![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Feb 9, 2022, 5:40 AM IST
ಹೊಸದಿಲ್ಲಿ: ಭಾರತೀಯ ಕಂಪ್ಯೂಟರ್ ತುರ್ತು ಸಂವೇದನಾ ತಂಡ (ಸಿಇಆರ್‌ಟಿ-ಇನ್) ಗೂಗಲ್ ಕ್ರೋಮ್ ಬಳಕೆದಾರರಿಗೆ ಎಚ್ಚರಿಕೆಯೊಂದನ್ನು ರವಾನಿಸಿದೆ.
ಜಗತ್ತಿನಲ್ಲಿ ಶೇ.63 ಮಂದಿ ಬಳಕೆದಾ ರರು ಕ್ರೋಮನ್ನೇ ಬಳಸುತ್ತಾರೆ. ಹೀಗಿರುವಾಗ ಹ್ಯಾಕರ್‌ಗಳು ಕ್ರೋಮ್‌ನಲ್ಲಿರುವ ಕೆಲವು ದೋಷ ಗಳನ್ನು ಬಳಸಿಕೊಂಡು ನಿರ್ದಿಷ್ಟ ತಾಣಗಳ ಮೇಲೆ ದಾಳಿ ಮಾಡುತ್ತಾರೆ. ಅಂತಹ ದೋಷಗಳು ಕ್ರೋಮ್‌ನಲ್ಲಿ ಪತ್ತೆಯಾಗಿವೆ ಎಂದು ಸಿಇಆರ್‌ಟಿ ತಿಳಿಸಿದೆ.
ಕ್ರೋಮ್‌ಗೆ ಜನಪ್ರಿಯತೆ ಇರುವುದರಿಂದ ಹ್ಯಾಕರ್‌ಗಳು ಕೋಟ್ಯಂತರ ಮಂದಿಯನ್ನು ತಲುಪಲು ಇದನ್ನೇ ಅವಕಾಶವನ್ನಾಗಿ ಬಳಸಿಕೊಳ್ಳುತ್ತಾರೆ ಎಂದು ಸ್ಟಾಟ್‌ಕೌಂಟರ್ ಎಂಬ ಸಂಸ್ಥೆ ತಿಳಿಸಿದೆ. ಕ್ರೋಮ್‌ನಲ್ಲಿ ಹಲವು ಸಮಸ್ಯೆಗಳು ಪತ್ತೆಯಾ ಗಿವೆ. ಇದನ್ನು ಬಳಸಿ ಕೊಂಡೇ ಹ್ಯಾಕರ್‌ಗಳು ಇನ್ನೊಂದು ಕೋಡನ್ನು ಸೃಷ್ಟಿಸಬಹುದು.
ಒಂದು ವೇಳೆ ಹ್ಯಾಕರ್‌ಗಳು ಈ ದೋಷಗಳನ್ನು ಬಳಸಲು ಯಶಸ್ವಿಯಾದರೆ ಎಡವಟ್ಟುಗಳು ಸಂಭವಿಸು ತ್ತವೆ. ಹಲವು ಕಾರಣಗಳಿಂದ ಗೂಗಲ್‌ನಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಈ ಬಗ್ಗೆ ಎಚ್ಚರವಹಿಸುವಂತೆ ತಜ್ಞರು ಸೂಚಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.