ಆಡು ಸಾಕಾಣಿಕೆಯಿಂದ ಆದಾಯ ಹೆಚ್ಚಳ
Team Udayavani, Feb 13, 2022, 6:00 PM IST
ಬೀದರ: ರೈತರ ಆದಾಯ ಹೆಚ್ಚಿಸಬಲ್ಲ ಆಡು ಸಾಕಾಣಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜನವಾಡ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ “ಕೊಟ್ಟಿಗೆ ಪದ್ಧತಿಯಲ್ಲಿ ಆಡು ಸಾಕಾಣಿಕೆ’ ಕುರಿತು ತರಬೇತಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಸಮಾರೋಪದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಕೆವಿಕೆ ಮುಖ್ಯಸ್ಥ ಡಾ| ಸುನೀಲಕುಮಾರ ಎನ್. ಎಂ., ಶಿಬಿರಾರ್ಥಿಗಳು ಕೊಟ್ಟಿಗೆ ಪದ್ಧತಿಯಲ್ಲಿ ಆಡು ಸಾಕಾಣಿಕೆ ಕೃಷಿಯ ಉಪ ಕಸುಬುವಾಗಿ ಮತ್ತು ಕೃಷಿ ಭೂ ರಹಿತ ರೈತರು ಮುಖ್ಯ ಕಸುಬಾಗಿ ಅಳವಡಿಸಿಕೊಂಡರೆ ಖಂಡಿತ ಹೆಚ್ಚಿನ ಆದಾಯ ಪಡೆಯಬಹುದು ಎಂದು ಕರೆ ನೀಡಿದರು.
ಶಿಬಿರಾರ್ಥಿಗಳಾದ ನಾರಾಯಣಪುರ ಗ್ರಾಮದ ನವನಾಥ ಮಾತನಾಡಿ, ತರಬೇತಿಯಲ್ಲಿ ನೂತನ ತಂತ್ರಜ್ಞಾನಗಳನ್ನು ತಿಳಿದಿಕೊಂಡಿದ್ದೇವೆ ಎಂದರು.
ಗಾದಗಿ ಗ್ರಾಮದ ಜುಬೇರ್ ಅಹಮದ್ ಮಾತನಾಡಿ, ತರಬೇತಿ ನಂತರ ನಾನು ಹೊಸ ಆಡು ಸಾಕಾಣಿಕೆ ಘಟಕ ಸ್ಥಾಪಿಸಲು ಪ್ರಾರಂಭಿಸಿದ್ದು, ಈ ತರಬೇತಿಯು ಸಹಾಯಕವಾಗಿದೆ ಎಂದು ಹೇಳಿದರು.
ರಾಜಗೊಂಡ ಗ್ರಾಮದ ರತನ್ ಮಹರಾಜ ಅವರು ತರಬೇತಿಯಲ್ಲಿ ಆಡುಗಳ ರೋಗಗಳ ನಿರ್ವಹಣೆಯಲ್ಲಿ ನೂತನ ತಾಂತ್ರಿಕತೆಗಳನ್ನು ಅತ್ಯಂತ ಸಹಕಾರಿಯಾಗಿವೆ ಎಂದರು.
ಮೂರು ದಿನಗಳ ತಾಂತ್ರಿಕ ತರಬೇತಿಯಲ್ಲಿ ಪಶು ವಿಜ್ಞಾನಿಗಳಾದ ಡಾ| ದೀಪಕ ಬಿರಾದರ ಮತ್ತು ಡಾ| ಅಕ್ಷಯಕುಮಾರ ಅವರು ಆಡುಗಳಲ್ಲಿ ಬರುವ ರೋಗಗಳು, ವೈಜ್ಞಾನಿಕ ಕೊಟ್ಟಿಗೆ ನಿರ್ಮಾಣ ಮತ್ತು ಅವುಗಳ ನಿರ್ವಹಣೆ ಹಾಗೂ ಆಡುಗಳಿಗೆ ಬೇಕಾಗುವ ಪೌಷ್ಟಿಕ ಆಹಾರ, ಡಾ| ಧನರಾಜ ಗಿರಿಮಲ್ಲ ಅವರು ಆಡುಗಳ ವಿವಿಧ ತಳಿಗಳು ಮತ್ತು ಗುಣಧರ್ಮಗಳ ಕುರಿತು ತಿಳಿಸಿದರು.
ಕಲ್ಲೂರ ಗ್ರಾಮದ ಭೀಮರಾವ್ ಪಾಟೀಲ ಅವರ ಕ್ಷೇತ್ರದಲ್ಲಿ ಅಳವಡಿಸಕೊಂಡ ಕೊಟ್ಟಿಗೆ ಪದ್ಧತಿಯಲ್ಲಿ ಆಡು ಸಾಕಾಣಿಕೆ ಘಟಕಕ್ಕೆ ಶೈಕ್ಷಣಿಕ ಪ್ರವಾಸ ಹಮ್ಮಿಕೊಂಡಿದ್ದು, ಆಡುಗಳ ವಿವಿಧ ತಳಿಗಳ, ಮೇವಿನ ಘಟಕ, ವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಕೊಟ್ಟಿಗೆ ಮತ್ತು ಆಧುನಿಕ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.