ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಬದಲಾವಣೆ ವಿಚಾರ : ಸಿಂಹ ಮೂರ್ಖ ಎಂದ ಖಾದರ್
Team Udayavani, Feb 13, 2022, 6:34 PM IST
ಮೈಸೂರು : ಸಂಸದ ಪ್ರತಾಪ್ ಸಿಂಹರಷ್ಟು ಮೂರ್ಖ ಯಾರೂ ಇಲ್ಲ ಎಂದು ವಿಧಾನ ಸಭೆಯ ಉಪನಾಯಕ ಯು.ಟಿ.ಖಾದರ್ ಭಾನುವಾರ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಎಕ್ಸ್‌ಪ್ರೆಸ್ ರೈಲಿಗೆ ಯಾವುದೇ ಹೆಸರಿಟ್ಟರೂ ಟಿಪ್ಪು, ಒಡೆಯರ್ ಕೊಡುಗೆ ಮರೆಮಾಚಲು ಸಾಧ್ಯವಿಲ್ಲ.ಪ್ರತಾಪ್‌ಸಿಂಹ ಸಂಸದನಾದ ಮೇಲೆ ಎಷ್ಟು ಹೊಸ ಟ್ರ್ಯಾಕ್, ಹೊಸ ರೈಲು, ಹೊಸ ಜಂಕ್ಷನ್ ತಂದಿದ್ದಾರೆ.ಆ ಕೆಲಸ ನಿಮ್ಮದು, ಅದನ್ನ ಮೊದಲು ಹೇಳಿ ಎಂದು ಸವಾಲು ಹಾಕಿದರು.
ಹಿಜಾಬ್ ಬಿಟ್ಟು ಕಿತಾಬ್ ಕೇಳಿ ಎಂಬ ಪ್ರತಾಪ್‌ಸಿಂಹ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೂರ್ಖರ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ..?.ಅವನಿಗೆ ತಂದೆ ಮುಖ್ಯಾನ, ತಾಯಿ ಮುಖ್ಯಾನ ಅಂತ ಕೇಳಿದ್ರೆ ಉತ್ತರ ಸಿಗುತ್ತಾ.?.ಶಿಕ್ಷದ ಜೊತೆ ಭಯ ಇರುವವರು ಮಾತ್ರ ಅವರು ಸತ್ಪ್ರಜೆ ಆಗಲು ಸಾಧ್ಯ.
ಊಟ ಬೇಕಾ ನೀರು ಬೇಕಾ ಅಂದ್ರೆ ಆಗುತ್ತಾ..?ನೀವು ಪಾರಂಪರಿಕ , ಐತಿಹಾಸಿಕ ಮೈಸುರು ಸಂಸದ ಮೈಸೂರಿನ ಘನತೆ ಉಳಿಸಿ, ಅದಕ್ಕೆ ಕಪ್ಪುಚುಕ್ಕೆ ತರಬೇಡಿ ಎಂದರು.
ಎಲ್ಲರೂ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ. ಆದ್ರೆ ಪ್ರತಾಪ್‌ಸಿಂಹ ಸಮಸ್ಯೆಗೆ ಪರಿಹಾರ ಸಿಕ್ಕಾಗ ಸಮಸ್ಯೆ ಸೃಷ್ಟಿ ಮಾಡ್ತಾರೆ ಎಂದರು.
