ಹುಲಿಕೆರೆ, ಬೆರಟಿಕೆರೆಗಳಿಗೆ ಲಿಫ್ಟ್ ಮೂಲಕ ನೀರು ತುಂಬಿಸುವ ಪ್ರಸ್ತಾವ ಇದೆ: ಮಾಧುಸ್ವಾಮಿ
Team Udayavani, Feb 15, 2022, 10:30 PM IST
ಬೆಂಗಳೂರು: ಚಿಕ್ಕಮಗಳೂರು ಕ್ಷೇತ್ರದ ಐಯ್ಯನ ಕೆರೆ ತುಂಬಿ ಕೋಡಿ ಬಿದ್ದ ನೀರು ಹುಲಿಕೆರೆ-ಬೆರಟಿಕೆರೆ ಕೆರೆಗಳಿಗೆ ಲಿಫ್ಟ್ ಮೂಲಕ ತುಂಬಿಸುವ ಯೋಜನೆ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಸಿ.ಟಿ.ರವಿ ಅವರ ಪರವಾಗಿ ಬೆಳ್ಳಿ ಪ್ರಕಾಶ್ ಪ್ರಸ್ತಾಪಕ್ಕೆ ಉತ್ತರಿಸಿದ ಅವು, ಐಯ್ಯನ ಕೆರೆ ತುಂಬಿ ಕೋಡಿ ಮೂಲಕ ಹೆಚ್ಚುವರಿಯಾಗಿ ಹರಿದು ಹೋಗುವ ನೀರು ಹುಲಿಕೆರೆ, ಬೆರಟಿಕೆರೆ, ನಾಗೇನಹಳ್ಳಿ ಕೆರೆಗಳಿಗೆ ತುಂಬಿಸಲು ಏತ ನೀರಾವರಿ ಯೋಜನೆ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಣದಯ ತಿಳಿಸಿದರು.
ಇದನ್ನೂ ಓದಿ:ಶ್ರೀರಂಗಪಟ್ಟಣ : ಹೈಕೋರ್ಟ್ ಆದೇಶ ಉಲ್ಲಂಘಿಸಿ ಹಿಜಾಬ್ ಧರಿಸಿ ಕಾಲೇಜಿಗೆ ಬಂದ ಶಿಕ್ಷಕಿ
ಅಂದಾಜು 9.96 ಕೋಟಿ ರೂ. ಮೊತ್ತದಲ್ಲಿ ಯೋಜನೆ ರೂಪಿಸಲಾಗಿದ್ದು ತಾಂತ್ರಿಕ ಮೌಲ್ಯ ನಿರ್ಣಯ ಸಮಿತಿ ಸಭೆಯ ಮುಂದೆ ಮಂಡಿಸಿ ತೀರುವಳಿ ಪಡೆಯಬೇಕು. ಆನುದಾನದ ಲಭ್ಯತೆ ಅನುಸಾರವಾಗಿ ಆದ್ಯತೆ ಮೇಲೆ ಕಾಮಗಾರಿ ಕೈಗೊಳ್ಳಲು ಪರಿಶೀಲಿಸಲಾಗುವುದು ಎಂದು ಹೇಳಿದರು.
ಬೆಳೆ ನಮೂದಿಸಿ ಪಹಣಿಗೆ ಅವಕಾಶ
ಬೆಂಗಳೂರು: ರೈತರು ಪಹಣಿ ಪಡೆಯಲು ಬೆಳೆ ನಮೂದು ಮಾಡದಿದ್ದರೆ, ಹಿಂದಿನ ವರ್ಷದ ಬೆಳೆ ನಮೂದು ಮಾಡಿ ಪಹಣಿ ನೀಡಲು ಆದೇಶ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆಯಲ್ಲಿ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರೈತರು ತೆಂಗು, ಅಡಿಕೆ ಮಾವು ಸಹಿತ ತೋಟಗಾರಿಕೆ ಬೆಳೆಗಳಲ್ಲಿ ಇತರ ಬೆಳೆಗಳನ್ನು ಬೆಳೆದು ಅದನ್ನು ಪಹಣಿಯಲ್ಲಿ ಸೇರಿಸದಿದ್ದರೆ, ಪಹಣಿ ಪಡೆಯಲಾಗುತ್ತಿಲ್ಲ. ಹೀಗಾಗಿ ರೈತರಿಗೆ ಹಿಂದಿನ ವರ್ಷದ ಬೆಳೆ ನಮೂದಿಸಿ ಪಹಣಿ ನೀಡುವಂತೆ ಆದೇಶ ಹೊರಡಿಸಲಾಗಿದೆ ಎಂದರು.
