ಬಿಜೆಪಿ ಏರಿದೆ: ವಿಪಕ್ಷ ಜಾರಿದೆ ; ಮೊದಲ ಹಂತದ ಬಳಿಕ ವಿರೋಧಿಗಳಿಗೆ ನಡುಕ: ಪ್ರಧಾನಿ ಮೋದಿ

Team Udayavani, Feb 12, 2022, 7:55 AM IST

ಬಿಜೆಪಿ ಏರಿದೆ: ವಿಪಕ್ಷ ಜಾರಿದೆ ; ಮೊದಲ ಹಂತದ ಬಳಿಕ ವಿರೋಧಿಗಳಿಗೆ ನಡುಕ: ಪ್ರಧಾನಿ ಮೋದಿ

ಹೊಸದಿಲ್ಲಿ: “ಉತ್ತರಪ್ರದೇಶದ ಮೊದಲ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆ ಬಿಜೆಪಿಯ ಧ್ವಜವು ಎತ್ತರೆತ್ತರಕ್ಕೆ ಹಾರತೊಡಗಿದೆ. ಹೀಗಾಗಿ ವಿರೋಧಿಗಳಿಗೆ ನಡುಕ ಹುಟ್ಟಿದ್ದು, ಖನ್ನತೆಗೆ ಜಾರಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕಸ್‌ಗಂಜ್‌ನಲ್ಲಿ ಶುಕ್ರವಾರ ಭೌತಿಕ ರ್ಯಾಲಿ ನಡೆಸಿ ಮಾತನಾಡಿದ ಅವರು, ಯಾವಾಗ ಮೊದಲ ಹಂತದ ಮತದಾನ ಮುಗಿಯಿತೋ ಅವರೆಲ್ಲರ ಭರವಸೆಗಳು ನೆಲಕಚ್ಚಿದವು. ಹೀಗಾಗಿಯೇ ಅವರು ಇವಿಎಂಗಳ ಮೇಲೆ ಆರೋಪ ಹೊರಿಸಲು ಶುರು ಮಾಡಿದರು ಎಂದೂ ವ್ಯಂಗ್ಯವಾಡಿದ್ದಾರೆ.

ರೈತರ ಕೊಂದವನಿಗೆ ಬೇಲ್‌: ಎಸ್‌ಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಅಖೀಲೇಶ್‌ ಯಾದವ್‌, ಆಡಳಿತಾರೂಢ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. “ಬಿಜೆಪಿ ಆಡಳಿತದಲ್ಲಿ ವಿಶ್ವವಿದ್ಯಾನಿಲಯವನ್ನು ನಿರ್ಮಿಸಿದವರಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ, ಅಮಾಯಕ ರೈತರನ್ನು ಕೊಂದವರಿಗೆ ಬೇಲ್‌ ನೀಡಲಾಗುತ್ತದೆ. ಇದುವೇ ಕೇಸರಿ ಪಕ್ಷದ ನವಭಾರತ’ ಎಂದು ಹೇಳಿದ್ದಾರೆ.

ವಿಭಜಿಸುವುದೇ ಕೈ ಕೆಲಸ
ಕಾಂಗ್ರೆಸ್‌ ಪಕ್ಷವು ಜನರನ್ನು ಜಾತಿ, ಧರ್ಮ ಮತ್ತು ಪ್ರದೇಶದ ಆಧಾರದಲ್ಲಿ ವಿಭಜಿಸುವ ಕೆಲಸ ಮಾಡುತ್ತದೆ. ಆದರೆ ಬಿಜೆಪಿಯು ಉತ್ತರಾ ಖಂಡವನ್ನು ಹಿಮಾಲಯದಷ್ಟು ಎತ್ತರಕ್ಕೆ ಒಯ್ಯುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಲ್ಮೋರಾದಲ್ಲಿ ಪ್ರಚಾರ ರ್ಯಾಲಿ ನಡೆಸಿ ಮಾತನಾಡಿದ ಅವರು, “ಕಾಂಗ್ರೆಸ್‌ನ ತಂತ್ರವೇನೆಂದು ನಿಮಗೆ ಎಲ್ಲರಿಗೂ ಗೊತ್ತು. ಪ್ರತಿಯೊಬ್ಬರನ್ನೂ ವಿಭಜಿಸೋಣ, ಒಟ್ಟಿಗೇ ಲೂಟಿ ಹೊಡೆಯೋಣ ಎಂಬ ಮಂತ್ರದೊಂದಿಗೆ ಕಾಂಗ್ರೆಸ್‌ ಕಾರ್ಯನಿರ್ವಹಿಸುತ್ತದೆ’ ಎಂದೂ ಆರೋಪಿಸಿದ್ದಾರೆ.

