ಸಮಗ್ರ-ಮಿಶ್ರ ಕೃಷಿ ಪದ್ಧತಿ ಅನುಸರಿಸಿ
Team Udayavani, Feb 14, 2022, 6:19 PM IST
ಬಸವನಬಾಗೇವಾಡಿ: ರೈತರು ಸಮಗ್ರ ಹಾಗೂ ಮಿಶ್ರ ಕೃಷಿ ಪದ್ಧತಿ ಅನುಸರಿಸುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ವಿಜಯಪುರ ಕೃಷಿ ವಿಸ್ತಾರಣಾ ಸಹ ನಿರ್ದೇಶಕ ಡಾ| ರವೀಂದ್ರ ಬೆಳ್ಳಿ ಹೇಳಿದರು.
ರವಿವಾರ ತಾಲೂಕಿನ ಯಂಭತ್ನಾಳ ಗ್ರಾಮದ ಶಿವಾನಂದ ಮಂಗಾನವರ ತೋಟದಲ್ಲಿ ನಡೆದ ದ್ರಾಕ್ಷಿ ಬೆಳೆ ಕ್ಷೇತ್ರೋತ್ಸವ, ಒಣ ದ್ರಾಕ್ಷಿ ಘಟಕ ಉದ್ಘಾಟನೆ ಹಾಗೂ ಪ್ರಗತಿ ಪರ ರೈತರಿಂದ ಅನುಭವ ಹಂಚಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೃಷಿ ಚಟುವಟಿಕೆಗಳಿಗೆ ಕೂಲಿ ಕೆಲಸದವರು ಸಿಗದೆ ಹಾಗೂ ಬೆಳೆದ ಬೆಳೆಗೆ ಸಮರ್ಪಕವಾಗಿ ಬೆಲೆ ಸಿಗದೆ ಇರುವುದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ. ರೈತರು ಕೇವಲ ಒಂದೇ ಬೆಳೆಗೆ ಅವಲಂಬಿತರಾಗದೆ ಸಮಗ್ರ ಮತ್ತು ಮಿಶ್ರ ಬೆಳೆಗಳನ್ನು ಬೆಳೆದರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರೈತರು ಮಿಶ್ರ ಬೆಳೆಯತ್ತ ಗಮನ ಹರಿಸಬೇಕು ಎಂದು ಹೇಳಿದರು.
ರೈತರು ಕೃಷಿ ಚಟುವಟಿಕೆಯೊಂದಿಗೆ ಹೈನುಗಾರಿಕೆ, ಕುರಿ ಕೋಳಿ, ಮೀನು, ಇನ್ನಿತರ ಸಾಗಾಣಿಕೆ ಮಾಡುವದರ ಜೊತೆಗೆ ಏರೆ ಹುಳ ಸಾಗಾಣಿಕೆ ಮಾಡಬೇಕು. ಜೈವಿಕ ಗೊಬ್ಬರ ಕೃಷಿಗೆ ಬಳಸಬೇಕು. ರಾಸಾಯನಿಕ ಗೊಬ್ಬರದಿಂದ ರೈತರು ದೂರಾದಷ್ಟು ಉತ್ತಮ ಬೆಳೆ ಬೆಳೆಯಲು ಸಾಧ, ಜತೆಗೆ ಭೂಮಿಯ ಫಲವತ್ತತೆ ಕೂಡಾ ಹೆಚ್ಚಾಗುತ್ತದೆ ಎಂದರು.
ಸಾವಯುವ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ. ರೈತರು ಕೃಷಿ ಮಾಡುವ ಮೊದಲು 3 ಜ್ಞಾನವನ್ನು ಹೊಂದಿರಬೇಕು. ಉತ್ತಮವಾದ ಬೀಜ, ಕೃಷಿ ತರಬೇತಿ ಪಡೆಯಬೇಕು. ತಾವು ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ ಮಾಡಬೇಕು. ಅಂದಾಗ ಮಾತ್ರ ಆರ್ಥಿಕವಾಗಿ ರೈತರು ಸದೃಢರಾಗಲು ಸಾಧ್ಯ ಎಂದು ಹೇಳಿದರು.
