ಮಣಿಪಾಲ : ಕಾಂಕ್ರೀಟ್ ಸ್ಲ್ಯಾಬ್ ಎದ್ದು ಹೋಗಿ ವರ್ಷ 2 ಕಳೆದರೂ ಸ್ಪಂದನೆಯಿಲ್ಲ
ಪಾದಚಾರಿಗಳಿಗೆ ಹೊಂಡ ಕಂಟಕ
Team Udayavani, Feb 12, 2022, 11:38 AM IST
ಉಡುಪಿ : ಮಣಿಪಾಲದ ಸಿಂಡಿಕೇಟ್ ಸರ್ಕಲ್‌ನಿಂದ ಟೈಗರ್ ಸರ್ಕಲ್‌ನತ್ತ ತೆರಳುವ ಪಾದಚಾರಿಗಳಿಗೆ ಡ್ರೈನೇಜ್‌ನ ಕಾಂಕ್ರೀಟ್ ಸ್ಲ್ಯಾಬ್ ಸಂಪೂರ್ಣ ಎದ್ದುಹೋದ ಕಾರಣ ಪಾದಚಾರಿಗಳು ಚರಂಡಿಯೊಳಗೆ ಬೀಳುವ ಸನ್ನಿವೇಶ ಎದುರಾಗಿದೆ.
ಇದೇ ಭಾಗದಲ್ಲಿ ನೆಹರೂ ಸ್ಮಾರಕ ಗ್ರಂಥಾಲಯವಿದ್ದು, ಹಲವು ಮಂದಿ ವಿದ್ಯಾರ್ಥಿಗಳು ಈ ಭಾಗದಲ್ಲಿ ತೆರಳು ತ್ತಾರೆ. ಕಳೆದ ಎರಡು ವರ್ಷಕ್ಕೂ ಅಧಿಕ ಸಮಯದಿಂದ ಗುಂಡಿ ತೆರೆದಿದೆ.
ತೆರೆದಿರುವ ಸ್ಲಾéಬ್‌ನ ಅಡಿಭಾಗದಲ್ಲಿ ಮದ್ಯದ ಬಾಟಲಿಗಳ ರಾಶಿ ಕಂಡು ಬರುತ್ತಿದೆ. ಗ್ರಂಥಾಲಯಕ್ಕೆ ಈ ಭಾಗದ ಸಹಿತ ವಿದೇಶಿ ವಿದ್ಯಾರ್ಥಿನಿಯರು ಆಗಮಿಸುತ್ತಿದ್ದು, ನಗರದ ಶೈಕ್ಷಣಿಕ ನಗರಿಯಲ್ಲಿ ಒಂದು ವರ್ಷದಿಂದ ತೆರೆದಿರುವ ಸ್ಲ್ಯಾಬ್ ಇನ್ನೂ ಮುಕ್ತಿ ನೀಡದಿರುವುದು ವಿಪರ್ಯಾಸವಾಗಿದೆ.
ಬೆಳಗ್ಗೆ, ಸಂಜೆ ಹಾಗೂ ರಾತ್ರಿ ವೇಳೆ ಹಲವರು ಈ ಭಾಗದಲ್ಲಿ ತೆರಳುತ್ತಾರೆ. ಕೆಲವೊಂದು ಕಾಂಕ್ರೀಟ್ ಸ್ಲ್ಯಾಬ್ ಎದ್ದು ಹೋಗಿರುವ ಕಾರಣ ಎಡವಿಬೀಳುವ ಘಟನೆ ನಡೆಯುತ್ತಿವೆ. ಬೀದಿ ದೀಪವಿದ್ದರೂ ರಾತ್ರಿವೇಳೆ ಅರಿವಿಗೆ ಬಾರದೆ ಹಲವರು ಹೊಂಡಕ್ಕೆ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಮತ್ತಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಅಲ್ಲದೆ ಗ್ರಂಥಾಲಯ, ಶೈಕ್ಷಣಿಕ ಸಂಸ್ಥೆಗಳಿರುವ ಮಣಿಪಾಲಕ್ಕೆ ಇದು ಶೋಭೆಯಲ್ಲ ಎನ್ನುತ್ತಾರೆ ಕೆಎಂಸಿ ನೌಕರ ಹಾಗೂ ಈ ಭಾಗದಲ್ಲಿ ದಿನನಿತ್ಯ ಗ್ರಂಥಾಲಯಕ್ಕೆ ಸಂಚರಿಸುವ ಶಿವಕುಮಾರ್ ಶೆಟ್ಟಿಗಾರ್ ಅವರು.
ಇದನ್ನೂ ಓದಿ : ಬೆಂಗಳೂರಿಗೆ ಕಾಲಿಟ್ಟ ಹಿಜಾಬ್ ವಿವಾದ : ಪ್ರೌಢಶಾಲೆಯಲ್ಲಿ ಬಿಗುವಿನ ವಾತಾವರಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.