ಶಿಕ್ಷಕರಲ್ಲೇ ಅಶಿಸ್ತು ಇರುವಾಗ ಮಕ್ಕಳಿಗೆ ಏನು ಕಲಿಸುವರು?


Team Udayavani, Feb 10, 2022, 1:25 PM IST

ಶಿಕ್ಷಕರಲ್ಲೇ ಅಶಿಸ್ತು ಇರುವಾಗ ಮಕ್ಕಳಿಗೆ ಏನು ಕಲಿಸುವರು?

ಎಚ್‌.ಡಿ.ಕೋಟೆ: ವಿದ್ಯಾರ್ಥಿಗಳ ಶೈಕ್ಷಣಿಕ ಜವಾಬ್ದಾರಿ ಹೊತ್ತಿರುವ ಶಿಕ್ಷಕರೇ ಸರಿಯಾಗಿ ಶಾಲೆಗೆ ಬರುತ್ತಿಲ್ಲ. ವಸತಿ ಶಾಲೆ ಎಂದರೆ ಶಿಕ್ಷಕರಿಗೆ ತುಸು ಹೆಚ್ಚು ಹೊಣೆ ಇರುತ್ತದೆ. ಆದರೆ, ಇವರಿಗೆ ಸಮ ಯದ ಪರಿವೇ ಇರುವುದಿಲ್ಲ. ಇಷ್ಟಬಂದಾಗಶಾಲೆ ಬರುತ್ತಾರೆ. ಇನ್ನು ರಾತ್ರಿ ವೇಳೆ ಮಕ್ಕಳನ್ನುನೋಡಿ ಕೊಳ್ಳಲು ಯಾರೊಬ್ಬರೂ ಇರುವುದಿಲ್ಲ.ಇದರ ಜೊತೆಗೆ ಬಾಲಕಿಯರು ಹಾಗೂ ಬಾಲಕರುರಾತ್ರಿ ವೇಳೆ ಒಂದೇ ಕೊಠಡಿಯಲ್ಲಿ ಮಲಗುವಂತಹ ಪರಿಸ್ಥಿತಿ ಇದೆ.

ಈ ದೃಶ್ಯಗಳು ಸರಗೂರು ತಾಲೂಕಿನಗಡಿಭಾಗದ ಬಿ.ಮಟಕೆರೆ ಗ್ರಾಮದ ಆದಿವಾಸಿಆಶ್ರಯ ಶಾಲೆಯಲ್ಲಿ ಕಂಡು ಬರುತ್ತಿದ್ದು, ಒಟ್ಟಾರೆಈ ಶಾಲೆ ಅವ್ಯವಸ್ಥೆಗಳ ಆಗರವಾಗಿದೆ.ಬಿ.ಮಟಕೆರೆ ತಾಲೂಕಿನ ಗಡಿಭಾಗದ ಗ್ರಾಮ.ಇಲ್ಲಿ ಬಹುಸಂಖ್ಯೆಯಲ್ಲಿ ಆದಿವಾಸಿಗರು ವಾಸವಾಗಿರುವುದರಿಂದ ಅವರ ಮಕ್ಕಳ ಶೈಕ್ಷಣಿಕ ಪ್ರಗತಿಯಉದ್ದೇಶದಿಂದ ಸರ್ಕಾರ ಬಿ.ಮಟಕೆರೆಯಲ್ಲಿ1ರಿಂದ 7ನೇ ತರಗತಿ ತನಕ ಆದಿವಾಸಿಗರಿಗಾಗಿ ಆಶ್ರಮ ಶಾಲೆ ಆರಂಭಿಸಿದೆ. ಶಾಲೆಯಲ್ಲಿ ಇಬ್ಬರು ನಿಯೋಜಿತ ಶಿಕ್ಷಕರು ಹಾಗೂ 3 ಹೊರಗುತ್ತಿಗೆಶಿಕ್ಷಕರು ಸೇರಿದಂತೆ ಒಟ್ಟು ಐವರು ಶಿಕ್ಷಕರುಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಶಿಕ್ಷಕರಿಗೆ ಸಮಯದ ಪರಿಜ್ಞಾನವಿಲ್ಲ. ತಾಲೂಕಿನ ಗಡಿಭಾಗವಾದ್ದರಿಂದ ಈ ಕುಗ್ರಾಮಕ್ಕೆ ಅಧಿಕಾರಿಗಳಭೇಟಿ ವಿರಳ ಎಂಬುದನ್ನು ಮನಗಂಡ ಶಿಕ್ಷಕರುಶಾಲೆಗೆ ರಜೆಯನ್ನೂ ಹಾಕುವುದಿಕಲ್ಲ. ಶಾಲೆಗೂ ಹಾಜರಾಗುವುದಿಲ್ಲ.

