ಕಾಂಕ್ರೀಟ್ ರಸ್ತೆ ಇದ್ದರೂ ಸಿಗದ ಬಸ್ ಭಾಗ್ಯ!
ಕಂದಾವರ-ಕೊಳಂಬೆ- ಅದ್ಯಪಾಡಿ-ಕೆಂಜಾರು
Team Udayavani, Feb 10, 2022, 7:36 PM IST
ಬಜಪೆ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ತಟದಲ್ಲಿರುವ ಗ್ರಾಮೀಣ ಪ್ರದೇಶಗಳಾದ ಅದ್ಯಪಾಡಿ, ಕೊಳಂಬೆ ಗ್ರಾಮದ ನಿವಾಸಿಗಳಿಗೆ ಸಂಪರ್ಕಕ್ಕೆ ಸುವ್ಯವಸ್ಥಿತ ರಸ್ತೆ ಇದ್ದರೂ ಸಂಚಾರಕ್ಕೆ ಬಸ್ ಸಂಪರ್ಕ ವ್ಯವಸ್ಥೆ ಇಲ್ಲವಾಗಿದೆ. ಹೀಗಾಗಿ ಗ್ರಾಮಗಳ ಅಭಿವೃದ್ಧಿಗೆ ಹಿನ್ನಡೆಯಾಗಿದೆ.
ಗುರುಪುರ ಕೈಕಂಬ ರಾಜ್ಯ ಹೆದ್ದಾರಿಯಿಂದ ಕಂದಾವರ -ಧೂಮಾವತಿ ದ್ವಾರ- ಮೂಡುಕರೆ-ಕೊಳಂಬೆ ಬೈಲ ಬೀಡು-ಅದ್ಯಪಾಡಿ-ಕೆಂಜಾರು ವರೆಗೆ ಲೋಕೋ ಪಯೋಗಿ ಇಲಾಖೆಯೂ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಕಾಂಕ್ರಿಟ್‌ವ ಕಾಮಗಾರಿ ಕೈಗೊಳ್ಳಲಾಗಿದೆ. ಹೀಗಾಗಿ ಉತ್ತಮ ರಸ್ತೆಯಿದ್ದರೂ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸದೇ ಇರುವುದು ಗ್ರಾಮಸ್ಥರಿಗೆ ಕೊರತೆ ಎದುರಾಗಿದೆ.
ಕೈಕಂಬದಿಂದ ಕೊಳಂಬೆ-ಅದ್ಯಪಾಡಿಗೆ ಯಾವುದೇ ಬಸ್ ಸಂಚಾರ ವ್ಯವಸ್ಥೆ ಇಲ್ಲದೇ ರಿಕ್ಷಾಕ್ಕೆ 180 ರೂ. ಬಾಡಿಗೆ ನೀಡಿ ಸಂಚಾರಿಸಬೇಕಾದ ಅನಿವಾರ್ಯವಿದೆ. ಶಾಲೆ ಮಕ್ಕಳು ಹಾಗೂ ಕಾರ್ಮಿಕರಿಗೆ ತೊಂದರೆಯಾಗಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರದ ಸಂಪರ್ಕ ರಸ್ತೆಯಾಗಿ ಕಂದಾವರ –
ಧೂಮಾವತಿ ದ್ವಾರ-ಮೂಡುಕರೆ-ಕೊಳಂಬೆ ಬೈಲಬೀಡು-ಅದ್ಯಪಾಡಿ-ಕೆಂಜಾರು ರಸ್ತೆ ಈಗ ಭಾರಿ ಪ್ರಮುಖ ರಸ್ತೆಗಳಲ್ಲಿ ಒಂದು. ಕೈಕಂಬ ಧೂಮಾವತಿ ದ್ವಾರ ರಾಜ್ಯ ಹೆದ್ದಾರಿ 101ರಿಂದ ಕೆಂಜಾರು ವಿಮಾನ ನಿಲ್ದಾಣದ ನಿರ್ಗಮನ ದ್ವಾರದವರೆಗೆ ಸುಮಾರು 9 ಕಿ.ಮೀ. ದೂರವಿದೆ.
