75 ಸ್ವಾತಂತ್ರ್ಯಗಳು ಕಳೆದರು ಸಿಗದ ಅನುದಾನ, ಬೊಮ್ಮಾಯಿ ಬಜೆಟ್ ನಲ್ಲಿ ಸಿಗುವುದೇ
Team Udayavani, Feb 15, 2022, 3:30 PM IST
ಗುಡಿಬಂಡೆ: ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರು ಗುಡಿಬಂಡೆ ತಾಲೂಕು ಮಾತ್ರ ಯಾವುದೇ ರೀತಿಯ ಅನುಧಾನವಿಲ್ಲದೆ ಹಾಗೂ ಸೂಕ್ತ ಸ್ಥಾನ ಮಾನ ವಿಲ್ಲದೆ ಅಭಿವೃದ್ಧಿಯಲ್ಲಿ ಹಿನ್ನೆಡೆಯಾಗಿದ್ದು, ಬೊಮ್ಮೆಯಿ ನೇತೃತ್ವದ ಸರ್ಕಾರದ ಬಜೆಟ್ ನಲ್ಲಾದರೂ ಸೂಕ್ತ ಅನುದಾನ ಸಿಕ್ಕಿ ಅಭಿವೃದ್ಧಿಯತ್ತ ಮುನ್ನೆಡೆ ಸಾಗುತ್ತದೆಯೇ ಎಂಬುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ.
ಗುಡಿಬಂಡೆ ತಾಲೂಕು ತನ್ನದೇ ಆದ ಗತೈಹಾಸಿಕಾ ಇತಿಹಾಸವನ್ನು ಹೊಂದಿ, ಭೌಗೋಳಿಕವಾಗಿ ಚಿಕ್ಕದಾಗಿ ಅಭಿವೃದ್ಧಿಯಲ್ಲಿ ಹಿನ್ನೆಡೆಯಾಗಿದ್ದರು ಎಲ್ಲಾ ರಂಗಗಳಲ್ಲೂ ತನ್ನದೇ ಆದ ಹೆಸರನ್ನು ಗಳಿಸಿರುವ ಪ್ರದೇಶವಾಗಿದೆ, ಆದರೆ ಸ್ವಾತಂತ್ರ್ಯ ಬಂದಾಗಿನಿಂದಲೂ ಗುಡಿಬಂಡೆ ತಾಲೂಕನ್ನು ಆಳುತ್ತಿರುವ ಎಲ್ಲಾ ರಾಜಕಾರಣಿಗಳು ಮಾತ್ರ, ಕಾಟಾಚಾರಕ್ಕೆ ಎಂಬಂತೆ ಊಟ ಉಪ್ಪಿನ ಕಾಯಿ ಯಾವ ರೀತಿ ಬೇಕೋ ಅದೇ ರೀತಿಯಲ್ಲಿ ಹೆಸರಿಗೆ ಮಾತ್ರ ಈ ತಾಲೂಕನ್ನು ಬಳಸಿಕೊಳ್ಳುತ್ತಿದ್ದಾರೆಯೇ ವಿನಃ ಅಭಿವೃದ್ಧಿ ಮಾಡುವ ವಿಚಾರದಲ್ಲಿ ಮಲತಾಯಿ ಧೋರಣೆಯನ್ನು ತೋರಿ, ಬಾಗೇಪಲ್ಲಿ ತಾಲೂಕಿಗೆ ಮೊದಲ ಪ್ರಾಶಸ್ಥ್ಯ ನೀಡಿ, ಗುಡಿಬಂಡೆ ತಾಲೂಕನ್ನು ಕಡೆ ಗಣಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಯಾ ಪೈಸೆ ಬಿಡುಗಡೆ ಇಲ್ಲ: ಪ್ರತಿ ವರ್ಷವೂ ಸಹ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಕರ್ನಾಟಕ ರಾಜ್ಯ ಪ್ರತಿಯೊಂದು ತಾಲೂಕಿಗೂ ಒಂದಲ್ಲ ಒಂದು ರೀತಿಯಲ್ಲಿ ಯಾವುದಾದರೊಂದು ವಿಶೇಷ ಅನುದಾನ ಬಿಡುಗಡೆಯಾಗುತ್ತಿದ್ದರೆ, ಗುಡಿಬಂಡೆ ತಾಲೂಕಿಗೆ ಮಾತ್ರ ನಯಾ ಪೈಸೆ ಸಹ ಬಿಡುಗಡೆ ಆಗಿರುವುದಿಲ್ಲ.
