ಕಾಶಿಯಲ್ಲಿ 42 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ
Team Udayavani, Feb 11, 2022, 11:06 AM IST
ಸೊಲ್ಲಾಪುರ: ಬಹುಭಾಷಾ ಪಂಡಿತ, ಧರ್ಮರತ್ನ ಡಾ| ಮಲ್ಲಿಕಾರ್ಜುನ ಶ್ರೀಗಳನ್ನು ಕಾಶಿ ಜ್ಞಾನ ಸಿಂಹಾಸನ ಪೀಠದ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ್ದು, ಮೇ.13ರಂದು ಕಾಶಿಯಲ್ಲಿ ಅದ್ಧೂರಿ ಪಟ್ಟಾಭಿಷೇಕ ಸಮಾರಂಭ ನಡೆಯಲಿದೆ ಎಂದು ಕಾಶಿ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
ಇಲ್ಲಿನ ಅಕ್ಕಲಕೋಟ ರಸ್ತೆಯಲ್ಲಿರುವ ವೀರತಪಸ್ವಿ ಮಠದಲ್ಲಿ ನಡೆದ ಸಮಾಲೋಚನ ಸಭೆಯಲ್ಲಿ ಕಾಶಿ ಜಗದ್ಗುರುಗಳು ಈ ಮಾಹಿತಿ ನೀಡಿದರು. ಅಪ್ಪಂದಿರು ಕಷ್ಟಪಟ್ಟು ದುಡಿದಿದ್ದನ್ನೆಲ್ಲ ಮಕ್ಕಳಿ ಗಾಗಿ ಒಪ್ಪಿಸಿ ನಿವೃತ್ತರಾಗುತ್ತಾರೆ. ಅದೇ ರೀತಿ ಪೀಠಗಳು ತಮ್ಮ ಉತ್ತರಾಧಿಕಾರಿಗಳನ್ನು ಆಯ್ಕೆ ಮಾಡುವ ಮೂಲಕ ಧಾರ್ಮಿಕ ಕಾರ್ಯಗಳನ್ನು ಮುನ್ನಡೆಯುವಂತೆ ಮಾಡಲಾಗುತ್ತದೆ. 32 ವರ್ಷದ ಹಿಂದೆ ಕಾಶಿ ಪೀಠಕ್ಕೆ ನಾನು ಆಯ್ಕೆಯಾಗಿದ್ದೆ. ಸಮಾಜಕ್ಕೆ ಸಾಧ್ಯವಾದಷ್ಟು ಉತ್ತಮ ಕಾರ್ಯ ಮಾಡಿರುವೆ. ಹೀಗಾಗಿ ಬದುಕಿರುವಾಗಲೇ ಸರಿಯಾದ ವ್ಯಕ್ತಿಗೆ ಜವಾಬ್ದಾರಿ ನೀಡಿ ನಿವೃತ್ತಿ ಹೊಂದುವ ಆಶಯದೊಂದಿಗೆ ಧರ್ಮ ಮತ್ತು ಸಾಮಾಜಿಕ ಕಾರ್ಯ ನಿರಂತರವಾಗಿ ನಡೆಯಬೇಕೆಂದು ಸಾಮರ್ಥ್ಯ ಹೊಂದಿದ ಡಾ| ಮಲ್ಲಿಕಾರ್ಜುನ ಶ್ರೀಗಳನ್ನು 87ನೇ ಪೀಠಾಧಿಪತಿ ಎಂದು ಅಧಿಕಾರ ವಹಿಸಲು ಅಧಿಕೃತವಾಗಿ ಪಟ್ಟಾಭಿಷೇಕ ಜರುಗಲಿದೆ ಎಂದರು.
ಏಪ್ರಿಲ್ 2ರ ಶನಿವಾರ ಯುಗಾದಿಯಿಂದ ಹಿಡಿದು ಮೇ 13ರ ವರೆಗೆ 42 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಇದಕ್ಕಾಗಿ ದೇಶದ ವಿವಿಧೆಡೆಗಳಿಂದ ಭಕ್ತ ಸಮೂಹ ಕಾಶಿಗೆ ಆಗಮಿಸಲಿದೆ. ಎಲ್ಲ ಭಕ್ತರು ತನು-ಮನ-ಧನದಿಂದ ಸೇವೆ ನೀಡಬೇಕು ಎಂದು ನುಡಿದರು.
