಾಗ್ಗೆ ಗಮನಿಸುತ್ತಿರಬೇಕು.

ಪಾಸ್‌ವರ್ಡ್‌ಗಳನ್ನು ನೀಡುವಾಗ ತೀರಾ ಸರಳವಾಗಿ ನೀಡುವ ಬದಲು 14 ಅಂಕೆಯ ಪಾಸ್‌ವರ್ಡ್‌ಗಳನ್ನು ನೀಡುವುದು ಉತ್ತಮ.

ವೆಬ್‌ಸೈಟ್‌ನಲ್ಲಿ 2 ರೀತಿಯ ದೃಢೀಕರಣ ಪ್ರಕ್ರಿಯೆಯನ್ನು (ಲಾಗ್‌ ಎನೇಬಲ್‌) ಮಾಡಿಕೊಳ್ಳಬೇಕು. ಆಗ ಜಿಮೇಲ್‌ ಅಥವಾ ಮೇಲ್‌ ತೆರೆಯುವಾಗ ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ ಅಥವಾ ಇತರ ರೀತಿಯ ದೃಢೀಕರಣ ವಿಧಾನಗಳನ್ನು ಬಳಸಬಹುದು. ಆಗ ನಿಮ್ಮ ಮೊಬೈಲ್‌ಗೆ ಅನುಮತಿಗಾಗಿ ಮೆಸೇಜ್‌ ಬರುತ್ತದೆ.
ಯಾವುದೇ ಲಿಂಕ್‌ ತೆರೆಯುವ ಮೊದಲು ಸಾಕಷ್ಟು ಯೋಚನೆ ಮಾಡಬೇಕು. ಲಿಂಕ್‌ ಸುರಕ್ಷಿತವೇ ಅಥವಾ ಅಧಿಕೃತವೇ ಎಂದು ತಿಳಿಯಲು virustotal.com ಮೂಲಕ ಪರಿಶೀಲಿಸಬಹುದು.

ಒಟಿಪಿ, ಪಾಸ್‌ವರ್ಡ್‌, ಎಟಿಎಂ ಕಾರ್ಡ್‌ನ ವಿವರ ಮೊದಲಾದವುಗಳನ್ನು ಯಾವುದೇ ಕಾರಣಕ್ಕೂ ಇನ್ನೊಬ್ಬ ರೊಂದಿಗೆ ಹಂಚಿಕೊಳ್ಳಬೇಡಿಮೊಬೈಲ್‌ನ ಬ್ಲೂಟೂತ್‌ನ್ನು ಆನ್‌ ಮಾಡಿಟ್ಟುಕೊಳ್ಳಬೇಡಿ. ಸರಕಾರದ ಇಲಾಖೆಗಳ ಅಧಿಕೃತ ವೆಬ್‌ಸೈಟ್‌ಗಳಾಗಿದ್ದರೆ ಆ ವೆಬ್‌ಸೈಟ್‌ಗಳ URL ನ ಕೊನೆಗೆ gov.in ಅಥವಾ nic.in ಎಂಬುದಾಗಿ ಇರುತ್ತದೆ.

ಕಠಿನ ಶಿಕ್ಷೆ ಇದೆ ಎಚ್ಚರ!
ಇಂಟರ್‌ನೆಟ್‌ ಮೂಲಕ ನಡೆಸುವ ಅಪರಾಧಗಳಿಗೆ “ಮಾಹಿತಿ ತಂತ್ರಜ್ಞಾನ ಕಾಯಿದೆ 2000’ರಂತೆ ಕಠಿನ ಶಿಕ್ಷೆ ಇದೆ. ಅಂದರೆ, ಇನ್ನೊಬ್ಬರ ಪಾಸ್‌ವರ್ಡ್‌ ಬಳಕೆ ಮಾಡಿದರೆ 3 ವರ್ಷ ಜೈಲು, 1 ಲ.ರೂ. ದಂಡ ಅಥವಾ ಇವೆರಡನ್ನೂ ವಿಧಿಸಬಹುದು. ಕಳವು ಮಾಡಿದ ಮೊಬೈಲ್‌ ಬಳಕೆಗೆ 1 ಲ.ರೂ. ದಂಡ, 3 ವರ್ಷ ಜೈಲು, ಅಶ್ಲೀಲ ದೃಶ್ಯ ಗಳನ್ನು ಅಪ್‌ಲೋಡ್‌(ಪ್ರಕಟ) ಮಾಡಿದರೆ 5 ವರ್ಷ ಜೈಲು, 10 ಲ.ರೂ. ದಂಡ ವಿಧಿಸಬಹುದು. ಭಯೋತ್ಪಾದನೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬಹುದು.