ಕೈಗಾರಿಗೆಗಳ ಸ್ಥಾಪನೆ ಇಲ್ಲ: ತಾಲೂಕಿನ ಜನತೆ ಕೃಷಿಯನ್ನೆ ನಂಬಿಕೊಂಡು ಜೀವನ ನಡೆಸುತ್ತಿದ್ದು, ಸುಮಾರು ವರ್ಷಗಳಿಂದ ಮಳೆ ಕೈಕೊಟ್ಟು ಬೆಳೆ ನಷ್ಟ ವಾಗುತ್ತಿದ್ದರೆ, ಇತ್ತೀಚೆಗೆ ಅತಿವೃಷ್ಟಿ ಉಂಟಾಗಿ ಕೈ ಬಂದ ತುತ್ತು ಬಾಯಿಗೆ ಬಾರದಂತಾಗಿ, ಅನ್ನಧಾತ ಸಹ ಸಾಲಗಾರನಾಗಿದ್ದು, ಕೃಷಿಯಲ್ಲಾದರೂ ಹಣ ಸಿಗದಿದ್ದರೆ ಹೋಗಲಿ ಯಾವುದಾದರು ಒಂದು ಕೆಲಸಕ್ಕೆ ಹೋಗೋಣ ಎಂದರು ಸಹ ಹೆಣ್ಣು ಮಕ್ಕಳು ಕೆಲಸ ಮಾಡುವ ಒಂದು ಚಿಕ್ಕ ಗಾರ್ಮೆಂಟ್ಸ್ ಸಹ ಇಲ್ಲದೆ, ಕೆಲಸಕ್ಕಾಗಿ ಬೇರೆ ಊರಿಗೆ ಹೋಗಬೇಕಾದ ಪರಿಸ್ಥಿತಿ ಉದ್ಭವವಾಗಿದ್ದು, ಕೈಗಾರಿಕೆಗಳ ಸ್ಥಾಪನೆ ಯಾಗಬೇಕಾಗಿದೆ.
ಎ.ಪಿ.ಎಂ.ಸಿ. ಮಾರುಕಟ್ಟೆ ಇಲ್ಲ: ತಾಲೂಕಿನಲ್ಲಿ ಕೈಗಾರಿಕೆಗಳು ಮತ್ತು ಅದಾಯ ತರುವಂತಹ ಮೂಲಗಳು ಇಲ್ಲದೆ ಇರುವುದರಿಂದ ಹೆಚ್ಚಿನದಾಗಿ ಕೃಷಿಯನ್ನು ಅವಲಂಭಿತರಾಗಿದ್ದು, ರೈತರು ತಮ್ಮ ಬೆಳೆಗಳನ್ನು ಮಾತ್ರ ಬಾಡಿಗೆ ವಾಹನಗಳ ಮೂಲಕ ಬೇರೆ ತಾಲೂಕಿನ ಮಾರುಕಟ್ಟೆ ಗಳಿಗೆ ಸಾಗಿಸಬೇಕಾಗಿದ್ದು, ತಾಲೂಕಿನಲ್ಲಿ ರೈತರಿಗೆ ಅನುಕೂಲಕರವಾದ ರೀತಿಯಲ್ಲಿ ಮಾರುಕಟ್ಟೆ ಸ್ಥಾಪಿಸಬೇಕಾಗಿದೆ.
ಬಸ್ ಡಿಪೋಗಿಲ್ಲ ಅನುದಾನ: ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ಸ್ಥಾಪನೆ ಮಾಡಲು 10 ಎಕರೆ ಜಮೀನನ್ನು ಕಂದಾಯ ಇಲಾಖೆ ಹಸ್ತಾಂತರಿಸಿ ಹತ್ತು ವರ್ಷಗಳೇ ಕಳೆದರೂ, ಸಹ ರಾಜ್ಯ ಸರ್ಕಾರದ ಧೋರಣೆಯಿಂದಾಗಿ ಅನುದಾನ ಬಿಡುಗಡೆಯಾಗದೆ ತಾಲೂಕಿನ ಜನತೆಗೆ ಗಗನ ಕುಸುಮವಾಗಿ ಪರಿಣಮಿಸಿದ್ದು, ಬಸ್ ಡಿಪೋ ಸ್ಥಾಪನೆಗೆ ಅನುದಾನ ಬಿಡುಗಡೆಯಾಗಬೇಕಾಗಿದೆ.
