ಟ್ರೇಲರ್, ಟೀಸರ್ ಹಬ್ಬ: ಬ್ಯಾಕ್ ಟು ಬ್ಯಾಕ್ ರಿಲೀಸ್
Team Udayavani, Feb 15, 2022, 1:21 PM IST
ಚಿತ್ರರಂಗ ಚಿಗುರಿದೆ. ನಿಧಾನವಾಗಿ ಚೇತರಿಕೆಯತ್ತ ಮುಖ ಮಾಡುತ್ತಿದೆ. ಪರಿಣಾಮವಾಗಿ ಬಿಡುಗಡೆಯ ಕಾತುರದಲ್ಲಿದ್ದ ಸಿನಿಮಾಗಳೆಲ್ಲವೂ ಈಗ ಟ್ರ್ಯಾಕ್‌ಗೆ ಮರಳಿದೆ. ಒಂದರ ಹಿಂದೊಂದರಂತೆ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿವೆ.
ಮೊದಲ ಹಂತವಾಗಿ ತಮ್ಮ ಚಿತ್ರಗಳನ್ನು ಪ್ರೇಕ್ಷಕರಿಗೆ ತಲುಪಿಸಲು ಚಿತ್ರತಂಡಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ತಮ್ಮ ಸಿನಿಮಾಗಳ ಟೀಸರ್, ಟ್ರೇಲರ್, ಸಾಂಗ್, ಫಸ್ಟ್ ಲುಕ್ .. ಹೀಗೆ ರಿಲೀಸ್ ಮಾಡುತ್ತಿವೆ. ಕಳೆದ ಒಂದೆರಡು
ವಾರಗಳಿಂದ ಕನ್ನಡ ಚಿತ್ರರಂಗದಲ್ಲಿ ಟೀಸರ್, ಟ್ರೇಲರ್, ಸಾಂಗ್, ಫಸ್ಟ್‌ಲುಕ್‌ಗಳು ಸಾಲು ಸಾಲು ಬಿಡುಗಡೆಯಾಗುತ್ತಿದ್ದು, ಈ ಮೂಲಕ ತಮ್ಮ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನದಲ್ಲಿ ತೊಡಗಿವೆ.
ಇದನ್ನೂ ಓದಿ:ಮೊದಲ ಚಿತ್ರದ ಖುಷಿಯಲ್ಲಿ ಗಾನವಿ
ಈಗಗಾಲೇ ಪುನೀತ್ ರಾಜ್‌ಕುಮಾರ್ ಅವರ “ಜೇಮ್ಸ್’ ಚಿತ್ರದ ಟೀಸರ್ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಜೊತೆಗೆ “ಬೈ ಟು ಲವ್’, “ಏಕ್ ಲವ್ ಯಾ’, “ಓಲ್ಡ್ ಮಾಂಕ್’, “ಬಹುಕೃತ ವೇಷಂ’, “ಮನಸಾಗಿದೆ’, “ರಾಣಾ’, “ವರದ’, “ಮ್ಯಾಟ್ನಿ’, “ತೋತಾಪುರಿ’, “ಶಿವ 143”, “ಶೋಕಿವಾಲ’, “ಗೌಳಿ’, “ನೆನಪಾಗುತ್ತಿಲ್ಲ’, “ನೋಡಿ ಸ್ವಾಮಿ ಇವನು ಇರೋದೇ ಹೀಗೆ’, “ಗುರು ಶಿಷ್ಯರು’, “ಅದ್ಧೂರಿ ಲವರ್’, “ಅತ್ಯುತ್ತಮ’ ಚಿತ್ರಗಳ ಟ್ರೇಲರ್, ಟೀಸರ್, ಸಾಂಗ್ ಹಾಗೂ ಫಸ್ಟ್‌ಲುಕ್ ರಿಲೀಸ್ ಆಗಿ ಸದ್ದು ಮಾಡುತ್ತಿವೆ.
ಬಿಡುಗಡೆಯಾಗಿರುವ ಒಂದೊಂದು ಟ್ರೇಲರ್, ಟೀಸರ್ ಕೂಡಾ ಪ್ರೇಕ್ಷಕರನ್ನು ಸೆಳೆಯುವಂತಿದೆ. ತಮ್ಮ ಒಟ್ಟು ಪ್ರಯತ್ನವನ್ನು ಐದಾರು ನಿಮಿಷ ಟ್ರೇಲರ್‌ನಲ್ಲಿ ಕಟ್ಟಿಕೊಡೋದು ಕಷ್ಟ ಹಾಗೂ ನಿರ್ದೇಶಕನಿಗೆ ಟ್ರೇಲರ್ ಕಟ್ ಮಾಡೋದು ಒಂದು ಸವಾಲು ಕೂಡಾ. ಆದಷ್ಟು ಬೆಸ್ಟ್ ಶಾಟ್ಸ್ ಹಾಕಿ ಟ್ರೇಲರ್ ಬಿಡಲಾಗುತ್ತದೆ. ಸದ್ಯ ಫೆ.18 ಹಾಗೂ ಫೆ.24ರಂದು ಒಂದಷ್ಟು ಸಿನಿಮಾಗಳು ಬಿಡುಗಡೆಯಾಗುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.