ಖಂಡಿತವಾಗಿಯೂ ಇದು ಯುದ್ಧದ ಸಮಯ ಅಲ್ಲವೇ ಅಲ್ಲ


Team Udayavani, Feb 10, 2022, 6:00 AM IST

ಖಂಡಿತವಾಗಿಯೂ ಇದು ಯುದ್ಧದ ಸಮಯ ಅಲ್ಲವೇ ಅಲ್ಲ

2020ರ ಆರಂಭದಿಂದಲೂ ಕೊರೊನಾದಂಥ ಮಹಾಮಾರಿ ವಿರುದ್ಧ ಇಡೀ ಜಗತ್ತು ಹೋರಾಟ ನಡೆಸುತ್ತಿರುವುದಷ್ಟೇ. ಯಾರ ಊಹೆಗೂ ನಿಲುಕದ ಈ ಕೊರೊನಾ ಮಹಾಮಾರಿ, ಲಕ್ಷಾಂತರ ಮಂದಿಯ ಸಾವಿಗೂ ಕಾರಣವಾಗಿದೆ. ಇದು ಒಂದು ರೀತಿಯಲ್ಲಿ ಮನುಕುಲದ ವಿರುದ್ಧ ಕೊರೊನಾ ವೈರಸ್‌ ಸಾರಿರುವ ಸಮರ. ಈ ಸಮರದ ವಿರುದ್ಧ ಇಡೀ ಜಗತ್ತು ಹೋರಾಟ ನಡೆಸುತ್ತಲೇ ಇದೆ. ಆದರೆ ಇಂದಿಗೂ ಈ ಯುದ್ಧದಲ್ಲಿ ನಾವು ಸಂಪೂರ್ಣವಾಗಿ ಸಫ‌ಲರಾಗಿಲ್ಲ ಎಂಬುದನ್ನು ಮನಗಾಣಬೇಕು.

ಇಂಥ ಹೊತ್ತಿನಲ್ಲೇ ರಷ್ಯಾ ಉಕ್ರೇನ್‌ ವಿರುದ್ಧ ಸಮರಕ್ಕೆ ಮುಂದಾಗಿದೆ. ಈಗಾಗಲೇ ಉಕ್ರೇನ್‌ ಗಡಿಯಲ್ಲಿ ಲಕ್ಷಾಂತರ ಸೈನಿಕರನ್ನು ರಷ್ಯಾ ನಿಯೋಜಿಸಿದೆ. ಅಷ್ಟೇ ಅಲ್ಲ, ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಇಲ್ಲಿಗೆ ಸಾಗಿಸಲಾಗಿದೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಯುದ್ಧವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಹಿಂದೊಮ್ಮೆ ಸೋವಿಯತ್‌ ಒಕ್ಕೂಟದ ಭಾಗವಾಗಿದ್ದ ಉಕ್ರೇನ್‌, ಇದರ ಪತನದ ಅನಂತರ ಬೇರೊಂದು ದೇಶವಾಗಿ ಉದಯಿಸಿರುವುದನ್ನು ಇತಿಹಾಸ ಹೇಳಿದೆ. ಆರಂಭದಲ್ಲಿ ರಷ್ಯಾ ಪರ ಸಹಾನುಭೂತಿ ಹೊಂದಿದವರೇ ಉಕ್ರೇನ್‌ ಗದ್ದುಗೆ ಹಿಡಿಯುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಟ್ರೆಂಡ್‌ ಬದಲಾಗಿದ್ದು, ರಷ್ಯಾ ವಿರುದ್ಧ ಮನೋಭಾವ ಹೊಂದಿರುವವರು ಅಧಿಕಾರ ಹಿಡಿದಿದ್ದಾರೆ.

ಇದರ ಜತೆಗೆ ಸೋವಿಯತ್‌ ಯೂನಿಯನ್‌ನಿಂದ ಸಿಡಿದುಹೋಗಿದ್ದ ಬಹುತೇಕ ದೇಶಗಳು ಐರೋಪ್ಯ ಒಕ್ಕೂಟಕ್ಕೆ ಸೇರ್ಪಡೆಯಾಗಿವೆ. ಅಲ್ಲದೆ ಐರೋಪ್ಯ ಒಕ್ಕೂಟಕ್ಕೆ ಸೇರಿರುವ ಕೆಲವು ದೇಶಗಳು ಅಮೆರಿಕ ನೇತೃತ್ವದ ನ್ಯಾಟೋ ಪಡೆಗೆ ಸದಸ್ಯರಾಗಿ ಸೇರ್ಪಡೆಯಾಗಿವೆ. ಉಕ್ರೇನ್‌ ಕೂಡ ನ್ಯಾಟೋದ ಭಾಗವಾಗಲು ಹೊರಟಿದ್ದೇ ಇಂದಿನ ಎಲ್ಲ ಪರಿಸ್ಥಿತಿಗಳಿಗೆ ಕಾರಣವಾಗಿದೆ.

