ನಗರ ನಕ್ಸಲರ ಮುಷ್ಟಿಯಲ್ಲಿ ಕಾಂಗ್ರೆಸ್-ಗೋವಾ ಮುಕ್ತಿಗೆ ನೆಹರು ಸೇನೆ ಕಳುಹಿಸಿರಲಿಲ್ಲ: ಮೋದಿ
ಕಾಂಗ್ರೆಸ್ ಇಲ್ಲದೇ ಇರುತ್ತಿದ್ದರೆ, ಪ್ರಜಾಪ್ರಭುತ್ವ ವಂಶ ಪಾರಂಪರ್ಯ ಆಡಳಿತದಿಂದ ಮುಕ್ತವಾಗುತ್ತಿತ್ತು
Team Udayavani, Feb 9, 2022, 9:53 AM IST
ನವದೆಹಲಿ: “ಕಾಂಗ್ರೆಸ್ ಇಲ್ಲದೇ ಇರುತ್ತಿದ್ದರೆ, ದೇಶದಲ್ಲಿ ತುರ್ತು ಪರಿಸ್ಥಿತಿ, ಜಾತಿ ರಾಜಕೀಯ, ಸಿಖ್ ಹತ್ಯಾಕಾಂಡ ನಡೆಯುತ್ತಲೇ ಇರುತ್ತಿರಲಿಲ್ಲ . ನಗರ ನಕ್ಸಲರು ಕಾಂಗ್ರೆಸ್ ಮೇಲೆ ನಿಯಂತ್ರಣ ಸಾಧಿಸಿದ್ದಾರೆ’ – ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಸೋಮವಾರ ಲೋಕ- ಸಭೆಯಲ್ಲಿ ಮಾತನಾಡಿದ್ದ ವೇಳೆ, ತುಕ್ಡೇ, ತುಕ್ಡೇ ಗ್ಯಾಂಗ್‌ನ ನಾಯಕನೇ ಕಾಂಗ್ರೆಸ್ ಎಂದು ಪ್ರಬಲವಾಗಿ ತರಾಟೆಗೆ ತೆಗೆದುಕೊಂಡಿದ್ದರು.
ಇದನ್ನೂ ಓದಿ:ಶಿವಮೊಗ್ಗ:ನಿನ್ನೆ ಕೇಸರಿ ಧ್ವಜ: ಇಂದು ತ್ರಿವರ್ಣ ಧ್ವಜ ಹಾರಿಸಿದ ಎನ್ ಎಸ್‍ಯುಐ
ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದ ಸಮರ್ಪಿಸುವ ಗೊತ್ತುವಳಿಗೆ ಉತ್ತರವಾಗಿ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ಮುಂದುವರಿಸಿದ್ದಾರೆ. ಸ್ವಾತಂತ್ರ್ಯ ಹೋರಾಟ ಮುಕ್ತಾಯವಾದ ಬಳಿಕ ಮಹಾತ್ಮಾ ಗಾಂಧಿಯವರು ಕಾಂಗ್ರೆಸ್ ಅನ್ನು ವಿಸರ್ಜಿಸಲು ಶಿಫಾರಸು ಮಾಡಿದ್ದರು.
ಏಕೆಂದರೆ ಅವರು ಮುಂದಿನ ವರ್ಷಗಳಲ್ಲಿ ಏನಾಗಲಿದೆ ಎಂದು ಊಹಿಸಿದ್ದರು. ಆದರೆ, ಅದರಂತೆ ನಡೆಯಲು ಬಿಡಲಿಲ್ಲ ಎಂದರು ನರೇಂದ್ರ ಮೋದಿ. ಒಟ್ಟು 90 ನಿಮಿಷಗಳ ಭಾಷಣದಲ್ಲಿ ಕಾಂಗ್ರೆಸ್ ಇಲ್ಲದೇ ಇರುತ್ತಿದ್ದರೆ, ಪ್ರಜಾಪ್ರಭುತ್ವ ವಂಶ ಪಾರಂಪರ್ಯ ಆಡಳಿತದಿಂದ ಮುಕ್ತವಾಗುತ್ತಿತ್ತು, ತುರ್ತುಪರಿಸ್ಥಿತಿ ಎಂಬ ಕರಾಳ ಛಾಯೆಗೆ ಒಳಗಾಗುತ್ತಿರಲಿಲ್ಲ, ಭ್ರಷ್ಟಾಚಾರ ಎನ್ನುವುದು ವ್ಯವಸ್ಥೆಯ ಭಾಗವೇ ಆಗುವುದು ತಪ್ಪುತ್ತಿತ್ತು, ಜಾತೀಯತೆ ಮತ್ತು ಪ್ರಾದೇಶಿಕತೆ ನಮ್ಮಲ್ಲಿ
ತುಂಬ ಆಳವಾಗಿ ಬೇರೂರಿ ಇರುತ್ತಿರಲಿಲ್ಲ’ ಎಂದರು ಪ್ರಧಾನಿ ನರೇಂದ್ರ ಮೋದಿ.