ಈ ರಸ್ತೆಯನ್ನು ಹೆಚ್ಚಾಗಿ ಬಂಟ್ವಾಳ, ಬಿಸಿ ರೋಡ್, ಕುಪ್ಪೆಪದವು ಕಡೆಗಳಿಂದ ಬರುವ ವಾಹನಗಳು, ಕೈಕಂಬದಿಂದ ಕಾವೂರು-ಕೂಳೂರು- ಬೈಕಂಪಾಡಿ, ಮಂಗಳೂರಿಗೆ ಹೋಗುವ ವಾಹನಗಳು ಹೆಚ್ಚಾಗಿ ಈ ರಸ್ತೆಯನ್ನುಉಪಯೋಗಿಸುತ್ತವೆ. ಇದು ಹತ್ತಿರದ ಸಂಪರ್ಕ ರಸ್ತೆಯಾಗಿದೆ. ಸುದ್ದಿ ಇಲ್ಲದ ಈ ರಸ್ತೆಯಲ್ಲಿ ದಿನನಿತ್ಯ ಹೆಚ್ಚು ವಾಹನಗಳು ಸಂಚರಿಸುತ್ತವೆ. ಆದರೆ ಸಾರ್ವಜನಿಕರಿಗೆ ಬಸ್ ಸಂಚಾರ ಮಾತ್ರ ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ.
ನಂತೂರು ಟ್ರಾಫಿಕ್ ಜಾಂ ಕಡಿಮೆ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕಾವೂರು, ಮಂಗಳೂರು, ಬಿ.ಸಿ. ರೋಡ್ ಕಡೆಗೆ ಹೋಗುವ ಹಾಗೂ ಬರುವ ವಾಹನಗಳು ಈ ರಸ್ತೆಯನ್ನು ಉಪಯೋಗಿಸುವ ಕಾರಣ ನಂತೂರಿನಲ್ಲಿ ವಾಹನ ಸಂಚಾರಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ. ನಂತೂರು ಟ್ರಾಫಿಕ್ ಜಾಂ ಕೊಂಚ ಮಟ್ಟಿಗೆ ಕಡಿಮೆ ಮಾಡುತ್ತಿದೆ.
ಡಿಸಿಗೆ ಮನವಿ
ಕೆಎಸ್‌ಆರ್‌ಟಿಸಿಯ ಜಿಲ್ಲಾ ಧಿಕಾರಿಯವರಿಗೆ, ಆರ್‌ಟಿಒಗೆ ಗ್ರಾಮ ಸ್ಥರು ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿ 2 ವರ್ಷಗಳು ಕಳೆದಿವೆ. ಕೆಎಸ್‌ಆರ್‌ಟಿಸಿಯಿಂದ ರಸ್ತೆಯ ಸರ್ವೇ ಕೂಡ ನಡೆದಿದೆ. ಇನ್ನೂ ಕೂಡ ಬಸ್ ವ್ಯವಸ್ಥೆಯಾಗಿಲ್ಲ ಎಂಬುದು ಗ್ರಾಮಸ್ಥರ ಅಳಲು.
ಮುಂದಿನ ದಿನಗಳಲ್ಲಿ
ಬಸ್ ವ್ಯವಸ್ಥೆ
ಅದ್ಯಪಾಡಿ, ಕೊಳಂಬೆ, ಕಂದಾವರ ಗ್ರಾಮಗಳ ಅಭಿವೃದ್ಧಿಯ ದೃಷ್ಟಿಯಿಂದ ಕೈಕಂಬ -ಕೆಂಜಾರು ರಸ್ತೆಯಲ್ಲಿ ಬಸ್ ವ್ಯವಸ್ಥೆಯ ಬಗ್ಗೆ ಈಗಾಗಲೇ ಕೆಎಸ್‌ಆರ್‌ಟಿಸಿ ಹಾಗೂ ಆರ್‌ಟಿಒ ಅಧಿಕಾರಿಗಳಲ್ಲಿ ಚರ್ಚಿಸಲಾಗಿದೆ. ಖಾಸಗಿ ಬಸ್‌ಗಳಿಗೆ ಪ್ರಥಮ ಆದ್ಯೆತ, ಅವರು ಹಿಂಜರಿದರೆ ಸರಕಾರಿ ಬಸ್ ವ್ಯವಸ್ಥೆ ಮಾಡಲಾಗುವುದು. ನಗರಗಳ ಟ್ರಾಫಿಕ್ ಜಾಮ್ ಅಗುವುದನ್ನು ಕಡಿಮೆ ಗೊಳಿಸುವ ಮೂಲಕ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು.
– ಡಾ| ಭರತ್ ಶೆಟ್ಟಿ ವೈ.,
ಶಾಸಕರು, ಮಂಗಳೂರು ನಗರ ಉತ್ತರ
– ಸುಬ್ರಾಯ ನಾಯಕ್ ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.