ನಾನು ಎಷ್ಟು ಬೇಕಾದರೂ ಕೇಸರಿ ಶಾಲು ಹಂಚ್ತೇನೆ: ಡಿಕೆಶಿಗೆ ಈಶ್ವರಪ್ಪ ತಿರುಗೇಟು
Team Udayavani, Feb 9, 2022, 6:23 PM IST
ಬೆಂಗಳೂರು : ನಾನು ಎಷ್ಟು ಬೇಕಾದರೂ ಕೇಸರಿ ಶಾಲು ಹಂಚ್ತೇನೆ, ನನ್ನ ಸ್ವಾತಂತ್ರ್ಯ ಕೇಳಲು ಡಿ.ಕೆ. ಶಿವಕುಮಾರ್ ಗೆ ಅಧಿಕಾರ ನೀಡಿದ್ದು ಯಾರು? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಬಂಡೆ ಲೂಟಿ ಮಾಡಿದ ವ್ಯಕ್ತಿ ಶಿವಕುಮಾರ್. ತಿಹಾರ್ ಜೈಲಿಗೆ ಹೋಗಿ ಬಂದವರು ಶಿವಕುಮಾರ್, ಇ ಡಿ ದಾಳಿ ಕೂಡ ಶಿವಕುಮಾರ್ ಮೇಲೆ ಆಗಿತ್ತು ಎಂದು ಆರೋಪಿಸಿದರು.
ಶಿವಕುಮಾರ್ ಗೆ ತಾಕತ್ತು, ಧಮ್ ಇದ್ರೆ ಮಸೀದಿಗೆ ಗುಲ್ಬಾರ್ಗಾ ಶಾಸಕಿಯನ್ನ ಕರ್ಕೊಂಡು ಹೋಗ್ಲಿ.ಶಾಲೆಗೆ ಸಮವಸ್ತ್ರ ಧರಿಸಿ ಹೋಗಬೇಕು.ಕೇಸರಿ ಧ್ವಜ ಪ್ರಪಂಚದ ಯಾವ ಮೂಲೆಯಲ್ಲಿ ಬೇಕಾದರೂ ಹಾರಿಸ್ತೇವೆ ಎಂದು ಸವಾಲು ಹಾಕಿದರು.
ಸಿದ್ಧರಾಮಯ್ಯನನ್ನು ಮೀರಿಸಿದ ಸುಳ್ಳುಗಾರ ಶಿವಕುಮಾರ್.ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾರಿಸಿಲ್ಲ. ಶಿವಕುಮಾರ್ ಗಿಂತ ಹೆಚ್ಚಿನ ದೇಶ ಭಕ್ತಿ ನನಗಿದೆ. ರಾಷ್ಟ್ರ ಧ್ವಜವನ್ನು ಹಾರಿಸಲು ನಿಯಮ ಇದೆ .ಕಾಂಗ್ರೆಸ್ ನವರು ಹಿಂದೂಸ್ಥಾನ- ಪಾಕಿಸ್ತಾನ ಮಾಡಿದರು ಎಂದು ಆರೋಪಿಸಿದರು.
ಹಿಜಾಬ್ ಹಿಂದೆ ಸಂಘ ಪರಿವಾರದ ನಾಯಕರು ಇದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕೆಂಡ ಕಾರಿದ ಈಶ್ವರಪ್ಪ, ಯಾವನೋ ಕುಡುಕ ಹೇಳ್ತಾನೆ… ರೀ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.