ಹರ್ಷೋದ್ಗಾರ-ಸಭಾತ್ಯಾಗ: ಪ್ರಧಾನಿ ಮೋದಿ ಯವರ ಭಾಷಣಕ್ಕೆ ಆಡಳಿತ ಪಕ್ಷದ ಸದಸ್ಯರು ಡೆಸ್ಕ್ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನು ಖಂಡಿಸಿ, ಕಾಂಗ್ರೆಸ್ ಸದಸ್ಯರು ಸದನ ದಿಂದ ಹೊರ ನಡೆದಿದ್ದಾರೆ. ಅದನ್ನು ಛೇಡಿಸಿದ ಪ್ರಧಾನಿ ನರೇಂದ್ರ ಮೋದಿ, ಪ್ರಜಾಪ್ರಭುತ್ವದಲ್ಲಿ ಅಭಿಪ್ರಾ ಯಗಳನ್ನು ಆಲಿಸಲೂ ಬೇಕಾಗುತ್ತದೆ. ಆದರೆ, ಅವರು ಮತ್ತೂಬ್ಬರಿಗೆ ಉಪದೇಶ ಮಾತ್ರ ನೀಡು ತ್ತಿದ್ದರು ಎಂದರು. ಕಾಂಗ್ರೆಸ್ ಇಲ್ಲದೇ ಇದ್ದರೆ ದೇಶದಲ್ಲಿ ಏನಾಗುತ್ತಿತ್ತು ಎಂಬ ಅಂಶವನ್ನು ಮತ್ತಷ್ಟು ವಿವರಿಸಿದ ಪ್ರಧಾನಿ, ಸಿಖ್ ಸಮು ದಾಯದ ಹತ್ಯಾಕಾಂಡ ನಡೆಯುತ್ತಿರ ಲಿಲ್ಲ, ಪಂಜಾಬ್ ಉಗ್ರ ವಾದದ ಕಿಚ್ಚಿನಲ್ಲಿ ಸಿಕ್ಕಿ ಹಾಕು ತ್ತಿರಲಿಲ್ಲ, ಕಾಶ್ಮೀರದಲ್ಲಿನ ಹಿಂದೂಗಳು ಅಲ್ಲಿಂದ ಓಡಿಹೋಗುತ್ತಿರಲಿಲ್ಲ ಎಂದು ಹೇಳಿದರು.
ಆರೋಪ ತಿರಸ್ಕಾರ: ದೇಶದ ಇತಿಹಾಸವನ್ನು ಪುನರ್ ರಚಿಸಲಾಗುತ್ತದೆ ಎಂಬ ಪ್ರತಿಪಕ್ಷಗಳ ಆರೋಪಗಳನ್ನು ಪ್ರಧಾನಿ ತಿರಸ್ಕರಿಸಿದರು. ಐವತ್ತು ವರ್ಷಗಳ ಹಿಂದೆ ಒಂದು ಕುಟುಂಬದ ಸುತ್ತ ಕೇಂದ್ರೀಕೃತವಾಗಿದ್ದ ಅಂಶಗಳನ್ನು ಪರಿಷ್ಕರಿಸಲಾಗುತ್ತಿದೆ. ಏಕೆಂದರೆ ದೇಶದ ಹುಟ್ಟು 1947ರಿಂದಲೇ ಶುರುವಾಗಿತ್ತು ಎಂದು ಕಾಂಗ್ರೆಸ್ ಭಾವಿಸುತ್ತಿದೆ ಎಂದು ಕಟುವಾಗಿ ಪ್ರಧಾನಿ ಟೀಕಿಸಿದ್ದಾರೆ.
ಗೋವಾವನ್ನು ಪೋರ್ಚುಗೀಸರ ಆಡಳಿತದಿಂದ ಮುಕ್ತಿಗೊಳಿಸಲು 15 ವರ್ಷಗಳ ಕಾಲ ಸೇನೆಯನ್ನೇ ಕಳುಹಿಸಿರಲಿಲ್ಲ. ಇಂಥ ಕ್ರಮ ಕೈಗೊಳ್ಳುವುದರಿಂದ ಜಗತ್ತಿನಲ್ಲಿ ತಾವೊಬ್ಬ ಶಾಂತಿಪ್ರಿಯ ಎಂದು ಹೊಂದಿದ್ದ ವರ್ಚಸ್ಸಿಗೆ ಧಕ್ಕೆ ಬರುತ್ತದೆ ಎಂಬ ಭಾವನೆಯನ್ನು ನೆಹರು ಹೊಂದಿದ್ದರು ಎಂದು ಪ್ರಸ್ತಾಪಿಸಿದರು ಪ್ರಧಾನಿ.
ನಗರ ನಕ್ಸಲರ ನಿಯಂತ್ರಣ: ಸದ್ಯ ಕಾಂಗ್ರೆಸ್ ನಗರ ನಕ್ಸಲರ ನಿಯಂತ್ರಣದಲ್ಲಿ ಇದೆ. ಹೀಗಾಗಿ, ಆ ಪಕ್ಷದ ಚಿಂತನೆಗಳೂ ಅವರಿಂದಲೇ ಪ್ರಭಾವಿತಗೊಂಡಿದೆ ಎಂದರು. ಇದೇ ವೇಳೆ ವೀರ ಸಾವರ್ಕರ್ ಪರವಾಗಿ ಪದ್ಯ ಬರೆದರು ಎಂಬ ಕಾರಣಕ್ಕೆ ದಿ.ಲತಾ ಮಂಗೇಷ್ಕರ್ ಸಹೋದರ ಹೃದಯನಾಥ್ ಮಂಗೇಷ್ಕರ್ ಅವರನ್ನು ಆಕಾಶವಾಣಿಯಿಂದ ವಜಾ ಮಾಡಲಾಯಿತು ಎಂದು ಪ್ರಧಾನಿ ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.