ಒಂದು ವೇಳೆ ಉಕ್ರೇನ್‌ಗೆ ನ್ಯಾಟೋ ಬಂದಿಳಿದಿರೆ, ತಮಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಅವರ ಆತಂಕ. ಏಕೆಂದರೆ ನ್ಯಾಟೋದ ನೇತೃತ್ವ ವಹಿಸಿರುವುದು ಅಮೆರಿಕ ಮತ್ತು ಇಂಗ್ಲೆಂಡ್‌. ಈಗಾಗಲೇ ಪೋಲೆಂಡ್‌ ಸೇರಿದಂತೆ ಕೆಲವು ದೇಶಗಳಲ್ಲಿ ನ್ಯಾಟೋ ಬಂದಿದೆ. ಉಕ್ರೇನ್‌ಗೂ ಬಂದರೆ ಸರಿ ಇರದು ಎಂದು ರಷ್ಯಾ ಹೇಳುತ್ತಿದೆ.

ಅಂದರೆ ಸದ್ಯ ರಷ್ಯಾ ಬದಿಯಲ್ಲೇ ಬಂದು ಕುಳಿತುಕೊಳ್ಳಲು ಅಮೆರಿಕಕ್ಕೆ ಸಾಧ್ಯವಾಗುವುದಿಲ್ಲ. ಉಕ್ರೇನ್‌ ನ್ಯಾಟೋದ ಸದಸ್ಯ ರಾಷ್ಟ್ರವಾದರೆ ಗಡಿಯಲ್ಲೇ ಬಂದು ಕುಳಿತುಕೊಳ್ಳಬಹುದು ಇದರಿಂದ ರಷ್ಯಾದ ಭದ್ರತೆಗೆ ಧಕ್ಕೆ ಬರುತ್ತದೆ ಎಂಬ ಆಲೋಚನೆಯಲ್ಲೂ ರಷ್ಯಾವಿದೆ.

ಅತ್ತ ಅಮೆರಿಕ ಕೂಡ ತನ್ನ ಪಟ್ಟು ಸಡಿಲಿಸದೇ ಉಕ್ರೇನ್‌ ಪರವಾಗಿ ನಿಂತಿದೆ. ಒಂದು ವೇಳೆ ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಿದರೆ ತಾನು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ಎಂದೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಎಚ್ಚರಿಕೆ ನೀಡಿದ್ದಾರೆ. ಇದರ ಜತೆಯಲ್ಲೇ ರಷ್ಯಾಗೆ ಚೀನ ಬೆಂಬಲ ನೀಡಿದ್ದು, ಒಂದು ವೇಳೆ ಅಮೆರಿಕ ಯುದ್ಧಭೂಮಿಗೆ ಬಂದರೆ ರಷ್ಯಾ ಜತೆಗೆ ಚೀನವನ್ನು ಎದುರಿಸಬೇಕಾಗುತ್ತದೆ. ಆಗ ಜಗತ್ತಿನ ದೊಡ್ಡ ಶಕ್ತಿಗಳೆಲ್ಲ ಕೂಡಿ ಮತ್ತೂಂದು ಯುದ್ಧಕ್ಕೆ ಸಾಕ್ಷಿಯಾಗಬೇಕಾಗುತ್ತದೆ.

ಸದ್ಯ ಈಗ ಜಗತ್ತಿಗೆ ಯುದ್ಧ ಬೇಕಾಗಿಲ್ಲ. ಹಿಂದಿನ ಕಾಲದ ಹಾಗೆ ಶಸ್ತ್ರಾಸ್ತ್ರ ಹಿಡಿದು ಯುದ್ಧವನ್ನು ನಡೆಸಬೇಕಾಗಿಯೂ ಇಲ್ಲ. ಈಗಲೇ ಪರೋಕ್ಷ ಯುದ್ಧಗಳನ್ನು ನಾವು ಬೇರೆ ಬೇರೆ ರೀತಿಯಲ್ಲಿ ನೋಡುತ್ತಿದ್ದೇವೆ. ಹೀಗಾಗಿ ಅಮೆರಿಕ, ರಷ್ಯಾ, ಚೀನದಂಥ ದೇಶಗಳು ಯುದ್ಧದ ಬಗ್ಗೆ ಮಾತನಾಡದೆ ಮನುಕುಲದ ಏಳಿಗೆಯತ್ತ ಮಾತ್ರ ಗಮನಹರಿಸಬೇಕು.

ಟಾಪ್ ನ್ಯೂಸ್

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Flight

Hoax Call: ಹುಸಿ ಬಾಂಬ್‌ ಬೆದರಿಕೆ ಮರುಕಳಿಸದಿರಲಿ

kannadiga

Editorial: ಕನ್ನಡಿಗರ ನಿಂದನೆಗೆ ಕಠಿನ ಕ್ರಮ: ಸ್ತುತ್ಯರ್ಹ ನಿಲುವು

4-editorial

Editorial: ಸುವರ್ಣ ಕರ್ನಾಟಕ: ವಿಕಾಸಕ್ಕೆ ಕಾರ್ಯಸೂಚಿ ಅಗತ್ಯ

cyber crime

Cyber ​​crime ತಡೆ: ವಿವೇಚನೆಯೇ ಕೀಲಿಕೈ

ಹುಸಿ ಬೆದರಿಕೆ ಸಂದೇಶ ನಿರ್ದಾಕ್ಷಿಣ್ಯ ಕ್ರಮ ಅಗತ್ಯ

ಹುಸಿ ಬೆದರಿಕೆ ಸಂದೇಶ ನಿರ್ದಾಕ್ಷಿಣ್ಯ ಕ್ರಮ ಅಗತ್ಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

9

Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.