ಸೋಮವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ
Team Udayavani, Feb 14, 2022, 7:25 AM IST
ಮೇಷ:
ವಿದ್ಯಾರ್ಥಿಗಳಿಗೆ, ರಾಜಕೀಯ ನಾಯಕ ರಿಗೆ, ಧಾರ್ಮಿಕ ನಾಯಕರಿಗೆ ಶುಭ ಫಲ. ದೀರ್ಘ ಪ್ರಯಾಣದಿಂದ ಲಾಭ. ಆರೋಗ್ಯ ವೃದ್ಧಿ. ನೂತನ ಮಿತ್ರರ ಭೇಟಿ. ಸುಖ ಸಂತೋಷದಿಂದ ಕೂಡಿದ ದಿನ. ಆರ್ಥಿಕ ವಿಚಾರದಲ್ಲಿ ಸ್ತ್ರೀ ಸಹಾಯ.
ವೃಷಭ:
ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ಯಿಂದ ವೃದ್ಧಿ. ರಾಜಕೀಯ ನಾಯಕರಿಗೆ, ಆಹಾರೋದ್ಯಮ, ವಸ್ತ್ರ, ಆಭರಣ ವ್ಯವ ಹಾರಸ್ಥ ರಿಗೆ ಅಭಿವೃದ್ಧಿ. ನಿರೀಕ್ಷಿತ ಧನ ವೃದ್ಧಿ. ವಿದ್ಯಾರ್ಥಿ ಗಳಿಗೆ ನಿರೀಕ್ಷಿತ ಸಹಾಯ. ದಾಂಪತ್ಯ ಸುಖ ವೃದ್ಧಿ.
ಮಿಥುನ:
ಪಾಲುದಾರಿಕಾ ವ್ಯವಹಾರದಲ್ಲಿ ಸಮಾಧಾನ, ತಾಳ್ಮೆಯಿಂದ ಶ್ರೇಯಸ್ಸು. ನಿರೀಕ್ಷಿತ ಧನಾರ್ಜನೆ. ಸಹೋದರರಿಂದ ಸುಖ. ವಿದ್ಯಾರ್ಥಿಗಳಿಗೆ ಅಧ್ಯಯನ ನಿರತರಿಗೆ ಸೂಕ್ತ ಸಹಾಯ ಲಭ್ಯ. ಸಾಂಸಾರಿಕ ನೆಮ್ಮದಿಗೆ ತಾಳ್ಮೆ ಅಗತ್ಯ.
ಕಟಕ:
ಆರೋಗ್ಯ ಗಮನಿಸಿ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಆಸಕ್ತಿ. ಉತ್ತಮ ವಾಕ್ ಶಕ್ತಿಯಿಂದ ನಿರೀಕ್ಷಿತ ಧನಾಗಮ. ಭೂಮಿ ವಾಹನಾದಿ ಸುಖ. ಸ್ವಂತ ಪರಿಶ್ರಮದಿಂದ ಗುರಿ ಸಾಧಿಸಿದ ತೃಪ್ತಿ. ವಿದೇಶ ವ್ಯವಹಾರದಲ್ಲಿ ವಿಳಂಬ.
ಸಿಂಹ:
ಕಾರ್ಯ ನಿಮಿತ್ತ ದೀರ್ಘ ಪ್ರಯಾಣ. ಕೆಲಸ ಕಾರ್ಯಗಳಲ್ಲಿ ಅನಿರೀಕ್ಷಿತ ವೃದ್ಧಿ. ದೇಹಕ್ಕೆ ಶ್ರಮವಾದರೂ ಸಾಧಿಸಿದ ಸಂತೋಷ. ಗೃಹೋಪಕರಣ ವಸ್ತುಗಳಿಗೆ, ಧಾರ್ಮಿಕ ಕಾರ್ಯಗಳಿಗೆ ಧನ ವ್ಯಯಿಸಿದ ತೃಪ್ತಿ. ವಿದ್ಯಾರ್ಥಿಗಳಿಗೆ ಅಭಿವೃದ್ಧಿಯ ಸಮಯ.