ಇದಕ್ಕೂ ಮೊದಲ ಮಾತನಾಡಿದ ಶಾಸಕ ರಾಜೇಗೌಡ, ಮಲೆನಾಡು ಭಾಗದಲ್ಲಿ ರೈತರು ಬ್ಯಾಂಕ್ ಸಾಲ, ವಿಮಾ ಹಣ ಸಹಿತ ವಿವಿಧ ಸೌಲಭ್ಯ ಪಡೆಯಲು ಪಹಣಿ ಪಡೆಯಲು ತೊಂದರೆಯಾಗುತ್ತಿದೆ. ಕಳೆದ ಅಧಿವೇಶನದಲ್ಲಿ ಪಹಣಿ ಕೊಡಿಸುವ ಭರವಸೆ ನೀಡಿದ್ದರು. ಆದರೆ ಈಗಲೂ ಸರಕಾರಿ ಸವಲತ್ತು ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರೈತರಿಗೆ ಪಹಣಿ ದೊರೆಯುವಂತೆ ಮಾಡಲು ಮನವಿ ಮಾಡಿದರು.
ಜೆಡಿಎಸ್‌ನ ಎಚ್.ಕೆ. ಕುಮಾರಸ್ವಾಮಿ ಪ್ರತಿಕ್ರಿಯಿಸಿ, ತೆಂಗು, ಅಡಿಕೆ, ರಬ್ಬರ್ ಪ್ರತಿವರ್ಷ ಬೆಳೆಯುವ ಬೆಳೆಗಳಲ್ಲ. ರೈತರು ಯಾವ ಬೆಳೆ ಬೆಳೆಯುತ್ತಾರೋ ಅದನ್ನು ನಮೂದಿಸಿ ಪಹಣಿ ನೀಡಲಿ ಎಂದು ಮನವಿ ಮಾಡಿದರು.
ಕಾಲಂನಲ್ಲಿ ನಮೂದಿಸಿ
ಇದಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಧ್ವನಿಗೂಡಿಸಿದ್ದು, ಪ್ರತಿ ವರ್ಷ ರೈತರು ಎರಡು ಬಾರಿ ಪಹಣಿ ಪಡೆಯಲು ಸಾಧ್ಯವಾಗುವುದಿಲ್ಲ. ತೆಂಗು, ಕಾಫಿ ಪ್ರತೀ ವರ್ಷ ಬೆಳೆಯುವ ಬೆಳೆಯಲ್ಲ. ಅದಕ್ಕೆ ಒಂದು ಕಾಲಂ ಮಾಡಿ, ಯಾವ ಬೆಳೆ ಬೆಳೆಯುತ್ತಾರೆ ಎನ್ನುವುದನ್ನು ನಮೂದಿಸಬೇಕು. ಅಧಿಕಾರಿಗಳು ಯಾವುದಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ ಎನ್ನುವುದು ನಿಮಗೂ ಗೊತ್ತಿದೆ ಎಂದರು. ಅದಕ್ಕೆ ಉತ್ತರಿಸಿದ ಸಚಿವ ಮಾಧುಸ್ವಾಮಿ, ಕಾಫಿ, ತೆಂಗಿನ ತೋಟದಲ್ಲಿ ಹೂ, ರಾಗಿ ಬೇರೆ ಬೆಳೆ ಬೆಳೆದಾಗ ಅದನ್ನು ನಮೂದಿಸಬೇಕು. ಯಾವುದೇ ಬೆಳೆ ಬೆಳೆಯದಿದ್ದರೆ, ಹಿಂದಿನ ವರ್ಷದ ಬೆಳೆಯನ್ನು ನಮೂದಿಸಬೇಕೆಂದು ಸೂಚನೆ ನೀಡಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.