ತರಕಾರಿ ಮಾರುಕಟ್ಟೆ ಮಳಿಗೆ ಸದ್ಬಳಕೆಯಾಗಲಿ
Team Udayavani, Feb 14, 2022, 3:21 PM IST
ಸುರಪುರ: ಧೂಳು, ಮಳೆ, ಬಿಸಿಲಿನಿಂದ ತರಕಾರಿ ಮಾರಾಟುಗಾರರು ಸಮಸ್ಯೆ ಎದುರಿಸುವಂತಾಗಿತ್ತು. ಇದನ್ನು ಗಮನಿಸಿ 2.36 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ 53 ಮಳಿಗೆಗಳನ್ನು ನಿರ್ಮಿಸಿ ಕೊಡಲಾಗಿದೆ. ಮಾರಾಟಗಾರರು ಇದರ ಸದ್ಬಳಿಕೆ ಮಾಡಿಕೊಳ್ಳಬೇಕು ಎಂದು ಶಾಸಕ ರಾಜುಗೌಡ ಹೇಳಿದರು.
ಇಲ್ಲಿಯ ನಗರಸಭೆಯ ನಗರೋತ್ಥಾನ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿರುವ 53 ನೂತನ ಮಳಿಗೆಗಳನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿ, ಈಗಾಗಲೇ 58 ಜನ ಮಾರಾಟಗಾರರ ಪಟ್ಟಿ ನಗರಸಭೆ ಬಳಿ ಇದೆ. ಮಳಿಗೆಗಳನ್ನು ಪಡೆದುಕೊಳ್ಳಲು ಅವರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಕಾಂಕ್ಷಿಗಳು ಹೆಚ್ಚಾದರೆ ಡ್ರಾ ಮೂಲಕ ಮಳಿಗೆಗಳನ್ನು ಹಂಚಿಕೆ ಮಾಡಲಾಗುವುದು. ಇದಕ್ಕೆ ಮಾರಾಟಗಾರರು ಸಹಕರಿಸಬೇಕು ಎಂದರು.
ಅಧಿಕಾರಿಗಳು ಮಾರಾಟಗಾರರಿಗೆ ಹೊರೆಯಾಗದಂತೆ ನ್ಯಾಯಯುತವಾದ ದರ ನಿಗದಿಪಡಿಸಬೇಕು. ಶಿಸ್ತುಬದ್ಧವಾಗಿ ವ್ಯಾಪಾರ ಮಾಡಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಮತ್ತು ಮೂಲಭೂತ ಸೌಕರ್ಯ ಒದಗಿಸಿ ಅವರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಾಕೀತು ಮಾಡಿದರು.
ನಗರಸಭೆ ಅಧ್ಯಕ್ಷೆ ಸುಜಾತಾ ಜೇವರ್ಗಿ, ಉಪಾಧ್ಯಕ್ಷ ಮಹೇಶ ಪಾಟೀಲ್, ನಗರ ಯೋಜನಾ ನಿರ್ದೇಶಕ ಶಾಲಂ ಹುಸೇನ್, ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ವಿಪ ನಾಯಕ ರಾಜಾ ಪಿಡ್ಡನಾಯಕ (ತಾತಾ), ನಯೋಪ್ರಾ ಅಧ್ಯಕ್ಷ ಪ್ರಕಾಶ ಸಜ್ಜನ್, ಪ್ರಮುಖರಾದ ರಾಜಾ ಹನುಮಪ್ಪನಾಯಕ, ಡಾ| ಸುರೇಶ ಸಜ್ಜನ್, ರಾಜಾ ಮುಕುಂದನಾಯಕ, ನಗರಸಭೆ ಸದಸ್ಯರಾದ ವೇಣುಮಾಧವನಾಯಕ, ಮಾನಪ್ಪ ಚೆಳ್ಳಿಗಿಡ, ನರಸಿಂಹಕಾಂತ ಪಂಚಮಗಿರಿ, ವಿಷ್ಣು ಗುತ್ತೇದಾರ್ ಸೇರಿ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.