ಪ್ರೇಮಿಗಳ ದಿನ 100ನೇ ಅಂತರ್ಜಾತಿ ವಿವಾಹ


Team Udayavani, Feb 15, 2022, 1:23 PM IST

ಪ್ರೇಮಿಗಳ ದಿನ 100ನೇ ಅಂತರ್ಜಾತಿ ವಿವಾಹ

ಕೋಲಾರ: ಅಂತರ್‌ಜಾತಿ, ಧರ್ಮಿಯ ಮದುವೆಗಳ ಕಾರಣ ಮರ್ಯಾದಾ ಹತ್ಯೆಗಳು ದೇಶಾದ್ಯಂತ ಆಗಾಗ್ಗೆ ನಡೆಯುತ್ತಿರುತ್ತವೆ. ಅದಕ್ಕೆ ಬ್ರೇಕ್‌ ಹಾಕಲು ಕೋಲಾರ ಜಿಲ್ಲೆ ಸಂಘಟನೆಯೊಂದು ಆರಂಭವಾದಐದೇ ವರ್ಷಗಳಲ್ಲಿ ನೂರು ಯಶಸ್ವಿ ಅಂತರ್ಜಾತಿ ವಿವಾಹ ನೆರವೇರಿಸಿ ದಾಖಲೆ ಬರೆದಿದೆ.

ಕೋಲಾರದ ಕೆ.ಎಂ.ಸಂದೇಶ್‌ ಸಾಮಾಜಿಕ ಹೋರಾಟಗಳ ಗುರಿ ಇಟ್ಟುಕೊಂಡು ಅಂಬೇಡ್ಕರ್‌ ಸೇವಾ ಸಮಿತಿ ಕರ್ನಾಟಕ ಸಂಘಟನೆ ಜನವರಿ 13, 2017ರಂದು ಆರಂಭಿಸಿದ್ದರು. ಮೊದಲು ಸಂಘಟನೆಮುಖ್ಯ ಉದ್ದೇಶ ದಲಿತರು, ಮಹಿಳೆಯರು, ಬಡವರು ಹಾಗೂ ಶೋಷಣೆಗೊಳಪಟ್ಟವರಿಗೆನೆರವಾಗುವುದು. ಅರ್ಹರಿಗೆ ಸರ್ಕಾರದ ಸೌಲಭ್ಯ ಕಲ್ಪಿಸುವುದು. ಅನ್ಯಾಯ ಖಂಡಿಸಿ ಪ್ರತಿಭಟಿಸುವಉದ್ದೇಶ ಹೊಂದಿತ್ತು. ಆದರೆ, ಸಂಘಟನೆ ಆರಂಭಿಸಿದ 5ನೇ ದಿನಕ್ಕೆ ಸಮಿತಿಗೆ ಅಂತರ್ಜಾತಿ ವಿವಾಹ ಮಾಡಿಸುವ ಅವಕಾಶ ಪ್ರಾಪ್ತಿಯಾಗಿತ್ತು.

ಮೊದಲ ವಿವಾಹ: ಕೋಲಾರ ತಾಲೂಕು ಕೀಲುಕೊಪ್ಪ ಗ್ರಾಮದ ಮಹಿಳೆಯೊಬ್ಬರು ಸಂದೇಶ್‌ರನ್ನು ಸಂಪರ್ಕಿಸಿ ತಮ್ಮ ಪುತ್ರ ಯುವತಿಯೊಬ್ಬರನ್ನು ಪ್ರೇಮಿಸಿದ್ದು, ವಿವಾಹ ಮಾಡಿಸಬೇಕೆಂಬ ಬೇಡಿಕೆಯನ್ನಿಟ್ಟಿದ್ದರು. ಅಂತರ್ಜಾತಿ ಪ್ರೇಮ ವಿವಾಹ ಮಾಡಿಸಬೇಕೆಂಬವಿಚಾರದಲ್ಲಿ ಸ್ಪಷ್ಟ ನಿಲುವು ಹೊಂದಿರದ ಸಂದೇಶ್‌,ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಮಹಿಳೆಗೆ ನೆರವಾಗುವ ದೃಷ್ಟಿಯಿಂದ ಮದುವೆ ಮಾಡಿಸಲು ಒಪ್ಪಿಕೊಂಡಿದ್ದರು.

