ಸಂಸತ್ತಲ್ಲೂ ಹಿಜಾಬ್ ಬಿಸಿ ; ವಿಪಕ್ಷಗಳ ಸಭಾತ್ಯಾಗ , ಸರಕಾರದ ಪ್ರತಿಕ್ರಿಯೆಗೆ ಸಂಸದರ ಪಟ್ಟು
Team Udayavani, Feb 10, 2022, 7:15 AM IST
ಹೊಸದಿಲ್ಲಿ: ಕರ್ನಾಟಕದಲ್ಲಿ ಭುಗಿಲೆದ್ದ ಹಿಜಾಬ್ ವಿವಾದ, ಬುಧವಾರದಂದು ಸಂಸತ್ತಿನ ಉಭಯ ಕಲಾಪಗಳಲ್ಲೂ ಪ್ರತಿಧ್ವನಿಸಿತು. ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವಿನ ಮಾತಿನ ಚಕಮಕಿಗೆ ಕಾರಣವಾ ಯಿತು. ಎರಡೂ ಸದನಗಳಲ್ಲಿ ಈ ಬಗ್ಗೆ ವಾದ- ವಿವಾದ, ಗದ್ದಲಗಳು ನಡೆದು, ವಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದ ಘಟನೆಗಳೂ ನಡೆದವು.
ಲೋಕಸಭೆಯ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಹಿಜಾಬ್ ಪ್ರಕರಣವನ್ನು ಪ್ರಸ್ತಾವಿಸಿದರು. ಭಾರತ ಒಂದು ಜಾತ್ಯತೀತ ರಾಷ್ಟ್ರವಾಗಿದ್ದು ಎಲ್ಲ ಧರ್ಮೀಯರು ತಮ್ಮ ಧರ್ಮವನ್ನು ಮುಕ್ತವಾಗಿ ಆಚರಿಸಲು ಅವಕಾಶವಿದೆ. ಅದಕ್ಕೆ ಯಾವುದೇ ನಿಷೇಧವಿಲ್ಲ. ಆದರೆ ಭಾರತದ ಕೆಲವು ಭಾಗಗಳಲ್ಲಿ ಮುಸ್ಲಿಂ ಅಕ್ಕ-ತಂಗಿಯರಿಗೆ ಹಿಜಾಬ್ ಧರಿಸುವುದಕ್ಕೆ ದಂಡ ವಿಧಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು. ಅಲ್ಲದೆ ಕರ್ನಾಟಕದ ಉಡುಪಿ ಕಾಲೇಜಿನಲ್ಲಿ ಹಿಜಾಬ್ ಕುರಿತಂತೆ ನಡೆದ ಘಟನೆಯ ಬಗ್ಗೆ ಕೇಂದ್ರ ಸರಕಾರ ಪ್ರತಿಕ್ರಿಯೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕದ ಬಿಜೆಪಿ ಸಂಸದ ಶಿವಕುಮಾರ್ ಉದಾಸಿ, ಇದು ರಾಜ್ಯ ಸರಕಾರ ನಿರ್ಧರಿಸಬೇಕಾದ ವಿಚಾರ. ಅಲ್ಲದೆ ಈ ವಿಚಾರ ಈಗ ನ್ಯಾಯಾಲಯದ ವಿಚಾರಣೆಯಲ್ಲಿದೆ. ಹಾಗಾಗಿ ಕೇಂದ್ರ ಸರಕಾರ ಏನೂ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದರು. ಆದರೆ ಇದನ್ನು ವಿಪಕ್ಷಗಳ ಸದಸ್ಯರು ಒಪ್ಪಲಿಲ್ಲ. ಇದರಿಂದಾಗಿ, ಸದನದಲ್ಲಿ ಗದ್ದಲ ಏರ್ಪಟ್ಟಿತು. ಕಾಂಗ್ರೆಸ್, ಡಿಎಂಕೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಸಿಪಿಎಂ, ಸಿಪಿಐ, ವಿದುತಲೈ ಚಿರುತೈಗಲ್ ಕಚ್ಚಿ, ಝಾರ್ಖಂಡ್ ಮುಕ್ತಿ ಮೋರ್ಚಾ ಸದಸ್ಯರು ಸಭಾತ್ಯಾಗ ಮಾಡಿದರು.