ಕನ್ಯಾ:
ಮಿತ್ರರಲ್ಲಿ, ಪಾಲುದಾರರಲ್ಲಿ, ಸಾಂಸಾರಿಕ ವಿಚಾರದಲ್ಲಿ ಘರ್ಷಣೆಗೆ ಅವಕಾಶ ನೀಡದೇ ಕಾರ್ಯ ಸಾಧಿಸಿಕೊಳ್ಳಿ. ಜಲೋತ್ಪನ್ನ ವಸ್ತುಗಳಲ್ಲಿಯೂ ದೂರ ಪ್ರಯಾಣದ ಕಾರ್ಯಗಳಲ್ಲಿಯೂ ಉತ್ತಮ ಧನಾರ್ಜನೆ. ಆರೋಗ್ಯ ವೃದ್ಧಿ. ವಿದ್ಯಾರ್ಥಿಗಳಿಗೆ ಶ್ರಮದಿಂದ ಕಾರ್ಯಸಿದ್ಧಿ.
ತುಲಾ:
ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಲಾಭ. ಗೌರವಾದಿ ವೃದ್ಧಿ. ಎಲ್ಲರೂ ನೆನಪಿಡುವಂತಹ ಕಾರ್ಯಶೈಲಿ. ಸ್ವಾರ್ಜಿತ ಧನ ಸಂಪತ್ತು ವೃದ್ಧಿ. ಅನ್ಯರಿಂದ ಸಹಾಯ ನಿರೀಕ್ಷಿಸದಿರಿ. ಆರೋಗ್ಯ ಉತ್ತಮ. ಅವಿವಾಹಿತ ರಿಗೆ ವಿವಾಹ ಯೋಗ ಕೂಡಿಬರುವುದು.
ವೃಶ್ಚಿಕ:
ಅನಿರೀಕ್ಷಿತ ಧನ ಸಂಪತ್ತಿನ ವೃದ್ಧಿ. ಉತ್ತಮ ವಾಕ್ ಚತುರತೆಯಿಂದ ಕೂಡಿದ ಕಾರ್ಯವೈಖರಿ. ಬಂಧುಮಿತ್ರರ ಸಹಾಯ ಲಭಿಸದು. ನಿಮ್ಮ ಪರಿಶ್ರಮದಲ್ಲಿ ವಿಶ್ವಾಸವಿಟ್ಟು ಕಾರ್ಯ ಸಾಧಿಸಿ. ಮಕ್ಕಳಿಂದ ಸಂತೋಷ. ದಂಪತಿಗಳಲ್ಲಿ ಅನುರಾಗ ವೃದ್ಧಿ.
ಧನು:
ಕೆಲಸ ಕಾರ್ಯಗಳಲ್ಲಿ ಚಾಣಾಕ್ಷತನ, ಜವಾಬ್ದಾರಿಯಿಂದ ಯಶಸ್ಸು. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯದಿಂದ ನಷ್ಟ ಸಂಭವ. ವಿದ್ಯಾರ್ಥಿ ಗಳಿಗೆ ವಿಪುಲ ಅವಕಾಶ. ಪ್ರಗತಿಪರ ಬದಲಾವಣೆ. ಸರಕಾರೀ ಕಾರ್ಯಗಳಲ್ಲಿ ಪ್ರಗತಿ. ಮಿತ್ರರಿಂದ ಸಹಾಯ.
ಮಕರ:
ಮಕ್ಕಳ ನಿಮಿತ್ತ ಹೆಚ್ಚಿದ ಜವಾಬ್ದಾರಿ. ಮಾತಿನಲ್ಲಿ ತಾಳ್ಮೆ ಸಹಕಾರ ಅಗತ್ಯ. ಬಂಧು ಮಿತ್ರರಲ್ಲಿ ನಿಷ್ಠುರ ವರ್ತನೆ ಸಲ್ಲದು. ದೂರದ ವ್ಯವಹಾರ ಗಳಲ್ಲಿ ಆತುರದ ನಿರ್ಧಾರ ಮಾಡದಿರಿ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ದೀರ್ಘ ಪ್ರಯಾಣ ಸಂಭವ.
ಕುಂಭ:
ಸಣ್ಣ ಪ್ರಯಾಣ ಸಂಭವ. ಅಧ್ಯಯನ ದಲ್ಲಿ ಮಗ್ನತೆ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ. ಆರೋಗ್ಯ ಗಮನಿಸಿ. ಸಾಂಸಾರಿಕ ಸುಖ ಮಧ್ಯಮ. ದೂರದ ಮಿತ್ರರ ಭೇಟಿ. ಗುರುಹಿರಿಯರ ಸಹಕಾರ ಮಾರ್ಗದರ್ಶನದ ಲಾಭ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ ಲಭ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
MUST WATCH
ಹೊಸ ಸೇರ್ಪಡೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!
Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.