ಕೋಲಾರ ತಾಲೂಕು ಕೀಲುಕೊಪ್ಪದ ದಲಿತ ಯುವಕ ಹಾಗೂ ಕೋಲಾರದ ಕಿಲಾರಿಪೇಟೆಯ ಹಿಂದುಳಿದ ವರ್ಗಗಳ ಯುವತಿಯ ವಿವಾಹವನ್ನು ಸಂಘಟನೆಯ ಸಾರಥ್ಯದಲ್ಲಿ ಜ.18, 2017 ರಂದು ಕೋಲಾರದ ಅಂತರಗಂಗೆ ಬೆಟ್ಟದ ತಪ್ಪಲಿನಲ್ಲಿ ಅಂಬೇಡ್ಕರ್‌ ಬ್ಯಾನರ್‌ ಎದುರು ನಡೆಸಿದ್ದರು. ಹೀಗೆಆರಂಭವಾದ ಪ್ರೇಮ ವಿವಾಹಗಳ ಸರಣಿ ಇದೀಗ ನೂರರ ಸಂಖ್ಯೆಯನ್ನು ತಲುಪಿದೆ.

ಪ್ರೇಮಿಗಳಿಗೆ ನೆರವಿನ ಹಸ್ತ: ಈ ವಿಚಾರ ತಿಳಿದ ಅನೇಕ ಮಂದಿ ಪ್ರೇಮಿಗಳು ವಿವಾಹಕ್ಕಾಗಿಸಂಘಟನೆಯ ನೆರವು ಕೋರುತ್ತಿದ್ದರು. ಹೀಗೆಬಂದವರನ್ನು ನಿರಾಶೆಗೊಳಿಸದ ಸಮಿತಿ ಈವರೆಗೂ 100 ಜೋಡಿಗೆ ಸರಳವಾಗಿ ಕೋಲಾರ, ಮಾಲೂರು,ಬಂಗಾರಪೇಟೆ ಮತ್ತಿತರೆಡೆ ಅಂಬೇಡ್ಕರ್‌ ಪ್ರತಿಮೆಯ ಮುಂದೆ ವಿವಾಹ ಮಾಡಿಸಿದೆ.

100ನೇ ವಿವಾಹ: ಬಂಗಾರಪೇಟೆ ತಾಲೂಕಿನ ಯುವ ಜೋಡಿಯೊಂದು ತಮಗೆ ಅಂತರ್ಜಾತಿ ವಿವಾಹ ಮಾಡಿಕೊಡಬೇಕೆಂಬ ಬೇಡಿಕೆ ಇಟ್ಟಿತ್ತು. ಅಂಬೇಡ್ಕರ್‌ ಸೇವಾ ಸಮಿತಿ ತನ್ನ 100ನೇ ಅಂತರ್ಜಾತಿ ವಿವಾಹವಾಗಿ 2022ರ ಪ್ರೇಮಿಗಳ ದಿನದಂದು ಕೋಲಾರದ ನಚಿಕೇತ ನಿಲಯ ಆವರಣದಲ್ಲಿ ಅಂಬೇಡ್ಕರ್‌ ಪ್ರತಿಮೆ ಮುಂಭಾಗ ನಡೆಸಿತು. ಸಂವಿಧಾನ ಪೀಠಿಕೆಯ ವಾಗ್ಧಾನದೊಂದಿಗೆ ಪ್ರೇಮಿಗಳು ಸತಿಪತಿಗಳಾದರು.