ಹಿರಿಯ ಸಾಹಿತಿ ಶಂಕರ ಬೈಚಬಾಳ ಮಾತನಾಡಿ, ಕೃಷಿ ಬದುಕಿಗೂ ಕನ್ನಡ ಜಾನಪದ ಸಾಹಿತ್ಯಕ್ಕೂ ಅನನ್ಯ ಸಂಬಂಧವಿದೆ. ಜಾನಪದ ಕಲೆ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯದಲ್ಲಿ ರೈತ ಬಂಧುಗಳು ನಿರಂತರವಾಗಿದ್ದಾರೆ. ರೈತನಿಗೆ 3 ತಾಳಗಳು ಇರುತ್ತವೆ. ಒಂದು ತಾಳು ರೈತನಿಗಾಗದೆ. ಇನ್ನೊಂದು ತಾಳು ಸಮಾಜಕ್ಕೆ, ದಾಸೋಹ ಪ್ರೇಮಕ್ಕೆ ಸರ್ಕಾರಕ್ಕೆ ಮೀಸಲಾದರೆ, ಮತ್ತೊಂದು ತಾಳು ಪಕ್ಷಿ ಪ್ರಾಣಿಗಳಿಗೆ ಹೋಗುತ್ತದೆ. ದೇಶಕ್ಕೆ ಅನ್ನ ನೀಡುವ ಕೆಲಸಲ್ಲಿ ರೈತ ನಿರಂತರವಾಗಿ ತನ್ನ ಸೇವೆಯನ್ನು ಸಲ್ಲಿಸುತ್ತಾನೆ ಎಂದರು.
ಡೋಣೂರ ಗ್ರಾಪಂ ಅಧ್ಯಕ್ಷ ರವಿ ಮ್ಯಾಗೇರಿ, ಜಿಲ್ಲಾ ಕಜಾಪ ಅಧ್ಯಕ್ಷ ಬಾಳನಗೌಡ ಪಾಟೀಲ, ಸರ್ಕಾರಿ ನೌ.ಸಂ. ಜಿಲ್ಲಾಧ್ಯಕ್ಷ ಸುರೇಶ ಶಿರಸ್ಯಾಡ, ರೈತ ಮುಖಂಡ ಬಾಪುಗೌಡ ಪಾಟೀಲ, ತಾಪಂ ಮಾಜಿ ಸದಸ್ಯ ಸುಭಾಷ್ ಕಲ್ಯಾಣಿ, ಶಿವನಗೌಡ ಬಿರಾದಾರ, ಸದಾನಂದ ದೇಸಾಯಿ, ಶರಣು ಮಾಸಾಳಿ, ಬಾಪುಗೌಡ ಬಿರಾದಾರ, ಕಲ್ಲನಗೌಡ ಬಿರಾದಾರ, ಅಜಯ ಅಜೀರ್ಮಿ, ಶೇಕರಗೌಡ ಅಂಗಡಿ, ಎಂ.ಎನ್. ಯಾಳವಾರ, ಎಂ.ಬಿ. ತೋಟದ, ಕಲ್ಲಣ್ಣ ದೇಸಾಯಿ ಸೇರಿದಂತೆ ಅನೇಕರು ಇದ್ದರು. ಶಿವಾನಂದ ಮಂಗಾನವರ ಸ್ವಾಗತಿಸಿದರು. ಎಸ್.ಐ. ಬಿರಾದಾರ, ಶಿವಾನಂದ ಮಡಿಕೇಶ್ವರ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
Vijayapura: ವಕ್ಫ್ ವಿರುದ್ಧ ಹಲವು ಮಠಾಧೀಶರ ನೇತೃತ್ವದಲ್ಲಿ ಹೋರಾಟ
Waqf Issue: ಲ್ಯಾಂಡ್ ಟೆರರಿಸಂ, ಲ್ಯಾಂಡ್ ಜಿಹಾದ್ ನಿಂದ ಬಚಾವಾಗಬೇಕು: ಶೋಭಾ ಕರಂದ್ಲಾಜೆ
Waqf Property: ಬೊಮ್ಮಾಯಿ ಕಾಲದಲ್ಲೂ ವಕ್ಫ್ ಆಸ್ತಿ ತೆರವಿಗೆ ಹೇಳಿದ್ರು: ಸಚಿವ ಜಮೀರ್
Vijayapura: ವಕ್ಫ್ ವಿವಾದ… ನಾಳೆಯಿಂದ ಅಹೋರಾತ್ರಿ ಧರಣಿ ಆರಂಭ: ಶಾಸಕ ಯತ್ನಾಳ
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.