ಭಾರತದ ಜೋಶ್; ವಿಂಡೀಸಿಗೆ ವೈಟ್ವಾಶ್
ಅಂತಿಮ ಏಕದಿನವನ್ನು 96 ರನ್ನುಗಳಿಂದ ಗೆದ್ದ ಭಾರತಕ್ಕೆ 3-0 ಸರಣಿ ; ವಿಂಡೀಸ್ ವಿರುದ್ಧ ಮೊದಲ ವೈಟ್ವಾಶ್ ಸಾಧನೆ
Team Udayavani, Feb 11, 2022, 9:04 PM IST
ಅಹ್ಮದಾಬಾದ್: ಭಾರತದ ವೈಟ್ವಾಶ್ ಯೋಜನೆ ಯಶಸ್ವಿಯಾಗಿದೆ. ಪ್ರವಾಸಿ ವೆಸ್ಟ್ ಇಂಡೀಸನ್ನು 3ನೇ ಪಂದ್ಯದಲ್ಲೂ ಮಣಿಸಿದ ಟೀಮ್ ಇಂಡಿಯಾ, ಏಕದಿನ ಸರಣಿಯನ್ನು 3-0 ಅಂತರದಿಂದ ಗೆದ್ದಿದೆ. ಇದು ವಿಂಡೀಸ್ ವಿರುದ್ಧ ಭಾರತ ಸಾಧಿಸಿದ ಮೊದಲ ವೈಟ್ವಾಶ್ ಪರಾಕ್ರಮ ಎಂಬುದೊಂದು ಗರಿಮೆ.
ಶುಕ್ರವಾರದ ಕೊನೆಯ ಮುಖಾಮುಖಿಯಲ್ಲಿಆರಂಭಿಕ ಕುಸಿತದಿಂದ ಚೇತರಿಸಿಕೊಂಡ ಭಾರತ 50 ಓವರ್ಗಳಲ್ಲಿ 265ಕ್ಕೆ ಆಲೌಟ್ ಆಯಿತು. ಇದು ಈ ಸರಣಿಯಲ್ಲಿ ದಾಖಲಾದ ಗರಿಷ್ಠ ಸ್ಕೋರ್. ಆದರೆ ವೆಸ್ಟ್ ಇಂಡೀಸ್ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲೇ ಇಲ್ಲ. ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ 37.1 ಓವರ್ಗಳಲ್ಲಿ 169ಕ್ಕೆ ಆಲೌಟ್ ಆಗಿ 96 ರನ್ನುಗಳ ಸೋಲಿಗೆ ತುತ್ತಾಯಿತು.
ಇತ್ತಂಡಗಳಿನ್ನು ಕೋಲ್ಕತಾದಲ್ಲಿ 3 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿವೆ. ಫೆ. 16, 18 ಮತ್ತು 20ರಂದು ಈ ಪಂದ್ಯಗಳು ನಡೆಯಲಿವೆ.
ಚೇತರಿಸದ ವಿಂಡೀಸ್
ವೆಸ್ಟ್ ಇಂಡೀಸ್ನ 3 ವಿಕೆಟ್ 5 ಓವರ್ ಮುಗಿಯುವಷ್ಟರಲ್ಲಿ 25 ರನ್ನಿಗೆ ಉರುಳಿತು. ಹೋಪ್ ಅವರನ್ನು ಲೆಗ್ ಬಿಫೋರ್ ಬಲೆಗೆ ಕೆಡವಿದ ಸಿರಾಜ್ ಮೊದಲ ಯಶಸ್ಸು ತಂದಿತ್ತರು. ಕಿಂಗ್ ಮತ್ತು ಬ್ರೂಕ್ಸ್ ಅವರನ್ನು ಚಹರ್ ಒಂದೇ ಓವರ್ನಲ್ಲಿ ಕೆಡವಿದರು.
ನಾಯಕ ಕೈರನ್ ಪೊಲಾರ್ಡ್ ಈ ಪಂದ್ಯದಿಂದಲೂ ಹೊರಗುಳಿದದ್ದು ವಿಂಡೀಸಿಗೆ ದೊಡ್ಡ ಹೊಡೆತವಾಗಿ ಪರಿಣಮಿಸಿತು. ಉಸ್ತುವಾರಿ ನಾಯಕ ನಿಕೋಲಸ್ ಪೂರಣ್ (34) ಹೋರಾಟ ಯಾವ ಮೂಲೆಗೂ ಸಾಲಲಿಲ್ಲ. ಕೊನೆಯಲ್ಲಿ ಓಡೀನ್ ಸ್ಮಿತ್ ಸಿಡಿದು ನಿಲ್ಲುವಾಗ ಕಾಲ ಮಿಂಚಿತ್ತು. 36 ರನ್ ಮಾಡಿದ ಸ್ಮಿತ್ ಅವರದೇ ವಿಂಡೀಸ್ ಸರದಿಯ ಗರಿಷ್ಠ ಗಳಿಕೆ. ಅಲ್ಜಾರಿ ಜೋಸೆಫ್ 29 ರನ್ ಹೊಡೆದರು.
ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ತಲಾ 3 ವಿಕೆಟ್; ದೀಪಕ್ ಚಹರ್, ಕುಲದೀಪ್ ಯಾದವ್ ತಲಾ 2 ವಿಕೆಟ್ ಕೆಡವಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.