ಕಾರ್ಮಿಕರ ನೋಂದಣಿಯಲ್ಲಿ ಅಕ್ರಮ ಪತ್ತೆ- ಹೆಬ್ಟಾರ್
Team Udayavani, Feb 15, 2022, 10:45 PM IST
ವಿಧಾನಸಭೆ: ಕಟ್ಟಡ ಕಾರ್ಮಿಕರ ನೋಂದಣಿಯಲ್ಲಿ ಅಕ್ರಮಗಳು ನಡೆದಿರುವುದು ಗಮನಕ್ಕೆ ಬಂದಿದ್ದು, ನೋಂದಣಿ ಪ್ರಕ್ರಿಯೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಟಾರ್ ಹೇಳಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಸಿ.ಎಂ.ನಿಂಬಣ್ಣನವರ್ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಕಾರ್ಮಿಕ ಇಲಾಖೆಯಲ್ಲಿ ಸವಲತ್ತು ಹಾಗೂ ಸೌಲಭ್ಯ ಹೆಚ್ಚಾಗುತ್ತಿದ್ದಂತೆ ಬೋಗಸ್ ನೋಂದಣಿಗಳು ಆಗುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಪರವಾನಗಿ ಇಲ್ಲದೆ ವ್ಯವಹಾರ ನಡೆಸುತ್ತಿದ್ದ ಫೈನಾನ್ಸ್ ; ನಗರಸಭೆಯಿಂದ ನೋಟೀಸ್
ಇದಕ್ಕೂ ಮುನ್ನ ಮಾತನಾಡಿದ ನಿಂಬಣ್ಣನವರ್, 1000, 1500 ರೂ. ಪಡೆದು ಅನರ್ಹರನ್ನು ನೋಂದಣಿ ಮಾಡಲಾಗುತ್ತಿದೆ. ಇದರಿಂದ ಸರ್ಕಾರದ ಖಜಾನೆಗೆ ಮೋಸವಾಗುತ್ತಿದೆ. ಇದನ್ನು ತಪ್ಪಿಸಿ ಅರ್ಹರನ್ನು ಮಾತ್ರ ನೋಂದಣಿ ಮಾಡಿ. ಈಗಾಗಲೇ ನೋಂದಣಿ ಮಾಡಿರುವ ಬೋಗಸ್ ಕಾರ್ಮಿಕರನ್ನು ತನಿಖೆ ನಡೆಸಿ ತೆಗೆದುಹಾಕಿ ಎಂದು ಒತ್ತಾಯಿಸಿದರು. ಇದಕ್ಕೆ ಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.