ವಿ.ಎಸ್.ಉಗ್ರಪ್ಪ ಗಂಡಸೇ ಆಗಿದ್ದರೆ……: ನೇರ ಸವಾಲು ಹಾಕಿದ ಸಿ.ಎಂ ಇಬ್ರಾಹಿಂ
Team Udayavani, Feb 13, 2022, 5:13 PM IST
ದಾವಣಗೆರೆ: ವಿ.ಎಸ್.ಉಗ್ರಪ್ಪ ಗಂಡಸೇ ಆಗಿದ್ದರೆ ನನ್ನ ವಿರುದ್ಧ ಮಾಡಿರುವ ವಕ್ಫ್ ಆಸ್ತಿ ಕಬಳಿಕೆ ಆರೋಪ ಸಾಬೀತು ಪಡಿಸಲಿ ಎಂದು ವಿಧಾನ ಪರಿಷತ್ತು ಸದಸ್ಯ ಸಿ.ಎಂ. ಇಬ್ರಾಹಿಂ ನೇರ ಸವಾಲು ಹಾಕಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಹಿಂದೇ ಅನ್ವರ್ ಮಾನಪ್ಪಾಡಿ ಅವರ ನೇತೃತ್ವದಲ್ಲಿ ಸಿದ್ಧಪಡಿಸಿರುವ ವರದಿಯನ್ನು ಸಿಬಿಐಗೆ ಕೊಡಲಿ. ಉಗ್ರಪ್ಪನ ಮದುವೆ ಮಾಡಿಸಿದ್ದು ನಾನೇ. ಎಂಎಲ್ ಸಿ ಮಾಡಿದ್ದು ನಾನು. ನಾನು ಕಾರು ಕೂಡಾ ಕೊಟ್ಟಿದ್ದೆ. ಆದರೆ ಅದನ್ನು ಮರೆತಿದ್ದಾರೆ. ಅವರು ವಕೀಲರು, ನಾನು ಅವರ ಕಕ್ಷಿದಾರನಾಗಿದ್ದೆ. ಆದರೆ, ವಕೀಲನಾದ ವ್ಯಕ್ತಿ ಕಕ್ಷಿದಾರನ ಪರ ಇರಬೇಕು. ಅದನ್ನ ಬಿಟ್ಟು ಕಕ್ಷಿದಾರನ ವಿರುದ್ಧವೇ ವಾದ ಮಾಡುವುದು ಎಷ್ಟು ಸರಿ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ರಾಜ್ಯದಲ್ಲಿ ಕೆಲವೇ ದಿನದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ: ಸಿ.ಎಂ.ಇಬ್ರಾಹಿಂ ಭವಿಷ್ಯ
ಉಗ್ರಪ್ಪ ಡಿ.ಕೆ.ಶಿವಕುಮಾರ್ ಬಗ್ಗೆ ಕೂಡ ಮಾತನಾಡಿದ್ದಾರೆ. ಸಸ್ಪೆಂಡ್ ಮಾಡಿಲ್ಲ. ಆದರೆ, ಮುಸ್ಲಿಂರನ್ನು ಸಸ್ಪೆಂಡ್ ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಅಲ್ಲಿ ಯಾರೂ ಇರಲ್ಲ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.