ಪ್ರವಾಸೋದ್ಯಮಕ್ಕೆ ಇಲ್ಲ ಒತ್ತು: ತಾಲೂಕಿನಲ್ಲಿ ಸುರಸದ್ಮಗಿರಿ ಬೆಟ್ಟ, ಏಕ ಶಿಲಾ ಬೃಹಾದಾಕಾರದ ವರಹಾಗಿರಿ, ಭಾರತ ನಕ್ಷೆಯನ್ನೇ ಹೋಲುವ ಅಮಾನಿಬೈರಸಾಗರ ಸೇರಿದಂತೆ ಇನ್ನಿತರೇ ಹತ್ತು ಹಲವಾರು ಇತಿಹಾಸ ಪ್ರಸಿದ್ದ ಯಾತ್ರಾಸ್ಥಳಗಳು ಇದ್ದರು ಸಹ ರಾಜಕಾರಣೀಗಳ ನಿರ್ಲಕ್ಷ್ಯದಿಂದಾಗಿ ಇಂದು ಅವರು ಪ್ರವಾಸಿತಾಣವಾಗಿ ಅಭಿವೃದ್ಧಿ ಹೊಂದದೇ ಹಿಂದುಳಿದಿದ್ದು, ಇವುಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಬೇಕಾಗಿದೆ.
ಈಗಲಾದರೂ ಘನ ಬಸವರಾಜ ಬೊಮ್ಮಾಯಿ ಬಿ.ಜೆ.ಪಿ. ರಾಜ್ಯ ಸರ್ಕಾರ ಗುಡಿಬಂಡೆ ತಾಲೂಕಿನತ್ತ ನೋಡಿ ತಾಲೂಕಿನ ಜನತೆಗೆ ಬಜೆಟ್ ನಲ್ಲಿ ಅನುಧಾನ ಬಿಡುಗಡೆ ಮಾಡುತ್ತಾರೆಯೇ ನೋಡಬೇಕಾಗಿದೆ.
ಎನ್.ವಿ.ಗಂಗಾಧರಪ್ಪ, ಗ್ರಾ.ಪಂ. ಸದಸ್ಯರು, ಉಲ್ಲೊಡು ಗ್ರಾ.ಪಂ ಹೇಳಿಕೆ: ಗುಡಿಬಂಡೆ ತಾಲೂಕು ರಾಜ್ಯದಲ್ಲೇ ಅತಿ ಹಿಂದೂಳಿದ ತಾಲೂಕಾಗಿದ್ದು, ತಾಲೂಕಿನ ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲಾ ಕ್ಷೇತ್ರಗಳಲ್ಲೂ ಸಹ ರಾಜ್ಯ ಸರ್ಕಾರ ಈಗಿನ ಬಡ್ಜೆಟ್‌ನಲ್ಲಿ ವಿಶೇಷ ಅನುದಾನ ಬಿಡುಗಡೆಗೊಳಿಸಬೇಗಿದೆ.
ಮಧು.ವಿ, ಮುಖಂಡರು, ಪ್ರಜಾ ಸಂಘರ್ಷ ಸಮಿತಿ, ಗುಡಿಬಂಡೆ ಹೇಳಿಕೆ: ಗುಡಿಬಂಡೆ ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ಬಸ್ ಡಿಪೋ, ಕ್ರಿಡಾಂಗಣ, ಕೃಷಿ ಮಾರುಕಟ್ಟೆ, ಶಾಶ್ವತ ನೀರಾವರಿ, ಕೈಗಾರಿಕೆಗಳ ಸ್ಥಾಪನೆ ಇನ್ನಿತರೆ ಕ್ಷೇತ್ರಗಳಲ್ಲಿ ಅನುದಾನ ಬಿಡುಗಡೆ ಮಾಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.