ಮರಾಠಿ ಮಣ್ಣಿನಲ್ಲಿ ಉಪಾಧ್ಯರ ಕನ್ನಡ ಸೇವೆ ಮಾದರಿ
Team Udayavani, Feb 8, 2022, 11:19 AM IST
ಮುಂಬಯಿ: ಡಾ| ಜಿ. ಎನ್. ಉಪಾಧ್ಯ ಅವರು ಪತ್ರಕರ್ತರಾಗಿ, ವಿಮರ್ಶಕ ರಾಗಿ, ಚಿಂತಕರಾಗಿ, ಪ್ರಾಧ್ಯಾಪಕರಾಗಿ ಹೆಸರು ಮಾಡಿ ದ್ದಾರೆ. “ಕಾವೇರಿಯಿಂದ ಮಾ ಗೋದಾವರಿ ವರೆಮಿರ್ದ ನಾಡದಾ ಕನ್ನಡದೊಳ್’ ಎಂಬ ಕವಿ ರಾಜ ಮಾರ್ಗ ಕಾರನ ಉಕ್ತಿಯಂತೆ ನಾನು, ಡಾ| ಉಪಾಧ್ಯ ಅವರು ಮಹಾರಾಷ್ಟ್ರ ರಾಜ್ಯದಲ್ಲಿದ್ದೂ ಹೊರನಾಡ ಕನ್ನಡಿಗರಲ್ಲ. ಗಡಿನಾಡ ಗೆರೆ ಎಳೆ ಯುವ ಕಾರಣ, ರಾಜಕಾರಣವಶಾತ್ ನಾವು ಹೊರನಾಡ ಕನ್ನಡಿಗರು ಎಂದು ಕರೆಸಿಕೊಳ್ಳುತ್ತಿದ್ದೇವೆ. ಮರಾಠಿ ಮಣ್ಣಿನಲ್ಲಿ ಕಸ್ತೂರಿಯ ಸೌರಭ ನಾಲ್ಕು ದಿಕ್ಕುಗಳಿಗೂ ಪಸರಿಸುತ್ತದೆ. “ಕುರಿ ತೋದ ದೆಯುಂ ಕಾವ್ಯಪ್ರಯೋಗ ಮತಿಗಳ್’ ಎಂದು ಕವಿರಾಜಮಾರ್ಗಕಾರ ಕನ್ನಡಿಗರನ್ನು ಕೊಂಡಾಡಿದ್ದಾನೆ. ಉಪಾಧ್ಯ ಅವರು ಓದಿದವರು, ಇತರರನ್ನು ಓದಿಸಿ ದವರು. ಕಾವ್ಯ ಪ್ರಯೋಗ, ಸಾಹಿತ್ಯ ಪ್ರಯೋಗ, ವಿಮರ್ಶೆ, ಸಂಸ್ಕೃತಿಯ ಪ್ರಚಾರ ಮಾಡುತ್ತಾ ಬಂದಿರುವವರು. ಇದರ ಜತೆಗೆ ವಿದ್ಯಾರ್ಥಿ ಗಳಿಗೆ ಬೋಧನೆ ಮಾಡುವ ವಿಶೇಷ ಕಾರ್ಯ ಮಾಡುತ್ತಿದ್ದಾರೆ. ಅಧ್ಯಯನ, ಬೋಧನೆ, ಆಚಾರ ಹಾಗೂ ಅದರ ಪ್ರಚಾರ ಮಾಡುತ್ತಿರುವುದರಿಂದಲೇ ವಿದ್ಯಾರ್ಥಿ ವರ್ಗದ ವಿಶೇಷ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಜಸ್ಟೀಸ್ ಬಿ. ಎನ್. ಶ್ರೀಕೃಷ್ಣ ತಿಳಿಸಿದರು.
ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಕನ್ನಡ ಜನಶಕ್ತಿ ಕೇಂದ್ರ ಬೆಂಗಳೂರು, ನರಹಳ್ಳಿ ಪ್ರತಿಷ್ಠಾನ ಬೆಂಗಳೂರು ಮತ್ತು ಮೈಸೂರು ಅಸೋಸಿಯೇಶನ್ ಮುಂಬಯಿ ಇವರ ಆಶ್ರಯದಲ್ಲಿ ಫೆ. 6ರಂದು ಪೂರ್ವಾಹ್ನ ನಡೆದ 2021 ನೇ ಸಾಲಿನ ಡಾ| ನರಹಳ್ಳಿ ಪ್ರತಿಷ್ಠಾನ ಕೊಡಮಾಡುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಡಾ| ಜಿ. ಎನ್. ಉಪಾಧ್ಯ ಅವರು ಮಾಡುತ್ತಿರುವ ಕನ್ನಡದ ಸೇವೆ ಮಹತ್ತರವಾದುದು. ನಾಡು- ನುಡಿ ಯನ್ನು ಮರಾಠಿ ಮಣ್ಣಿನಲ್ಲಿ ಉಳಿಸಿ-ಬೆಳೆಸಲು ಕನ್ನಡ ವಿಭಾಗ ಮಾಡುತ್ತಿರುವ ಸೇವೆ ಶ್ಲಾಘನೀಯ ವಾಗಿದೆ ಎಂದು ತಿಳಿಸಿ ಡಾ| ಜಿ. ಎನ್. ಉಪಾಧ್ಯ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಕನ್ನಡ ವಿಭಾಗ ಮುಂಬಯಿ ವಿವಿ ಮುಖ್ಯಸ್ಥ, ಸಂಶೋಧಕ, ಸಾಹಿತಿ ಡಾ| ಜಿ. ಎನ್. ಉಪಾಧ್ಯ ಅವರಿಗೆ 2021ನೇ ಸಾಲಿನ ಪ್ರತಿಷ್ಠಿತ ನರಹಳ್ಳಿ ಪ್ರಶಸ್ತಿಯನ್ನು ಗಣ್ಯರ ಸಮ್ಮುಖ ದಲ್ಲಿ ಜಸ್ಟೀಸ್ ಬಿ. ಎನ್. ಶ್ರೀಕೃಷ್ಣ ಅವರು ಪ್ರದಾನ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕವಿ ಡಾ| ಎಚ್. ಎಸ್. ವೆಂಕಟೇಶಮೂರ್ತಿ ಮಾತನಾಡಿ, ಇಂದಿನ ಸಭೆ ಅನ್ಯೋನ್ಯ, ಪ್ರೀತಿಯ ಕೌಟುಂಬಿಕ ನೆಲೆಯಲ್ಲಿ ಆಗಿರುವುದು ಸಂತೋಷ ತಂದಿದೆ. ಎಂಟನೇ ವರ್ಷದ ನರಹಳ್ಳಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದಿರುವುದು ಪ್ರತಿಷ್ಠಾನಕ್ಕೆ ಎಂಟನೇ ಕೋಡು ಬಂದಿದೆ. ಇಂದಿನ ಕಾರ್ಯಕ್ರಮ ವಿಶಿಷ್ಟವಾದದ್ದು ಎಂದು ಡಾ| ಜಿ. ಎನ್. ಉಪಾಧ್ಯರನ್ನು ಅಭಿನಂದಿಸಿದರು.
ನರಹಳ್ಳಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ| ಆನಂದರಾಮ ಉಪಾಧ್ಯ ಸ್ವಾಗತಿಸಿ, ನರಹಳ್ಳಿ ಪ್ರಶಸ್ತಿ ಪುರಸ್ಕೃತ ಡಾ| ಜಿ. ಎನ್. ಉಪಾಧ್ಯ ಕುರಿತು ಅಭಿನಂದನ ನುಡಿಗಳನ್ನಾಡಿ, ನರಹಳ್ಳಿ ಪ್ರಶಸ್ತಿ ಈ ವರೆಗೆ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳಿಗೆ ಸಂದಿದೆ. ಈ ಬಾರಿ ಸಂಶೋಧನೆ, ವಿಮರ್ಶೆ, ಕರ್ನಾಟಕದ ಹೊರನಾಡಿನಲ್ಲಿ ಇದ್ದುಕೊಂಡು ಸಾಹಿತ್ಯ ಸೇವೆ, ಸಂಸ್ಕೃತಿಯ ಚಿಂತನೆ, ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವ ಡಾ| ಜಿ. ಎನ್. ಉಪಾಧ್ಯರಿಗೆ ನೀಡಿರುವುದರಿಂದ ಪ್ರಶಸ್ತಿಯ ಘನತೆ ಮತ್ತಷ್ಟು ಹೆಚ್ಚಿಸಿದೆ. ಡಾ| ಉಪಾಧ್ಯ ಅವರು ಸಂಶೋಧಕರಾಗಿ ಖ್ಯಾತಿ ಪಡೆದವರು. ಮಹಾರಾಷ್ಟ್ರದ ಸಾಂಸ್ಕೃತಿಕ ಅಧ್ಯಯನ ಮಾಡಿ ನಾಡಿನ ವಿದ್ವದ್ಜನರ ಗಮನಕ್ಕೆ ತಂದವರು. ಮಹಾರಾಷ್ಟ್ರದ ಪ್ರಾಚೀನ ಸಂಸ್ಕೃತಿ ಎಂದರೆ ಪ್ರಾಚೀನ ಕರ್ನಾಟಕದ ಇತಿಹಾಸವೇ ಆಗಿದೆ. ಕನ್ನಡ ಸಂಸ್ಕೃತಿ ಈ ಭಾಗದಲ್ಲಿ ಹಾಸುಹೊಕ್ಕಾಗಿದೆ ಎಂದು ತೋರಿಸಿಕೊಟ್ಟವರು ಉಪಾಧ್ಯ ಅವರು. ಸಂಶೋಧಕರಾಗಿ, ಸಂಸ್ಕೃತಿಯ ಚಿಂತಕರಾಗಿ, ಕನ್ನಡದ ಪರಿಚಾರಕರಾಗಿ, ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾಗಿ ವಿವಿಧ ನೆಲೆಗಳಲ್ಲಿ ಕನ್ನಡದ ಸೇವೆ ಮಾಡುತ್ತಿರುವ ಡಾ| ಉಪಾಧ್ಯ ಅವರದ್ದು ಮಾದರಿ ವ್ಯಕ್ತಿತ್ವ ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ಡಾ| ಉಪಾಧ್ಯ ಅವರ ಕುರಿತಾದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಮೈಸೂರು ಅಸೋಸಿಯೇಶನ್‌ನ ಟ್ರಸ್ಟಿ, ಸಂಘಟಕ ಮಂಜುನಾಥಯ್ಯ ಶುಭ ಹಾರೈಸಿದರು. ಕಾರ್ಯ ಕ್ರಮಕ್ಕೆ ಸಹಕರಿಸಿದ ಮೈಸೂರು ಅಸೋಸಿಯೇಶನ್ ಮುಂಬಯಿ, ಐಲೇಸಾದ ರೂವಾರಿಗಳಲ್ಲೊಬ್ಬರಾದ ರಂಗಕಲಾವಿದ ಸುರೇಂದ್ರ ಕುಮಾರ್ ಮಾರ್ನಾಡ್, ಲತೇಶ್ ಪೂಜಾರಿ ಅವರನ್ನು ಗೌರವಿಸಲಾಯಿತು.
ಮೈಸೂರು ಅಸೋಸಿಯೇಶನ್‌ನ ಟ್ರಸ್ಟಿ, ರಂಗಕರ್ಮಿ ಡಾ| ಮಂಜುನಾಥ್, ಸಂಘಟಕ ಮಂಜು ನಾಥಯ್ಯ, ಅಸೋಸಿಯೇಶನ್‌ನ ಕಾರ್ಯ ದರ್ಶಿ ಡಾ| ಗಣಪತಿ ಶಂಕರಲಿಂಗ ಉಪಸ್ಥಿತರಿದ್ದರು. ಐಲೇಸಾ ದಿ ವಾಯ್ಸ… ಆಫ್ ಓಶಿಯನ್ ಇವರು ತಾಂತ್ರಿಕವಾಗಿ ಸಹಕರಿಸಿದರು. ಸಂಘಟಕ, ಲೇಖಕ ಪೇತ್ರಿ ವಿಶ್ವನಾಥ್ ಶೆಟ್ಟಿ, ಚಿತ್ರಕಲಾವಿದ ಜಯ್ ಸಾಲ್ಯಾನ್, ಕಲಾ ಭಾಗÌತ್ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಝೂಮ್ ಮುಖಾಂತರ ನಡೆದ ಕಾರ್ಯಕ್ರಮದಲ್ಲಿ ಡಾ| ಬಾಲಸುಬ್ರಹ್ಮಣ್ಯ ನರಹಳ್ಳಿ, ರಜನಿ ನರಹಳ್ಳಿ, ಡಾ| ಲೀಲಾ, ಮಿತ್ರಾ ವೆಂಕಟ್ರಾಜ್, ಕವಿ ಶಾಂತಾರಾಮ ಶೆಟ್ಟಿ, ಸಂಘಟಕರಾದ ಅಬುಧಾಬಿ ಸರ್ವೋತ್ತಮ ಶೆಟ್ಟಿ, ರವಿ ಶೆಟ್ಟಿ ಕತಾರ್ ಸಹಿತ ವಿದ್ವಾಂಸರು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಇಂಪಿನ ಗುಂಪಿನ ಪ್ರೇಮಾ ಉಪಾಧ್ಯ ಅವರ ಶಿಷ್ಯೆ ಪ್ರೀತಿ ಎಸ್. ರೆಡ್ಡಿ ಅವರ ಸ್ವಾಗತಗೀತೆಯೊಂದಿಗೆ ಆರಂಭಿಸಲಾಯಿತು. ನಳಿನಾ ಪ್ರಸಾದ್ ಗುರುಗಳನ್ನು ಕುರಿತ ಸ್ವರಚಿತ ಕವನ ವಾಚನ ಮಾಡಿದರು.