ಬುಧವಾರ ಬೆಳಗ್ಗೆ 10.30ಗಂಟೆಯಾದರೂ ಒಬ್ಬರು ಶಿಕ್ಷಕರು ಮಾತ್ರ ಇದ್ದರು. ಇಡೀ ಶಾಲೆಯಲ್ಲಿ ದಾಖಲಾತಿಯ ಅರ್ಧದಷ್ಟು ಮಕ್ಕಳು ಗೈರಾಗಿದ್ದರು. ಇನ್ನುಳಿದ ಶಿಕ್ಷಕರು 11.30 ಗಂಟೆ ಕಳೆದರೂ ಶಾಲೆಗೆ ಆಗಮಿಸಲೂ ಇಲ್ಲ, ಶಾಲೆಗೆಗೈರಾಗುವ ಅಥವಾ ತಡವಾಗಿಆಗಮಿಸುವ ವಿಚಾರವಾಗಿ ಶಾಲಾ ಮುಖ್ಯಶಿಕ್ಷಕರಿಗೂ ಮಾಹಿತಿ ನೀಡಿಲ್ಲ ಎಂಬುದು ಮುಖ್ಯಶಿಕ್ಷಕರಿಂದಲೇ ತಿಳಿದು ಬಂತು.

ಶಿಕ್ಷಕರಿಗೆ ಸಮಯದ ಪರಿವೇ ಇರುವುದಿಲ್ಲ. ಶೈಕ್ಷಣಿಕ ಪ್ರಗತಿಯ ಹೊಣೆಹೊತ್ತಿರುವ ಶಿಕ್ಷಕರೇ ಈ ರೀತಿ ಅಶಿಸ್ತು ತೋರಿದರೆ ಇನ್ನು ಮಕ್ಕಳಿಗೆ ಯಾವ ರೀತಿ ಬೋಧನೆ ಮಾಡುತ್ತಾರೆ. ಗ್ರಾಮೀಣ ಪ್ರದೇಶ ಅದರಲ್ಲೂ ಅದಿವಾಸಿ ಮಕ್ಕಳು ಓದಿನಲ್ಲಿ ಹಿಂದುಳಿದಿರುತ್ತಾರೆ.ಇವರ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಮಕ್ಕಳನ್ನು ಸರಿದಾರಿಗೆ ತರಬೇಕಾದರೇ ಹೀಗೆ ಅಶಿಸ್ತು ತೋರುವುದು ಸರಿಯಲ್ಲ. ಹೀಗಾಗಿ ಸಂಬಂಧಪಟ್ಟ ಇಲಾಖೆಗಳ ಮೇಲಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ಕೈಗೊಂಡು ಈಆಶ್ರಮ ಶಾಲೆಯ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಸಾರ್ವಜನಿಕರು ಹಾಗೂ ಪೋಷಕರು ಆಗ್ರಹಿಸಿದ್ದಾರೆ.

ಬಿ.ಮಟಕೆರೆ ಈ ಆಶ್ರಮ ಶಾಲೆಯಲ್ಲಿ 62 ವಿದ್ಯಾರ್ಥಿಗಳ ದಾಖಲಾತಿ ಇದೆ. ಆದರೆ, ಶಾಲೆಗೆ ಆಗಮಿಸುವುದು 35ರಿಂದ 40 ಮಕ್ಕಳು ಮಾತ್ರ. ಈ ವಸತಿ ಶಾಲೆಯಲ್ಲಿ ರಾತ್ರಿ ವೇಳೆ ವಿದ್ಯಾರ್ಥಿಗಳನ್ನು ನೋಡಿಕೊಳ್ಳಲು ಯಾವೊಬ್ಬ ಶಿಕ್ಷಕರೂ ಇರುವುದಿಲ್ಲ. ಬದಲಾಗಿ ಅಡುಗೆ ಸಿಬ್ಬಂದಿಗೆ ಈ ಹೊಣೆ ಹೊರಿಸಿದ್ದಾರೆ. ಜೊತೆಗೆ ರಾತ್ರಿ ವೇಳೆ ಒಂದೇ ಕೊಠಡಿಯಲ್ಲಿ ಬಾಲಕರು ಹಾಗೂ ಬಾಲಕಿಯರು ಮಲಗಬೇಕಾದ ಪರಿಸ್ಥಿತಿ ಇದೆ. ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಲ್ಲ. ಪೋಷಕರಾದ ಆದಿವಾಸಿಗಳಲ್ಲಿ ಬಹುತೇಕ ಮಂದಿ ದುಷcಟಗಳಿಗೆ ಬಲಿಯಾಗಿರುತ್ತಾರೆ. ಪೋಷಕರ ಚಾಳಿ ಕೆಲ ಮಕ್ಕಳಿಗೆ ಬಂದಿರುತ್ತದೆ. ಹೀಗಾಗಿ ಯಾವುದೇ ರೀತಿ ಅವಘಡ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ.

