ಜಿಲ್ಲಾದ್ಯಂತ ಪ್ರೌಢಶಾಲೆ ತರಗತಿ ಆರಂಭ
Team Udayavani, Feb 15, 2022, 4:36 PM IST
ಚಿಕ್ಕಮಗಳೂರು: ರಾಜ್ಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ಭುಗಿಲೆದ್ದಿದ್ದ ಸ್ಕಾರ್ಫ್ ಹಾಗೂಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಇತ್ತೀಚೆಗೆ ಪ್ರೌಢಶಾಲೆ ಹಾಗೂಕಾಲೇಜುಗಳಿಗೆ ರಜೆ ಘೋಷಿಸಿದ್ದು, ವಿವಾದಸಂಬಂಧ ಹೈಕೋರ್ಟ್ ನೀಡಿರುವ ಮಧ್ಯಂತರಆದೇಶದ ಹಿನ್ನೆಲೆಯಲ್ಲಿ ಸೋಮವಾರದಿಂದತರಗತಿಗಳ ಆರಂಭಕ್ಕೆ ನೀಡಿರುವ ಆದೇಶದಂತೆಜಿಲ್ಲಾದ್ಯಂತ 9 ಮತ್ತು 10ನೇ ತರಗತಿಗಳುಕಾರ್ಯಾರಂಭ ಮಾಡಿವೆ.
ಸೋಮವಾರ ಬೆಳಗ್ಗೆ ಎಂದಿನಂತೆ ಕಾಫಿ ನಾಡಿನಾದ್ಯಂತ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ9, 10ನೇ ತರಗತಿಗಳು ಆರಂಭಗೊಂಡಿದ್ದು,ಎಲ್ಲೂ ಅಹಿತಕರ ಘಟನೆಗಳು ವರದಿಯಾಗಿಲ್ಲ.ಸೋಮವಾರ ಬೆಳಗ್ಗೆ ಚಿಕ್ಕಮಗಳೂರುನಗರದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿವಿದ್ಯಾರ್ಥಿಗಳು ಎಂದಿನಂತೆ ಆಗಮಿಸಿದ್ದು, ಈವೇಳೆ ಸ್ಕಾರ್ಫ್ ಧರಿಸಿದ್ದ ಕೆಲ ವಿದ್ಯಾರ್ಥಿನಿಯರುಶಾಲೆಯ ಆವರಣದಲ್ಲಿ ಸ್ಕಾರ್ಫ್ ತೆಗೆದುಬ್ಯಾಗಿನೊಳಗಿಟ್ಟುಕೊಂಡು ತರಗತಿಗಳಿಗೆ ತೆರಳುತ್ತಿದ್ದದೃಶ್ಯಗಳು ಕಂಡು ಬಂದವು.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಪ್ರತೀಖಾಸಗಿ, ಸರ್ಕಾರ ಶಾಲೆಗಳಲ್ಲಿ ಮುಂಜಾಗ್ರತಾಕ್ರಮವಾಗಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆನಿಯೋಜಿಸಿದ್ದು, ಬೆಳಗ್ಗೆ ಎಲ್ಲ ಶಾಲೆಗಳ ಎದುರುಪೊಲೀಸರು ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.112 ವಾಹನ ಸೇರಿದಂತೆ ಪೊಲೀಸ್ ಇಲಾಖೆವಾಹನಗಳು ನಗರದಾದ್ಯಂತ ಗಸ್ತು ಹಾಕುತ್ತಾಪ್ರತೀ ಶಾಲೆಗಳ ಮೇಲೆ ನಿಗಾ ಇರಿಸಿದ್ದರು. ನಗರದಕೆಲ ಶಾಲೆಗಳಿಗೆ ಖುದ್ದು ಜಿಲ್ಲಾ ಧಿಕಾರಿ ಕೆ.ಎನ್.ರಮೇಶ್ ಹಾಗೂ ಎಸ್ಪಿ ಎಂ.ಎಚ್. ಅಕ್ಷಯ್‌ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಈ ವೇಳೆವಿದ್ಯಾರ್ಥಿಗಳಿಗೆ ಕಿವಿಮಾತನ್ನೂ ಹೇಳಿದರು.ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿಸರ್ಕಾರಿ ಶಾಲೆಗೆ ಸಮವಸ್ತ್ರ ಹೊರತುಪಡಿಸಿಸ್ಕಾರ್ಫ್ ಸೇರಿದಂತೆ ಇನ್ಯಾವುದೇ ಧಾರ್ಮಿಕಗುರುತುಗಳೊಂದಿಗೆ ವಿದ್ಯಾರ್ಥಿಗಳು ಬರುವಂತಿಲ್ಲಎಂದು ಆದೇಶಿಸಿದ್ದು, ಅದರಂತೆ ಶಾಲೆಗಳಆಡಳಿತ ಮಂಡಳಿ ಹಾಗೂ ಶಿಕ್ಷಕರು ಸೋಮವಾರಬೆಳಗ್ಗೆ ಪ್ರತೀ ವಿದ್ಯಾರ್ಥಿಗಳನ್ನು ಪರಿಶೀಲಿಸಿ ತರಗತಿಒಳಗೆ ಬಿಡುತ್ತಿದ್ದ ದೃಶ್ಯಗಳು ಕಂಡು ಬಂದಿದ್ದು,ವಿದ್ಯಾರ್ಥಿಗಳೂ ಕೂಡ ಸರ್ಕಾರದ ಆದೇಶದಂತೆಸಮವಸ್ತ್ರದೊಂದಿಗೆ ಶಾಲೆಗೆ ಮರಳಿದ್ದರು.
ಮುಸ್ಲಿಂಸಮುದಾಯದ ವಿದ್ಯಾರ್ಥಿನಿಯರೂ ಸ್ಕಾರ್ಫ್‌ಅನ್ನು ತೆಗೆದು ತರಗತಿಗಳಿಗೆ ಹಾಜರಾಗಿದ್ದರು.ಒಟ್ಟಾರೆ ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತಭುಗಿಲೆದ್ದಿದ್ದ ಕೇಸರಿ ಶಾಲು, ಸ್ಕಾಫ್ ವಿವಾದಸೋಮವಾರ ಕಾμನಾಡಿನಲ್ಲಿ ತಣ್ಣಗಾಗಿದ್ದು,ಯಾವುದೇ ಅಹಿತಕರ ಘಟನೆಗಳು ಮರುಕಳಿಸಿಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.