ಬಿಜೆಪಿ ಬಲವರ್ಧನೆ ವಿಸ್ತಾರಕ ಅಭಿಯಾನ
Team Udayavani, Feb 14, 2022, 2:23 PM IST
ಬೀದರ: ಬೂತ್ ಮಟ್ಟದಲ್ಲಿ ಸದ್ಯದ ಸಂಘಟನೆ ಸ್ಥಿತಿಗತಿ ಕುರಿತು ಪರಿಶೀಲನೆ ಮಾಡಿ ಬಿಜೆಪಿಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ “ಸಶಕ್ತ ಬೂತ್ ಸದೃಢ ಭಾರತ’ ಘೋಷ್ಯ ವಾಕ್ಯದಡಿ ವಿಸ್ತಾರಕ ಅಭಿಯಾನ ಆಯೋಜಿಸಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳೂ ಆದ ಎಂಎಲ್‌ಸಿ ಎನ್. ರವಿಕುಕಮಾರ ಹೇಳಿದರು.
ರಾಜ್ಯದ 312 ಮಂಡಲ, 60 ಸಾವಿರ ಬೂತ್‌ಗಳಲ್ಲಿ ಈಗಾಗಲೇ ಅಭಿಯಾನ ಆರಂಭಿಸಲಾಗಿದೆ. ಪಕ್ಷದ ಸಂಘಟನೆ ಹಾಗೂ ಬರುವ ವಿಧಾನಸಭೆ ಚುನಾವಣೆ ಹಿತದೃಷ್ಟಿಯಿಂದ ಅಭಿಯಾನ ಆರಂಭಿಸಲಾಗಿದೆ ಎಂದು ರವಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಭಿಯಾನ ನಿಮಿತ್ತ ಪ್ರತಿ ಮಂಡಲದಿಂದ ಕನಿಷ್ಠ 25 ವಿಸ್ತರಕರನ್ನು ನೇಮಕ ಮಾಡಲಾಗುವುದು. ಇವರು ಬೇರೆ ಮಂಡಲಕ್ಕೆ ಹೋಗಿ, ಅಲ್ಲಿ ಮೂರು ದಿನ ಇದ್ದುಕೊಂಡು ಬೂತ್ ಮತ್ತು ಪೇಜ್ ಕಮಿಟಿ ಪರಿಶೀಲನೆ ಹಾಗೂ ಅಲ್ಲಿನ ಬೂತ್ ನಲ್ಲಿ ಪಕ್ಷದ ಸಂಘಟನೆ ಹೇಗಿದೆ ಎನ್ನುವ ಬಗ್ಗೆ ಸಮಗ್ರವಾದ ವರದಿಯನ್ನು ರಾಜ್ಯಕ್ಕೆ ಕಳುಹಿಸುವರು. ಮಾರ್ಚ್ ತಿಂಗಳ ಒಳಗೆ ಈ ಅಭಿಯಾನ ಪೂರ್ಣಗೊಂಡ ನಂತರ ರಾಜ್ಯ ನಾಯಕರ ಪ್ರವಾಸ ಮಾಡಲಿದ್ದಾರೆ. ಒಬ್ಬ ವಿಸ್ತಾರಕ ಐದು ಬೂತ್ ಗಳಿಗೆ ಹೋಗಿ ವರದಿ ನೀಡಲಿದ್ದಾರೆ ಎಂದು ಹೇಳಿದರು.
ಮೈಕ್ರೋ ಕಲೆಕ್ಷನ್ ಅಭಿಯಾನ
ಪಕ್ಷವನ್ನು ಸದೃಢಗೊಳಿಸಲು ಬಿಜೆಪಿಯಿಂದ ದೇಶಾದ್ಯಂತ ಮೈಕ್ರೋ ಕಲೆಕ್ಷನ್ ಅಭಿಯಾನ ಸಹ ಹಮ್ಮಿಕೊಳ್ಳಲಾಗಿದೆ. ಇದು ಕಾರ್ಯಕರ್ತರ ಪಕ್ಷ ಎನ್ನುವ ಭಾವನೆ ಪ್ರತಿಯೊಬ್ಬ ಕಾರ್ಯಕರ್ತರು, ಹಿತೈಷಿಯಲ್ಲಿ ಬರುವಂತೆ ತನು, ಮನ, ಧನದಿಂದ ಸಹಾಯ ಮಾಡಿವ ಉದ್ದೇಶದಿಂದ ಸಣ್ಣ ಮೊತ್ತದ ಹಣ ಸಂಗ್ರಹ ಅಭಿಯಾನ ಇದಾಗಿದೆ. ಕನಿಷ್ಠ 5ರಿಂದ ಗರಿಷ್ಠ 1 ಸಾವಿರ ರೂ. ವರೆಗೆ ಪಕ್ಷಕ್ಕೆ ಆನ್‌ಲೈನ್ ಮೂಲಕ ದೇಣಿಗೆ ನೀಡಬೇಕು. ಹೆಚ್ಚು ಮೊತ್ತ ಸಂಗ್ರಹ ಮಾಡಲ್ಲ, ಹೆಚ್ಚು ಜನರಿಂದ ಸಂಗ್ರಹ ಮಾಡುವ ಉದ್ದೇಶ ಹೊಂದಲಾಗಿದೆ. ವಿಸ್ತಾರಕರು ನಮೋ ಆ್ಯಪ್ ಮೂಲಕ ದೇಣಿಗೆ ಸಂಗ್ರಹ ಮಾಡುತ್ತಿದ್ದು, ಮಾರ್ಚ್ ವರೆಗೆ ಈ ಅಭಿಯಾನ ನಡೆಯಲಿದೆ ಎಂದರು.
