ನಂದಿಗಿರಿ ಧಾಮದಲ್ಲಿ ಪ್ರೇಮಿಗಳ ಕಲರವ
Team Udayavani, Feb 15, 2022, 1:16 PM IST
ಚಿಕ್ಕಬಳ್ಳಾಪುರ: ಬಡವರ ಊಟಿ ಎಂದೇ ಖ್ಯಾತಿ ಗಳಿಸಿರುವ ನಂದಿಗಿರಿಧಾಮಕ್ಕೆ ಪ್ರೇಮಿಗಳ ದಿನಾಚರಣೆ ಅಂಗವಾಗಿ ನೂರಾರು ಪ್ರೇಮಿಗಳು, ನವ ದಂಪತಿ ಭೇಟಿ ನೀಡಿ, ಇಲ್ಲಿನ ಪ್ರಾಕೃತಿಕ ಸೌಂದರ್ಯ, ಸೂರ್ಯೋದಯದ ದರ್ಶನ ಮಾಡಿ ಸಂತಸ ಹಂಚಿಕೊಂಡರು.
ಬೆಂಗಳೂರಿಗೆ ಸಮೀಪದಲ್ಲೇ ಇರುವ ಈ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಪ್ರತಿ ದಿನವೂ ರಾಜ್ಯದ ವಿವಿಧೆಡೆಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಪ್ರೇಮಿಗಳ ದಿನಆಗಿದ್ದರಿಂದ ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿಯುವ ಜೋಡಿಗಳು ಆಗಮಿಸಿ, ಇಲ್ಲಿನ ಪ್ರಾಕೃತಿಕಸೌಂದರ್ಯ ಸವಿದು, ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೊರೊನಾ ಸೋಂಕುನಿಯಂತ್ರಿಸುವ ಸಲುವಾಗಿ ಜಿಲ್ಲಾಡಳಿತ ನಂದಿಗಿರಿಧಾಮದಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಇತರೆ ದಿನಗಳಲ್ಲಿ ಕೋವಿಡ್ ನಿಯಮ ಪಾಲಿಸಿಕೊಂಡುಪ್ರವಾಸಿ ತಾಣಕ್ಕೆ ಬರಲು ಅವಕಾಶ ನೀಡಿರುವುದರಿಂದಸೋಮವಾರ ಚುಮುಚುಮು ಚಳಿಯ ನಡುವೆಪ್ರೇಮಿಗಳು, ನವದಂಪತಿ ನಾಗರಿಕರು ಸೂರ್ಯೋ ದಯದ ಸೊಬಗನ್ನು ಕಣ್ಣು ತುಂಬಿಕೊಂಡರು.
ಪ್ರವೇಶ ಶುಲ್ಕ ಹೆಚ್ಚಳ: ನಂದಿಗಿರಿಧಾಮಕ್ಕೆ ಬರುವ ಪ್ರವಾಸಿಗರನ್ನು ಬೆಟ್ಟದ ಮೇಲ್ಭಾಗಕ್ಕೆ ಕರೆದೊಯ್ಯಲು ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಬಸ್‌ನಸೌಕರ್ಯ ಒದಗಿಸಲಾಗಿದೆ. ಸಹಜವಾಗಿ ಟ್ರಾಫಿಕ್ ಜಾಮ್‌ನ ಸಮಸ್ಯೆಗೆ ಬಹುತೇಕ ಕಡಿವಾಣ ಬಿದ್ದಂತಾಗಿದೆ. ಆದರೆ, ಪ್ರವಾಸಿಗರು ಸಹ ದುಬಾರಿಪ್ರವೇಶ ಶುಲ್ಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಈಕುರಿತು ಇಲಾಖೆ ಸಚಿವರ ಗಮನಕ್ಕೂ ಹೋಗಿದೆ. ಅವರು ಅತೀ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
ರೋಪ್‌ವೇ ಸೌಲಭ್ಯ: ಜಿಲ್ಲೆಯ ನಂದಿಗಿರಿಧಾಮಕ್ಕೆ ಇತ್ತೀಚಿಗೆ ಭೇಟಿ ನೀಡಿದ ಪ್ರವಾಸೋದ್ಯಮ ಸಚಿವಆನಂದ್‌ಸಿಂಗ್, ಇಲ್ಲಿನ ಕೆಲವೊಂದು ಅವ್ಯವಸ್ಥೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಜಿಲ್ಲೆಯ ಜನರ ಬಹುನಿರೀಕ್ಷಿತ ನಂದಿಗಿರಿಧಾಮಕ್ಕೆ ರೋಪ್ ವೇ ನಿರ್ಮಾಣದ ಕನಸು ನನಸು ಆಗಲಿದೆ ಜೊತೆಗೆ ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಧಕ್ಕೆ ಆಗದಂತೆ ಯೋಜನೆ ರೂಪಿಸುವುದರ ಜೊತೆಗೆ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ಯೋಜನೆ ಸಹ ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು.
ಮರೆಯಲಾಗದ ದಿನ: ಹೆಸರೇಳಲಿಚ್ಚಿಸದ ಪ್ರೇಮವಿವಾಹವಾದ ದಂಪತಿ ಮಾತನಾಡಿ, ನಮ್ಮ ಪಾಲಿಗೆ ಫೆ.14 ವಿಶೇಷವಾಗಿದೆ. ಅಂದು ಪ್ರಾಕೃತಿಕಸೌಂದರ್ಯ ತಾಣಗಳಿಗೆ ಭೇಟಿ ನೀಡುತ್ತೇವೆ. ಮದುವೆಗೂ ಮೊದಲು ಪ್ರವಾಸಿ ಕೇಂದ್ರಗಳಿಗೆ ಭೇಟಿನೀಡಿ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದವು ಎಂದು ಹೇಳಿದರು.
ಪ್ರೇಮಿಗಳ ದಿನ ಆಚರಣೆ ಮಾಡಬೇಕೇ, ಬೇಡವೆ,ಎಂಬ ಪರ ಮತ್ತು ವಿರೋಧಗಳು ಮುಂದುವರಿದಿರುವಈ ದಿನಗಳಲ್ಲಿ ಪ್ರೇಮಿಗಳು ಮಾತ್ರ ಪ್ರವಾಸಿ ತಾಣಗಳತ್ತಮುಖ ಮಾಡುವುದು, ಇಲ್ಲಿನ ಪ್ರಾಕೃತಿಕ ಸೌಂದರ್ಯ ಕಣ್ಣು ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.