ಎಪಿಎಂಸಿ ಉಪ ಮಾರುಕಟ್ಟೆಗೆ ಭೂಮಿ ಪೂಜೆ
Team Udayavani, Feb 9, 2022, 12:22 PM IST
ಚಿಂಚೋಳಿ: ಸರ್ಕಾರದ ಯೋಜನೆಗಳು ಮತ್ತು ಸವಲತ್ತುಗಳು ಸಿಗುವುದು ದೊಡ್ಡ ಸಾಧನೆ ಆಗುತ್ತದೆ. ಸುಲೇಪೇಟ ಗ್ರಾಮದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪ-ಮಾರುಕಟ್ಟೆ ಮಂಜೂರಿ ಆಗಿರುವುದು ಐತಿಹಾಸಿಕ ಕೆಲಸವಾಗಿದ್ದು, ವರ್ತಕರಿಗೆ, ರೈತರಿಗೆ ಉಪಯೋಗವಾಗಲಿದೆ ಎಂದು ಶಾಸಕ ಡಾ| ಅವಿನಾಶ ಜಾಧವ ಹೇಳಿದರು.
ತಾಲೂಕಿನ ಸುಲೇಪೇಟ-ಯಾಕಾಪುರ ರಸ್ತೆ ಮಾರ್ಗದಲ್ಲಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಸುಲೇಪೇಟ ಕೃಷಿ ಉತ್ಪನ್ನ ಉಪ-ಮಾರುಕಟ್ಟೆ ಭೂಮಿ ಪೂಜೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುಳಿದ ಪ್ರದೇಶದ ರೈತರು ಬೆಳೆದ ಆಹಾರ ಧಾನ್ಯಗಳನ್ನು ಮಾರಾಟ ಮಾಡಿಕೊಳ್ಳಲು ಎಪಿಎಂಸಿಗೆ ಅನುಕೂಲವಾಗುತ್ತದೆ. ಸುಲೇಪೇಟ ಗ್ರಾಮದ 35ಹಳ್ಳಿಗಳ ರೈತರು ತಮ್ಮ ವ್ಯಾಪಾರ ವಹಿವಾಟಿಗೆ ಮತ್ತು ವರ್ತಕರಿಗೆ ಕೃಷಿಕರಿಗೆ ತುಂಬಾ ಅನುಕೂಲವಾಗಲಿದೆ. ಚಿಂಚೋಳಿ ಸಕ್ಕರೆ ಕಾರ್ಖಾನೆ ಸುಲೇಪೇಟ ಗ್ರಾಮಕ್ಕೆ ಕೇವಲ 12 ಕಿ.ಮೀ ಅಂತರದಲ್ಲಿ ಇರುವುದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಲ್ಲಿ ಸ್ನಾತಕೋತ್ತರ ಕೇಂದ್ರ ಪ್ರಾರಂಭವಾಗಲಿದೆ. ಕೆಲ ಅಧಿಕಾರಿಗಳ ತಪ್ಪು ಮಾಹಿತಿಗಳಿಂದಾಗಿ ಸ್ನಾತಕೋತ್ತರ ಪ್ರಾರಂಭವಾಗಲಿಲ್ಲ. ಫೆ12ರಂದು ಕಲಬುರಗಿ ನಗರಕ್ಕೆ ಉನ್ನತ ಶಿಕ್ಷಣ ಸಚಿವ ಸಿ.ಅಶ್ವಥನಾರಾಯಣ ಆಗಮಿಸುತ್ತಿರುವುದರಿಂದ ಅವರ ಗಮನಕ್ಕೆ ತರಲಾಗುವುದು. ಈ ಭಾಗದ ಬಡವರ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು.
ಚಂದಾಪುರ ಸರ್ಕಾರಿ ಬೀಜೋತ್ಪದನಾ ಕೇಂದ್ರದಲ್ಲಿ ರೈತರಿಗೋಸ್ಕರ ಕೃಷಿ ಸಂಸ್ಕರಣಾ ಶಿಕ್ಷಣಾ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ. ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಕುರಿತು ಮಾಹಿತಿ ನೀಡಲಾಗುವುದು. ತಾಲೂಕನ್ನು ಅಭಿವೃದ್ಧಿಪಡಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.