ರಾಜ್ಯದಲ್ಲಿ ಅಭ್ಯಾಸ ವರ್ಗಗಳು ನಡೆಯುತ್ತಿವೆ. ಮಾ.15ರೊಳಗೆ ಎಲ್ಲ ಜಿಲ್ಲೆ, ಮಂಡಲದಲ್ಲಿ ಅಭ್ಯಾಸ ವರ್ಗಗಳ ಮಾಡಿ, ಪಕ್ಷದ ನಡೆದು ಬಂದು ದಾರಿ ಹಾಗೂ ಮುಂದಿನ ಯೋಜನೆ ಕುರಿತು ಸಮಗ್ರವಾಗಿ ಚರ್ಚೆ ನಡೆಸಲಾಗುವುದು. ಹುಮನಾಬಾದ್ ಸಮೀಪದ ಮಾಣಿಕ ನಗರದಲ್ಲಿ ಮಾ.5ರಿಂದ ಮೂರು ದಿನಗಳ ಕಾಲ ಜಿಲ್ಲಾಮಟ್ಟದ ಅಭ್ಯಾಸ ವರ್ಗ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಪ್ರಧಾನ ಕಾರ್ಯದರ್ಶಿ ಅರಹಂದ ಸಾವಳೆ, ವಕ್ತಾರ ಶಿವಪುತ್ರ ವೈದ್ಯ, ಬಸವರಾಜ ಜೋಜನಾ, ಶ್ರೀನಿವಾಸ ಚೌದ್ರಿ ಇತರರಿದ್ದರು.
ಸಮಗ್ರ ತನಿಖೆ ಆಗಲಿ ಹಿಜಾಬ್ ವಿವಾದ ಪೂರ್ವ ನಿಯೋಜಿತವಾಗಿದ್ದು, ಈ ವಿವಾದ ಆರಂಭ ಮತ್ತು ಇದಕ್ಕೆ ಪ್ರಚೋದನೆ ನೀಡಿದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ ಆಗ್ರಹಿಸಿದರು.
ಮೊದಲ ಬಾರಿ ಉಡುಪಿ ಜಿಲ್ಲೆಯ ಕಾಲೇಜಿನಲ್ಲಿ ಹಿಜಾಬ್ ವಿವಾದ ಆರಂಭವಾಗಿದೆ. ಅಲ್ಲಿನ 6 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬರಲು ಸಿಎಫ್‌ಐ, ಪಿಎಫ್‌ಐ ಸಂಘಟನೆಗಳು ತರಬೇತಿ ನೀಡಿವೆ. ಈ ಬಗ್ಗೆ ತನಿಖೆ ನಡೆಸಬೆಕು ಎಂದರು. ಧರ್ಮಗಳ ಸಂಪ್ರದಾಯವನ್ನು ಮನೆಯಲ್ಲಿ ಇರಲಿ. ಪೊಲೀಸ್, ಕೆಎಸ್‌ಆರ್‌ಟಿಸಿ ಮಾದರಿಯಂತೆ ಶಾಲಾ, ಕಾಲೇಜು ಮತ್ತು ಸರ್ಕಾರಿ ಕಚೇರಿಯಲ್ಲಿ ನಿಗದಿಪಡಿಸಿದ ಸಮವಸ್ತ್ರ ಧರಿಸಿಕೊಂಡು ಬಂದರೆ ಏಕತೆ, ಅಖಂಡತೆ ಇರಲಿದೆ ಎಂದರು.
ಸಮವಸ್ತ್ರ ವಿಯಷದಲ್ಲಿ ಹೈಕೋಟ್ ಆದೇಶಕ್ಕೆ ಎಲ್ಲರೂ ಬದ್ಧರಾಗಬೇಕು. ಮಕ್ಕಳಿಗೆ ಶೈಕ್ಷಣಿಕವಾಗಿ ತೊಂದರೆ ಆಗದಂತೆ ಪಾಲಕರು ಮತ್ತು ಧಾರ್ಮಿಕ ಗುರುಗಳು ಮಕ್ಕಳಿಗೆ ತಿಳಿಹೇಳಬೇಕು ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.