ಹನುಮಂತಯ್ಯ ಭಾಷಣ: ರಾಜ್ಯಸಭೆಯಲ್ಲೂ ಹಿಜಾಬ್ ಪ್ರಕರಣ ಸದ್ದು ಮಾಡಿತು. ಶೂನ್ಯವೇಳೆಯಲ್ಲಿ ಈ ವಿಚಾರವನ್ನು ಕರ್ನಾಟದ ಕಾಂಗ್ರೆಸ್ ಸಂಸದ ಎಲ್. ಹನುಮಂತಯ್ಯ ಪ್ರಸ್ತಾವಿಸಿ ಕರ್ನಾಟಕದ ಕೆಲವು ಭಾಗಗಳಲ್ಲಿ ಹಿಜಾಬ್ ಧರಿಸಿದ ಕಾರಣಕ್ಕಾಗಿಯೇ ಮುಸ್ಲಿಂ ಬಾಲಕಿಯರನ್ನು ಶಾಲೆಗಳ ಒಳಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ ಎಂದರು. ಆದರೆ ಆಡಳಿತ ಪಕ್ಷದ ಸದಸ್ಯರು ಭಾಷಣದ ಮಧ್ಯೆ ವಾದ ಮಾಡಲು ನಿಂತಿದ್ದರಿಂದ ಹನುಮಂತಯ್ಯ ಅವರಿಗೆ ಭಾಷಣ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ಹಾಗಾಗಿ ಹನುಮಂತಯ್ಯ ಅವರು, ಸಭಾಪತಿಗಳಿಗೆ ಭಾಷಣಕ್ಕೆ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಕೋರಿದರು. ಆದರೆ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, “ನಿಮ್ಮ ಭಾಷಣದ ಅವಧಿ ಮುಕ್ತಾಯವಾಗಿದೆ’ ಎಂದರು.
ಪ್ರಿಯಾಂಕಾ ಹೇಳಿಕೆ: “ಹೆಣ್ಣುಮಕ್ಕಳು ಬಿಕಿನಿಯಾದರೂ ತೊಡಲಿ, ಸೀರೆಯುಟ್ಟು ಮುಸುಕನ್ನಾ ದರೂ ಹಾಕಿಕೊಳ್ಳಲಿ. ಅದು ಆಕೆಯ ಸಾಂವಿಧಾನಿಕ ಹಕ್ಕು. ಹಾಗಾಗಿ, ಉಡುಗೆ – ತೊಡುಗೆಗಳ ವಿಚಾರ ದಲ್ಲಿ ಮಹಿಳೆ ಯರಿಗೆ ಕಿರುಕುಳ ಕೊಡುವುದನ್ನು ಬಿಡಿ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಕಮಲ್ ಟ್ವೀಟ್
ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ಗಲಾಟೆಯ ಬಗ್ಗೆ ಟ್ವೀಟ್ ಮಾಡಿರುವ ತಮಿಳು ನಟ, ರಾಜಕಾರಣಿ ಕಮಲ್ ಹಾಸನ್, “ಕರ್ನಾ ಟಕದಲ್ಲಿ ಹಿಜಾಬ್ ಹೆಸರಿನಲ್ಲಿ ಸಮಾಜವನ್ನು ಇಬ್ಭಾಗವಾಗಿ ಸುವಂಥ ಘಟನೆಗಳು ನಡೆ ಯು ತ್ತಿವೆ. ವಿದ್ಯಾರ್ಥಿ ಗಳನ್ನು ಸಮುದಾಯದ ಹೆಸರಿ ನಲ್ಲಿ ಒಡೆಯಲಾಗು ತ್ತಿದೆ. ಇಂಥ ಘಟನೆಗಳು ತಮಿಳುನಾಡಿಗೆ ಬರು ವುದು ಬೇಡ. ತಮಿಳುನಾಡಿನ ಪ್ರಗತಿಪರರು ಈ ಕುರಿತಂತೆ ಎಚ್ಚರಿಕೆಯಿಂದ ಇರಬೇಕು’ ಎಂದಿದ್ದಾರೆ.
ಮಲಾಲಾಳಿಗೆ ಕಪಿಲ್ ಮಿಶ್ರಾ ತಿರುಗೇಟು
ಮಲಾಲಾಳಿಗೆ ಟ್ವಿಟರ್‌ನಲ್ಲಿ ತಿರುಗೇಟು ನೀಡಿರುವ ಬಿಜೆಪಿಯ ಕಪಿಲ್ ಮಿಶ್ರಾ, “ಅಫ್ಘಾನಿಸ್ಥಾನ, ಪಾಕಿಸ್ಥಾನ, ಇರಾನ್‌ನಲ್ಲಿ ಹಿಜಾಬ್ ಧರಿಸದೆ ಇದ್ದಿದ್ದಕ್ಕೆ ಅನೇಕ ಮುಸ್ಲಿಂ ಬಾಲಕಿಯರನ್ನು ಹತ್ಯೆಗೈಯ್ಯಲಾಗಿದೆ. ಪಾಕಿಸ್ಥಾನದಲ್ಲೆ ಹಿಂದೂ, ಸಿಕ್ಖ್ ಬಾಲಕಿಯರನ್ನು ಅವರ ಧರ್ಮದ ಆಧಾರದಲ್ಲಿ ಕೊಲ್ಲಲಾಗಿದೆ. ಆಗೆಲ್ಲ ಮಲಾಲಾ ಅವರ ಮಾನವೀಯ ಪ್ರಜ್ಞೆ ಎಲ್ಲಿ ಹೋಗಿತ್ತು?” ಎಂದು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.