ಮಾಜಿ ಸಚಿವ ವರ್ತೂರು ಪ್ರಕಾಶ್‌, ಜಿಪಂ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಅರುಣ್‌ಪ್ರಸಾದ್‌, ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್‌ ಇತರರು ಅತಿಥಿಗಳಾಗಿ ಆಗಮಿಸಿ ನೂತನ ವಧುವರರನ್ನು ಆಶೀರ್ವದಿಸಿದರು.

ಮೊದಲ ಮದುವೆಗೆ ಅಡ್ಡಿ, ಬೆದರಿಕೆ: ಸಂಘಟನೆ 5 ವರ್ಷದಲ್ಲಿ 100 ಪ್ರೇಮ ವಿವಾಹ ಸುಗಮವಾಗಿ ನಡೆಸಿದ್ದು, ಅಡ್ಡಿ ಆತಂಕಗಳು ಇರಲೇ ಇಲ್ಲ ಎಂದೇನಿಲ್ಲ. ಏಕೆಂದರೆ, ಎಎಸ್‌ಎಸ್‌ಕೆ ಮಾಡಿಸಿದ್ದ ಮೊದಲ ಮದುವೆಯಲ್ಲಿಯೇ ಅಡ್ಡಿ ಆತಂಕ, ಬೆದರಿಕೆಗಳನ್ನು ಎದುರಿಸಬೇಕಾಗಿತ್ತು. ಇದ್ಯಾವುದನ್ನು ಲೆಕ್ಕಿಸದೆ ಕೆ.ಎಂ.ಸಂದೇಶ್‌ ಪ್ರೇಮಿಗಳನ್ನು ವಿವಾಹ ಬಂಧನಕ್ಕೊಳಪಡಿಸುವಲ್ಲಿ ಯಶಸ್ವಿಯಾಗಿದ್ದರು.

ಮದುವೆ ಆಗುತ್ತಿದ್ದಂತೆಯೇ ನವ ದಂಪತಿಗಳೊಂದಿಗೆ ಗಲ್‌ಪೇಟೆ ಠಾಣೆಗೆ ತೆರಳಿ ಕಾನೂನಿನ ರಕ್ಷಣೆ ಕೊಡಿಸುವಲ್ಲಿಯೇ ಸಫ‌ಲವಾಗಿದ್ದರು.

ಅಂತರ್ಜಾತಿಗೆ ಆದ್ಯತೆ: ಅಂಬೇಡ್ಕರ್‌ ಸೇವಾ ಸಮಿತಿ ಈವರೆಗೂ ನಡೆಸಿರುವ 100 ಜೋಡಿ ವಿವಾಹಗಳು ಅಂತರ್ಜಾತಿ ಆಗಿರುವುದು ವಿಶೇಷ. ಇಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರೇಮಿಗಳು ಸಂಘಟನೆಯ ಸಹಾಯ ಕೇಳುತ್ತಿದ್ದಾರೆ. ಸಮಾಜದಲ್ಲಿರುವ ಜಾತಿ ವ್ಯವಸ್ಥೆ ತೊಲಗಬೇಕಾದರೆ ಅಂತರ್ಜಾತಿ ವಿವಾಹ ಸಮಾಜದಲ್ಲಿ ಹೆಚ್ಚಾಗಿ ನಡೆಯಬೇಕೆಂದು ಅಂಬೇಡ್ಕರ್‌ ಪ್ರತಿಪಾದಿಸಿದ್ದರು. ಈ ಹಿನ್ನೆಲೆಯಲ್ಲಿ ಜಾತಿರಹಿತ ಸಮಾಜ ನಿರ್ಮಾಣದ ಗುರಿ ಇಟ್ಟುಕೊಂಡೇ ಅಂತರ್ಜಾತಿ ವಿವಾಹವನ್ನು ಎಎಸ್‌ಎಸ್‌ಕೆ ಹೋರಾಟದ ಭಾಗವಾಗಿಸಿಕೊಂಡಿದೆ.