ಬ್ಲೂಟೂತ್‌ ಅಸುರಕ್ಷಿತ
ಬ್ಲೂಟೂತ್‌ ಬಳಕೆದಾರರು ಎಚ್ಚರ ತಪ್ಪಿದರೆ “ಬ್ಲೂ ಸ್ನಾರ್ಫಿಂಗ್‌’ ಎಂಬ ವಂಚನೆಗೆ ಒಳಗಾಗುತ್ತಾರೆ. ಸಾಮಾನ್ಯವಾಗಿ ಬ್ಲೂ ಟೂತ್‌ಗಳಲ್ಲಿ 100 ಮೀಟರ್‌ ವ್ಯಾಪ್ತಿಯಲ್ಲಿ ಸಂಪರ್ಕ ಸಾಧಿಸಬಹುದು. ಆದರೆ ಹ್ಯಾಕರ್‌ಗಳು 300 ಮೀಟರ್‌ ದೂರದಲ್ಲಿಯೂ ಸಂಪರ್ಕ ಸಾಧಿಸಿ ನಿಮ್ಮ ಮೊಬೈಲ್‌ ಅಥವಾ ಡಿವೈಸ್‌ನ ಎಲ್ಲ ಮಾಹಿತಿ ಕದಿಯಬಹುದು. ಇದಕ್ಕಾಗಿ ಬ್ಲೂಟ್‌ತ್‌ನಲ್ಲಿ ತಪ್ಪದೇ visibility setting ಮಾಡಿಕೊಳ್ಳಬೇಕು. ಬೇರೆಯವರ ಸಂಪರ್ಕಕ್ಕೆ ಸಿಗದಂತೆ ನೋಡಿಕೊಳ್ಳಬೇಕು. ಇಲ್ಲಿ ‘s’ ಬೇಕೇ ಬೇಕು

ಯಾವುದೇ ಸೈಟ್‌ನ ಲಿಂಕ್‌ https:// .. ಹೀಗೆ ಆರಂಭಗೊಂಡಿದ್ದರೆ ಅದು ಸುರಕ್ಷಿತ. ಒಂದು ವೇಳೆ http://… ಈ ರೀತಿ ಆರಂಭಗೊಂಡಿದ್ದರೆ ಅಸುರಕ್ಷಿತವಾಗಿರುವ ಸಾಧ್ಯತೆ ಹೆಚ್ಚು. ಇಲ್ಲಿ s ಎಂಬುದು ಸುರಕ್ಷತೆ (security)ಯನ್ನು ತೋರಿಸುತ್ತದೆ.

ಸರ್ಚ್‌ ವೇಳೆ ಜಾಗೃತರಾಗಿರಿ
ವಿಂಡೋಸ್‌ ಅಥವಾ ಡೆಸ್ಕ್ಟಾಪ್‌ ಗಳಲ್ಲಿ ಇಂಟರ್‌ನೆಟ್‌ ಬಳಕೆ ಮಾಡುವವರು fire wall ಎನೇಬಲ್‌ ಮಾಡಿ ಸರ್ಚ್‌ ಮಾಡಬೇಕು. ಆಗ ಹ್ಯಾಕ್‌ ಮಾಡಲು ಆಗುವುದಿಲ್ಲ. ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ ಬಳಕೆ ಮಾಡುವುದಾದರೆ ಪೇಯ್ಡ ವರ್ಸನ್‌ ಆ್ಯಂಟಿ ವೈರಸ್‌ ಬಳಕೆ ಮಾಡಬೇಕು. ಅನಗತ್ಯ ಆ್ಯಪ್‌ ಗಳು ಡೌನ್‌ಲೋಡ್‌ ಆಗದಂತೆ settings ನಲ್ಲಿ “block third party application’ ಮಾಡಬೇಕು. ಅಪರಿಚಿತರು ಕಳು ಹಿಸುವ ಯಾವುದೇ ಅಟ್ಯಾಚ್‌ಮೆಂಟ್‌ಗಳನ್ನು ಪರಿಶೀ ಲಿಸಿಯೇ ತೆರೆಯಬೇಕು. ಆನ್‌ಲೈನ್‌ನಲ್ಲಿ ಸರ್ಚ್‌ ಮಾಡುವಾಗ ನೀವು ಹುಡುಕಿದ ಸೈಟ್‌ನ ಬದಲು ಬೇರೆ ಲಿಂಕ್‌ ತೆರೆದುಕೊಂಡರೆ ಅದನ್ನು ತೆರೆಯದೇ ಇರುವುದು ಉತ್ತಮ ಎನ್ನುತ್ತಾರೆ ಪಾಂಡಿಚೇರಿಯ ಫೊರೆನ್ಸಿಕ್‌ ಸಾಯನ್ಸ್‌ ಲ್ಯಾಬೊರೇಟರಿಯ ಜೂನಿಯರ್‌ ಅನಾಲಿಸ್ಟ್‌ ಬಾಲಾಜಿ ನಾರಾಯಣ್‌ ಬಿ. ಅವರು.