ನೋವಿನಿಂದ ಮಾತನಾಡುತ್ತಿದ್ದಾರೆ
ಪ್ಯಾಂಟ್ ಕೇಳಿದ್ರೆ ಚಡ್ಡಿ ಕೊಟ್ಟಿದ್ದಾರೆ ಎಂಬ ಸಿ.ಎಂ.ಇಬ್ರಾಹಿಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಖಾದರ್, ಅವರು ಅಪೇಕ್ಷೆ ಪಟ್ಟಿದ್ದು ಸಿಕ್ಕಿಲ್ಲ ಅಂತ ನೋವಿನಿಂದ ಮಾತನಾಡುತ್ತಿದ್ದಾರೆ. ಅವರು ಅಪೇಕ್ಷೆ ಪಟ್ಟಿದ್ದು ಪರಿಷತ್ ವಿಪಕ್ಷ ಸ್ಥಾನ.ನನ್ನದು ವಿಧಾನಸಭೆ, ಉಪ ನಾಯಕ ಸ್ಥಾನ ಕೊಟ್ಟಿದ್ದಾರೆ. ನಾನು ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷನಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ, ಕೆಪಿಸಿಸಿ ಸದಸ್ಯನಾಗಿ, ನಾಲ್ಕು ಶಾಸಕ, ಸಚಿವನಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ನನ್ನನ್ನ ಪಕ್ಷ ಗುರುತಿಸಿ ಉಪ ನಾಯಕ ಸ್ಥಾನ ಕೊಟ್ಟಿದೆ ಎಂದರು.
ಹಿಜಾಬ್ ವಿವಾದ : ಸರ್ವ ಪಕ್ಷ ಸಭೆ ಕರೆದು ಚರ್ಚೆ ಮಾಡಲಿ
ಎಲ್ಲವನ್ನೂ ನ್ಯಾಯಾಲಯವೇ ಬಗೆಹರಿಸಲು ಸಾಧ್ಯವಿಲ್ಲ.ಸರ್ಕಾರ ಕೂಡಲೇ ಧಾರ್ಮಿಕ ಮುಖಂಡರು,ಸರ್ವ ಪಕ್ಷಗಳ ಸಭೆ ನಡೆಸಬೇಕು. ಕೋರ್ಟ್ ಹೊರಗಡೆಯೇ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು.ಸರ್ಕಾರವೇ ಮುಂದೆ ನಿಂತು ಸಮಸ್ಯೆ ಬಗೆಹರಿಸಬೇಕು.ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಂತಹ ಯಾವುದೇ ಸಮಸ್ಯೆ ಇರಲಿಲ್ಲ.ಶಾಲೆ ಕಟ್ಟಲು ಸಾಕಷ್ಟು ಹಣ ಬರುತ್ತಿತ್ತು.ಇವತ್ತು ಬಿಜೆಪಿಯವರು ಒಂದು ಶಾಲೆ ಕಟ್ಟಿದ್ದಾರ.ಉಚಿತ ಲ್ಯಾಪ್‌ಟಾಪ್, ಹೆಚ್ಚಿನ ಸ್ಕಾಲರ್‌ಶಿಪ್ ಕೊಡುತ್ತಿದ್ವಿ.ಈ ಸೌಲಭ್ಯಗಳು ಬಿಜೆಪಿ ಸರ್ಕಾರದಲ್ಲಿದ್ಯ.?.ಶಿಕ್ಷಣ ಸಂಸ್ಥೆಗಳಲ್ಲಿ ಸಮಸ್ಯೆ ಉಂಟು ಮಾಡಿದ್ದು ಬಿಜೆಪಿ.ಹೆತ್ತವರಿಗೆ ಮಾತ್ರ ಮಕ್ಕಳ ನೋವು ಗೊತ್ತಾಗೋದು.ರಾಜ್ಯ ಸರ್ಕಾರ ಎಲ್ಲಾ ಜಾತಿ ವರ್ಗವನ್ನ ಒಟ್ಟಿಗೆ ಕೊಂಡೊಯ್ಯಬೇಕು.ನಿರ್ಭಯವಾಗಿ ವ್ಯಾಸಂಗ ಮಾಡಲು ಅವಕಾಶ ನೀಡಬೇಕು.ಕೂಡಲೇ ಸರ್ವ ಪಕ್ಷ ಸಭೆ ಕರೆದು ಚರ್ಚೆ ಮಾಡಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.