ರಾಜ್ಯಾದ್ಯಂತ 1,405 ಕೋವಿಡ್ ಹೊಸ ಪ್ರಕರಣ ಪತ್ತೆ: 26 ಮರಣ ದಾಖಲು
Team Udayavani, Feb 15, 2022, 10:36 PM IST
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಕ್ಷೀಣಗೊಂಡಿದ್ದು, ಮಂಗಳವಾರ 1,405 ಹೊಸ ಪ್ರಕರಣ ದಾಖಲಾಗಿದ್ದು, ಸಕ್ರಿಯ ಪ್ರಕರಣ ಸಂಖ್ಯೆ 26,832ಕ್ಕೆ ಇಳಿಕೆಯಾಗಿದೆ.
ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.1.91ಕ್ಕೆ ಇದೆ. 5,762ಮಂದಿ ಗುಣಮುಖರಾಗಿ ಹೋಮ್ ಹಾಗೂ ಆಸ್ಪತ್ರೆ ಕ್ವಾರಂಟೈನ್‌ನಿಂದ ಬಿಡುಗಡೆ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣ ಸಂಖ್ಯೆ 11,000ಕ್ಕೆ ಇಳಿಕೆಯಾಗಿದೆ. 73,286 ಪರೀಕ್ಷೆಗೆ ಒಳಪಡಿಸಲಾಗಿದೆ.
ಕೋವಿಡ್ ಸೇರಿದಂತೆ ಇತರೆ ಅನಾರೋಗದ್ಯದಿಂದ ಬಳಲುತ್ತಿದ್ದ ಬೆಂಗಳೂರಿನ 6, ದ.ಕ. 4, ಬಳ್ಳಾರಿ 3, ಧಾರವಾಡ, ಹಾಸನ , ಉಡುಪಿ ಜಿಲ್ಲೆಯಲ್ಲಿ ತಲಾ 2, ವಿಜಯಪುರ, ಉ.ಕ., ರಾಯಚೂರು, ಮೈಸೂರು, ಕೋಲಾರ, ಬಾಗಲಕೋಟೆ ಜಿಲ್ಲೆಯಲ್ಲಿ ತಲಾ 1ರಂತೆ ಒಟ್ಟು 26 ಮಂದಿ ಮೃತಪಟ್ಟಿದ್ದಾರೆ.
ಬೆಂಗಳೂರು 765, ಮೈಸೂರು 66, ಉಡುಪಿ ಹಾಗೂ ಬೆಳಗಾವಿ 50, ದ.ಕ. 47, ತುಮಕೂರು 48, ಶಿವಮೊಗ್ಗ 36, ಧಾರವಾಡ 32,ಚಿತ್ರ ದುರ್ಗ 31, ಚಾಮರಾಜನಗರ 29, ಬಳ್ಳಾರಿ 26, ಕೊಡಗು 20, ರಾಮನಗರ 19, ಗದಗ 18, ಉ.ಕ. 17, ಕಲಬುರಗಿ 14, ಹಾಸನ ಹಾಗೂ ಹಾವೇರಿ, ಮಂಡ್ಯ 13, ಚಿಕ್ಕಮಗಳೂರು,ಚಿಕ್ಕಬಳ್ಳಾಪುರ ತಲಾ 12, ಬಾಗಲಕೋಟೆ ಹಾಗೂ ಬೆಂಗಳೂರು ಗ್ರಾಮಾಂತರ,ವಿಜಯಪುರ, ಕೋಲಾರ ತಲಾ 11, ದಾವಣಗೆರೆ 9, ಕೊಪ್ಪಳ 8, ಬೀದರ್7, ಯಾದಗಿರಿ 4 ರಾಯಚೂರು ಜಿಲ್ಲೆಯಲ್ಲಿ 2 ಹೊಸ ಪ್ರಕರಣ ದಾಖಲಾಗಿದೆ.
1556 ಮಂದಿಗೆ ಆಸ್ಪ್ರೆಯಲ್ಲಿ ಚಿಕಿತ್ಸೆ
ರಾಜ್ಯಾದ್ಯಂತ 1,556 ಮಂದಿ ಕೋವಿಡ್ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ 982ಮಂದಿ ಸರ್ಕಾರಿ ಹಾಗೂ 574ಮಂದಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇವರಲ್ಲಿ 258 ಮಂದಿ ಐಸಿಯು ಬೆಡ್ ಹಾಗೈ 75 ಮಂದಿ ಐಸಿಯು-ವೆಂಟಿಲೇಟರ್ ಆಧಾರಿತ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಜನರಲ್ ಬೆಡ್‌ನಲ್ಲಿ 858 ಮಂದಿ ಹಾಗೂ ಆಮ್ಲಜನಕ ಬೆಡ್ ವ್ಯವಸ್ಥೆಯಲ್ಲಿ 365ಮಂದಿ ಇದ್ದಾರೆ.
ರಾಜ್ಯದಲ್ಲಿ ಕಳೆದ 24ಗಂಟೆಯಲ್ಲಿ 18ವರ್ಷ ಮೇಲ್ಪಟ್ಟ 69,071, ಆರೋಗ್ಯಕಾರ್ಯಕರ್ತರು 482, ಮುಂಚೂಣಿ ಕಾರ್ಯರ್ಕತರು 393, 15ರಿಂದ 17ವರ್ಷ ಮೇಲ್ಪಟ್ಟ 10.18ಲಕ್ಷ ಮಕ್ಕಳು ಹಾಗೂ 15454 ಮಂದಿ ಮುನ್ನೆಚ್ಚರಿಕೆ ಡೋಸ್ ಪಡೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Illegal immigrants; ಬಂಧಿತ ಪಾಕ್ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?
Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್ ಪದವಿ ಕೊಡಲಿದೆ ವಿಟಿಯು!
MUST WATCH
ಹೊಸ ಸೇರ್ಪಡೆ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೆ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.