ಸೈಬರ್‌ ಕಾನೂನಿನ ತಿಳಿವಳಿಕೆ ಇರಲಿ
ವಾಹನ ಚಲಾಯಿಸಬೇಕಾದರೆ ಸಂಚಾರ ನಿಯಮ ಹೇಗೆ ತಿಳಿದಿರಬೇಕೋ ಹಾಗೆಯೇ ಸುರಕ್ಷಿತವಾಗಿ ಇಂಟರ್‌ನೆಟ್‌ ಬಳಕೆ ಮಾಡ ಬೇಕಾದರೆ ಸೈಬರ್‌ ಕಾನೂನಿನ ಬಗ್ಗೆ ತಿಳಿವಳಿಕೆ ಬೇಕು. ಇಂದು ಎಲ್‌ಕೆಜಿಯಿಂದ ಪಿಜಿ ವರೆಗೂ ಇಂಟರ್‌ನೆಟ್‌ ಬಳಕೆ ಸಾಮಾನ್ಯವಾಗಿದೆ. ಆದರೆ ನಮ್ಮಲ್ಲಿ ಸೈಬರ್‌ ಲಾ ವಿಷಯ ಪಠ್ಯಪುಸ್ತಕ ಗಳಲ್ಲಿಯೂ ಇಲ್ಲ. ಸೈಬರ್‌ ವಂಚಕರು ಯಾವುದೇ ರೀತಿಯಲ್ಲಿ ವಂಚನೆ ಮಾಡಿದರೂ ಅವರನ್ನು ಪತ್ತೆ ಮಾಡುವ ತಂತ್ರಜ್ಞಾನ ಇಂದು ಲಭ್ಯವಿದೆ. ಸಾಮಾನ್ಯ ಕಳ್ಳರು ಯಾವುದಾದರೂ ಒಂದು ಸುಳಿವು ಬಿಟ್ಟು ಹೋಗುವಂತೆ ಸೈಬರ್‌ ಕಳ್ಳರು ಕೂಡ ಯಾವುದಾದರೂ ಒಂದು ಡಿಜಿಟಲ್‌ ಫೂಟ್ ಪ್ರಿಂಟ್‌ ಬಿಟ್ಟೇ ಇರುತ್ತಾರೆ. ಆದಾಗ್ಯೂ ವಂಚನೆ ಯಾದ ಮೇಲೆ ಪರಿತಪಿಸುವುದಕ್ಕಿಂತ ವಂಚನೆಯಾಗದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ ಎನ್ನುತ್ತಾರೆ ಮಂಗಳೂರಿನ ಸೈಬರ್‌ ಭದ್ರತಾ ತಜ್ಞ ಡಾ| ಅನಂತ ಪ್ರಭು ಜಿ. ಅವರು.

ಮಕ್ಕಳು ಮತ್ತು ಇಂಟರ್‌ನೆಟ್‌
ಇಂದು ಮಕ್ಕಳ ಕೈಗೆ ಮೊಬೈಲ್‌, ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಇತ್ಯಾದಿಗಳ ಮೂಲಕ ಇಂಟರ್‌ನೆಟ್‌ ಒದಗಿಸಿಕೊಡುವಾಗ ಹೆತ್ತವರು “ಪೇರೆಂಟಲ್‌ ಕಂಟ್ರೋಲ್ಸ್‌’ ಸಿಸ್ಟಂನ್ನು ಆನ್‌ ಮಾಡಿ ಅದರಲ್ಲಿ ಮಕ್ಕಳ ವಯಸ್ಸಿಗಿಂತ ಮೀರಿದ ಯಾವುದೇ ಆ್ಯಪ್‌ ಅಥವಾ ಸೈಟ್‌ಗಳು ತೆರೆದುಕೊಳ್ಳದಂತೆ ಲಾಕ್‌ ಮಾಡಿಡಬೇಕು. ಇದಕ್ಕೆ ಇಎಸ್‌ಬಿ ರೇಟಿಂಗ್‌ ಎಂದು ಹೇಳಲಾಗುತ್ತದೆ.

-ಸಂತೋಷ್‌ ಬೊಳ್ಳೆಟ್ಟು

 

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.