ಕಾಶಿ ಪೀಠದ ಉತ್ತರಾಧಿಕಾರಿ ಡಾ| ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ, ಹೊಟಗಿ ಮಠದ ಮಠಾಧೀಶರಾದ ಲಿಂ. ತಪೋರತ್ನಂ ಯೋಗಿರಾಜೇಂದ್ರ ಶಿವಾಚಾರ್ಯ ಮಹಾ ಸ್ವಾಮೀಜಿ ಪಂಚಪೀಠಾಧೀಶ್ವರರಿಗೆ ಸಲ್ಲಿಸಿದ ಸೇವೆಯಿಂದ ನನಗೆ ಈ ಅವಕಾಶ ಒದಗಿ ಬಂದಿದೆ. ಕಾಶಿ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಮುಗಿಸಿರುವೆ. ಅವರ ಮಾರ್ಗದರ್ಶನದಲ್ಲಿ ಕಾಶಿ ಪೀಠದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದರು.
ಸೊಲ್ಲಾಪುರ ಶಾಸಕ ವಿಜಯಕುಮಾರ ದೇಶಮುಖ, ಮಾಜಿ ಶಾಸಕ ಸಿದ್ಧರಾಮ ಮೇತ್ರೆ, ವಿಶ್ವನಾಥ ಚಾಕೋತೆ ಮಾತನಾಡಿದರು. ಹೊಟಗಿ ಮಠದ ವತಿಯಿಂದ ಕಾಶಿ ನೂತನ ಪೀಠಾಧಿಪತಿ ಡಾ| ಮಲ್ಲಿಕಾರ್ಜುನ ಶ್ರೀಗಳು ಕಾಶಿ ಜಗದ್ಗುರುಗಳನ್ನು ಸತ್ಕರಿಸಿದರು.
ಮಂದ್ರೂಪದ ರೇಣುಕ ಶ್ರೀ, ನಾಗನಸೂರಿನ ಶ್ರೀಕಂಠ ಶ್ರೀ, ಚಿಟಗುಪ್ಪದ ಗುರುಲಿಂಗ ಶ್ರೀ, ಮೈಂದರಗಿಯ ನೀಲಕಂಠ ಶ್ರೀ, ಸುಗೂರೇಶ್ವರ ಶ್ರೀ, ಜಿಂತೂರಿನ ಅಮೃತೇಶ್ವರ ಶ್ರೀ ಸೇರಿದಂತೆ ನಾಡಿನ ಇತರ ಶ್ರೀಗಳು, ಎಪಿಎಂಸಿ ಮಾಜಿ ಅಧ್ಯಕ್ಷೆ ಇಂದುಮತಿ ಅಲಗೊಂಡಾ ಪಾಟೀಲ, ಸಂಚಾಲಕ ಕೇದಾರ ಉಂಬರಜೆ, ಸಿದ್ಧೇಶ್ವರ ಬಮಣಿ, ಹರೀಶ ಪಾಟೀಲ, ರಾಮಪ್ಪ ಚಿವಡಶೆಟ್ಟಿ, ಬಸವರಾಜ ಶಾಸ್ತ್ರೀ ಹಿರೇಮಠ, ಶಿವಯೋಗಿ ಶಾಸ್ತ್ರೀ ಹೊಳಿಮಠ, ಶಿವಾನಂದ ಪಾಟೀಲ, ಪ್ರಾಂಶುಪಾಲ ಗಜಾನನ ಧರಣೆ, ಡಾ| ರಾಜೇಂದ್ರ ಘೂಳಿ, ತಮ್ಮಾ ಮುಸ್ತಾರೆ, ರಾಜಶೇಖರ ಹಿರೇಹಬ್ಬು, ಸುಧಿಧೀರ ಥೋಬಡೆ, ಮಹೇಶ ಅಂದೇಲಿ, ಚಿದಾನಂದ ಮುಸ್ತಾರೆ, ರಾಜಶೇಖರ ಬುರ್ಕುಲೆ, ಪ್ರಭುರಾಜ ವಿಭೂತೆ ಹೊಟಗಿ, ಕುಂಭಾರಿ, ದರ್ಗಾನಹಳ್ಳಿ, ಧೋತ್ರಿ, ಮುಸ್ತಿ, ಬೋರಾಮಣಿ ಪಾಲ್ಗೊಂಡಿದ್ದರು. ಸಿದ್ಧಯ್ಯ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ಶಾಂತಯ್ಯ ಸ್ವಾಮಿ ನಿರೂಪಿಸಿದರು, ರಾಜಕುಮಾರ ಬೋರೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
MUST WATCH
ಹೊಸ ಸೇರ್ಪಡೆ
Afro-Asia Cup: 2 ದಶಕಗಳ ಬಳಿಕ ಆಫ್ರೋ -ಏಷ್ಯಾ ಕಪ್?
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್‌ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
Daily Horoscope; ಇಷ್ಟಾರ್ಥ ಸಿದ್ಧಿಯ ದಿನ..ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.