ರಾಜ್ಯದ 9 ಒಕ್ಕೂಟ ನಷ್ಟದಲ್ಲಿದ್ದರೂ, ಲಾಭದಲ್ಲಿ ದ.ಕ. ಒಕ್ಕೂಟ
Team Udayavani, Feb 12, 2022, 6:20 AM IST
ಹಾಸನ: ದೇಶದ ಹಾಲು ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿರುವ ಕರ್ನಾಟಕದ ಹೈನುಗಾರರು ಸಂಕಷ್ಟಕ್ಕೆ ಸಿಲುಕುವ ಆತಂಕ ಸೃಷ್ಟಿಯಾಗಿದೆ. ಕೊರೊನಾ ಸಾಂಕ್ರಾಮಿಕ ನಿಯಂತ್ರಣಕ್ಕೆ ಸರಕಾರ ಜಾರಿ ಮಾಡಿದ ಲಾಕ್‌ಡೌನ್, ವಾರಾಂತ್ಯದ ಕರ್ಫ್ಯೂ, ಹಾಲು ಒಕ್ಕೂಟಗಳಲ್ಲಿ ವ್ಯವಸ್ಥಿತ ನಿರ್ವಹಣೆಯ ಲೋಪದಿಂದಾಗಿ ರಾಜ್ಯದ 14 ಹಾಲು ಒಕ್ಕೂಟಗಳ ಪೈಕಿ 9 ಒಕ್ಕೂಟಗಳು ನಷ್ಟದಲ್ಲಿದ್ದರೂ, ದಕ್ಷಿಣ ಕನ್ನಡ ಹಾಲು ಒಕ್ಕೂಟ ಲಾಭದಲ್ಲಿದೆ.
ರಾಜ್ಯದಲ್ಲಿ ಅತೀ ಹೆಚ್ಚು ಹಾಲು ಸಂಗ್ರಹಣೆ ಮಾಡುವ ಒಕ್ಕೂಟಗಳಲ್ಲಿ ಮೊದಲ ಸ್ಥಾನದಲ್ಲಿರುವ ಬೆಂಗಳೂರು ಹಾಲು ಒಕ್ಕೂಟವು ಕಳೆದ ಎಪ್ರಿಲ್‌ನಿಂದ ಸೆಪ್ಟಂಬರ್‌ವರೆಗೆ ನಿರಂತರ ನಷ್ಟ ಅನುಭವಿಸುತ್ತಾ ಬಂದಿದ್ದು, ಅಕ್ಟೋಬರ್‌ನಿಂದೀಚೆಗೆ ಸುಧಾರಿಸಿಕೊಳ್ಳುತ್ತಿದೆ. ಆದರೆ ಈಗಲೂ ಬೆಂಗಳೂರು ಒಕ್ಕೂಟ 58.34 ಕೋಟಿ ರೂ. ನಿವ್ವಳ ನಷ್ಟದಲ್ಲಿದೆ. ಕೋಲಾರ ಹಾಲು ಒಕ್ಕೂಟವೂ ಎಪ್ರಿಲ್‌ನಿಂದ ಸೆಪ್ಟಂಬರ್‌ವರೆಗೆ ನಷ್ಟ ಅನುಭವಿಸಿದ್ದು, ಪ್ರಸ್ತುತ 21.65 ಕೋಟಿ ರೂ. ನಷ್ಟದಲ್ಲಿದ್ದರೆ, ಮಂಡ್ಯ ಹಾಲು ಒಕ್ಕೂಟ 31.81 ಕೋಟಿ ರೂ. ನಷ್ಟದಲ್ಲಿದೆ.
ಮೈಸೂರು ಹಾಲು ಒಕ್ಕೂಟವು 5.30 ಕೋಟಿ ರೂ. ನಷ್ಟ ಅನುಭವಿಸಿದ್ದರೆ, ತುಮಕೂರು ಒಕ್ಕೂಟ 10.11 ಕೋಟಿ ರೂ., ಶಿವಮೊಗ್ಗ ಒಕ್ಕೂಟ 9.70 ಕೋಟಿ ರೂ. ನಷ್ಟ ಅನುಭವಿಸಿದೆ. ಹೀಗೆ 10 ಹಾಲು ಒಕ್ಕೂಟಗಳು ನಷ್ಟದಲ್ಲಿ ಸಾಗಿವೆ.
ದ.ಕ.: 2.38 ಕೋಟಿ ಲಾಭ
ಬಹುಪಾಲು ಒಕ್ಕೂಟಗಳು ನಷ್ಟದಲ್ಲಿ ಸಾಗಿದ್ದರೆ ಐದು ಒಕ್ಕೂಟಗಳು 2-3 ತಿಂಗಳು ನಷ್ಟಕ್ಕೆ ಸಿಲುಕಿದರೂ ಅನಂತರ ಸುಧಾರಿಸಿಕೊಂಡು ಲಾಭದ ಹಾದಿಗೆ ಮರಳಿವೆ. ದಕ್ಷಿಣ ಕನ್ನಡ ಹಾಲು ಒಕ್ಕೂಟ 2.38 ಕೋಟಿ ರೂ. ಲಾಭದಲ್ಲಿದ್ದರೆ, ಕಲಬುರಗಿ ಹಾಲು ಒಕ್ಕೂಟ 2.05 ಕೋಟಿ ರೂ., ಧಾರವಾಡ – 1.02 ಕೋಟಿ ರೂ., ಹಾಸನ ಹಾಲು ಒಕ್ಕೂಟ 87 ಲಕ್ಷ ರೂ, ಬೆಳಗಾವಿ ಹಾಲು ಒಕ್ಕೂಟವು 31.47 ಲಕ್ಷ ರೂ. ಲಾಭದಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Editorial: ಪುಂಡ ವಿದ್ಯಾರ್ಥಿಗಳಿಗೆ ಶಿಕ್ಷೆ: ಸ್ಪಷ್ಟ ಮಾರ್ಗಸೂಚಿ ಅಗತ್ಯ
Mangaluru: ನ್ಯಾಯಾಂಗ ನಿಂದನೆ ಪ್ರಕರಣ: ಹನುಮಂತ ಕಾಮತ್‌ಗೆ ಕಾರಾಗೃಹ ಶಿಕ್ಷೆ
Parliament: ಎರಡೂ ಸದನಗಳಲ್ಲಿ ಸಂವಿಧಾನದ ಬಗ್ಗೆ ಚರ್ಚೆಗೆ ವಿಪಕ್ಷ ನಾಯಕರ ಪತ್ರ
Congress Politics: ಡಿಸಿಎಂ ಡಿ.ಕೆ.ಶಿವಕುಮಾರ್ ದಿಲ್ಲಿಗೆ ಭೇಟಿ: ಹೈಕಮಾಂಡ್ ಜತೆ ಚರ್ಚೆ
Andhra Pradesh: ಅದಾನಿ ಗ್ರೂಪ್ ಜತೆಗಿನ ಒಪ್ಪಂದ ರದ್ದತಿಗೆ ಆಂಧ್ರಪ್ರದೇಶ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.