ಎಪಿಎಂಸಿ ನಿರ್ದೇಶಕ ರಮೇಶ ಯಾಕಾಪುರ ಮಾತನಾಡಿ, ಚಿಂಚೋಳಿ ತಾಲೂಕಿನಲ್ಲಿ ಎಪಿಎಂಸಿ ಇರಲಿಲ್ಲ. ಸೇಡಂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಪ್ರತ್ಯೇಕವಾಗಿ 1997ರಲ್ಲಿ ಎಪಿಎಂಸಿ ಮಾಜಿ ಸಚಿವ ದಿ| ವೈಜನಾಥ ಪಾಟೀಲರು ಮಂಜೂರಿಗೊಳಿಸಿ ಆಗಿನ ಸಚಿವ ಎಚ್.ನಾಗಪ್ಪ ಅವರಿಂದ ಉದ್ಘಾಟಿಸಿದ್ದರು. ಎಪಿಎಂಸಿ ಪ್ರಾರಂಭಿಸುವಲ್ಲಿ ಮಾಜಿ ಸಚಿವರ ಕೊಡುಗೆ ಅಪಾರವಾಗಿದೆ ಎಂದರು.
ಶ್ರೀ ಪಂಪಾಪತಿ ದೇವರು, ಎಪಿಎಂಸಿ ಅಧ್ಯಕ್ಷ ಅಶೋಕ ಪಡಶೆಟ್ಟಿ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ಪಾಟೀಲ, ಚಂದ್ರಶೇಖರ ಕಂಬದ, ರೇವಣಸಿದ್ಧಪ್ಪ ಪೂಜಾರಿ, ರಮೇಶ ಧುತ್ತರಗಿ, ಮಾತನಾಡಿದರು. ತಾಪಂ ಇಒ ಅನಿಲಕುಮಾರ ರಾಠೊಡ, ಆತೀಶ ಪವಾರ, ಸಂತೋಷ ಗಡಂತಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಜಗದೀಶಸಿಂಗ್ ಠಾಕೂರ, ನಾಗೇಂದ್ರ ಸರಡಗಿ, ಉಪಾಧ್ಯಕ್ಷ ಅಣ್ಣಾರಾವ್ ಪೆದ್ದಿ, ಕಿರಣರೆಡ್ಡಿ ಮಿರಿಯಾಣ, ದಿವಾಕರ ಜಹಾಗೀರದಾರ, ಗೌರಿಶಂಕರ ಉಪ್ಪಿನ, ರಮೇಶ ಪಡಶೆಟ್ಟಿ, ರಾಜು ಪವಾರ, ಪ್ರೇಮಸಿಂಗ್ ಜಾಧವ, ಶಾಂತುರೆಡ್ಡಿ ನರನಾಳ, ಶಿವಯೋಗಿ ರುಸ್ತಂಪುರ, ಭೀಮಶೆಟ್ಟಿ ಮುರುಡಾ, ಭೀಮಶೆಟ್ಟಿ ಮುಕ್ಕಾ ಇನ್ನಿತರರು ಇದ್ದರು. ರಮೇಶ ಪಡಶೆಟ್ಟಿ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bajpe: ಹೆಜ್ಜೇನು ಕಡಿತದಿಂದ ದಿನಪತ್ರಿಕೆ ವಿತರಕ ಸಾವು
BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು
Adani ವಿದ್ಯುತ್ ಖರೀದಿ ಅಕ್ರಮ: ಆರೋಪ ತಳ್ಳಿ ಹಾಕಿದ ಜಗನ್ ರೆಡ್ಡಿ
Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ
IFFI 2024; ಟಾಕ್ಸಿಕ್ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್ ಮಸ್ಸೆಗೆ ವಾರ್ಷಿಕ ಪುರಸ್ಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.