ಮದುವೆ ನಂತರವೂ ಸಂಘಟನೆ ಬೆಂಬಲ :  ಮದುವೆ ನಂತರ ಪೊಲೀಸರಿಗೂ ಮಾಹಿತಿನೀಡಲಾಗುತ್ತದೆ. ರಕ್ಷಣೆ ಕೋರಲಾಗುತ್ತದೆ. ಆನಂತರ ಸಂಘಟನೆಯ ಮೂಲಕವೇ ಯುವಕ, ಯುವತಿಯ ತಂದೆ ತಾಯಿಯನ್ನು ಭೇಟಿ ಮಾಡಿ ಪ್ರೇಮ ವಿವಾಹ ಕುರಿತಂತೆ ಮನವೊಲೈಸುವ ಕೆಲಸವೂ ಆಗುತ್ತದೆ. ಒಂದು ವೇಳೆ ತಂದೆ ತಾಯಿ ಒಪ್ಪದಿದ್ದರೆ ಸಂಘಟನೆಯಿಂದಲೇ ತಾತ್ಕಾಲಿಕವಾಗಿ ಮನೆ ಮಾಡಿಸಿ ಬದುಕಲು ಅವಕಾಶ ಕಲ್ಪಿಸಲಾಗುತ್ತದೆ. ಈಗಾಗಲೇ 100 ಜೋಡಿ ವಿವಾಹಗಳ ಪೈಕಿ ಒಂದೆರೆಡು ಜೋಡಿಗೆ ಈ ರೀತಿಯ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಅಂಬೇಡ್ಕರ್‌ ಸೇವಾ ಸಮಿತಿಯಿಂದ ಇದುವರೆಗೂ 100 ಜೋಡಿ ಅಂತರ್‌ಜಾತಿ ವಿವಾಹ ನಡೆಸಲಾಗಿದೆ. ನೂರು ಜೋಡಿ ಸಂಘಟನೆ ಸಂಪರ್ಕದಲ್ಲಿದ್ದು, ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ.ಅಂತರ್‌ಜಾತಿ ವಿವಾಹ ನಡೆಸುವಾಗಎದುರಾಗುವ ಸಮಸ್ಯೆಗಳನ್ನು ಇದುವರೆಗೂ ಸಮರ್ಥವಾಗಿ ಎದುರಿಸಲಾಗಿದೆ. -ಕೆ.ಎಂ.ಸಂದೇಶ್‌, ಎಎಸ್‌ಎಸ್‌ಕೆ, ಸಂಸ್ಥಾಪಕ ಅಧ್ಯಕ್ಷ

 

-ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kolar: ಬಾಲಕಿ ಮೇಲೆ  ಅತ್ಯಾ*ಚಾರ: ಅಪರಾಧಿಗೆ 20 ವರ್ಷ ಶಿಕ್ಷೆ

Kolar: ಬಾಲಕಿ ಮೇಲೆ  ಅತ್ಯಾ*ಚಾರ: ಅಪರಾಧಿಗೆ 20 ವರ್ಷ ಶಿಕ್ಷೆ

Sriramulu

BJP President Post: ಅವಕಾಶ ಸಿಕ್ಕಿದರೆ ರಾಜ್ಯಾಧ್ಯಕ್ಷ ಆಗಲು ಸಿದ್ಧ: ಶ್ರೀರಾಮುಲು

Kolar: ನಶೆಯಲ್ಲಿ ರೈಲು ನಿಲ್ದಾಣಕ್ಕೆ ಕಾರು ನುಗ್ಗಿಸಿದ!

Kolar: ನಶೆಯಲ್ಲಿ ರೈಲು ನಿಲ್ದಾಣಕ್ಕೆ ಕಾರು ನುಗ್ಗಿಸಿದ!

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.