ಬಾಲಕ, ಬಾಲಕಿಯರು ಮಲಗಲು ಒಂದೇ ಕೊಠಡಿ :

ಬಿ.ಮಟಕೆರೆ ಈ ಆಶ್ರಮ ಶಾಲೆಯಲ್ಲಿ 62 ವಿದ್ಯಾರ್ಥಿಗಳ ದಾಖಲಾತಿ ಇದೆ. ಆದರೆ, ಶಾಲೆಗೆ ಆಗಮಿಸುವುದು 35ರಿಂದ 40 ಮಕ್ಕಳು ಮಾತ್ರ. ಈ ವಸತಿ ಶಾಲೆಯಲ್ಲಿ ರಾತ್ರಿ ವೇಳೆ ವಿದ್ಯಾರ್ಥಿಗಳನ್ನು ನೋಡಿಕೊಳ್ಳಲು ಯಾವೊಬ್ಬ ಶಿಕ್ಷಕರೂ ಇರುವುದಿಲ್ಲ. ಬದಲಾಗಿ ಅಡುಗೆ ಸಿಬ್ಬಂದಿಗೆ ಈ ಹೊಣೆ ಹೊರಿಸಿದ್ದಾರೆ. ಜೊತೆಗೆ ರಾತ್ರಿ ವೇಳೆ ಒಂದೇ ಕೊಠಡಿಯಲ್ಲಿ ಬಾಲಕರು ಹಾಗೂ ಬಾಲಕಿಯರು ಮಲಗಬೇಕಾದ ಪರಿಸ್ಥಿತಿ ಇದೆ. ಪ್ರತ್ಯೇಕಕೊಠಡಿ ವ್ಯವಸ್ಥೆ ಮಾಡಿಲ್ಲ. ಪೋಷಕರಾದ ಆದಿವಾಸಿಗಳಲ್ಲಿ ಬಹುತೇಕ ಮಂದಿ ದುಷcಟಗಳಿಗೆ ಬಲಿಯಾಗಿರುತ್ತಾರೆ. ಪೋಷಕರ ಚಾಳಿ ಕೆಲ ಮಕ್ಕಳಿಗೆ ಬಂದಿರುತ್ತದೆ. ಹೀಗಾಗಿ ಯಾವುದೇ ರೀತಿ ಅವಘಡಆಗದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ.

ಆಶ್ರಮ ಶಾಲೆಗಳ ಅವ್ಯವಸ್ಥೆ ಕುರಿತು ಆಗಾಗ ಸಭೆ ನಡೆಸುತ್ತಿರುತ್ತೇವೆ. ಕಳೆದ 3 ದಿನಗಳ ಹಿಂದಷ್ಟೇ ಸಭೆಯಲ್ಲಿ ಆಶ್ರಯಶಾಲೆಯಲ್ಲಿ ಉಳಿದುಕೊಂಡು ಕರ್ತವ್ಯ ನಿರ್ವಹಿಸ ಬೇಕು ಎಂದು ಸೂಚನೆ ನೀಡಿದ್ದೇವೆ. ಆದರೂ ಶಿಕ್ಷಕರು ಸರಿ ಪಡಿಸಿ ಕೊಳ್ಳುತ್ತಿಲ್ಲ, ಇನ್ನು ಬಿ.ಮಟಕೆರೆ ಆಶ್ರಯ ಶಾಲೆಯಲ್ಲಿ ಇಂದಿನಿಂದಲೇ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳನ್ನು ಪ್ರತೇಕವಾಗಿ ರಾತ್ರಿ ವೇಳೆ ಮಲಗಿಸಲು ಕ್ರಮವಹಿಸುತ್ತೇವೆ. – ನಾರಾಯಣ, 2 ಸ್ವಾಮಿ ತಾಲೂಕು ಗಿರಿಜನ ಅಭಿವೃದ್ಧಿ ಅಧಿಕಾರಿ

 

-ಎಚ್‌.ಬಿ.ಬಸವರಾಜು

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysore Dasara: ಮರದ ಅಂಬಾರಿ ಹೊತ್ತು ಅಭಿಮನ್ಯು ತಾಲೀಮು

Mysore Dasara: ಮರದ ಅಂಬಾರಿ ಹೊತ್ತು ಅಭಿಮನ್ಯು ತಾಲೀಮು

Hunasur: ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

Hunasur: ಸಾವಿನಲ್ಲೂ ಒಂದಾದ ಅಕ್ಕ- ತಮ್ಮ

Mysuru; ಟಿಕೆಟ್‌ ಆಕಾಂಕ್ಷಿಗಳು ಸಕ್ರಿಯವಾಗಿರಬೇಕು: ಸಾ.ರಾ

Mysuru; ಟಿಕೆಟ್‌ ಆಕಾಂಕ್ಷಿಗಳು ಸಕ್ರಿಯವಾಗಿರಬೇಕು: ಸಾ.ರಾ ಮಹೇಶ್‌

Mysuru: ಮುನಿರತ್ನ ಪರ ಬಿಜೆಪಿ ಬ್ಯಾಟಿಂಗ್‌ ಸಲ್ಲದು: ಎಂಎಲ್‌ಸಿ ವಿಶ್ವನಾಥ್‌

Mysuru: ಮುನಿರತ್ನ ಪರ ಬಿಜೆಪಿ ಬ್ಯಾಟಿಂಗ್‌ ಸಲ್ಲದು: ಎಂಎಲ್‌ಸಿ ವಿಶ್ವನಾಥ್‌

22-hunsur-1

Hunsur: ಕಾರು ಪಲ್ಟಿಯಾಗಿ ಎಳನೀರು ವ್ಯಾಪಾರಿ ಸಾವು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.