ನೈಜ ವಿಚಾರಗಳಿಂದ ಹಾದಿ ತಪ್ಪಿಸುತ್ತಿದ್ದಾರೆ
ಪ್ರಧಾನಿ ಮೋದಿ ಅವರು ನಿರುದ್ಯೋಗ, ಪರಿಸರ ಮಾಲಿನ್ಯದಂಥ ನೈಜ ವಿಚಾರಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆದು ಹಾದಿ ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಆರೋಪಿಸಿದ್ದಾರೆ. ಮಡಗಾಂವ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಫೆ.14ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬರಲಿದೆ. ಚುನಾಣೋತ್ತರ ಮೈತ್ರಿಯ ಅಗತ್ಯವೂ ಎದುರಾಗದು ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಪ್ಪ ಗೆಲ್ಲುವವರೆಗೂ ಮದುವೆಯಾಗಲಾರೆ!
“ಚುನಾವಣೆಯಲ್ಲಿ ನನ್ನ ಅಪ್ಪ ಜಯ ಸಾಧಿಸುವವರೆಗೂ ನಾನು ವಿವಾಹವಾಗುವುದಿಲ್ಲ.’ ಇಂಥದ್ದೊಂದು ಪ್ರತಿಜ್ಞೆ ಮಾಡಿರುವುದು ಕಾಂಗ್ರೆಸ್‌ ರಾಜ್ಯಾಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಅವರ ಪುತ್ರಿ ರಬಿಯಾ ಸಿಧು. ಅಮೃತಸರ ಪೂರ್ವ ಕ್ಷೇತ್ರದಲ್ಲಿ ಅಪ್ಪ ನವಜೋತ್‌ ಪರ ಪ್ರಚಾರ ನಡೆಸುವ ವೇಳೆ ರಬಿಯಾ ಈ ಶಪಥ ಮಾಡಿದ್ದಾರೆ. ಜತೆಗೆ, ಸಿಎಂ ಅಭ್ಯರ್ಥಿ ಚನ್ನಿ° ವಿರುದ್ಧವೂ ಕಿಡಿಕಾರಿದ ರಬಿಯಾ, “ಚನ್ನಿ° ನಿಜಕ್ಕೂ ಬಡವರೇ? ಅವರ ಬ್ಯಾಂಕ್‌ ಖಾತೆಯನ್ನೊಮ್ಮೆ ಪರಿಶೀಲಿಸಿದರೆ, 133 ಕೋಟಿಗೂ ಹೆಚ್ಚು ಹಣ ಸಿಗುತ್ತದೆ’ ಎಂದಿದ್ದಾರೆ.

ಶೇ.25ರಷ್ಟು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌: ಪಂಜಾಬ್‌ ವಿಧಾನಸಭೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪೈಕಿ ಶೇ.25ರಷ್ಟು ಮಂದಿಯ ವಿರುದ್ಧ ಕ್ರಿಮಿನಲ್‌ ಕೇಸುಗಳು ದಾಖಲಾಗಿವೆ ಎಂದು ಅಸೋಸಿಯೇಶ‌ನ್‌ ಫಾರ್‌ ಡೆಮಾಕ್ರಾಟಿಕ್‌ ರಿಫಾರ್ಮ್Õ (ಎಡಿಆರ್‌) ವರದಿ ಹೇಳಿದೆ. 315 ಅಭ್ಯರ್ಥಿಗಳು ಕ್ರಿಮಿನಲ್‌ ಆರೋಪ ಎದುರಿಸುತ್ತಿದ್ದು, ಈ ಪೈಕಿ 218 ಮಂದಿಯ ವಿರುದ್ಧ ಗಂಭೀರ ಆರೋಪಗಳಿವೆ ಎಂದೂ ಹೇಳಲಾಗಿದೆ.

ಗೋವಾ ಸರಕಾರವು ಪ್ರಧಾನಿ ಮೋದಿ ಬರುತ್ತಾರೆಂದು ಕೇವಲ 24 ಗಂಟೆಗಳಲ್ಲಿ ಹೆಲಿಪ್ಯಾಡ್‌ ನಿರ್ಮಿಸಿದೆ. ಆದರೆ ಅದರ ಪಕ್ಕದಲ್ಲೇ ಒಂದು ಬಸ್‌ ನಿಲ್ದಾಣವು 20 ವರ್ಷಗಳಾದರೂ ತಲೆಎತ್ತಿಲ್ಲ. ಏಕೆಂದರೆ ಸರಕಾರಕ್ಕೆ ಅಭಿವೃದ್ಧಿ ಬಗ್ಗೆ ಆಸಕ್ತಿಯೇ ಇಲ್ಲ.
-ಅರವಿಂದ ಕೇಜ್ರಿವಾಲ್‌, ಆಪ್‌ ನಾಯಕ

ಉತ್ತರಪ್ರದೇಶದ ಹಿಂದಿನ ಸರಕಾರಗಳೆಲ್ಲವೂ ಜಾತಿವಾದಿ ಸರಕಾರಗಳಾಗಿದ್ದವು. ಆದರೆ ಪ್ರಧಾನಿ ಮೋದಿ ಅವರು ಎಲ್ಲ ಜಾತಿಗಳ ಕ್ಷೇಯೋಭಿವೃದ್ಧಿಗಾಗಿ ಕೆಲಸ ಮಾಡಿದವರು.
-ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ಟಾಪ್ ನ್ಯೂಸ್

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

1-tata

ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್‌ ಇವಿ ಸೇರ್ಪಡೆ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.