ಮುಂಬಯಿ ವಿವಿ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ನಿರೂಪಿಸಿದರು. ಮೈಸೂರು ಅಸೋಸಿಯೇಶನ್ ಕಾರ್ಯದರ್ಶಿ ಡಾ| ಗಣಪತಿ ಶಂಕರಲಿಂಗ ವಂದಿಸಿದರು.
ಮುಂಬಯಿ ಕನ್ನಡಿಗರಿಗೆ ಸಂದ ಗೌರವ :
ಈ ಪ್ರಶಸ್ತಿ ಮುಂಬಯಿ ಕನ್ನಡಿಗರಿಗೆ ಸಂದ ಗೌರವ. ನಾನು ಮಲ್ಲಿಗೆ ಹಾರದಲ್ಲಿ ದಾರವಾಗಿ ಪೋಣಿಸುವ ಕೆಲಸ ಮಾತ್ರ ಮಾಡಿದ್ದೇನೆ. ನರಹಳ್ಳಿ ಪ್ರಶಸ್ತಿ ಇಂದು ಸೀಮೋಲ್ಲಂಘನ ಮಾಡಿದೆ. ರಾಷ್ಟ್ರ ಮಟ್ಟದಲ್ಲಿ ಕನ್ನಡವನ್ನು ಬೆಳೆಸುವುದರಲ್ಲಿ, ಬೆಳಗಿಸುವುದರಲ್ಲಿ ನಾವು ಸೋತಿದ್ದೇವೆ. ಕನ್ನಡಿಗರು ಕನ್ನಡಿಗರನ್ನು ಗುರುತಿಸುವುದರಲ್ಲಿ ಸೋತಿದ್ದಾರೆ. ಕನ್ನಡ ಸಾಹಿತಿಗಳಾದ ಹಾ. ಮಾ. ನಾಯಕ, ಶಿವರಾಮ ಕಾರಂತ, ಗಿರೀಶ್ ಕಾರ್ನಾಡ್, ಎಸ್. ಎಲ್. ಭೈರಪ್ಪ ಮೊದಲಾದ ಕನ್ನಡದ ದಿಗ್ಗಜ ಸಾಹಿತಿಗಳು ಮಾಡಿದ ಕನ್ನಡದ ಸೇವೆಯನ್ನು ಇಲ್ಲಿನ ಮರಾಠಿಗರು ಗುರುತಿಸಿ ಮಣೆ ಹಾಕಿರುವುದು ಕನ್ನಡಿಗರಿಗೆ ಹೆಮ್ಮೆ. ನಾವೆಲ್ಲ ರಾಷ್ಟ್ರ ಮಟ್ಟದಲ್ಲಿ ಕನ್ನಡದ ವಕ್ತಾರರಾಗಿ ಸಮರೋಪಾದಿಯಲ್ಲಿ ಕನ್ನಡದ ಕೆಲಸ ಮಾಡುವ ಅನಿವಾರ್ಯವಿದೆ. ಈ ಪ್ರಶಸ್ತಿಯನ್ನು ಸ್ವೀಕರಿಸಿರುವುದರಿಂದ ಜವಾಬ್ದಾರಿ ಹೆಚ್ಚಿದೆ. ನಿಮ್ಮೆಲ್ಲರ ಪ್ರೀತಿ, ಗೌರವಕ್ಕೆ ಆಭಾರಿಯಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿ, ಗೌರವ, ಪ್ರೋತ್ಸಾಹದಿಂದ ಕನ್ನಡದ ಕೆಲಸಗಳು ನಡೆಯುತ್ತಿವೆ.– ಡಾ| ಜಿ. ಎನ್. ಉಪಾಧ್ಯ ಪ್ರತಿಷ್ಠಿತ ನರಹಳ್ಳಿ ಪ್ರಶಸ್ತಿ ಪುರಸ್ಕೃತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.